ಸರ್ಕಾರಿ ಆಪ್‌ಗಳು ಇನ್ನಷ್ಟು ನಾಗರಿಕ ಸ್ನೇಹಿಯಾಗಲಿ..!

By Gizbot Bureau
|

ಪ್ರತಿ ವರ್ಷ, ಸಾವಿರಾರು ಹಿರಿಯ ನಾಗರಿಕರು ತಾವು ಜೀವಂತವಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಲು ಜೀವ ಪ್ರಮಾಣಪತ್ರವನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ, ಇದರಿಂದ ಹಿರಿಯ ನಾಗರಿಕರಿಗೆ ಪಿಂಚಣಿ ಸೇವೆ ಮುಂದುವರೆಯುತ್ತದೆ. ಜೀವ ಪ್ರಮಾಣಪತ್ರ ಪಡೆಯುವುದು ತುಂಬಾ ತೊಡಕಿನ ಪ್ರಕ್ರಿಯೆಯಾಗಿದೆ. ಆದರೆ, ಸರ್ಕಾರದ ಉಮಾಂಗ್ ಆಪ್‌ನಲ್ಲಿ ಹಲವಾರು ಡಿಜಿಟಲ್ ಸೇವೆಗಳಿದ್ದು, ಅಲ್ಲಿ ಯಾವುದೇ ಕಾಗದಪತ್ರಗಳನ್ನು ಬಳಸದೇ ಜೀವ ಪ್ರಮಾಣಪತ್ರವನ್ನು ಪಡೆಯಬಹುದು. ಸರ್ಕಾರದ ಡಿಜಿಟಲ್ ಇಂಡಿಯಾ ಉಪಕ್ರಮದಡಿಯಲ್ಲಿ ಪ್ರಾರಂಭಿಸಲಾದ ಅಪ್ಲಿಕೇಶನ್‌ಗಳಲ್ಲಿ ಉಮಾಂಗ್ ಕೇವಲ ಒಂದು, ಇದು ಸರ್ಕಾರಿ ಸೇವೆಗಳನ್ನು ನಾಗರಿಕರ ಬೆರಳ ತುದಿಯಲ್ಲಿ ನೀಡುವ ಗುರಿ ಹೊಂದಿದೆ.

ಸ್ಮಾರ್ಟ್‌ಫೋನ

ಇದರಂತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಖೋಯಾ-ಪಯಾ ಅಪ್ಲಿಕೇಶನ್ 2012ರಿಂದ ಕಾಣೆಯಾದ ಸುಮಾರು 2,00,000 ಮಕ್ಕಳನ್ನು ಪತ್ತೆಹಚ್ಚಲು ಸಹಾಯ ಮಾಡಿದೆ. ಹಾಗೆಯೇ, ಡಿಜಿಲಾಕರ್‌ ಮತ್ತೊಂದು ವೇದಿಕೆಯಾಗಿದ್ದು, ನಾಗರಿಕರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಧಾರ್, ಚಾಲನಾ ಪರವಾನಗಿ ಮತ್ತು ಜನನ ಪ್ರಮಾಣಪತ್ರದಂತಹ ಪ್ರಮುಖ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಮತ್ತು ಪ್ರವೇಶಿಸಲು ಅವಕಾಶ ಮಾಡಿಕೊಡುತ್ತದೆ. ಆದರೆ, ಈ ಅಪ್ಲಿಕೇಶನ್‌ಗಳು ದೊಡ್ಡ ಸಾಮರ್ಥ್ಯ ಹೊಂದಿದ್ದರೂ ಇನ್ನು ನಿರ್ಮಾಣದ ಹಂತದಲ್ಲಿರುವುದರಿಂದ ಬಳಕೆದಾರರಿಗೆ ಬಳಸಲು ಕಠಿಣ ಆಗುತ್ತಿದೆ.

