ಈ 9 ಆಪ್ ಮತ್ತು ಸೇವೆಗಳು ನಿಮ್ಮ ಪೆಟ್ರೋಲ್/ಡಿಸೇಲ್ ಬಿಲ್ ನ್ನು ಉಳಿಸುತ್ತದೆ

|

ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿನ ಏರಿಳಿತಗಳು ಭಾರತದಲ್ಲಿ ಸರ್ವೇಸಾಮಾನ್ಯ ಸಂಗತಿ. ಒಂದು ವೇಳೆ ನೀವು ನಿಮ್ಮ ಇಂಧನ ಖರ್ಚಿನ ಲೆಕ್ಕಾಚಾರವಿಟ್ಟುಕೊಳ್ಳಬೇಕು ಮತ್ತು ಅದರಲ್ಲಿ ಉಳಿತಾಯ ಮಾಡಬೇಕು ಎಂದು ಬಯಸುತ್ತಿದ್ದರೆ ಖಂಡಿತ ನಿಮಗೆ ಆಯ್ಕೆ ಇದೆ. ಹೌದು ಹಲವು ಆಪ್ ಗಳು ಮತ್ತು ಸೇವೆಗಳು ಈ ಕೆಲಸವನ್ನು ಮಾಡುತ್ತದೆ. ಅವುಗಳ ಪಟ್ಟಿಯನ್ನು ನಾವಿಲ್ಲಿ ನಮೂದಿಸುತ್ತಿದ್ದೇವೆ.

ಈ 9 ಆಪ್ ಮತ್ತು ಸೇವೆಗಳು ನಿಮ್ಮ ಪೆಟ್ರೋಲ್/ಡಿಸೇಲ್ ಬಿಲ್ ನ್ನು ಉಳಿಸುತ್ತದೆ

ಇವು ನಿಮಗೆ ರಿಯಲ್ ಟೈಮ್ ನ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ತಿಳಿಸುತ್ತದೆ. ಇದು ಹೇಗೆ ನಿಮಗೆ ಸಹಾಯ ಮಾಡುತ್ತದೆ ಎಂದು ನೀವು ಯೋಚಿಸುತ್ತಿರಬಹುದು. ಇಂಧನ ಬೆಲೆ ಎಲ್ಲಿ ಕಡಿಮೆ ಇದೆ ಎಂಬುದನ್ನು ಇದು ತಿಳಿಸುತ್ತದೆ. ಉದಾಹರಣೆಗೆ ದೆಹಲಿಗಿಂತ ಗಾಝಿಯಾಬಾದ್,ನೋಯಿಡಾ, ಮೀರತ್, ಗುರಗಾಂವ್ ಮತ್ತು ಫರಿದಾಬಾದ್ ನಲ್ಲಿ ಇಂಧನ ಬೆಲೆ ಸದ್ಯ ಕಡಿಮೆ ಇದೆ.

ಅಷ್ಟೇ ಅಲ್ಲ ಇಂಧನ ಸ್ಟೇಷನ್ ನಿಂದ ಸ್ಟೇಷನ್ ಗೂ ಕೂಡ ವ್ಯತ್ಯಾಸವಿರುತ್ತದೆ. ಇಲ್ಲಿ ನಾವು ತಿಳಿಸಿರುವ ಆಪ್ ಗಳು ನಿಮಗೆ ಎಲ್ಲಿ ನಿಮ್ಮ ವೆಹಿಕಲ್ ಗೆ ಇಂಧನ ಹಾಕಿಸಿಕೊಳ್ಳಬೇಕು ಮತ್ತು ಹೇಗೆ ಉಳಿತಾಯ ಮಾಡಿಕೊಳ್ಳಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಆಪ್: Fuel@IOC

