Home
Apps

ವಿಡಿಯೋ ಮಧ್ಯದಲ್ಲಿ ಜಾಹಿರಾತು!! ಕಿರಿಕಿರಿಯಾಗಲಿದೆಯಾ ಫೇಸ್‌ಬುಕ್?

ಹೆಚ್ಚಿನವರು ನೆಮ್ಮದಿಯಾಗಿ ಸಮಯ ಕಳೆಯಲು ಫೇಸ್‌ಬುಕ್‌ ಬಳಕೆ ಮಾಡುತ್ತಿದ್ದು, ಜಾಹಿರಾತುಗಳು ಅವರಿಗೆ ಕಿರಿಕಿರಿಯಾಗುತ್ತದೆ ಎಂದಿದ್ದರೆ.

By Bhaskar N J

ಸಾಮಾಜಿಕ ಜಾಲತಾಣ ಫೇಸ್‌ಬುಕ್ ಇದೀಗ ತನ್ನ ಜಾಲತಾಣಕ್ಕೆ ಅಪ್‌ಲೋಡ್ ಆಗುವ ವಿಡಿಯೋ ಮಧ್ಯದಲ್ಲಿ ಜಾಹಿರಾತುಗಳನ್ನು ತೋರಿಸಲು ಮುಂದಾಗಿದೆ. ಫೇಸ್‌ಬುಕ್‌ನಲ್ಲಿ ಹಾಕುವ ವಿಡಿಯೋಗಳಿಗೆ ಜಾಹಿರಾತನ್ನು ನೀಡಿ ಅದರಲ್ಲಿ ಬಂದ ಆದಾಯವನ್ನು ವಿಡಿಯೂ ಮಾಲಿಕರ ಜೊತೆ ಹಂಚಿಕೊಳ್ಳುವ ಚಿಂತನೆ ಮಾಡಿದೆ.!!

ಕೋಟ್ಯಾಂತರ ಗ್ರಾಹಕರು ಪ್ರತಿದಿನವೂ ಫೇಸ್‌ಬುಕ್‌ ವೀಕ್ಷಣೆ ಮಾಡುತ್ತಲೇ ಇರುತ್ತಾರೆ. ಹಾಗಾಗಿ, ಇದನ್ನು ಎನ್‌ಕ್ಯಾಶ್‌ ಮಾಡಿಕೊಳ್ಳುವ ನಿಟ್ಟಿನಲ್ಲಿ ಫೇಸ್‌ಬುಕ್ ವಿಡಿಯೋಗಳ ಮಧ್ಯೆ ಜಾಹಿರಾತನ್ನು ನೀಡಲು ಬಯಸಿದೆ ಎನ್ನಲಾಗಿದೆ. ಇನ್ನು ಇದರಿಂದ ಬಂದ ಆದಾಯದಲ್ಲಿ ಶೇಕಡಾ 55ರಷ್ಟನ್ನು ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

 ವಿಡಿಯೋ ಮಧ್ಯದಲ್ಲಿ ಜಾಹಿರಾತು!! ಕಿರಿಕಿರಿಯಾಗಲಿದೆಯಾ ಫೇಸ್‌ಬುಕ್?

ಆನ್‌ಲೈನ್‌ನಲ್ಲಿ 30 ರೂ.ಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಹೇಗೆ? ಫುಲ್‌ ಡೀಟೆಲ್ಸ್!!

ಫೇಸ್‌ಬುಕ್ ವಿಡಿಯೋಗಳಲ್ಲಿ ಜಾಹಿರಾತು ಬಿತ್ತರಿಸುವ ವಿಧಾನಗಳ ಬಗ್ಗೆ ಪರೀಕ್ಷಿಸುತ್ತಿದ್ದು, ವಿಡಿಯೊ ಪ್ರಕಾಶಕರು ತಮ್ಮ ವಿಡಿಯೊಗಳ ನಡುವೆ ಕನಿಷ್ಟ 20 ಸೆಕೆಂಡುಗಳ ಜಾಹಿರಾತುಗಳನ್ನು ಅಳವಡಿಸಲು ಅವಕಾಶ ನೀಡುತ್ತದೆ ಎಂದು ವರದಿಯೊಂದು ಹೇಳಿದೆ.

 ವಿಡಿಯೋ ಮಧ್ಯದಲ್ಲಿ ಜಾಹಿರಾತು!! ಕಿರಿಕಿರಿಯಾಗಲಿದೆಯಾ ಫೇಸ್‌ಬುಕ್?

ಇನ್ನು ಫೆಸ್‌ಬುಕ್ ಹೀಗೆ ಮಾಡುವುದರಿಂದ ಫೇಸ್‌ಬುಕ್ ಗ್ರಾಹಕರಿಗೆ ಕಿರಿಕಿರಿಯುಂಟಾಗುತ್ತದೆ ಎಂದು ಹಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನವರು ನೆಮ್ಮದಿಯಾಗಿ ಸಮಯ ಕಳೆಯಲು ಫೇಸ್‌ಬುಕ್‌ ಬಳಕೆ ಮಾಡುತ್ತಿದ್ದು, ಜಾಹಿರಾತುಗಳು ಅವರಿಗೆ ಕಿರಿಕಿರಿಯಾಗುತ್ತದೆ ಎಂದಿದ್ದರೆ.

 ವಿಡಿಯೋ ಮಧ್ಯದಲ್ಲಿ ಜಾಹಿರಾತು!! ಕಿರಿಕಿರಿಯಾಗಲಿದೆಯಾ ಫೇಸ್‌ಬುಕ್?

ವಿಡಿಯೋ ಮಧ್ಯದಲ್ಲಿ ಜಾಹಿರಾತನ್ನು ಪ್ರಕಟಿಸಿದರೆ ಆಗಬಹುದಾದ ಪರಿಣಾಮಗಳನ್ನು ಸಹ ಫೇಸ್‌ಬುಕ್ ಅಧ್ಯಯನ ನಡೆಸಿದ್ದು, ಫೇಸ್‌ಬುಕ್ ಗ್ರಾಹಕರು ಜಾಹಿರಾತನ್ನು ನೋಡಲೇಬೇಕಾದ ಅನಿವಾರ್ಯತೆ ಫೇಸ್‌ಬುಕ್ ಭವಿಷ್ಯದ ಮೇಲೂ ಪರಿಣಾಮಬೀರಬಹುದು. ಹಾಗಾಗಿ, ನಿಧಾನ ಹೆಜ್ಜೆಗಳನ್ನು ಫೇಸ್‌ಬುಕ್ ನಿಡುತ್ತಿದೆ.

Best Mobiles in India

English summary
facebook has been building a video empire. Time to turn it into a business.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+