ಸಾಲು ಸಾಲು ಸಮಸ್ಯೆಗಳು

ಸಾಲು ಸಾಲು ಸಮಸ್ಯೆಗಳು

ಅಸಮಂಜಸ ಕಾರ್ಯಕ್ಷಮತೆ, ಬಳಕೆದಾರರನ್ನು ತಮ್ಮ ಖಾತೆಗಳಿಂದ ಪದೆ ಪದೆ ಸೈನ್‌ ಔಟ್‌ ಮಾಡುವುದು, ಸೈನ್ ಇನ್ ಆಗಲು ತೊಂದರೆ, ದಾಖಲೆಗಳನ್ನು ಅಪ್‌ಲೋಡ್ ಮಾಡುವ ಅಥವಾ ಡೌನ್‌ಲೋಡ್ ಮಾಡುವಲ್ಲಿ ಅಸಮರ್ಥತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬುದ್ಧಿವಂತಿಕೆಯಿಲ್ಲದ ಬಳಕೆದಾರ ಇಂಟರ್‌ಫೇಸ್ ಸರ್ಕಾರಿ ಆಪ್‌ಗಳಲ್ಲಿ ಕಂಡುಬರುತ್ತಿವೆ.

ಸರಳ ಮತ್ತು ತ್ವರಿತ ಯುಐ ಕೊರತೆ

ಸರಳ ಮತ್ತು ತ್ವರಿತ ಯುಐ ಕೊರತೆ

ಉಮಾಂಗ್‌ನಲ್ಲಿ ದಿನಕ್ಕೆ ಕೇವಲ ಎರಡು ಜೀವ ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ. ಆದರೆ, ಪ್ರತಿದಿನ ನಮ್ಮ ಬಳಿ ನೂರಾರು ಹಿರಿಯ ಪಿಂಚಣಿದಾರರು ಬರುತ್ತಾರೆ. ಅಪ್ಲಿಕೇಶನ್‌ನಲ್ಲಿ ಗ್ರಾಹಕರ ಬೆಂಬಲವು ಸಂಪೂರ್ಣವಾಗಿ ಅಸಮರ್ಥವಾಗಿದೆ ಎಂದು ಸಾರ್ವಜನಿಕ ಬ್ಯಾಂಕ್‌ನ ಉದ್ಯೋಗಿ ಮನೋಜ್ ಬಿ.ಎಸ್‌. ಹೇಳುತ್ತಾರೆ. ಇನ್ನು, ದಾಖಲೆಗಳನ್ನು ಪ್ರಕ್ರಿಯೆಗೊಳಿಸಲು ವಿಫಲವಾದರೆ ಅಥವಾ ಒಟಿಪಿಗಳು ತಡವಾದರರೆ ಸೈನ್-ಇನ್ ಮಾಡಲು ಶಾಶ್ವತವಾಗಿ ಕಾಯಬೇಕಾಗಿರುತ್ತದೆ. ಅರ್ಥಗರ್ಭಿತ, ಸರಳ ಮತ್ತು ತ್ವರಿತ ಯುಐ ಕೊರತೆ ಹಾಗೂ ಭಾರಿ ದಟ್ಟಣೆ ಗ್ರಾಹಕರಿಗೆ ಅನುಭವವಾಗುತ್ತಿವೆ.

ಜನರಿಗೆ ತಲುಪದ ಡಿಜಿಟಲೀಕರಣ

ಜನರಿಗೆ ತಲುಪದ ಡಿಜಿಟಲೀಕರಣ

ಸೇವೆಗಳ ಡಿಜಿಟಲೀಕರಣ ದೊಡ್ಡ ರೀತಿಯಲ್ಲಿ ಆಗುತ್ತಿದೆ. ಆದರೆ, ನಾಗರಿಕರಿಂದ ನೇರ ಬಳಕೆಯಾಗುತ್ತಿಲ್ಲ. ಇದಕ್ಕೆ ಉದಾಹರಣೆ ಎಂದರೆ, ಸರಕು ಮತ್ತು ಸೇವಾ ತೆರಿಗೆಯಾಗಿದೆ. ಕಳಪೆ ಯುಎಕ್ಸ್‌ನಿಂದಾಗಿ, ಜನರು ವೃತ್ತಿಪರರ ಕಡೆ ಮುಖ ಮಾಡುವಂತಾಗಿದೆ. ಅಂತೆಯೇ, ಆದಾಯ ತೆರಿಗೆಯಲ್ಲಿಯೂ ಸಂಕೀರ್ಣ ಇಂಟರ್‌ಫೇಸ್‌ಗಳು ಮತ್ತು ಅವಶ್ಯಕತೆಗಳ ಕಾರಣದಿಂದ ಜನರು ಇನ್ನೂ ಅಕೌಂಟೆಂಟ್‌ಗಳನ್ನು ಬಳಸುತ್ತಾರೆ ಅಥವಾ ಕ್ಲಿಯರ್‌ಟ್ಯಾಕ್ಸ್‌ನಂತಹ ಖಾಸಗಿ ಸೇವೆಗಳನ್ನು ಬಳಸುತ್ತಾರೆ ಎಂದು ಎಂದು ತಂತ್ರಜ್ಞಾನದ ನೀತಿ ಸಲಹೆಗಾರ ಪ್ರಸಾಂತೋ ಕೆ. ರಾಯ್ ಹೇಳುತ್ತಾರೆ.