ಆಪ್: Fuel@IOC

ಇದು ಭಾರತದ ಆಯಿಲ್ಸ್ ಆಪ್ ಆಗಿದ್ದು ನಿಮ್ಮ ಸಿಟಿಯಲ್ಲಿನ ಇಂಧನ ಬೆಲೆಯನ್ನು ನೇರವಾಗಿ ತಿಳಿಸುತ್ತದೆ. ಇದು ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ಎರಡರಲ್ಲೂ ಕೂಡ ಲಭ್ಯವಿದೆ. ಆಪ್ ಫೀಚರ್ ನ್ನು ಆಕ್ಸಿಸ್ ಮಾಡಲು ಗ್ರಾಹಕರು ತಮ್ಮ ಖಾತೆಯನ್ನು ಇಲ್ಲಿ ತೆರೆಯಬೇಕಾಗುತ್ತದೆ. ಆಪ್ ನಲ್ಲಿರುವ "ಲೊಕೇಟ್ ಅಸ್" ಟ್ಯಾಬ್ ಬಳಕೆದಾರರಿಗೆ ಹತ್ತಿರದಲ್ಲಿರುವ ಪೆಟ್ರೊಲ್ ಪಂಪ್ಸ್ ಗಳ ವಿವರವನ್ನು ಮ್ಯಾಪ್ ನಲ್ಲಿ ತೋರಿಸುತ್ತದೆ. ಬಳಕೆದಾರರು ಆ ಮ್ಯಾಪ್ ನ್ನು ಕ್ಲಿಕ್ಕಿಸಿ ಅಲ್ಲಿನ ರೇಟ್ ಎಷ್ಟಿದೆ ಎಂದು ತಿಳಿದುಕೊಳ್ಳಬಹುದು.

ಆಪ್: ಸ್ಮಾರ್ಟ್ ಡ್ರೈವ್

ಆಪ್: ಸ್ಮಾರ್ಟ್ ಡ್ರೈವ್

ಇದು ಬಿಪಿಸಿಎಲ್ ನ ಆಪ್ ಆಗಿದ್ದು ನಿಮ್ಮ ಸಿಟಿಯಲ್ಲಿನ ಪ್ರತಿದಿನ ಇಂಧನ ಬೆಲೆಯನ್ನು ತಿಳಿದುಕೊಳ್ಳಬಹುದು. ಪ್ರತಿದಿನದ ಇಂಧನ ಬೆಲೆಯನ್ನು ಹೊರತು ಪಡಿಸಿ ಆಪ್ ನಲ್ಲಿ ಹಲವು ಹತ್ತಿರದ ಫ್ಯೂಯೆಲ್ ಸ್ಟೇಷನ್ ನ ವಿವರಗಳು, ಯಾವೆಲ್ಲ ಫೆಸಿಲಿಟಿಗಳು ಹತ್ತಿರದ ಫ್ಯೂಯೆಲ್ ಸ್ಟೇಷನ್ ನಲ್ಲಿ ಲಭ್ಯವಿದೆ ಸೇರಿದಂತೆ ಹಲವು ಅಂಶಗಳನ್ನು ತಿಳಿದುಕೊಳ್ಳಬಹುದು. ಇದರ ಜೊತೆಗೆ ಆಫರ್ ಝೋನ್ ಕೂಡ ಇದ್ದು ಕಂಪೆನಿಯ ಪೆಟ್ರೋ ಸ್ಮಾರ್ಟ ಕಾರ್ಡ್ ಗೆ ಇದು ಲಿಂಕ್ ಆಗಿರುತ್ತದೆ.

ಆಪ್: ಡೈಲಿ ಪೆಟ್ರೋಲ್/ ಡಿಸೇಲ್ ಪ್ರೈಸ್ ಆಪ್

ಆಪ್: ಡೈಲಿ ಪೆಟ್ರೋಲ್/ ಡಿಸೇಲ್ ಪ್ರೈಸ್ ಆಪ್

ಬೇರೆಬೇರೆ ಸಿಟಿಯಲ್ಲಿ ಪ್ರತಿದಿನದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಈ ಆಪ್ ತಿಳಿಸುತ್ತದೆ.ನೀವು ನಿಮ್ಮ ಸಿಟಿಯಲ್ಲಿ ಎಲ್ಲಿ ಬೆಲೆ ಹೆಚ್ಚಿದೆ ಮತ್ತು ಎಲ್ಲಿ ಕಡಿಮೆ ಇದೆ ಎಂದು ತಿಳಿದುಕೊಳ್ಳಲು ಇದು ನೆರವಾಗುತ್ತದೆ.ಕಳೆದ ಒಂದು ವಾರದಲ್ಲಿ ಇಂಧನ ಬೆಲೆಯಲ್ಲಿ ಆಗಿರುವ ಏರಿಳಿತದ ಸಂಪೂರ್ಣ ವಿವರವನ್ನು ಇದು ನೀಡುತ್ತದೆ.

