ಮೆಸೇಂಜರ್‌ನಲ್ಲೂ ಬರ್ತಿದೆ ಡಿಲೇಟ್ ಮೆಸೇಜ್ ಫೀಚರ್..! ತಪ್ಪಾದರೆ ಭಯ ಬೇಡ..!
ವಿವಾದಗಳು ಮತ್ತು ಮಾಹಿತಿ ಸೋರಿಕೆಯಿಂದ ಸದ್ದು ಮಾಡುತ್ತಿರುವ ಫೇಸ್‌ಬುಕ್ ಜನರ ಪ್ರೀತಿಗೆ ಪಾತ್ರರಾಗಲು ಹೊಸ ಹೊಸ ಫೀಚರ್‌ಗಳನ್ನು ತರುತ್ತಿದೆ. ದೀಪಾವಳಿಗಾಗಿ ಭಾರತೀಯ ಬಳಕೆದಾರರಿಗೆ ವಿಶೇಷ ಸ್ಟೋರಿಗಳನ್ನು ನೀಡಿದ್ದ ಫೇಸ್‌ಬುಕ್, ವಾಟ್ಸ್‌ಆಪ್‌ನಲ್ಲಿರುವಂತೆ ಡಿಲೇಟ್ ಮೆಸೇಜ್ ವೈಶಿಷ್ಟ್ಯವನ್ನು ಫೇಸ್‌ಬುಕ್‌ನ ಮೆಸೇಂಜರ್‌ನಲ್ಲಿಯೂ ನೀಡಲು ಮುಂದಾಗಿದೆ.

ಹೌದು, ಮೆಸೇಂಜರ್‌ನ ಹೊಸ ಆವೃತ್ತಿ 191.0 ಬಿಡುಗಡೆ ಟಿಪ್ಪಣಿಯಲ್ಲಿ ಕಮಿಂಗ್ ಸೂನ್ ಎಂಬುದನ್ನು ನೀಡಿ ಹೊಸ ಫೀಚರ್‌ನ್ನು ವಿವರಿಸಿದೆ. ಹೊಸ ಫೀಚರ್‌ಗೆ ಫೇಸ್‌ಬುಕ್ ರೀಕಾಲ್ ಎಂಬ ಹೆಸರಿಟ್ಟಿದೆ. ಹಾಗಾದ್ರೇ ರೀಕಾಲ್ ಹೇಗಿರಲಿದೆ. ರೀಕಾಲ್ ಮಾಡಲು ಸಮಯವೇಷ್ಟು ಎಂಬುದನ್ನು ಮುಂದೆ ನೋಡಿ.

10 ನಿಮಿಷ ಸಮಯ
ಒಂದು ವೇಳೆ ನೀವು ಮೆಸೇಂಜರ್‌ನಲ್ಲಿ ತಪ್ಪು ಸಂದೇಶ ಕಳುಹಿಸಿದ್ದರೆ ಅದನ್ನು ಸರಿಪಡಿಸಲು. ಅಂದರೆ ಡಿಲೀಟ್ ಮಾಡಲು ಕೇವಲ 10 ನಿಮಿಷ ಸಮಯವನ್ನು ಫೇಸ್‌ಬುಕ್ ನೀಡುತ್ತಿದೆ. ಮೆಸೇಜ್ ಸರಿ ಮಾಡಿಕೊಳ್ಳಲು 10 ನಿಮಿಷ ಸಾಕು ಎನಿಸುತ್ತದೆ ಎಂದು ಫೇಸ್‌ಬುಕ್ ಹೇಳಿದೆ. ಈ ಸಮಯ ವಾಟ್ಸ್‌ಆಪ್‌ನಲ್ಲಿ ಸದ್ಯ 13 ಗಂಟೆಗಳಿದ್ದು, ಅರ್ಧ ದಿನದ ಮೇಲೂ ಮೆಸೇಜ್ ಡಿಲೀಟ್ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ನೀಡಿತ್ತು.

