ಗೂಗಲ್ ಪೇ ಮೂಲಕ ಹಣ ಪಾವತಿಸಿ ಊಬರ್‌ನಲ್ಲಿ ಗೆಲ್ಲಿ 1000 ರೂ.
ಗೂಗಲ್ ತನ್ನ ಗೂಗಲ್ ಪೇ ಡಿಜಿಟಲ್ ಪೇಮೆಂಟ್ ಆಪ್ ನ್ನು ಭಾರತದಲ್ಲಿ ಹೆಚ್ಚಾಗಿ ವಿಸ್ತರಿಸುವುದಕ್ಕೆ ಪ್ರಯತ್ನಿಸುತ್ತಿದೆ. ಈ ಹಿಂದೆ ತೇಝ್ ಎಂದು ಈ ಆಪ್ ಗುರುತಿಸಿಕೊಂಡಿತ್ತು. ಇದೀಗ ಗೂಗಲ್ ಊಬರ್ ಜೊತೆಗೆ ಕೈಜೋಡಿಸಿದ್ದು ಉತ್ತಮ ಪ್ರಯಾಣವನ್ನು ಒಳ್ಳೆಯ ಪೇಮೆಂಟ್ ಅನುಭವದೊಂದಿಗೆ ಹೊಂದಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದೆ. ಇದೀಗ ಗೂಗಲ್ ಪೇ ಮೂಲಕ ನೇರವಾಗಿ ಪ್ರಯಾಣಿಕರು ತಮ್ಮ ಪ್ರಯಾಣದ ಬಿಲ್ ನ್ನು ಪಾವತಿ ಮಾಡಬಹುದು.


ಸುಲಭದ ಪಾವತಿಗೆ ಅವಕಾಶ:
ಗೂಗಲ್ ಪೇ ಯುಪಿಐ ಐಡಿ ಮೂಲಕ ಊಬರ್ ನ ಪೇಮೆಂಟ್ ಸೆಕ್ಷನ್ ನಲ್ಲಿ ಗೂಗಲ್ ಪೇಯನ್ನು ಪ್ರಯಾಣಿಕರು ಆಯ್ಕೆ ಮಾಡಬಹುದು. ಯುಪಿಐಯನ್ನು ಸೇರಿಸಿದ್ದಲ್ಲಿ ನೇರವಾಗಿ ಗೂಗಲ್ ಪೇ ಆಪ್ ನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನೇರವಾಗಿ ಪೇಮೆಂಟ್ ಮಾಡಲು ಅವಕಾಶವಿರುತ್ತದೆ.

1000 ರೂಪಾಯಿ ಗೆಲ್ಲುವ ಅವಕಾಶ:
ಗೂಗಲ್ ತಿಳಿಸುವ ಪ್ರಕಾರ ಯಾರು ಊಬರ್ ರೈಡ್ ಗಾಗಿ ಗೂಗಲ್ ಪೇ ಆಪ್ ನ್ನು ಬಳಕೆ ಮಾಡುತ್ತಾರೋ ಅವರು 1000 ರುಪಾಯಿಯ ರಿವಾರ್ಡ್ ಗಳನ್ನು ಸ್ಕ್ರ್ಯಾಚ್ ಕಾರ್ಡ್ ಮೂಲಕ ಗೆಲ್ಲುವ ಅವಕಾಶವಿರುತ್ತದೆ. ಸ್ಕ್ರ್ಯಾಚ್ ಕಾರ್ಡ್ ರಿವಾರ್ಡ್ ಗಳು 15 ರುಪಾಯಿಯಿಂದ 100 ರುಪಾಯಿ ವರೆಗೆ ಇರುತ್ತದೆ.

10 ಊಬರ್ ರೈಡ್ ಗೆ 100 ರುಪಾಯಿ ರಿವಾರ್ಡ್:
ನಿಮ್ಮ 10 ಊಬರ್ ರೈಡ್ ಗೆ ಗೂಗಲ್ ಪೇ ಮೂಲಕ ಪಾವತಿ ಮಾಡಿದರೆ ರಿವಾರ್ಡ್ ಗಳನ್ನು ಪಡೆಯಲು ನೀವು ಅರ್ಹರಾಗುತ್ತೀರಿ( ಕನಿಷ್ಟ 100 ರುಪಾಯಿ). ಈ ಆಫರ್ ಡಿಸೆಂಬರ್ 31,2018 ರ ವರೆಗೆ ಲಭ್ಯವಿದೆ. ಹೊಸ ವರ್ಷದಿಂದ ಈ ಆಫರ್ ನಿಮಗೆ ಲಭ್ಯವಿರುವುದಿಲ್ಲ .

