Home
Apps

ಕನಕದಾಸರ ಬಗ್ಗೆ ತಿಳಿದುಕೊಳ್ಳಲು ಈ ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ

By Gizbot Bureau

ಕರ್ನಾಟಕದ ಅಶ್ವಿನಿ ದೇವತೆ ಎಂದು ಬಣ್ಣಿಸಲ್ಪಟ್ಟ ಕನಕದಾಸರ ಬಗ್ಗೆ ನಿಮಗೆಷ್ಟು ಗೊತ್ತು? 15-16 ನೇ ಶತಮಾನದಲ್ಲಿ ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿರುವ ಕನಕದಾಸರ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ಕನಕದಾಸರ ಬಗ್ಗೆ ನಿಮಗೆ ಸ್ವಲ್ಪವೂ ಮಾಹಿತಿ ಗೊತ್ತಿಲ್ಲದೆ ಇದ್ದಲ್ಲಿ ಯಾರನ್ನು ಕೇಳುವುದು? ಎಲ್ಲಿ ತಿಳಿದುಕೊಳ್ಳುವುದು ಎಂದು ಅಂದುಕೊಳ್ಳಬೇಡಿ. ನಿಮ್ಮ ಕೈಯಲ್ಲಿರುವ ಮೊಬೈಲೇ ನಿಮಗೆ ಎಲ್ಲಾ ಮಾಹಿತಿಯನ್ನು ನೀಡುತ್ತದೆ. ನೀವು ಜಸ್ಟ್ ಆಪ್ ಇನ್ಸ್ಟಾಲ್ ಮಾಡಿಕೊಂಡರೆ ಸಾಕಾಗುತ್ತದೆ.

ಪ್ಲೇ ಸ್ಟೋರ್ ನಲ್ಲಿದೆ ಸಂತ ಶ್ರೀ ಕನಕದಾಸರು ಆಪ್:

ಪ್ಲೇ ಸ್ಟೋರ್ ನಲ್ಲಿದೆ ಸಂತ ಶ್ರೀ ಕನಕದಾಸರು ಆಪ್:

ಪ್ಲೇ ಸ್ಟೋರ್ ಗೆ ತೆರಳಿ ಸರ್ಚ್ ಬಾರ್ ನಲ್ಲಿ ಕನಕದಾಸ ಆಪ್ ಎಂದು ಟೈಪ್ ಮಾಡಿದರೆ ಮೊದಲಿಗೆ ನಿಮಗೆ ಮಿಥುನ್ ಆರ್ ಅವರು ನಿರ್ಮಿಸಿರುವ 24 ಕೆಬಿ ಇರುವ 4.7 ಸ್ಟಾರ್ ಪಡೆದುಕೊಂಡಿರುವ ಸಂತ ಶ್ರೀ ಕನಕದಾಸರು ಎಂಬ ಆಪ್ ವೊಂದು ಲಭ್ಯವಾಗುತ್ತದೆ. ಈ ಆಪ್ ನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ನಿಮಗೆ ಕನಕದಾಸರ ಬಗೆಗಿನ ಎಲ್ಲಾ ಮಾಹಿತಿಗಳನ್ನು ಈ ಆಪ್ ನಿಂದ ಕನ್ನಡದಲ್ಲಿ ಪಡೆದುಕೊಳ್ಳಬಹುದು.

ಆಪ್ ನಲ್ಲಿ ಏನಿದೆ?

ಆಪ್ ನಲ್ಲಿ ಏನಿದೆ?

ಆಪ್ ನ ಹೋಮ್ ಪೇಜ್:

ಆಪ್ ನ ಹೋಮ್ ಪೇಜ್ ನಲ್ಲಿ ಕನಕದಾಸರ ಜನನ, ಮರಣ, ಅವರ ವೃತ್ತಿ ಬದುಕು,ಸಾಧನೆ, ಸಾಹಿತ್ಯ ರಚನೆಯ ವಿವರಗಳು.ಮೋಹನ ತರಂಗಿಣಿ,ನಳಚರಿತ್ರೆ,ರಾಮಧಾನ್ಯ ಚರಿತ,ಹರಿಭಕ್ತಿಸಾರ,ಕನಕದಾಸರ ಕೀರ್ತನೆಗಳ ವಿವರ,ಕನ್ನಡದಲ್ಲಿ ಲಭ್ಯವಿರುವ ಕನಕದಾಸರ ಕೀರ್ತನೆಗಳ ವಿವರ, ಇಂಗ್ಲೀಷಿಗೆ ಮತ್ತು ಸಂಸ್ಕೃತಕ್ಕೆ ಕನಕದಾಸರ ಯಾವೆಲ್ಲಾ ಕೃತಿಗಳು ಅನುವಾದಿಸ್ಪಟ್ಟಿವೆ ಇತ್ಯಾದಿ ಎಲ್ಲಾ ಪ್ರಮುಖ ವಿವರಗಳನ್ನು ಪಡೆದುಕೊಳ್ಳಬಹುದು.

