ಈಗ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸಂದೇಶ ಕಳುಹಿಸುವ ಮೂಲ ಸ್ವರೂಪವೇ ಬದಲು!!
ಮೆಸೆಂಜರ್ ಗುಂಪಿನಲಲ್ಲಿ ಅಗ್ರಸ್ಥಾನದಲ್ಲಿರುವ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸಂದೇಶ ಕಳುಹಿಸುವ ಮೂಲ ಸ್ವರೂಪವನ್ನೇ ಬದಲಿಸಲು ಫೇಸ್‌ಬುಕ್ ಕಂಪೆನಿ ಮೊದಲ ಹೆಜ್ಜೆ ಇಟ್ಟಿದೆ. , ಸಂದೇಶ ಅಕ್ಷರ, ಎಮೋಜಿ, ಫೋಟೊಗಳನ್ನು ಮಾತ್ರ ಕಳುಹಿಸಲು ಅವಕಾಶವಿದ್ದ ಮೆಸೆಂಜರ್ ಆಪ್‌ನಲ್ಲಿ ಈಗ ಗುಣಮಟ್ಟದ ವಿಡಿಯೊಗಳನ್ನು ಕಳುಹಿಸಬಹುದಾಗಿದೆ.
ಮೆಸೆಂಜರ್ ಆಪ್‌ನಲ್ಲಿ ಈಗ ಗುಣಮಟ್ಟದ ವಿಡಿಯೊಗಳನ್ನು ಕಳುಹಿಸಲು, ಹಂಚಿಕೊಳ್ಳಲು ಸಾಧ್ಯವಾಗುವಂತೆ ಮರು ವಿನ್ಯಾಸಗೊಳಿಸಲಾಗಿದ್ದು, ಜೊತೆಗೆ ಕೇವಲ ಫೋಟೊ ವಿಡಿಯೊ ಮಾತ್ರವಲ್ಲ 360 ಡಿಗ್ರಿಯಲ್ಲಿ ನಿಮ್ಮವರ ಪೋಟೊಗಳನ್ನು ನೋಡಬಹುದು. ಪನೋರಮ ಪೋಟೊದಲ್ಲಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು ಎಂದು ಮೆಸೆಂಜರ್ ಮಾಹಿತಿಯನ್ನು ನೀಡಿದೆ.

ಸಾಮಾನ್ಯವಾಗಿ ಒಂದು ಫೋಟೊ ಸಾವಿರ ಪದಗಳಿಗೆ ಸಮ ಎಂದು ಕರೆಯುತ್ತಾರೆ. ಆದರೆ ಅದೇ ಫೋಟೊವನ್ನು ನೋಡುವ ಕೋನವೇ ಬದಲಾದಾಗ ಬರೀ ಕಣ್ಣಿಗೆ ಕಾಣುವ ದೃಶ್ಯಗಳನ್ನು ಹೊರತು ಪಡಿಸಿ ಮೆರಗು ಹೆಚ್ಚಿಸುವ ಸೌಂದರ್ಯವನ್ನು ಕಣ್ತುಂಬಿಕೊಳ್ಳುವಂತೆ 360 ಡಿಗ್ರಿ ಪನೋರಮ ಪೋಟೊದಲ್ಲಿ ಸಾಧ್ಯವಾಗಲಿದೆ.
ಮೆಸೆಂಜರ್ ಆಪ್‌ನಲ್ಲಿ ಈಗ ಗುಣಮಟ್ಟದ ವಿಡಿಯೊಗಳನ್ನು ಕಳುಹಿಸಬಹುದಾಗಿದ್ದು, ಯಾವುದೇ ಸನ್ನಿವೇಶವನ್ನು ಹೈ ಕ್ವಾಲಿಟಿ (720 ಪಿಕ್ಸೆಲ್) ವಿಡಿಯೊ ತುಣುಕಾಗಿ ಚಿತ್ರೀಕರಿಸಿ, ಮೆಸೆಂಜರ್ ಮೂಲಕ ವಿಡಿಯೊ ಸಂದೇಶ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿಡಿಯೋವನ್ನು ಇ ಮೇಲ್‌ಗಳ ಮೂಲಕ ಸೆಂಡ್ ಮಾಡಬಹುದಾದ ತಾಪತ್ರಯ ತಪ್ಪಲಿದೆ.

ಮೆಸೆಂಜರ್ ಆಪ್ ತೆರೆದ ತಕ್ಷಣ ಅಲ್ಲಿ ಕಾಣುವ ಕ್ಯಾಮೆರಾ ಐಕಾನ್ ಮೇಲೆ ಒತ್ತಿದರೆ ಅದು ನಿಮ್ಮ ಮೊಬೈಲ್ ಕ್ಯಾಮೆರಾಗೆ ಕರೆದೊಯ್ಯುತ್ತದೆ. ಅದರಲ್ಲಿರುವ ಪನೋರಮ ಸೂಚನೆ ಆಯ್ಕೆ ಮಾಡಿಕೊಂಡು, ವಿಡಿಯೊ ಅಥವಾ ಫೋಟೊ ಕ್ಲಿಕ್ಕಿಸಿದರೆ ಸಾಕು. ಆ ಫೈಲ್ ಮೆಸೆಂಜರ್ ಮೂಲಕ ಶೇರ್ ಮಾಡಲು ಕ್ಷಣಾರ್ಧದಲ್ಲಿ ಸಿದ್ಧಗೊಳ್ಳುತ್ತದೆ.


Click it and Unblock the Notifications