ಆಪ್: ಮ್ಯಾಪ್ ಮೈ ಫ್ಯೂಯಲ್—ಪೆಟ್ರೋಲ್ & ಡಿಸೇಲ್ ಡೈಲಿ

ಆಪ್: ಮ್ಯಾಪ್ ಮೈ ಫ್ಯೂಯಲ್—ಪೆಟ್ರೋಲ್ & ಡಿಸೇಲ್ ಡೈಲಿ

ಪ್ರೈಸ್ ಅಪ್ ಡೇಟ್ ಆಪ್ ಇತರೆ ಆಪ್ ಗಳಂತೆ ಈ ಆಪ್ ನಲ್ಲೂ ಕೂಡ ನೀವು ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ತಿಳಿದುಕೊಳ್ಳಬಹುದು.ಇದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (ಐಓಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್(ಹೆಚ್ ಪಿ ಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್(ಬಿಪಿಸಿಎಲ್) ಮತ್ತು ರಿಲಯನ್ಸ್ ಪೆಟ್ರೋಲಿಯಂ, ಎಸ್ಸಾರ್ ಪೆಟ್ರೋಲಿಯಂ ಮತ್ತು ಶೆಲ್ ಇಂಡಿಯಾ ಪೆಟ್ರೋಲಿಯಂ ಸ್ಟೇಷನ್ ಗಳ ರೇಟ್ ಗಳನ್ನು ತಿಳಿಸುತ್ತದೆ.

ಆಪ್: ಡೈಲಿ ಫ್ಯೂಯೆಲ್ ಪ್ರೈಸ್—ಡೈಲಿ ಪೆಟ್ರೋಲ್ ಡಿಸೇಲ್ ಪ್ರೈಸ್ ಇಂಡಿಯಾ

ಆಪ್: ಡೈಲಿ ಫ್ಯೂಯೆಲ್ ಪ್ರೈಸ್—ಡೈಲಿ ಪೆಟ್ರೋಲ್ ಡಿಸೇಲ್ ಪ್ರೈಸ್ ಇಂಡಿಯಾ

ಇಂಧನದ ಎಂದಿನ ದರಗಳ ಜೊತೆಗೆ ಈ ಆಪ್ ಭಾರತದ ಬೇರೆಬೇರೆ ಸಿಟಿಯಲ್ಲಿನ ಲೈವ್ ಫ್ಯೂಯೆಲ್ ಬೆಲೆಯನ್ನು ಇದು ತಿಳಿಸುತ್ತದೆ. ನೀವು ಟ್ರಾವೆಲ್ ಮಾಡುತ್ತಿರುವ ಸಿಟಿಯ ಟ್ರ್ಯಾಕ್ ರೆಕಾರ್ಡ್ ನ್ನು ನೋಡುವುದಕ್ಕೂ ಕೂಡ ಇದು ನೆರವು ನೀಡುತ್ತದೆ.

