ನಮೋ ಆಪ್‌ನಲ್ಲಿ ಬಿಜೆಪಿಗೆ ದಾನ ಮಾಡಿದ್ರೆ ಪ್ರಧಾನಿಯವರನ್ನು ಭೇಟಿಯಾಗುವ ಅವಕಾಶ!
ನಮೋ ಆಪ್ ನಲ್ಲಿ ಬಿಜೆಪಿಗೆ ಫಂಡ್ – ಮೋದಿಯವರನ್ನು ಭೇಟಿ ಮಾಡುವ ಅವಕಾಶ- ನಿಮ್ಮ ರೆಫರಲ್ ಕೋಡ್ ಬಳಸಿ 100 ಮಂದಿಗೆ ಕಳಿಸಿ – ಸಿಂಪಲ್ ಕೆಲಸದಿಂದ ಪ್ರಧಾನಿನ ಭೇಟಿ ಮಾಡಿ
ದಿನದಿಂದ ದಿನಕ್ಕೆ 2019 ರ ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ಪ್ರತಿಯೊಂದು ಪಕ್ಷವೂ ಪ್ರಚಾರಕ್ಕಾಗಿ ಭರ್ಜರಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ. ಬಿಜೆಪಿ ಮೋದಿ ನಡೆಸಿದ 5 ವರ್ಷದ ಸಾಧನೆಯನ್ನೇ ಪ್ರಮುಖ ಅಸ್ತ್ರವಾಗಿ ಬಳಸುತ್ತಿದೆ. ಇದನ್ನೇ ಬಳಸಿ ಇದೀಗ ಫಂಡ್ ಸಂಗ್ರಹಣೆಗೆ ಬಿಜೆಪಿ ಮುಂದಾಗಿದೆ.

ನಮೋ ಆಪ್ ಮೂಲಕ ಫಂಡ್ ಸಂಗ್ರಹ:
ನಮೋ ಆಪ್ ಮೂಲಕ 5 ರುಪಾಯಿಯಿಂದ 1,000 ರುಪಾಯಿ ವರೆಗೆ ಜನರಿಂದ ಪಕ್ಷಕ್ಕಾಗಿ ಡೊನೇಟ್ ಮಾಡುವಂತೆ ಬೇಡಿದೆ. ನಿಮ್ಮ ಕೈಲಾದ ಸಹಾಯವನ್ನು ಮಾಡಬಹುದು. ಇದನ್ನು ಮುಂದಿನ ದಿನಗಳಲ್ಲಿ ಪಕ್ಷದ ಪ್ರಚಾರಕ್ಕಾಗಿ ಬಳಕೆ ಮಾಡಲಾಗುತ್ತದೆ.

ಮೋದಿಯವರನ್ನು ಭೇಟಿ ಮಾಡುವ ಅವಕಾಶ:
ನಮೋ ಮೋದಿ ಆಪ್ ಮೂಲಕ ಹಣವನ್ನು ದಾನ ಮಾಡುವಂತೆ ಪ್ರೊತ್ಸಾಹಿಸುವವರಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಅವಕಾಶವನ್ನು ನೀಡಲಾಗುತ್ತದೆ ಎಂದು ಬಿಜೆಪಿ ಹೇಳಿದೆ. ಅದಕ್ಕಾಗಿ ನೀವು ಇನ್ನೊಬ್ಬರಿಗೆ ರೆಫರಲ್ ಕೋಡ್ ನ್ನು ಕಳುಹಿಸಬೇಕು.

ರೆಫರಲ್ ಕೋಡ್ ಎಲ್ಲಿ ಸಿಗುತ್ತದೆ?