ಡಿಜಿಲಾಕರ್‌ನಲ್ಲಿ ಹೊಸ ಡ್ಯಾಶ್‌ಬೋರ್ಡ್‌

ಡಿಜಿಲಾಕರ್‌ನಲ್ಲಿ ಹೊಸ ಡ್ಯಾಶ್‌ಬೋರ್ಡ್‌

ಡಿಜಿಲಾಕರ್‌ನ ಬಳಕೆದಾರ ಇಂಟರ್‌ಫೇಸ್‌ನಲ್ಲಿ ಮಾತನಾಡಿದ ಡಿಜಿಲಾಕರ್‌ನ ಯೋಜನಾ ನಿರ್ದೇಶಕ ಮತ್ತು ಮುಖ್ಯ ತಾಂತ್ರಿಕ ವಾಸ್ತುಶಿಲ್ಪಿ ಡೆಬಬ್ರತಾ ನಾಯಕ್, ಪ್ರಸ್ತುತ ಇಂಟರ್‌ಫೇಸ್ ಡಿಜಿಲಾಕರ್ ಬಗ್ಗೆ ಸಂಪೂರ್ಣ ಚಿತ್ರಣ ನೀಡುವುದಿಲ್ಲ ಎಂದು ಹೇಳಿದರು, ಅಪ್ಲಿಕೇಶನ್‌ಗಾಗಿ ನಾವು ಹೊಸ ಡ್ಯಾಶ್‌ಬೋರ್ಡ್‌ ರೂಪಿಸುತ್ತಿದ್ದೇವೆ. ಅದು, ಮೊದಲ ಪುಟದಲ್ಲಿ ಬಳಕೆದಾರರ ಎಲ್ಲಾ ಪ್ರಮುಖ ದಾಖಲೆಗಳನ್ನು ತೋರಿಸುತ್ತದೆ. ನಾವು ಅದನ್ನು ಈಗಾಗಲೇ ವೆಬ್ ಆವೃತ್ತಿಯಲ್ಲಿ ಪರಿಚಯಿಸಿದ್ದೇವೆ ಎಂದರು.

ಪ್ರಮಾಣೀಕರಣದ ಕೊರತೆ

ಪ್ರಮಾಣೀಕರಣದ ಕೊರತೆ

ಪ್ರತಿ ಏಜೆನ್ಸಿ ತನ್ನದೇ ಆದ ಅಪ್ಲಿಕೇಶನ್ ನಿರ್ಮಿಸುತ್ತಿರುವುದರಿಂದ ಪ್ರಮಾಣೀಕರಣದ ಕೊರತೆ ಮತ್ತೊಂದು ಸಮಸ್ಯೆಯಾಗಿದೆ. ಪ್ರತಿ ನಗರದ ಪೊಲೀಸ್ ಪಡೆ ತನ್ನದೇ ಆದ ಪೊಲೀಸ್ ಆಪ್ ಅಭಿವೃದ್ಧಿಪಡಿಸುವ ಬದಲು, ಗೃಹ ವ್ಯವಹಾರಗಳ ಸಚಿವಾಲಯ ಅಥವಾ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ದಂತಹ ಇಲಾಖೆಯು ಆಪ್‌ ರೂಪಿಸುವುದು ಉತ್ತಮ ಎಂದು ರಾಯ್ ಹೇಳುತ್ತಾರೆ.