2000ಕ್ಕೂ ಅಧಿಕ ಆಪ್ ಮತ್ತು ವೆಬ್ ಸೈಟ್ ಗಳಿಗೆ ಪಾವತಿ ಮಾಡಲು ಅವಕಾಶ:
ಆನ್ ಲೈನ್ ಟ್ರಾನ್ಸ್ಯಾಕ್ಷನ್ ಗೆ ಗೂಗಲ್ ಪೇ ಬಹಳ ಸಹಕಾರಿಯಾಗುತ್ತದೆ. ವಿಮಾನದ ಟಿಕೆಟ್ ಬುಕ್ಕಿಂಗ್, ಹೋಟೆಲ್ ಗಳು , ಬಸ್ ಮತ್ತು Goibibo, ಫ್ರೆಶ್ ಮೆನು, ರೆಡಿ ಬಸ್, ಬುಕ್ ಮೈ ಶೋ ಮತ್ತು 2000 ಕ್ಕೂ ಹೆಚ್ಚು ಆಪ್ ಮತ್ತು ವೆಬ್ ಸೈಟ್ ಗಳಿಗೆ ಇದರ ಮೂಲಕ ಪಾವತಿ ಮಾಡಬಹುದು.

ಹೆಚ್ಚುವರಿ ಶುಲ್ಕ ಇಲ್ಲ:
ಎಲ್ಲಕ್ಕಿಂತ ಮುಖ್ಯ ಅಂಶವೇನೆಂದರೆ ಗೂಗಲ್ ಪೇ ಮೂಲಕ ಎಲ್ಲಿ ಬೇಕಿದ್ದರೂ ಪಾವತಿ ಮಾಡಬಹುದು. ಈ ಯುಪಿಐ ಫ್ಲಾಟ್ ಫಾರ್ಮ್ ನ ಅತ್ಯಂತ ಮುಖ್ಯ ಲಾಭವೆಂದರೆ ಬ್ಯಾಂಕ್ ಅಕೌಂಟ್ ಗೆ ಹಣ ಟ್ರಾನ್ಸ್ಫರ್ ಮಾಡಲು ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರೆ ಪೇಟಿಎಂನಲ್ಲಿ ಹೆಚ್ಚುವರಿ ಶುಲ್ಕವನ್ನು ನೀವು ನೀಡಬೇಕಾಗುತ್ತದೆ.

15,000 ಅಂಗಡಿಗಳಲ್ಲಿ ಗೂಗಲೇ ಪೇ :
ಗೂಗಲ್ ಈಗಾಗಲೇ ತಿಳಿಸಿರುವಂತೆ, ಸುಮಾರು 15,000 ರೀಟೈಲ್ ಸ್ಟೋರ್ ಗಳನ್ನು ತಲುಪುದಕ್ಕೆ ಹೆಚ್ಚೆಚ್ಚು ಪ್ರಯತ್ನವನ್ನು ಮಾಡಲಾಗುತ್ತಿದ್ದು ಬಿಗ್ ಬಜಾರ್, ಇ-ಝೋನ್ ಮತ್ತು ಎಫ್ ಬಿಬಿಗಳಲ್ಲಿ ಈಗಾಗಲೇ ಗೂಗಲೇ ಪೇ ಮೂಲಕ ಪಾವತಿಗಳು ನಡೆಯುತ್ತಿದೆ.
ಈ ಪೇಮೆಂಟ್ ಆಪ್ ನ ಜನರಲ್ ಮ್ಯಾನೇಜರ್ ಆಗಿರುವ ಸೇನ್ ಗುಪ್ತಾ ಅವರು ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿರುವಂತೆ, ಈ ಆಪ್ ನಲ್ಲಿ ಎಲ್ಲರೂ ಇಷ್ಟಪಡುವ ಹಲವು ಅಂಶಗಳಿವೆ. ಹೋಮ್ ಸ್ಕ್ರೀನ್ ನಲ್ಲೇ ಪರಿಚಿತ ಕಾಂಟ್ಯಾಕ್ಟ್ ಗಳ ಪಟ್ಟಿ ಲಭ್ಯವಾಗುವುದು, ಒನ್-ಟಚ್ ಮೊಬೈಲ್ ರೀಚಾರ್ಜ್, ಉತ್ತಮ ಆಫರ್ ಗಳು ಮತ್ತು ರಿವಾರ್ಡ್ ಗಳು ಗ್ರಾಹಕರಿಗೆ ಖಂಡಿತ ಉತ್ತಮ ಲಾಭವನ್ನು ನೀಡುತ್ತದೆ. ಇನ್ನು ಸ್ವಲ್ಪ ಸಮಯದ ನಂತರ ನಾವು ಈ ಎಲ್ಲಾ ಪ್ರಮುಖ ಫೀಚರ್ ಗಳನ್ನು ಭಾರತವನ್ನು ಹೊರತುಪಡಿಸಿ ಇತರ ದೇಶಗಳಲ್ಲೂ ಕೂಡ ತರುವ ಆಲೋಚನೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.


Click it and Unblock the Notifications