ಇದು ನೀವು ಬಿಜೆಪಿಗೆ ಹಣವನ್ನು ನಮೋ ಆಪ್ ಮೂಲಕ ಡೊನೇಟ್ ಮಾಡಿದಾಗ ಜನರೇಟ್ ಆಗುತ್ತದೆ. ಆ ರೆಫರಲ್ ಕೋಡ್ ನ್ನು ಮತ್ತೊಬ್ಬರಿಗೆ ಕಳುಹಿಸಬೇಕು. ಅತೀ ಸಣ್ಣ ಮೊತ್ತವನ್ನು ಕೂಡ ಪಕ್ಷಕ್ಕಾಗಿ ದಾನ ಮಾಡುವುದಕ್ಕೆ ನವೋ ಆಪ್ ಅವಕಾಶ ನೀಡುತ್ತದೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಕನಿಷ್ಠ 100 ಮಂದಿಯನ್ನು ಡೊನೇಟ್ ಮಾಡುವಂತೆ ಮಾಡಿ:
ಒಂದು ವೇಳೆ ಒಬ್ಬ ವ್ಯಕ್ತಿ ತನ್ನ ರೆಫರಲ್ ಕೋಡ್ ನ್ನು ಅಥವಾ ಆಪ್ ಲಿಂಕ್ ನ್ನು 100 ಜನರಿಗೆ ಕಳುಹಿಸಿ ಪಕ್ಷಕ್ಕೆ ಹಣ ದಾನ ಮಾಡುವಂತೆ ಮಾಡಿದ್ದಲ್ಲಿ ಅವರು ಪಿಎಂ ಅವರನ್ನು ಭೇಟಿ ಮಾಡುವುದಕ್ಕೆ ಅವಕಾಶವಿರುತ್ತದೆ ಎಂದು ಮಾಧ್ಯಮಕ್ಕೆ ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ವಸ್ತುಗಳ ಖರೀದಿಗೆ ಅವಕಾಶ:
ನಮೋದಲ್ಲಿ ಡೊನೇಟ್ ಮಾಡಿದವರಿಗೆ ಟೀಶರ್ಟ್ಸ್, ನೋಟ್ ಬುಕ್ಸ್, ಸ್ಟಿಕ್ಕರ್ಸ್, ಫ್ರಿಡ್ಜ್ ಮ್ಯಾಗ್ನೆಟ್ ಗಳು, ಕ್ಯಾಪ್ ಗಳು, ಪೆನ್ ಗಳು ಮತ್ತು ಮಗ್ ಗಳನ್ನು ಗೆಲ್ಲುವ ಅವಕಾಶವೂ ಇರುತ್ತದೆ.
ರೆಫರಲ್ ಕೋಡ್ ಎಲ್ಲಿ ಕಳುಹಿಸಬೇಕು?
ಒಮ್ಮೆ ವ್ಯಕ್ತಿಯು ಹಣವನ್ನು ಡೊನೇಟ್ ಮಾಡಿದಾಗ ರೆಫರಲ್ ಕೋಡ್ ಜನರೇಟ್ ಆಗುತ್ತದೆ. ಆ ಕೋಡ್ ನ್ನು ಎಸ್ಎಂಎಸ್, ಇಮೇಲ್ ಅಥವಾ ವಾಟ್ಸ್ ಆಪ್ ಮೂಲಕ ಅವರು ಕನಿಷ್ಠ 100 ಕಾಂಟ್ಯಾಕ್ಟ್ ಗಳಿಗೆ ಕಳುಹಿಸುವುದಕ್ಕೆ ಅವಕಾಶವಿರುತ್ತದೆ.
ಪ್ರಧಾನಿ ಭೇಟಿ ಯಾವಾಗ ಸಾಧ್ಯ?
ಒಂದು ವೇಳೆ 100 ಮಂದಿ ನಿಮ್ಮ ರೆಫರಲ್ ಕೋಡ್ ಬಳಸಿ ಪಾರ್ಟಿಗೆ ಡೊನೇಟ್ ಮಾಡಲು ಬಳಸಿದ್ದೇ ಆದಲ್ಲಿ ನಿಮ್ಮನ್ನು ಪ್ರಧಾನಿ ಮಂತ್ರಿಯವರನ್ನು ಭೇಟಿ ಮಾಡಲು ಆಮಂತ್ರಿಸಲಾಗುತ್ತದೆ.
ಏನು ಮಾತನಾಡಬಹುದು?
ರೆಫರಲ್ ಕೋಡ್ ವಿಜೇತರು ನಿಮಗೆ ಅಥವಾ ನಿಮ್ಮ ಊರಿನ ಅಥವಾ ನಿಮ್ಮ ತಲೆಯಲ್ಲಿ ಇರುವ ದೇಶದ ಸಮಸ್ಯೆಯ ಬಗ್ಗೆ ಪ್ರಧಾನಮಂತ್ರಿಯವರೊಂದಿಗೆ ಗ್ರೂಪ್ ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶವಿರುತ್ತದೆ.
