ವಾಟ್ಸ್ ಆಪ್ ನಲ್ಲೇ ಲಭ್ಯವಾಗಲಿದೆ ಆನ್ ಲೈನ್ ಮನಿ ಟ್ರಾನ್ಸ್ ಫರ್...!
ಎಸ್.. ನೀವು ಕೇಳುತ್ತಿರುವುದು ನಿಜ. ವಾಟ್ಸ್ ಆಪ್ ಕೇವಲ ಚಾಟ್ ಮಾಡಲು, ವೀಡಿಯೋ ಆಡಿಯೋ ಶೇರ್ ಮಾಡಲು, ಗುಂಪಿನಲ್ಲಿ ಒಂದಷ್ಟು ಹರಟಲು ಮಾತ್ರವಲ್ಲ ಬದಲಾಗಿ ವ್ಯವಹಾರಿಕವಾಗಿಯೂ ಇನ್ನುಮುಂದೆ ನಿಮಗೆ ಸಹಾಯ ಮಾಡಲಿದೆ. ಮಾರ್ಕೆಟ್ ನ ಬೇಡಿಕೆಗಳಿಗೆ ಅನುಸಾರವಾಗಿ ವಾಟ್ಸ್ ಆಪ್ ದಿನದಿಂದ ದಿನಕ್ಕೆ ಹಲವು ವಿಶೇಷತೆಗಳೊಂದಿಗೆ ಅಪ್ ಡೇಟ್ ಆಗುತ್ತಲೇ ಇದೆ.

ಅದಕ್ಕೆ ಹೊಸ ಸೇರ್ಪಡೆಯೆಂದರೆ “ವಾಟ್ಸ್ ಆಪ್ ಪೇ”. ಫೋನ್ ಪೇಯಂತೆಯೇ ಇದು “ವಾಟ್ಸ್ ಆಪ್ ಪೇ”. ಒಬ್ಬರಿಂದ ಮತ್ತೊಬ್ಬರ ಬ್ಯಾಂಕ್ ಅಕೌಂಟಿಗೆ ಹಣ ಕಳಿಸಲು, ಯಾವುದೇ ಖರೀದಿಯಲ್ಲಿ ಹಣ ಸಂದಾಯ ಮಾಡಲು, ಹೀಗೆ ಮನಿ ಟ್ರಾನ್ಸಫರ್ ನ್ನು ಬಹಳ ಸುಲಭವಾಗಿ ಮಾಡಲು ಇದು ನೆರವಾಗಲಿದ್ದು, ಡಿಜಿಟಲ್ ಇಂಡಿಯಾದ ಒಂದು ಭಾಗವಾಗಲಿದೆ.

HDFC ಬ್ಯಾಂಕ್,ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಗಳ ಜೊತೆ ಕೈಜೋಡಿಸಿರುವ ವಾಟ್ಸ್ ಆಪ್ ಎಸ್.ಬಿ.ಐ ಜೊತೆಗೂ ಅಗತ್ಯ ಸಿಸ್ಟಮ್ ಗಳನ್ನು ಅಳವಡಿಸಿಕೊಂಡು ಕೈಜೋಡಿಸಲಿದೆ ಎಂದು ತಿಳಿದುಬಂದಿದೆ. ಹಣಕಾಸು ವ್ಯವಹಾರಕ್ಕೆ ಹೆಚ್ಚಿನ ಭದ್ರತೆಯ ಅಗತ್ಯವಿರುವುದರಿಂದಾಗಿ ಮತ್ತು ಈಗಾಗಲೇ ವಾಟ್ಸ್ ಆಪ್ ಗಿರುವ ಪ್ರಸಿದ್ಧತೆಯ ಪರಿಣಾಮದಿಂದ ಯಾವುದೇ ಹಣಕಾಸು ಅವ್ಯವಹಾರ ನಡೆಯದಂತೆ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು, ಈ ಮನಿ ಟ್ರಾನ್ಸ್ ಫರ್ ಅವಕಾಶವನ್ನು ವಾಟ್ಸ್ ಆಪ್ ನಲ್ಲಿ ಒದಗಿಸಲು ಪ್ರಯತ್ನಗಳು ನಡೆದಿವೆ.
ಗೂಗಲ್ ತೇಝ್, ಪೇ ಟಿಎಮ್ ಗಳು ಸೋಷಿಯಲ್ ನೆಟ್ ವರ್ಕ್ ನಲ್ಲಿ ಹಲವು ಪ್ರಯೋಜನಗಳನ್ನು ನೀಡುತ್ತಿದ್ದು, ಆ ನಿಟ್ಟಿನಲ್ಲಿ ವಾಟ್ಸ್ ಆಪ್ ಕೂಡ ಮುಂದಿನ ದಿನಗಳಲ್ಲಿ ಸಹಾಯ ಮಾಡಲಿದೆ. ಈಗಾಗಲೇ “ವಾಟ್ಸ್ ಆಪ್ ಪೇ” ಸೌಲಭ್ಯದ ಪೈಲಟ್ ವರ್ಷನ್ ಫೆಬ್ರವರಿಯಲ್ಲಿ 1 ಮಿಲಿಯನ್ ಬಳಕೆದಾರರಿಗೆ ನೀಡಿ ಅವರಿಂದ ವಿಮರ್ಷೆಯನ್ನು ಕೇಳಲಾಗಿದೆ.
ಚಾಟಿಂಗ್ ವಿಚಾರದಲ್ಲಿ ವಾಟ್ಸ್ ಆಪ್ ದೊಡ್ಡ ಮೊನೋಪೋಲಿಯನ್ನೇ ಸೃಷ್ಟಿಮಾಡಿದ್ದು, ಈ ಪಬ್ಲಿಸಿಟಿಯೇ ವಾಟ್ಸ್ ಆಪ್ ಪೇ ಫೇಮಸ್ ಆಗಲು ನೆರವು ನೀಡಲಿದೆ. ಈಗಾಗಲೇ 200 ಮಿಲಿಯನ್ ಭಾರತೀಯ ಬಳಕೆದಾರರು ವಾಟ್ಸ್ ಆಪ್ ಬಳಸುತ್ತಿದ್ದಾರೆ ಇದು ಅಮೇರಿಕಾದ ಶೇಕಡಾ 60 ರ ಜನಸಂಖ್ಯೆಗೆ ಸರಿಸಮವಾಗಿದೆ. ಈಗಾಗಲೇ ಪೇಟಿಎಮ್ ಬಳಸುತ್ತಿರುವ ಬಳಕೆದಾರರಿಗೆ ಹೋಲಿಸಿದರೆ 20 ಪಟ್ಟು ಇದು ಅಧಿಕವಾಗಿದೆ. ಹಾಗಾಗಿ ವಾಟ್ಸ್ ಆಪ್ ಪೇ ಮಾರ್ಕೆಟ್ ನಲ್ಲಿ ದೊಡ್ಡ ಕಾಂಪಿಟೇಷನ್ ಹುಟ್ಟುಹಾಕುವುದಂತೂ ಸತ್ಯ.


Click it and Unblock the Notifications








