ಸಮಾಜ ಕಟ್ಟುವ ಕಾರ್ಯಕ್ಕೆ ಮುಂದಾಗಿ ಫೇಸ್ ಬುಕ್...!
ಫೇಸ್ ಬುಕ್ ಕೇವಲ ಸಮಯ ಕಳೆಯಲು ಮಾತ್ರವಲ್ಲ ಇದು ಒಂದು ಸಮಾಜವನ್ನು ಸುಧಾರಿಸುವ ಮತ್ತು ನಿರ್ಮಿಸುವ ಕಾರ್ಯಕ್ಕೆ ಸಹ ಬಳಕೆ ಮಾಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿರುವ ಫೇಸ್ ಬುಕ್ ಸ್ಥಾಪಕ ಮಾರ್ಕ್ ಜಕರ್ಬರ್ಗ್, ಫೇಸ್ ಬುಕ್ ನಲ್ಲಿ ಹೊಸದೊಂದು ಟೂಲ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದು ಒಬ್ಬರಿಗೊಬ್ಬರು ಸಹಾಯ ಮಾಡುವುದಲ್ಲದೇ ಫೇಸ್ ಬುಕ್ ಅನ್ನು ಬೆಂಬಲಿಸುದಕ್ಕಾಗಿದೆ.

ಫೇಸ್ ಬುಕ್ ಹೊಸದೊಂದು ಟೂಲ್ ಅನ್ನು ಪರಿಚಯ ಮಾಡಿದ್ದು ಅದೇ ಮೆಂಟರ್ ಶಿಪ್ ಅಂಡ್ ಸಫೋರ್ಟ್. ಇದರಲ್ಲಿ ಮೆಂಟಿಗಳು ಮತ್ತು ಮೆಂಟರ್ ಗಳು ಒಬ್ಬರನೊಬ್ಬರು ಕನೆಕ್ಟ್ ಆಗಲಿದ್ದು, ಇಬ್ಬರು ಪರಸ್ಪರ ಭೇಟಿಯಾಗಲಿದ್ದು, ಕಾರ್ಯಕ್ರಮವನ್ನು ವೊಂದನ್ನು ರೂಪಿಸಿಸಲಿದ್ದು, ಆ ಮೂಲಕ ಅಭಿವೃದ್ಧಿಯನ್ನು ಹೊಂದಬಹುದಾಗಿದೆ.
ಈ ಕಾರ್ಯಕ್ರಮವು ಅವಕಾಶಕತೆ ಇದ್ದವರಿಗೆ ಸಹಾಯವನ್ನು ಮಾಡಲಿದೆ. ಅಲ್ಲದೇ ಅವರಿಗೆ ಗುರಿಯ ಕಡೆಗೆ ಸರಿಯಾದ ದಾರಿಯಲ್ಲಿ ನಡೆಯಲು ಅಗತ್ಯವಾದ ಮಾರ್ಗದರ್ಶನವನ್ನು ಪಡೆಯಬಹುದಾಗಿದೆ ಎನ್ನಲಾಗಿದೆ. ಇದಕ್ಕಾಗಿ ವಿಷಯ ಪರಿಣಿತರ ಸಹಾಯವನ್ನು ಫೇಸ್ ಬುಕ್ ಬಯಸುತ್ತಿದೆ.
ಇದಕ್ಕಾಗಿ ಫೇಸ್ ಬುಕ್ ಒಂದು ಪೈಲೆಟ್ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಐಮೆಂಟರ್ ಎಂದು ಇದು ಶಿಕ್ಷಣಕ್ಕೆ ಸಂಬಂಧಿಸಿದ್ದಾಗಿದ್ದು, ಅಲ್ಲದೇ ಇಂಟರ್ ನ್ಯಾಷಿನಲ್ ರೆಸ್ಕ್ಯೂ ಕಮಿಟಿಯನ್ನು ನಿರಾಶಿತರಿಗಾಗಿ ಆಯೋಜನೆ ಮಾಡುತ್ತಿದ್ದು, ಇದಲ್ಲಿ ಭಾಗಿಯಾಗಲು ಅವಕಾಶವನ್ನು ಮಾಡಿಕೊಟ್ಟಿದೆ.
ಇಲ್ಲಿ ಮೆಂಟಿಗಳನ್ನು ಮತ್ತು ಮೆಂಟರ್ ಗಳನ್ನು ಫೇಸ್ ಬುಕ್ ಪಾಲುದಾರ ಸಂಸ್ಥೆಯೂ ಆಯ್ಕೆ ಮಾಡಿಕೊಳ್ಳಿದ್ದು, 18 ವರ್ಷಕ್ಕೂ ಹಿರಿಯರನ್ನು ಇದರಲ್ಲಿ ಭಾಗಿ ಮಾಡಿಕೊಳ್ಳಿಲಿದೆ. ಇದು ಲಾಭದ ಉದ್ದೇಶಕ್ಕಾಗಿ ಮಾಡುವ ಕೆಲಸವಲ್ಲ ಎಂದು ಫೇಸ್ ಬುಕ್ ತಿಳಿಸಿದ್ದು, ಹಲವಾರು ದೇಶಗಳಲ್ಲಿ ಈ ಸೇವೆಯನ್ನು ಆರಂಭಿಸಲು ಮುಂದಾಗಿದೆ.


Click it and Unblock the Notifications