ಡೈಲಿ ಪೆಟ್ರೋಲ್ ಡಿಸೇಲ್ ಪ್ರೈಸ್ ಅಪ್ ಡೇಟ್ ಇನ್ ಇಂಡಿಯಾ

ಡೈಲಿ ಪೆಟ್ರೋಲ್ ಡಿಸೇಲ್ ಪ್ರೈಸ್ ಅಪ್ ಡೇಟ್ ಇನ್ ಇಂಡಿಯಾ

ಇತರೆ ಆಪ್ ಗಳಂತೆ ಇದು ಕೂಡ ಭಾರತದ ಬೇರೆಬೇರೆ ಸ್ಟೇಷನ್ ನಲ್ಲಿರುವ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ತಿಳಿಸುತ್ತದೆ. ಇದರಲ್ಲಿ ಇನ್ ಬಿಲ್ಟ್ ಕ್ಯಾಲ್ಕುಲೇಟರ್ ಇದ್ದು ನೀವೆಷ್ಟು ಹೆಚ್ಚು ಅಥವಾ ಕಡಿಮೆ ಬೆಲೆಯನ್ನು ಪಾವತಿಸುತ್ತಿದ್ದೀರಿ ಎಂಬುದನ್ನು ತಿಳಿಸುತ್ತದೆ.ಉತ್ತಮ ಟ್ರ್ಯಾಕ್ ಇಟ್ಟುಕೊಳ್ಳುವುದಕ್ಕಾಗಿ ಇದರಲ್ಲಿ ಬೆಲೆ ಏರಿಕೆ ಮತ್ತು ಇಳಿಕೆಯ ಗ್ರಾಫ್ ನ್ನು ನೀಡಲಾಗುತ್ತದೆ. ಕ್ವಿಕ್ ವಿಡ್ಜ್ ನ್ನು ಕೂಡ ನೀವು ನಿಮ್ಮ ಹೋಮ್ ಸ್ಕ್ರೀನ್ ನಲ್ಲಿ ಸೇರಿಸಿಕೊಳ್ಳುವುದಕ್ಕೆ ಆಂಡ್ರಾಯ್ಡ್ ಫೋನ್ ನಲ್ಲಿ ಅವಕಾಶವಿರುತ್ತದೆ.

ವೆಬ್ ಸೈಟ್ ಗಳು: IOCL, BPCL ಮತ್ತು HP ವೆಬ್ ಸೈಟ್ ಗಳು

ವೆಬ್ ಸೈಟ್ ಗಳು: IOCL, BPCL ಮತ್ತು HP ವೆಬ್ ಸೈಟ್ ಗಳು

ಕನ್ಸ್ಯೂಮರ್ ಗಳು ಇಂಡಿಯನ್ ಆಯಿಲ್ ವೆಬ್ ಸೈಟ್ (iocl.com) ಗೆ ಭೇಟಿ ನೀಡಿ ಬೆಲೆಯನ್ನು ತಿಳಿದುಕೊಳ್ಳಬಹುದು. ವೆಬ್ ಸೈಟ್ ನ ಹೋಮ್ ಪೇಜ್ ನ ಬಲಭಾಗದಲ್ಲಿ ಚೆಕ್ ಫ್ಯೂಯೆಲ್ ಪ್ರೈಸ್ ಅನ್ನೋ ಬ್ಯಾನರ್ ಇರುತ್ತದೆ. ಅದನ್ನು ಕ್ಲಿಕ್ಕಿಸಿದರೆ ಸಿಟಿಯ ಪ್ರಕಾರ ಬೆಲೆಯನ್ನು ತೋರಿಸಲಾಗುತ್ತದೆ. ಇದು ಹೋಲಿಕೆ ಮಾಡಿಕೊಳ್ಳುವುದಕ್ಕೆ ಹಿಂದಿನ ರೇಟ್ ನ್ನು ಕೂಡ ತೋರಿಸುತ್ತದೆ.

ಮತ್ತೊಂದು ದೊಡ್ಡ ಆಯಿಲ್ ಕಂಪೆನಿ ಅಂದರೆ ಅದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್(HPCL) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಕೂಡ ಇದೇ ರೀತಿಯ ವೆಬ್ ಸೈಟ್ ಲಿಂಕ್ ಗಳು ಇವೆ -- https://www.bharatpetroleum.in/index.aspx

SMS ಸರ್ವೀಸ್:

