ಫೇಸ್ ಬುಕ್ ನಿಂದ ಹೊಸದಾಗಿ ಮೆಸೆಂಜರ್ ಕಿಡ್ಸ್ ಆಪ್..!
ಇಂದು ಕುಟುಂಬದರೆಲ್ಲರೂ ಫೇಸ್ ಬುಕ್ ಬಳಸುವುದನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಮಕ್ಕಳು ಮೆಸೆಂಜರ್ ಸೇವೆಯನ್ನು ಪಡೆಯುವಂತಾಗಲಿ ಎನ್ನುವ ಕಾರಣಕ್ಕೆ ಫೇಸ್ ಬುಕ್ ಹೊಸದಾಗಿ ಮೆಸೆಂಜರ್ ಕಿಡ್ಸ್ ಅನ್ನು ಲಾಂಚ್ ಮಾಡಿದೆ. ಇದರಲ್ಲಿ ಮಕ್ಕಳು ಸುರಕ್ಷಿತವಾಗಿ ವಿಡಿಯೋ ಚಾಟ್ ಮತ್ತು ಮೆಸೇಜ್ ಮಾಡಲು ಇದು ಸಹಾಯ ಮಾಡಲಿದೆ.

ಸದ್ಯ ಈ ಸೇವೆ ಅಮೆರಿಕಾದಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದು, ಶೀಘ್ರವೇ ವಿಶ್ವದ ಎಲ್ಲಾ ಭಾಗದಲ್ಲಿಯೂ ಕಾಣಿಸಿಕೊಳ್ಳಲಿದೆ. ಈ ಆಪ್ ಅನ್ನು ಮಕ್ಕಳು ಬಳಕೆ ಮಾಡಿಕೊಳ್ಳುವ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳಬಹುದು ಎನ್ನಲಾಗಿದೆ.
ಇದು ಮಕ್ಕಳಿಗಾಗಿಯೇ ವಿಶೇಷವಾಗಿ ವಿನ್ಯಾಸವನ್ನು ಮಾಡಲಾಗಿದೆ. ಸದ್ಯ ಈ ಆಪ್ ಆಪಲ್ ಬಳಕೆದಾರರಿಗೆ ಮಾತ್ರವೇ ಲಭ್ಯವಿದ್ದು, ಶೀಘ್ರವೇ ಆಂಡ್ರಾಯ್ಡ್ ಬಳಕೆದಾರರು ಈ ಹೊಸ ಆಪ್ ಅನ್ನು ಶೀಘ್ರವೇ ಬಳಕೆ ಮಾಡಿಕೊಳ್ಳವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಮಕ್ಕಳಿಗೆ ಹೊಸ ಪ್ರಪಂಪವನ್ನೇ ಸೃಷ್ಠಿಸಿಕೊಡಲಿದೆ.

'ಈ ಆಪ್ ನಲ್ಲಿ ಮಕ್ಕಳು ಬಳಕೆದಾರರಾಗಿರುವ ಕಾರಣ ಮಕ್ಕಳ ಮೇಲೆ ಪೋಷಕರು ನಿಯಂತ್ರಣವನ್ನು ಸಾಧಿಸಲು ಈ ಆಪ್ ಸಹಾಯ ಮಾಡಲಿದೆ ಎನ್ನಲಾಗಿದೆ. ಅಲ್ಲದೇ ಮಕ್ಕಳು ಸಹ ತಮ್ಮ ಮಿತಿಯಲ್ಲಿ ಮತ್ತೊಬ್ಬರೊಂದಿಗೆ ಕನೆಕ್ಟ್ ಆಗಿರಲು ಇದು ಸಹಾಯಕವಾಗಲಿದೆ.

ಈ ಆಪ್ ನಲ್ಲಿ ಮಕ್ಕಳು ಜಿಫ್ ಫೈಲ್ ಗಳನ್ನು ಸೆಂಡ್ ಮಾಡಬಹುದಾಗಿದೆ. ಅಲ್ಲದೇ ಸ್ಟಿಕರ್ ಗಳು, ಮಾಸ್ಕ್ ಗಳು ಮತ್ತು ಡ್ರಾಯಿಂಗ್ ಟೂಲ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ನೋಡಲು ಮೆಸೆಂಜರ್ ಆಪ್ ಮಾದರಿಯಲ್ಲಿ ಇದ್ದರು ಸಹ ಬೇರೆ ಮಾದರಿಯಲ್ಲಿ ಇರಲಿದೆ.
Comments
Best Mobiles in India
English summary
Messenger Kids is a new app that makes it easier for kids to safely video chat and message with family and friends when they can’t be together in person.
Story first
published: Thursday, December 7, 2017, 13:34 [IST]


Click it and Unblock the Notifications








