ಈ ಆಪ್ ಬಳಸಿ ಎಲೆಕ್ಷನ್ ಕಮಿಷನ್ ಗೆ ದೂರು ನೀಡಿ

By Gizbot Bureau
|

2019 ರ ಚುನಾವಣೆಯ ಮುನ್ನ ಭಾರತದ ಚುನಾವಣಾ ಆಯೋಗವು ಹೊಸದಾಗಿ ಆಪ್ ವೊಂದನ್ನು ಪರಿಚಯಿಸಿದೆ. ಅದರ ಹೆಸರು cVIGIL. ಈ ಆಪ್ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯನ್ನು ರೆಕಾರ್ಡ್ ಮಾಡುವುದಕ್ಕೆ ಮತ್ತು ಅದನ್ನು ವರದಿ ಮಾಡಲು ದೇಶದ ಪ್ರಜೆಗಳಿಗೆ ಅವಕಾಶ ನೀಡುತ್ತದೆ.

ಈ ಆಪ್ ಬಳಸಿ ಎಲೆಕ್ಷನ್ ಕಮಿಷನ್ ಗೆ ದೂರು ನೀಡಿ

ಬಳಕೆದಾರರು ಫೋಟೋ ಕ್ಲಿಕ್ಕಿಸುವ ಮೂಲಕ ಇಲ್ಲವೇ ವೀಡಿಯೋ ರೆಕಾರ್ಡಿಂಗ್ ನ್ನು ಆಪ್ ಬಳಸಿ ಮಾಡುವ ಮೂಲಕ ಸಾಧಿಸಬಹುದು. ಇದಕ್ಕಾಗಿ ಅವರು ತಮ್ಮ ಸ್ಮಾರ್ಟ್ ಫೋನ್ ಕ್ಯಾಮರಾ ಬಳಸಬೇಕು. ಸದ್ಯ ಆಪ್ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ಲಭ್ಯವಿದೆ. ಸಿಂಪಲ್ ವಿಧಾನದಿಂದ ಆಪ್ ಗೆ ಸೈನ್ ಇನ್ ಆಗುವುದಕ್ಕೆ ಬಳಕೆದಾರರಿಗೆ ಅವಕಾಶವಿರುತ್ತದೆ.

ಆಪ್ ಗೆ ಬೇಕು ಮೂರು ಪರ್ಮಿಷನ್:

ಗೂಗಲ್ ಪ್ಲೇ ಸ್ಟೋರ್ ಬಳಸಿ ಆಪ್ ನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಆಪ್ ಇನ್ಸ್ಟಾಲೇಷನ್ ಮುಗಿದ ನಂತರ ಇದು ಮೂರು ಪರ್ಮಿಷನ್ ಗಳನ್ನು ಕೇಳುತ್ತದೆ. ಮೊದಲನೆಯದಾಗಿ ಸ್ಮಾರ್ಟ್ ಫೋನ್ ಕ್ಯಾಮರಾಕ್ಕೆ ಆಕ್ಸಿಸ್ ಕೇಳುತ್ತದೆ. ಎರಡನೆಯದಾಗಿ ಇದು ಸ್ಮಾರ್ಟ್ ಫೋನ್ ಗ್ಯಾಲರಿ ಗೆ ಆಕ್ಸಿಸ್ ಕೇಳುತ್ತದೆ. ಮೂರನೆಯದಾಗಿ ಇದು ಜಿಪಿಎಸ್ ಲೊಕೇಷನ್ ಟ್ರ್ಯಾಕಿಂಗ್ ಗೆ ಅನುಮತಿ ಕೇಳುತ್ತದೆ.