ಎಬೌಟ್ ಅಸ್ ಸೆಕ್ಷನ್:

ಎಬೌಟ್ ಅಸ್ ಸೆಕ್ಷನ್:

ಇನ್ನು ಆಪ್ ನಲ್ಲಿರುವ ಎಬೌಟ್ ಅಸ್ ಸೆಕ್ಷನ್ ನಲ್ಲಿ ಕನಕದಾಸರ ಮೂಲ ಮಂದಿರದ ಬಗೆಗಿನ ವಿವರ, ಕನಕ ಅರಮನೆಯ ವಿವರ,ಕನಕದಾಸರ ಅರಮನೆ ಅವಶೇಷಗಳನ್ನು ಕುರಿತ ಮಾಹಿತಿ,ಕನಕದಾಸರ ಜನ್ಮಸ್ಥಳ ಬಾಡ ಗ್ರಾಮದ ವಿವರ ಇತ್ಯಾದಿ ವಿವರಗಳನ್ನು ತಿಳಿಯಬಹುದು.

ಗ್ಯಾಲರಿಯಲ್ಲಿ ಫೋಟೋಗಳು:

ಗ್ಯಾಲರಿಯಲ್ಲಿ ಫೋಟೋಗಳು:

ಆಪ್ ನಲ್ಲಿರುವ ಗ್ಯಾಲರಿಯನ್ನು ಕ್ಲಿಕ್ಕಿಸಿದರೆ ಕನಕದಾಸರ ಬಗೆಗಿನ ಕೆಲವು ಫೋಟೋಗಳು ಕಣ್ಮನ ಸೆಳೆಯುತ್ತವೆ. ಅಷ್ಟೇ ಅಲ್ಲ ಕನಕದಾಸರ ಕೆಲವು ಕೀರ್ತನೆಗಳನ್ನು ಕೂಡ ನೀವು ಪಡೆದುಕೊಳ್ಳಬಹುದು.

ಪುಸ್ತಕಗಳು:

ಪುಸ್ತಕಗಳು:

ಈ ಆಪ್ ಮೂಲಕ ನೀವು ಕನಕದಾಸರ ಮೂರು ಪುಸ್ತಕಗಳನ್ನು ಓದುವುದಕ್ಕೆ ಅವಕಾಶವಿದೆ. ಹೌದು ಕನಕದಾಸರ ನಳ ಚರಿತ್ರೆ, ಹರಿಭಕ್ತಿಸಾರ,ರಾಮಧಾನ್ಯ ಚರಿತೆ ಮೂರು ಪುಸ್ತಕಗಳ ಪ್ರತಿ ಪುಟವೂ ಕೂಡ ಈ ಆಪ್ ನಲ್ಲಿ ಲಭ್ಯವಿದೆ.

ಕಾಗಿನೆಲೆಗೆ ಟ್ರಿಪ್ ಹಾಕುವುದೇ ಆದರೆ ಯಾರನ್ನು ಸಂಪರ್ಕಿಸಬೇಕು ಗೊತ್ತಾ?

ಕಾಗಿನೆಲೆಗೆ ಟ್ರಿಪ್ ಹಾಕುವುದೇ ಆದರೆ ಯಾರನ್ನು ಸಂಪರ್ಕಿಸಬೇಕು ಗೊತ್ತಾ?

ಇದೆಲ್ಲದರಿಂದ ಫ್ರಭಾವಿತರಾಗಿರುವ ನೀವು ಕಾಗಿನೆಲೆಗೆ ಪ್ರವಾಸಕ್ಕೆ ಹೊರಟರೆ ಅಲ್ಲಿನ ವಸತಿ ವ್ಯವಸ್ಥೆ, ಇತ್ಯಾದಿಗಳನ್ನು ತಿಳಿದುಕೊಳ್ಳುವುದಕ್ಕೆ ಈ ಆಪ್ ಮೂಲಕವೇ ಅವಕಾಶ ಕಲ್ಪಿಸಲಾಗಿದೆ.

Best Mobiles in India

English summary
Download This App To Learn More About Kanaka Dasa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+