Subscribe to Gizbot

ಕನ್ನಡದಲ್ಲಿ ಟೈಪ್‌ ಮಾಡಲು ಇದಕ್ಕಿಂತ ಆಪ್‌ ಬೇರೊಂದಿಲ್ಲ!!

Written By:

ಪ್ರಸ್ತುತ ಕನ್ನಡ ಟೈಪ್ ಮಾಡಲು ನುಡಿ ಅಥವಾ ಬರಹ ಟೈಪ್ ಜ್ಞಾನದ ಅವಶ್ಯಕತೆ ಇಲ್ಲ.!! ಹಾಗಾಗಿ, ಮೊಬೈಲ್‌ನಲ್ಲಿ ಕನ್ನಡ ಟೈಪ್ ಮಾಡುವುದು ಈಗ ಮೊದಲಿನಷ್ಟು ಕಷ್ಟವಲ್ಲ. ಅಂತಹ ಒಂದು ಆಪ್ ಲಭ್ಯವಿದ್ದು, ಹೆಚ್ಚು ಕ್ಲಿಷ್ಟವಾಗಿರದ ಈ ಆಪ್ ಮೂಲಕ ನೀವು ಬಹಳ ಸುಲಭವಾಗಿ ಕನ್ನಡದಲ್ಲಿ ಟೈಪ್ ಮಾಡಬಹುದು.!!

ಈ ಆಪ್ ವಿಶಿಷ್ಟವಾಗಿದ್ದು, ನೀವು ಇಂಗ್ಲೀಷ್‌ನಲ್ಲಿ ಟೈಪ್ ಮಾಡಿದರೆ ಕನ್ನಡ ದಲ್ಲಿ ಭಾಷಾಂತರಿಸುವ ಆಯ್ಕೆಯನ್ನು ಹೊಂದಿದೆ. ಇಂಗ್ಲೀಷ್ ಮೂಲಕವೇ ಕನ್ನಡವನ್ನು ಬಹಳ ಸುಲಭವಾಗಿ ಟೈಪ್ ಮಾಡುವುದೆರಿಂದ ನಿಮಗೆ ಬಹಳ ಸುಲಭವಾಗಿ ಕನ್ನಡ ಟೈಪ್ ಮಾಡಲು ಸಹಾಯಕವಾಗುತ್ತದೆ.!!

ಈಗಾಗಲೇ ಇಂತಹ ಹಲವು ಆಪ್‌ಗಳಿದ್ದರೂ ಈ ಆಪ್ ಅತ್ಯುತ್ತಮವಾಗಿದ್ದು, ನೀವು ವಾಟ್ಸ್‌ಆಪ್ ಫೇಸ್ಬುಕ್, ಟ್ವಿಟರ್, ಮೇಲ್, ಯಾವುದೇ ತಾಣಗಳಲ್ಲಿ ಕನ್ನಡವನ್ನು ಟೈಪ್ ಮಾಡಬಹುದಾಗಿದೆ.!! ಹಾಗಾದರೆ, ಆ ಆಪ್‌ ಯಾವುದು? ವಿಶೇಷತೆ ಏನು? ಡೌನ್‌ಲೋಡ್ ಮಾಡುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕನ್ನಡ ಪ್ರೈಡ್ಎಡಿಟರ್ (annada Pride Editor)

ಕನ್ನಡ ಪ್ರೈಡ್ಎಡಿಟರ್ (annada Pride Editor)

ಇಂಗ್ಲೀಷ್‌ನಲ್ಲಿ ಟೈಪ್ ಮಾಡಿದರೆ ಕನ್ನಡ ದಲ್ಲಿ ಭಾಷಾಂತರಿಸುವ ಆಯ್ಕೆಯನ್ನು ಹೊಂದಿರುವ ಆಪ್ ಕನ್ನಡ ಪ್ರೈಡ್ ಎಡಿಟರ್. ಇಂಗ್ಲೀಷ್ ಅಕ್ಷಗಳನ್ನು ಕನ್ನಡದಲ್ಲಿ ನೀಡುವಂತಹ ಈ ವಿಶಿಷ್ಟ ಆಪ್ ಕನ್ನಡಿಗರಿಗೆ ಹೆಚ್ಚು ಸಹಾಯಕವಾಗಬಹುದು.!!

ಹೇಗೆ ವರ್ಕ್ ಆಗುತ್ತೆ?

ಹೇಗೆ ವರ್ಕ್ ಆಗುತ್ತೆ?

ಆಪ್‌ ಡೌನ್‌ಲೋಡ್ ಮಾಡಿ ನೀವು ಇಂಗ್ಲಿಷ್‌ನಲ್ಲಿ ಟೈಪ್ ಮಾಡಿ ಒಂದು Space ಬಿಟ್ಟರೆ ಸಾಕು ಆ ಪದದ ಕನ್ನಡದ ಅರ್ಥ ಬಂದಿರುತ್ತದೆ.ಇದರಿಂದಾಗಿ ಕನ್ನಡದಲ್ಲಿ ಅಕ್ಷರ ಜ್ಷಾನ ಹೊಂದಿಲ್ಲದಿದ್ದವರಿಗೂ ಈ ಆಪ್ ಸಹಾಯಕವಾಗಲಿದೆ.!!

ಈ ಆಪ್ ಬೆಸ್ಟ್ ಏಕೆ?

ಈ ಆಪ್ ಬೆಸ್ಟ್ ಏಕೆ?

ಕನ್ನಡದಲ್ಲಿ ಟೈಪ್ ಮಾಡಲು ಹಲವಾರು ಆಪ್‌ಗಳಿದ್ದರೂ ಸಹ ಈ ಆಪ್ ಬೆಸ್ಟ್ ಆಗಿದೆ. ಕಡಿಮೆ ಸಮಯದಲ್ಲಿ ಕನ್ನಡ ಟೈಪ್ ಮಾಡಬಹುದಾದ ಆಯ್ಕೆ ಇದರಲ್ಲಿದೆ.! ಮತ್ತು ಈ ಆಪ್ ಪದಗಳ ಭಂಡಾರವನ್ನೇ ಹೊಂದಿದ್ದು, ಈಗ ಮತ್ತಷ್ಟು ಅಪ್‌ಡೇಟ್ ಆಗಿದೆ.!!

ಡೌನ್‌ಲೋಡ್ ಮಾಡುವುದು ಹೇಗೆ?

ಡೌನ್‌ಲೋಡ್ ಮಾಡುವುದು ಹೇಗೆ?

ಆಂಡ್ರಾಯ್ಡ್ ಪ್ಲೇ ಸ್ಟೋರ್ ತೆರೆದು ಕನ್ನಡ ಪ್ರೈಡ್ ಎಡಿಟರ್ ಅಂತ ಟೈಪ್ ಮಾಡಿದರೆ ಈ ಆಪ್ ಕಾಣಿಸಿಕೊಳ್ಳುತ್ತದೆ. ನಂತರ ಆಪ್‌ ಅನ್ನು ಇನ್‌ಸ್ಟಾಲ್ ಮಾಡಿ ಕನ್ನಡಲ್ಲಿ ಟೈಪ್ ಮಾಡಲು ಮುಂದಾಗಿ.

ಓದಿರಿ:'ನಮ್ಮ ಟೈಗರ್' ಕ್ಯಾಬ್ ಸೇವೆಗೆ 25 ಸಾವಿರ ಚಾಲಕರು ಎಂಟ್ರಿ..ಭಯದಲ್ಲಿ ಓಲಾ ಮತ್ತು ಉಬರ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
you can type easily kannada language through this app.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot