Home
Apps

ಬೆಳಿಗ್ಗೆ ಎದ್ದ ಕೂಡಲೇ ರಾಶಿಫಲ ತಿಳಿಯಲು ಈ ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ

By Gizbot Bureau

ನಮ್ಮ ಭವಿಷ್ಯ ಹೇಗಿರುತ್ತದೆ ಎಂಬ ಭಯಾನಕ ಕುತೂಹಲವೊಂದು ಪ್ರತಿಯೊಬ್ಬರ ಮನಸ್ಸಿನಲ್ಲೂ ಸುಳಿದಾಡುತ್ತಿರುತ್ತದೆ. ಇವತ್ತು ನನ್ನ ಜೀವನದಲ್ಲಿ ಏನು ನಡೆಯುತ್ತದೆ ಎಂದು ಮೊದನೇ ತಿಳಿದುಕೊಳ್ಳುವ ಹಪಹಪಿ ಎಲ್ಲರಲ್ಲೂ ಇರುತ್ತದೆ. ನನ್ನ ಜೀವನದಲ್ಲಿ ಮುಂದೇನಾಗುತ್ತದೆ? ಕೆಟ್ಟದ್ದಾಗುವುದಾದರೆ ಏನಾಗುತ್ತದೆ?ಯಾವಾಗ ಒಳ್ಳೆಯದಾಗುತ್ತೆ? ಮದುವೆ ಯಾವಾಗ ಆಗುತ್ತೆ? ವಿದ್ಯೆ ಹೇಗಿದೆ? ಆರೋಗ್ಯ ಸಮಸ್ಯೆ ಬರಬಹುದೇ ಅಥವಾ ಇನ್ನೇನಾದರೂ ಆಗಬಹುದೇ? ಸಮಸ್ಯೆಗೆ ಪರಿಹಾರ ಏನು ಮಾಡಿಕೊಳ್ಳಬಹುದು? ಇತ್ಯಾದಿ ಇತ್ಯಾದಿ ಪ್ರಶ್ನೆಗಳಿಗೆ ಲೆಕ್ಕವೇ ಇಲ್ಲ ಬಿಡಿ. ಒಬ್ಬಬ್ಬರದ್ದು ಒಂದೊಂದು ರೀತಿಯ ಕುತೂಹಲ.

ರಾಶಿ ಮತ್ತು ನಕ್ಷತ್ರ

ಅದೇ ಕಾರಣಕ್ಕೆ ಜಾತಕ, ಜ್ಯೋತಿಷ್ಯ, ಭವಿಷ್ಯ, ರಾಶಿ, ನಕ್ಷತ್ರ ಅನ್ನೋ ನಂಬಿಕೆಯ ಮಹಾಪೂರವೇ ನಮ್ಮಲ್ಲಿದೆ. ನೀವು ಹುಟ್ಟಿದ ಘಳಿಗೆಗೆ ಅನುಸಾರವಾಗಿ ನಿಮ್ಮ ಜೀವನದ ಏರುಪೇರುಗಳು ನಿರ್ಧರಿತವಾಗಿರುತ್ತದೆ ಎಂಬುದೊಂದು ನಂಬಿಕೆ. ನೀವು ಹುಟ್ಟಿದ ಘಳಿಗೆಯ ಗ್ರಹಗತಿಗಳಿಗೆ ಅನುಸಾರವಾಗಿ ನಿಮ್ಮ ರಾಶಿ ಮತ್ತು ನಕ್ಷತ್ರವಿರುತ್ತದೆ. ಅದಕ್ಕೆ ಸಂಬಂಧಿಸಿದಂತೆ ನಿಮ್ಮ ನಿತ್ಯ ಜೀವನದ ಆಗುಹೋಗುಗಳು ನಡೆಯುತ್ತದೆ ಎಂಬುದೊಂದು ನಂಬಿಕೆ. ಹಾಗಾಗಿ ಹೆಚ್ಚಿನವರಿಗೆ ರಾಶಿಫಲದ ಮೇಲೆ ಬಹಳ ವಿಶ್ವಾಸ.

ಪೇಪರ್ ಹುಡುಗ

ಬೆಳಿಗ್ಗೆ ಎದ್ದ ಕೂಡಲೇ ಇವತ್ತು ನನ್ ಜೀವನದಲ್ಲಿ ಏನಾಗುತ್ತೆ ಎಂದು ತಿಳಿಯುವ ತರಾತುರಿಯಲ್ಲಿ ಮನೆ ಎದುರು ಪೇಪರ್ ಹುಡುಗ ಬಿಸಾಡಿ ಹೋಗಿದ್ದ ಪೇಪರ್ ತೆಗೆದುಕೊಂಡು ಪಟಪಟ ಅಂತ ರಾಶಿಫಲದ ಪೇಜ್ ತೆರೆದು ನೋಡುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಅಷ್ಟೆಲ್ಲ ಮಾಡುವುದು ಬೇಕಾಗಿಲ್ಲ. ಹಾಸಿಗೆಯಿಂದ ಏಳುತ್ತಿದ್ದಂತೆಯೇ ರಾಶಿಫಲ ನೋಡಿಕೊಂಡು ಏಳಬಹುದು. ಹೇಗೆ ಅಂತ ಕೇಳ್ತಾ ಇದ್ದೀರಾ?

ಮೊಬೈಲ್

ಈಗಿನ ಜಮಾನದ ಹೆಚ್ಚಿನವರು ರಾತ್ರಿ ಮಲಗುವಾಗ ಕೊನೆಯಲ್ಲಿ ನೋಡುವುದು ಮೊಬೈಲ್ ಆಗಿರುತ್ತದೆ. ಇನ್ನು ಬೆಳಿಗ್ಗೆ ಎದ್ದ ಕೂಡಲೇ ಅಂಗೈ ನೋಡಿಕೊಳ್ತೀವೋ ಇಲ್ಲವೋ ಮೊಬೈಲ್ ಅಂತೂ ಖಂಡಿತ ಎಲ್ಲಿದೆ ಎಂದು ಹುಡುಕಾಡಿ ತೆಗೆದುಕೊಳ್ಳುವ ಅಭ್ಯಾಸ ಇದ್ದೇ ಇರುತ್ತದೆ. ರಾಶಿ ಫಲದ ಬಗ್ಗೆ ನಂಬಿಕೆ ಇರುವವರು ಒಂದು ಕೆಲಸ ಮಾಡಿ. ನಿಮ್ಮ ಮೊಬೈಲಿಗೆ ಕನ್ನಡದಲ್ಲಿ ಲಭ್ಯವಿರುವ ರಾಶಿಫಲದ ಆಪ್ ಡೌನ್ ಲೋಡ್ ಮಾಡಿ ಇಟ್ಟುಕೊಳ್ಳಿ. ಪ್ರತಿ ದಿನ ಬೆಳಿಗ್ಗೆ ಎದ್ದ ಕೂಡಲೇ ನಿಮ್ಮ ರಾಶಿ ಭವಿಷ್ಯ ಹೇಗಿದೆ ಎಂದು ಆ ಮೂಲಕ ತಿಳಿದುಕೊಳ್ಳಬಹುದು.

ಪ್ಲೇ ಸ್ಟೋರ್

ಪ್ಲೇ ಸ್ಟೋರ್ ಗೆ ತೆರಳಿ ವಾರಭವಿಷ್ಯ ಎಂದು ಟೈಪ್ ಮಾಡಿ. ಕನ್ನಡದಲ್ಲಿ ಲಭ್ಯವಿರುವ ಎಲ್ಲಾ ಎಲ್ಲಾ ಹೋರೋಸ್ಕೋಪ್ ಸಂಬಂಧಿತ ಆಪ್ ಗಳು ತೆರೆದುಕೊಳ್ಳುತ್ತವೆ. ನಾವು ಓಜಸ್ ಸಾಫ್ಟ್ ಟೆಕ್ ಪ್ರೈವೇಟ್ ಲಿಮಿಟೆಡ್ ನ ಸೂರ್ಯನ ಚಿಹ್ನೆ ಇರುವ ಕನ್ನಡ ಹೋರೋಸ್ಕೋಪ್:ಡೈಲಿ ರಾಶಿ ಆಪ್ ಇನ್ಸ್ಟಾಲ್ ಮಾಡಿರುವ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಕೆಲವು ಆಪ್ ಗಳಲ್ಲಿ ಜಾಹೀರಾತುಗಳ ಕಿರಿಕಿರಿ ಅಧಿಕವಾಗಿರುತ್ತದೆ. ಯಾವುದಕ್ಕೂ ಇನ್ಸ್ಟಾಲ್ ಮಾಡಿಕೊಳ್ಳುವಾಗ ಸ್ವಲ್ಪ ಜಾಗರೂಕರಾಗಿರಿ.

ಡೌನ್ ಲೋಡ್

ಇನ್ಸ್ಟಾಲ್ ಮಾಡಿ ಡೌನ್ ಲೋಡ್ ಮಾಡಿದ ನಂತರ ಆಪ್ ತೆರೆದರೆ ನಿಮಗೆ ಎಲ್ಲಾ 12 ರಾಶಿಗಳು ಕಾಣಿಸುತ್ತವೆ. ನಿಮ್ಮ ರಾಶಿ ಯಾವುದೋ ಅದನ್ನು ಕ್ಲಿಕ್ಕಿಸಿದರೆ ಅಂದಿನ ನಿಮ್ಮ ದಿನ ಹೇಗಿದೆ ಎಂಬುದು ತಿಳಿದುಬರುತ್ತದೆ. ಆ ಪ್ರಕಾರ ನೀವು ನಿಮ್ಮ ದಿನವನ್ನು ಅನುಸರಿಸಬಹುದು. ಇನ್ನು ವಾರ ಭವಿಷ್ಯವನ್ನು ತಿಳಿಯುವುದಕ್ಕೂ ಕೂಡ ಈ ಆಪ್ ನಲ್ಲಿ ಅವಕಾಶವಿದೆ. ಇನ್ನು ಜನನ ಜಾತಕವನ್ನು ಕೂಡ ಇದರಲ್ಲಿ ತಿಳಿಯುವುದಕ್ಕೆ ಸಾಧ್ಯವಿದೆ. ನಿಮಗೂ ರಾಶಿಫಲ, ದಿನಭವಿಷ್ಯ ಇದರಲ್ಲೆಲ್ಲಾ ನಂಬಿಕೆ ಇದ್ದರೆ ಖಂಡಿತ ಈ ಆಪ್ ನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ಪ್ರತಿದಿನ ನಿಮ್ಮ ರಾಶಿಫಲವನ್ನು ತಿಳಿದುಕೊಳ್ಳಿ.

Best Mobiles in India

English summary
Download This App for Daily Horoscope In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+