ವಸ್ತುಗಳಲ್ಲಿರಲಿದೆ ಪ್ರಮುಖ ಕಾರ್ಯಕ್ರಮಗಳ ಟ್ಯಾಗ್ ಲೈನ್:
ಒಂದು ವೇಳೆ 10 ಮಂದಿ ಬಿಜೆಪಿಗೆ ನಮೋ ಆಪ್ ಮೂಲಕ ಡೊನೇಟ್ ಮಾಡಿದ್ದಲ್ಲಿ ನಮೋ ಮರ್ಚಂಡೈಸ್ ಗಳನ್ನು ಅವರಿಗೆ ನೀಡಲಾಗುತ್ತದೆ. ನಮೋ ಆಪ್ ನಲ್ಲಿ ಸೆಪ್ಟೆಂಬರ್ ನಿಂದ ಮೋದಿ ಮರ್ಚಂಡೈಸ್ ಗಳನ್ನು ಮಾರಾಟ ಮಾಡಲು ಪ್ರಾರಂಭಿಸಲಾಗಿದೆ. ಆ ವಸ್ತುಗಳಲ್ಲಿ ಮೋದಿ ಅವರು ಕೈಗೊಂಡಿರುವ ಪ್ರಮುಖ ಕಾರ್ಯಕ್ರಮಗಳಾಗಿರುವ ಮೇಕ್ ಇನ್ ಇಂಡಿಯಾ, ಬೇಟಿ ಬಚಾವೋ ಬೇಟಿ ಪಡಾವೋ ಇತ್ಯಾದಿಗಳ ಹೆಸರನ್ನು ನಮೂದಿಸಲಾಗಿರುತ್ತದೆ.
ಪ್ರಮುಖ ವಸ್ತುಗಳ ಬೆಲೆ ಎಷ್ಟು?
ಕೆಲವು ಪ್ರಮುಖ ಸ್ಲೋಗನ್ ಗಳಾಗಿರುವ ನಮೋ ಎಗೈನ್, ಯುವ ಶಕ್ತಿ, ಇಡಿಯಾ ಮೋದಿ(ಡಿ)ಫೈಡ್ ಇತ್ಯಾದಿಗಳೂ ಕೂಡ ಇರಲಿದೆ.ಟಿ-ಶರ್ಟ್ ಗಳು ಕೇವ 199 ರುಪಾಯಿಗೆ ಇರುತ್ತದೆ. ಮೋದಿ ಎಗೈನ್ ಎಂದು ಬರೆದಿರುವ ಎರಡು ಮಗ್ ಗಳ ಬೆಲೆ ಕೇವಲ 150 ರುಪಾಯಿಗಳು.
5 ಮಿಲಿಯನ್ ಮಂದಿ ಡೌನ್ ಲೋಡ್ ಮಾಡಿದ ಆಪ್:
ಈ ದೇಶದ ಯುವ ಸಮೂಹ ಮೋದಿ ವಸ್ತುಗಳನ್ನು ಇಷ್ಟಪಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಯುವ ಸಮೂಹವನ್ನು ಬಡಿದೆಬ್ಬಿಸುವ ಕೆಲಸಕ್ಕೆ ನಮೋ ಆಪ್ ಮುಂದಾಗಿರುವುದಂತೂ ಸುಳ್ಳಲ್ಲ. ಈಗಾಗಲೇ ಈ ಆಪ್ ನ್ನು 5 ಮಿಲಿಯನ್ ಮಂದಿ ಡೌನ್ ಲೋಡ್ ಮಾಡಿದ್ದಾರೆ. ನೀವು ಕೂಡ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಕ ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಮತ್ತು ಹಣವನ್ನು ಡೊನೇಟ್ ಮಾಡಬಹುದು. ಮೋದಿ ಏನು ಮಾಡುತ್ತಿದ್ದಾರೆ ಎಂಬುದನ್ನು ಆಪ್ ನಲ್ಲಿ ತಿಳಿಯಬಹುದು.


Click it and Unblock the Notifications