Home
Apps

ಫೇಸ್ ಬುಕ್ ಬ್ಲಡ್ ಡೋನೆಷನ್ ಗಾಗಿ ನೋಂದಾಯಿಸಿಕೊಂಡವರ ಸಂಖ್ಯೆ 4 ಮಿಲಿಯನ್

By Lekhaka

ಇದೇ ತಿಂಗಳ ಹಿಂದೆ ಅಕ್ಟೋಬರ್ ನಲ್ಲಿ ಫೇಸ್ ಬುಕ್ ಹೊಸದಾಗಿ ಬ್ಲಡ್ ಡೋನೆಷನ್ ಆಯ್ಕೆಯನ್ನು ಭಾರತೀಯ ಬಳಕೆದಾರರಿಗೆ ನೀಡಿತ್ತು. ಇದು ಶೀಘ್ರವೇ ರಕ್ತದ ಅವಶ್ಯಕತೆ ಇರುವವರಿಗೆ ತುರ್ತಾಗಿ ರಕ್ತವನ್ನು ಒದಗಿಸುವ ಸಲುವಾಗಿ ಕಾರ್ಯಚರಣೆಯನ್ನು ಆಂಭಿಸಿತ್ತು ಎನ್ನಲಾಗಿದ್ದು, ಸದ್ಯ ಇದು ಒಂದು ಮಟ್ಟಕ್ಕೆ ಯಶಸ್ಸು ಕಂಡಿದೆ ಎನ್ನಬಹುದಾಗಿದೆ.

ಫೇಸ್ ಬುಕ್ ಬ್ಲಡ್ ಡೋನೆಷನ್ ಗಾಗಿ ನೋಂದಾಯಿಸಿಕೊಂಡವರ ಸಂಖ್ಯೆ 4 ಮಿಲಿಯನ್

ಇದುವರೆಗೂ ಬ್ಲಡ್ ಡೋನೆಷನ್ ಗಾಗಿ ನೋಂದಣಿಯನ್ನು ಮಾಡಿಕೊಂಡವರ ಸಂಖ್ಯೆಯೂ 4 ಮಿಲಿಯನ್ ಎಂದು ಫೇಸ್ ಬುಕ್ ಮಾಹಿತಿಯನ್ನು ಹಂಚಿಕೊಂಡಿದ್ದು, ಈ ಆಯ್ಕೆಯೂ ಭಾರತದಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡ ಹಿನ್ನಲೆಯಲ್ಲಿ ಇದೇ ಆಯ್ಕೆಯನ್ನು ಬಾಂಗ್ಲ ದೇಶಕ್ಕೂ ವಿಸ್ತರಿಸಲು ಫೇಸ್ ಬುಕ್ ಚಿಂತನೆ ನಡೆಸಿದೆ.

ಈ ಆಯ್ಕೆಯಿಂದಾಗಿ ಒಂದೇ ವೇದಿಕೆಯಲ್ಲಿ 4 ಮಿಲಿಯನ್ ರಕ್ತದಾನಿಗಳು ದೊರೆತಂತಾಗಿದ್ದು, ತುರ್ತು ರಕ್ತದ ಅಗತ್ಯತೆ ಇರುವವರು ದಾನಿಗಳ ನೆರವನ್ನು ಪಡೆಯಬಹುದಾಗಿದೆ. ಇದಲ್ಲದೇ ರಕ್ತವನ್ನು ಸಂಗ್ರಹಿಸುವ ಸಂಸ್ಥೆಗಳು ಸಹ ಈ ಸೇವೆಯ ಸಹಾಯವನ್ನು ಪಡೆದು ಜೀವನ್ನು ಉಳಿಸಬಹುದಾಗಿದೆ.

ಆಸ್ಪತ್ರೆಗಳು, ಬ್ಲಡ್ ಬ್ಯಾಂಕ್ ಗಳು, ಸೇವ ಸಂಸ್ಥೆಗಳು ಬೇಕಿದ್ದಲ್ಲಿ ರಕ್ತದಾನ ಶಿಬಿರಗಳನ್ನು ಫೇಸ್ ಬುಕ್ ಸಹಾಯದಿಂದ ಆಯೋಜನೆಯನ್ನು ಸಹ ಮಾಡಬಹುದಾಗಿದೆ. ಇದಕ್ಕಾಗಿ ರಕ್ತದಾನಿಗಳಿಗೆ ಫೇಸ್ ಬುಕ್ ನೋಟಿಫಿಕೇಷನ್ ಮೂಲಕ ಮಾಹಿತಿಯನ್ನು ರವಾನಿಸುವ ಅವಕಾಶವನ್ನು ಫೇಸ್ ಬುಕ್ ಮಾಡಿಕೊಟ್ಟಿದೆ.

ಇದಲ್ಲದೇ ತುರ್ತಾಗಿ ರಕ್ತದ ಅವಶ್ಯಕತೆ ಇರುವವರು ಸಹ ಇಲ್ಲಿ ರಕ್ತದಾನಿಗಳನ್ನು ಹುಡುಕ ಬಹುದಾಗಿದೆ. ಅಲ್ಲದೇ ತಮ್ಮ ಸಮೀಪವಿರುವ ದಾನಿಗಳಿಂದ ರಕ್ತವನ್ನು ಪಡೆದುಕೊಳ್ಳುವ ಅಕಾಶವನ್ನು ಪೇಸ್ ಬುಕ್ ಮಾಡಿಕೊಡಲು ಮುಂದಾಗಿದೆ,

Best Mobiles in India

English summary
Facebook has announced that more than four million donors in India have signed up for Facebook's blood donation feature.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+