ರಿಜಿಸ್ಟರ್ ಮಾಡಿಕೊಳ್ಳಬೇಕು:

ಒಮ್ಮೆ ನೀವು ಪರ್ಮಿಷನ್ ನೀಡಿದ ನಂತರ ಆಪ್ ನಿಮ್ಮನ್ನ ನೀವು ರಿಜಿಸ್ಟರ್ ಮಾಡಿಕೊಳ್ಳುವುದಕ್ಕೆ ಕೇಳುತ್ತದೆ.ಮೊದಲು ನೀವು ನಿಮ್ಮ ಫೋನ್ ನಂಬರ್ ನೀಡಬೇಕು ಮತ್ತು ನಂತರ ಓಟಿಪಿ ಎಂಟರ್ ಮಾಡಬೇಕು. ಇದರ ಜೊತೆಗೆ ನಿಮ್ಮ ಸಂಪೂರ್ಣ ಹೆಸರು ಮತ್ತು ವಿಳಾಸವನ್ನು ನೀಡಬೇಕು. ಇದಾದ ನಂತರ ಆಪ್ ಬಳಸುವುದಕ್ಕೆ ನೀವು ತಯಾರಾಗಿರುತ್ತೀರಿ.

ನೀವು ನಂತರ ಎರಡು ಪ್ರಮುಖ ಐಕಾನ್ ನ್ನು ಸ್ಕ್ರೀನಿನಲ್ಲಿ ಗಮನಿಸುತ್ತೀರಿ. ಒಂದು ಫೋಟೋ ತೆಗೆಯುವುದಕ್ಕೆ ಮತ್ತೊಂದು ವೀಡಿಯೋ ರೆಕಾರ್ಡ್ ಮಾಡುವುದಕ್ಕೆ.

ಇದನ್ನು ಹೊರತು ಪಡಿಸಿ ಎಲೆಕ್ಷನ್ ಕಮಿಷನ್ 15 ಅಂಶಗಳ ಪಟ್ಟಿಯನ್ನು ನೀಡಿದ್ದು ಯಾವುದನ್ನು ನೀವು ರಿಪೋರ್ಟ್ ಮಾಡಬೇಕು ಎಂದು ತಿಳಿಸಿದೆ. ಆ ಪಟ್ಟಿ ಈ ಕೆಳಕಂಡಂತೆ ಇದೆ.

1. ಹಣದ ವಿತರಣೆ

2. ಉಡುಗೊರೆಗಳು/ಕೂಪನ್ ಗಳ ವಿತರಣೆ

3. ಮದ್ಯ ವಿತರಣೆ

4. ಅನುಮತಿ ಇಲ್ಲದ ಪೋಸ್ಟರ್ ಗಳು/ಬ್ಯಾನರ್ ಗಳು

5. ಬಂದೂಕುಗಳ ಪ್ರದರ್ಶನ ಮತ್ತು ಬೆದರಿಕೆ

6. ಅನುಮತಿ ಇಲ್ಲದೆ ವಾಹನ ಅಥವಾ ಬೆಂಗಾವಲು

7. ಪಾವತಿ ಮಾಡಿದ ಸುದ್ದಿಗಳು

8. ಆಸ್ತಿ ಡಿಫೇಸ್ಮೆಂಟ್

9. ಮತದಾನ ದಿನದಂದು ಮತದಾರರಿಗೆ ಸಾರಿಗೆ

10.ಮತದಾನದ ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ

11. ನಿಷೇಧದ ಅವಧಿಯಲ್ಲಿ ಪ್ರಚಾರ

12. ಧಾರ್ಮಿಕ ಅಥವಾ ಸಾಮುದಾಯಿಕ ಭಾಷಣಗಳು ಮತ್ತು ಸಂದೇಶಗಳು

13. ಅನುಮತಿಸಲಾದ ಸಮಯದ ನಂತರ ಸ್ಪೀಕರ್ ಗಳ ಬಳಕೆ

14. ಕಡ್ಡಾಯ ಘೋಷಣೆಗಳಿಲ್ಲದ ಪೋಸ್ಟರ್ ಗಳು

15. ಸಾರ್ವಜನಿಕ ರ್ಯಾಲಿಗಳಿಗೆ ಸಾರಿಗೆ

Best Mobiles in India

Read more about:
English summary
Election Commission launches cVIGIL app: 15 things you can do with it

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X