ಅನ್‌ಸೆಂಡ್ ಆಯ್ಕೆ
ಮೆಸೇಂಜರ್ ಅನ್‌ಸೆಂಡ್ ಆಯ್ಕೆಯನ್ನು ನೀಡಲು ಏಪ್ರೀಲ್‌ನಿಂದ ಪ್ರಯತ್ನಿಸುತ್ತಿದೆ. ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಮೆಸೇಜ್‌ಗಳನ್ನು ರಹಸ್ಯವಾಗಿ ಡಿಲೀಟ್ ಮಾಡಲು ಈ ಆಯ್ಕೆಯನ್ನು ಪರೀಕ್ಷಿಸಲಾಗಿತ್ತು. ಈ ಆಯ್ಕೆಯನ್ನು ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಮೆಸೇಂಜರ್‌ನಲ್ಲಿ ಪರೀಕ್ಷಿಸಲಾಗಿತ್ತು.
ಟ್ವಿಟ್ಟರ್‌ನಲ್ಲಿ ಬಹಿರಂಗ
ಈ ಕುರಿತು ಮೆಸೇಂಜರ್ ತನ್ನ ಹೊಸ ಆವೃತ್ತಿಯ ಬಿಡುಗಡೆ ಟಿಪ್ಪಣಿಯಲ್ಲಿ ಹೇಳಿದೆ. ಇದನ್ನು ಮಟ್ ನವರ್ರಾ ಎಂಬಾತ ಗುರುತಿಸಿ ಟ್ವಿಟ್ಟರ್‌ನಲ್ಲಿ ಬಹಿರಂಗ ಪಡಿಸಿದ್ದಾನೆ. ಫೇಸ್‌ಬುಕ್ ಮೆಸೇಂಜರ್‌ನ ಬಹುನಿರೀಕ್ಷಿತ ಡಿಲೀಟ್ ಮೆಸೇಂಜಸ್ ಫೀಚರ್ ನಿಮಗೆ ಮೆಸೇಜ್ ಡಿಲೀಟ್ ಮಾಡಲು 10 ನಿಮಿಷ ಸಮಯವನ್ನು ನೀಡುತ್ತದೆ. ನೀವು ತಪ್ಪಾಗಿ ಅಥವಾ ಆಕಸ್ಮಿಕವಾಗಿ ಕಳುಹಿಸಿದ ಮೆಸೇಜ್‌ಗಳನ್ನು ಚಾಟ್ ವಿಂಡೋದಿಂದ ಅಳಿಸಬಹುದಾಗಿದೆ ಎಂದು ಬರೆದುಕೊಂಡಿದ್ದಾನೆ.

ಐಫೋನ್ ಬಳಕೆದಾರರಿಗೆ ಲಭ್ಯ
ಈ ಫೀಚರ್ ಶೀಘ್ರದಲ್ಲಿ ಐಫೋನ್ ಬಳಕೆದಾರರಿಗೆ ಲಭ್ಯವಿದ್ದು, 191.0 ಆವೃತ್ತಿಯಲ್ಲಿ iOS ಬಳಕೆದಾರರಿಗೆ ಸಿಗಲಿದೆ. ಬಿಡುಗಡೆಯ ಬಗ್ಗೆ ಯಾವುದೇ ದಿನಾಂಕವನ್ನು ಫೇಸ್‌ಬುಕ್ ತಿಳಿಸಿಲ್ಲ. ಆಂಡ್ರಾಯ್ಡ್ ಬಳಕೆದಾರರು ಡಿಲೀಟ್ ಮೆಸೇಜಸ್ ಫೀಚರ್‌ಗಾಗಿ ಇನ್ನು ಸ್ವಲ್ಪ ಕಾಯಬೇಕಾಗಿದೆ.

ವಾಟ್ಸ್‌ಆಪ್‌ನಲ್ಲಿ ಎಷ್ಟು ಸಮಯ..?
ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್‌ನಲ್ಲಿ ಮೆಸೇಜ್ ಡಿಲೀಟ್ ಮಾಡುವ ಆಯ್ಕೆಯನ್ನು ನೀಡಿದೆ. ಮೊದಲು ಡಿಲೀಟ್ ಫಾರ್ ಎವರಿಒನ್ ಫೀಚರ್ ಪರಿಚಯಿಸಿದಾಗ ಕೇವಲ 7 ನಿಮಿಷಗಳ ಅವಕಾಶವನ್ನು ಬಳಕೆದಾರನಿಗೆ ನೀಡಿತ್ತು. ನಂತರ 1 ಗಂಟೆ 8 ನಿಮಿಷ 16 ಸೆಕೆಂಡ್‌ಗಳಿಗೆ ಡಿಲೀಟ್ ಫಾರ್ ಎವರಿಒನ್ ಫೀಚರ್ ವಿಸ್ತರಿಸಿತ್ತು. ನಂತರ ಆ ಸಮಯವನ್ನು ವಿಸ್ತರಿಸಿ ಬರೋಬ್ಬರಿ 13 ಗಂಟೆ 8 ನಿಮಿಷ 16 ಸೆಕೆಂಡ್‌ಗಳ ಕಾಲಾವಕಾಶವನ್ನು ಮೆಸೇಜ್ ಡಿಲೀಟ್ ಮಾಡಲು ನೀಡಿದೆ.


Click it and Unblock the Notifications