SMS ಸರ್ವೀಸ್: "RSP DEALER CODE' ಟು 92249-92249

ಎಸ್ಎಂಎಸ್ ಕಳಿಸಿ ಕೂಡ ಗ್ರಾಹಕರು ತಮ್ಮ ಸಿಟಿಯಲ್ಲಿರುವ ಇಂಧನ ಬೆಲೆಯನ್ನು ತಿಳಿದುಕೊಳ್ಳಲು ಅವಕಾಶವಿದೆ. 'RSP DEALER CODE' ಎಂದು ಟೈಪ್ ಮಾಡಿ 92249-92249 ಗೆ ಕಳಿಸಿ. ಭಾರತ್ ಪೆಟ್ರೋಲಿಯಂ ಗ್ರಾಹಕರಾಗಿದ್ದಲ್ಲಿ ಮೇಲಿನ ರೀತಿಯಲ್ಲೇ 9223112222 ಗೆ ಕಳಿಸಬೇಕು.

ಹಿಂದೂಸ್ತಾನ್ ಪೆಟ್ರೋಲಿಯಂ ಆದಲ್ಲಿ ಗ್ರಾಹಕರು ಎಸ್ಎಂಎಸ್ ನ್ನು 9222201122 ಗೆ ಕಳಿಸಬೇಕು. ಎಸ್ಎಂಎಸ್ HPPRICEDEALERCODE ಪ್ಯಾಟರ್ನ್ ನಲ್ಲಿ ಇರಬೇಕು. ಎಲ್ಲಾ ಪೆಟ್ರೋಲ್ ಪಂಪ್ ಡಿಲೀರ್ ಗಳಿಗೂ ಕೂಡ ತಮ್ಮ ನಂಬರ್ ನ್ನು ಪೆಟ್ರೋಲ್ ಪಂಪ್ ನಲ್ಲಿ ಡಿಸ್ಪ್ಲೇ ಮಾಡಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ತಿಳಿಸಲಾಗಿದೆ.

ಪೇಟಿಎಂ ಫ್ಯೂಯೆಲ್ ಕ್ಯಾಷ್ ಬ್ಯಾಕ್

ಪೇಟಿಎಂ ಫ್ಯೂಯೆಲ್ ಕ್ಯಾಷ್ ಬ್ಯಾಕ್

ಸಾಧ್ಯವಾದಲ್ಲಿ ರುಪಾಯಿ 7,500 ರುಪಾಯಿವರೆಗೆ ಕ್ಯಾಷ್ ಬ್ಯಾಕ್ ನ್ನು ಪೇಟಿಎಂ ಪೇಮೆಂಟ್ ಆಪ್ ಮೂಲಕ ಪಡೆಯಬಹುದು. ನಿರ್ಧಿಷ್ಟ ಪೇಜ್ ನಲ್ಲಿ ನಮೂದಿಸಿರುವಂತೆ, ಬಳಕೆದಾರರು ಪ್ರತಿ ಬಾರಿ ಪೇಟಿಎಂನಲ್ಲಿ ಇಂಧನ ಖರೀದಿಸಿದಾಗಲೂ ಕೂಡ ಕ್ಯಾಷ್ ಬ್ಯಾಕ್ ಆಫರ್ ಗಳು ಲಭ್ಯವಿರುತ್ತದೆ.ಆದರೆ ಪ್ರತಿ ಕ್ಯಾಷ್ ಬ್ಯಾಕ್ ಗೂ ಕೂಡ ಪ್ರೋಮೋಕೋಡ್ ಬಳಸಬೇಕು ಆ ಮೂಲಕ ಪೇಟಿಎಮ್ ಇಂಧನ ಟ್ರಾನ್ಸ್ಯಾಕ್ಷನ್ ದು ಗುರುತಿಸಲು ಸಾಧ್ಯವಾಗಬೇಕು. ಇದನ್ನು ನೀವು ನಿರ್ಧಿಷ್ಟ ಪೆಟ್ರೋಲ್ ಬಂಕ್ ಜೊತೆಗೆ ಹೋಲಿಸಿ ನೋಡಬಹುದು ಮತ್ತು ಕ್ಯಾಷ್ ಬ್ಯಾಕ್ ಆಫರ್ ನ್ನು ಪಡೆದುಕೊಳ್ಳಬಹುದು.

Best Mobiles in India

Read more about:
English summary
Ease the pay of petrol and diesel bills using these apps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X