Home
Apps

ಫೇಸ್ಬುಕ್ ಕ್ಯಾಮೆರಾದಲ್ಲಿ GIF ಕ್ರಿಯೇಟ್ ಮಾಡಬಹುದು

ಫೇಸ್ಬುಕ್ ಕ್ಯಾಮರಾದಲ್ಲಿ ಅನಿಮೇಷನ್ GIF ವಿಡಿಯೋ ಕ್ರಿಯೇಟ್ ಮಾಡಬಹುದಾಗಿದೆ. ಇದು ಬಳಕೆದಾರರನ್ನು ಹೆಚ್ಚು ಆಕರ್ಷಿಸುತ್ತಿದೆ.

By Prathap T

ಫೇಸ್ಬುಕ್ ಮುಖ್ಯ ಆಪ್ ನಲ್ಲಿ ಕ್ಯಾಮರಾವನ್ನು ಅಳವಡಿಸುವ ಮೂಲಕ ಸಾಕಷ್ಟು ಜನಮನ್ನಣೆಗೆ ಪಾತ್ರವಾಗಿತ್ತು. ಇದೀಗ GIF ಅನಿಮೇಟೆಡ್ ವಿಡಿಯೋಗಳನ್ನು ರಚಿಸಲು ಅವಕಾಶ ನೀಡುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

ಫೇಸ್ಬುಕ್ ಕ್ಯಾಮೆರಾದಲ್ಲಿ GIF ಕ್ರಿಯೇಟ್ ಮಾಡಬಹುದು

GIF ಕ್ರಿಯೇಟ್ ಮಾಡುವುದು ಹೇಗೆ?

ಫೇಸ್ಬುಕ್ ಕ್ಯಾಮರಾ ವೈಶಿಷ್ಟ್ಯವನ್ನು ಅಪ್ಲಿಕೇಶನ್ ಮೇಲಿನ ಎಡ ಮೂಲೆಯಲ್ಲಿ ಕಾಣಸಿಗುವ ಕ್ಯಾಮರಾ ಐಕಾನ್ ಟ್ಯಾಪ್ ಮಾಡುವ ಮೂಲಕ ಪ್ರವೇಶಿಸಿ ಕ್ಯಾಮರಾ ಇಂಟರ್ ಫೇಸ್ ನಲ್ಲಿ ಸ್ವೈಪ್ ಮಾಡುವ ಮೂಲಕ ತ್ವರಿತಗತಿಯಲ್ಲಿ GIF ಕ್ರಿಯೆಟ್ ಮಾಡಬಹುದಾಗಿದೆ.

ಪ್ರಿಸ್ಮಾ ಏಫೆಕ್ಟ್ಸ್ ಮಾದರಿಯಲ್ಲಿ ತರಾವರಿ ಫ್ರೇಮ್ಸ್ ಹಾಗೂ ಫಿಲ್ಟರ್ ಗಳನ್ನು ಬಳಸಿ ಸುಂದರವಾದ GIF ವಿಡಿಯೋಗಳನ್ನು ರಚಿಸಬಹುದಾಗಿದೆ. ಅನಿಮೇಟೆಡ್ GIF ವಿಡಿಯೋಗಳನ್ನು ಕೇವಲ ಫೇಸ್ಬುಕ್ ನಲ್ಲಿ ಮಾತ್ರ ಶೇರ್ ಮಾಡಬಹುದಾಗಿದೆ. ಬೇರೆ ಯಾವುದೇ ಆಪ್ ಗಳಿಗೆ ಶೇರ್ ಮಾಡಲು ಆಗುವುದಿಲ್ಲ. ಆದರೆ GIF ವಿಡಿಯೋ ಗಳನ್ನು ಸೇವ್ ಮಾಡಿ ಇಡಬಹುದಾಗಿದೆ. ಈ GIF ವಿಡಿಯೋಗಳು ಫೇಸ್ಬುಕ್ ಹೊರಗೆ ಬಳಕೆ ಮಾಡಲು ಆಗುವುದಿಲ್ಲ.

ಫೇಸ್ಬುಕ್ ಕ್ಯಾಮರಾದಲ್ಲಿ ಈ GIF ವಿಡಿಯೋಗಳನ್ನು ಚಿಕ್ಕದಾಗಿ ಕೆಲ ಸೆಕೆಂಡ್ ಸಮಯವಷ್ಠೆ ಕ್ರಿಯೇಟ್ ಮಾಡಲು ಅವಕಾಶವಿದ್ದು, ಐಇಎಸ್ ಆಪ್ ಇರುವ ಫೇಸ್ಬುಕ್ ನಲ್ಲಿ ಮಾತ್ರ GIF ಕ್ರಿಯೇಟ್ ಮಾಡಲು ಸಪೋರ್ಟ್ ಮಾಡುತ್ತದೆ.

ಈ ವೈಶಿಷ್ಟ್ಯವನ್ನು ಪಡೆಯಲು ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಲಭ್ಯವಿದ್ದು, ಆದರೆಮ ಎಲ್ಲಾ ಐಒಎಸ್ ಫೇಸ್ಬುಕ್ ಬಳಕೆದಾರರು ಅಪ್ಡೇಟ್ ಆಗಿರುವುದಿಲ್ಲ.

ನಿಮಗೆ ನೆನಪಿರಲಿ, GIF ವಿನ್ಯಾಸ ಪರಿಚಯಿಸಿದ ಕಾರಣಕ್ಕಾಗಿ ಫೇಸ್ಬುಕ್ ಕಮೆಂಡ್ ವಿಭಾಗ ಇದರ ಹುಟ್ಟುಹಬ್ಬವನ್ನು ಕಳೆದ ಜೂನ್ 30ರಂದು ಆಚರಿಸಿತು.

ಈಗಾಗಲೇ ಫೇಸ್ಬುಕ್ ಮೆಸೆಂಜರ್ ಮತ್ತು ವಾಟ್ಸಪ್ ಬಳಕೆದಾರರಿಗೆ GIF ಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಅವಕಾಶವಿದೆ. ಫೇಸ್ಬುಕ್ ಸ್ವತಃ GIF ಗಳನ್ನು ರಚಿಸುವ ಸಾಮರ್ಥ್ಯ ಹೊಂದಿರುವುದರಿಂದ ಬಳಕೆದಾರರು ಬೇರೆ ಅನ್ಯ ಆಪ್ ಮೇಲೆ ಅವಲಂಬಿತರಾಗುವ ಅವಶ್ಯಕತೆಯಿಲ್ಲ.

Best Mobiles in India

English summary
Facebook camera gets the ability to create animated GIFs but it is usable only on Facebook.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+