ಸರ್ಕಾರಿ ಸಂಸ್ಥೆಗಳಿಗೆ ಹೆಚ್ಚಿನ ನಿಯಂತ್ರಣ

ಆಂತರಿಕ ಸಾಮರ್ಥ್ಯಗಳನ್ನು ನಿರ್ಮಿಸುವತ್ತ ಗಮನಹರಿಸುವುದರಿಂದ ಅಪ್ಲಿಕೇಶನ್ ಅಭಿವೃದ್ಧಿ ಮತ್ತು ವಿತರಣಾ ಪ್ರಕ್ರಿಯೆಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ಸರ್ಕಾರಿ ಸಂಸ್ಥೆಗಳು ತೆಗೆದುಕೊಳ್ಳಬಹುಉದು. ಇದರ ಪರಿಣಾಮ, ಕೆಲವು ಸಂಸ್ಥೆಗಳು ಮೈಕ್ರೊ ಸರ್ವೀಸಸ್‌ನಂತಹ ಸ್ಥಳೀಯ ಕ್ಲೌಡ್ ಅಪ್ಲಿಕೇಶನ್‌ ಆರ್ಕಿಟೆಕ್ಚರ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ, ಇದು ಬದಲಾಗುತ್ತಿರುವ ನಾಗರಿಕರ ಅಗತ್ಯತೆಗಳನ್ನು ಪೂರೈಸಲು ಅಪ್ಲಿಕೇಶನ್‌ಗಳನ್ನು ತ್ವರಿತವಾಗಿ ವಿಕಸಿಸಲು ಮತ್ತು ಪ್ಯಾಚ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಗಾರ್ಟ್ನರ್‌ನಲ್ಲಿ ಸರ್ಕಾರ ಮತ್ತು ಶಿಕ್ಷಣದ ಸಹಾಯಕ ಪ್ರಧಾನ ವಿಶ್ಲೇಷಕ ಅಪೆಕ್ಷಾ ಕೌಶಿಕ್ ಹೇಳುತ್ತಾರೆ.

ಪ್ರಾದೇಶಿಕ ಭಾಷೆಯ ಕೊರತೆ

ರಾಯ್ ಅವರ ಪ್ರಕಾರ, BHIM ಮತ್ತು ಡಿಜಿಲಾಕರ್ ತುಂಬಾ ಉಪಯುಕ್ತವಾಗಿವೆ. ಆದರೆ, ಇತರ ಅಪ್ಲಿಕೇಶನ್‌ಗಳು ಯಾವುದೇ ಗೌಪ್ಯತೆ ನೀತಿಯಿಲ್ಲದೆ ಸಾಕಷ್ಟು ಡೇಟಾ ಬಯಸುತ್ತವೆ. ಪ್ರಾದೇಶಿಕ ಭಾಷಾ ಬೆಂಬಲವು ಮತ್ತೊಂದು ಸಮಸ್ಯೆಯಾಗಿದೆ, ಏಕೆಂದರೆ ಅನೇಕ ಬಳಕೆದಾರರು ಸರ್ಕಾರಿ ಸೇವೆಗಳಿಗಾಗಿ ಎರಡನೇ ಅಥವಾ ಮೂರನೇ ಭಾಷೆಯಲ್ಲಿ ವಹಿವಾಟು ನಡೆಸಬೇಕಾಗಿದೆ.

ಅಗತ್ಯಗಳ ನಿರೀಕ್ಷಣೆ

ಕೌಶಿಕ್ ಅವರ ಪ್ರಕಾರ, ಸರ್ಕಾರ ದತ್ತಾಂಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಮತ್ತು ಉತ್ತಮ ಬಳಕೆದಾರ ಅನುಭವವನ್ನು ಒದಗಿಸಲು ಮುನ್ಸೂಚಕ ವಿಶ್ಲೇಷಣೆಯನ್ನು ಬಳಸಿಕೊಂಡು ನಾಗರಿಕರ ಅಗತ್ಯಗಳನ್ನು ನಿರೀಕ್ಷಿಸಬೇಕು. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಫೇಸ್‌ಬುಕ್ ಮತ್ತು ಗೂಗಲ್ ಅಪ್ಲಿಕೇಶನ್‌ಗಳನ್ನು ಅಧ್ಯಯನ ಮಾಡುವುದರ ಮೂಲಕ ಅಥವಾ ಅನುಭವಿ ಯುಎಕ್ಸ್ ವಿನ್ಯಾಸಕರನ್ನು ರೋಪಿಂಗ್ ಮಾಡುವ ಮೂಲಕ ಬಹಳಷ್ಟು ಬದಲಾವಣೆ ತರಬಹುದು.

Most Read Articles
Best Mobiles in India

Read more about:
English summary
E-Governance Apps Needs A Big Revamp To Make Them Useful

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more