ಸದ್ಯದಲ್ಲೇ ಭಾರತೀಯ ಫೇಸ್‌ಬುಕ್ ಬಳಕೆದಾರರಿಗೆ ಮೂರು ಹೊಸ ವೈಶಿಷ್ಯಗಳು
ಫೇಸ್ಬುಕ್ ನ ಮಾತುಕಥೆಗಳು ಸ್ನ್ಯಾಪ್ ಚಾಟ್ ಮೂಲಕ ಒಬ್ಬರಿಂದ ಒಬ್ಬರಿಗೆ ಹಂಚಿಕೆಯಾಗುತ್ತಿದ್ದರೂ ಕೂಡ, ಸದ್ಯ ಸಾಮಾಜಿಕ ಜಾಲತಾಣಗಳ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದೇ ಕಾರಣದಿಂದಾಗಿ ಫೇಸ್ಬುಕ್ ಮತ್ತಷ್ಟು ಹೊಸ ವೈಶಿಷ್ಯಗಳು ಹೊತ್ತು ಇನ್ನು ಕೆಲವೇ ದಿನದಲ್ಲಿ ನಿಮ್ಮ ಮುಂದೆ ಇರಲಿದೆ.

ಟೆಕ್ ಕ್ರಂಚ್ ಮಾಹಿತಿ ನೀಡಿರುವ ಪ್ರಕಾರ,ಪೇಸ್ಬುಕ್ ಮೂರು ಹೊಸ ವೈಶಿಷ್ಯಗಳನ್ನು ಹೊಂದಲಿದೆ.ಸ್ಟೋರಿಗಳನ್ನು ಆರ್ಕೈವ್ ಮಾಡುವುದು, ಅವುಗಳನ್ನು ಭವಿಷ್ಯದಲ್ಲಿ ಒಂದು ದಿನ ಪೋಸ್ಟ್ ಮಾಡಲು ಸೇವ್ ಮಾಡುವುದು ಮತ್ತು ಪೋಸ್ಟ್ ಆಡಿಯೋ ಓನ್ಲಿ ಸ್ಟೋರಿಸ್.. ಟೆಕ್ ಕ್ರಂಚ್ ಕಂಪೆನಿಯ SORIES ಗಳನ್ನು ಹೆಚ್ಚೆಚ್ಚು ಬಳಸುವ ನಿಟ್ಟಿನಲ್ಲಿ ಭಾರತಕ್ಕೆ ಯಾವ ಹೊಸ ವೈಶಿಷ್ಯಗಳನ್ನು ಕೂಡಿಸಬೇಕು ಎಂಬುದರ ಬಗ್ಗೆ ಅಧ್ಯಯನ ನಡೆಸಿತ್ತು. ನಂತರ ಅವರಿಗೆ ತಿಳಿದ ವಿಚಾರ ಈ ಮೂರು ಪ್ರಮುಖ ವೈಶಿಷ್ಟ್ಯಗಳನ್ನು ಬೇರೆ ಯಾರಾದರೂ ನೀಡುವ ಮುನ್ನ ತಾವು ನೀಡಬೇಕು ಎಂಬುದಾಗಿತ್ತು. ಹಾಗಾದ್ರೆ ಈ ಮೂರು ವೈಶಿಷ್ಟ್ಯಗಳು ಹೇಗೆ ಕೆಲಸ ನಿರ್ವಹಿಸಲಿವೆ ತಿಳಿಯೋಣ.
ಸ್ಟೋರೀಸ್ ಆರ್ಕೈವ್
ಇನ್ ಸ್ಟಾಗ್ರಾಂನ ಮೂಲ ಕಂಪೆನಿಯಾಗಿರುವುದರಿಂದಾಗಿ ಕೆಲವು ವಿಶ್ವಾಸಗಳೊಂದಿಗೆ ತೋರ್ಪಡಿಕೆಗೆ ಮುಂದಾಗಬೇಕಾಗುತ್ತದೆ. ಫೇಸ್ಬುಕ್ ನಿರ್ಧಾರ ಕೈಗೊಂಡಿರುವಂತೆ, ಸ್ಟೋರೀಸ್ ಆರ್ಕೈವ್ ವೈಶಿಷ್ಟ್ಯವನ್ನು ಇನ್ಸ್ಟಾಗ್ರಾಂ ಕಂಪೆನಿಯಿಂದ ಕೊಂಡುಕೊಂಡು,ಅವಧಿ ಮುಗಿದ ಸ್ಟೋರಿ( ಅಂದರೆ ಇವು ನಿಮ್ಮ ಅಕೌಂಟ್ ಗಳಿಂದ 24 ತಾಸಿನ ನಂತರ ಕಣ್ಮರೆಯಾಗುತ್ತವೆ) ಗಳನ್ನು ಸೇವ್ ಮಾಡುವ ವೈಶಿಷ್ಟ್ಯವನ್ನು ಹೊಂದಲು ನಿರ್ಧಾರ ಮಾಡಿದೆ. ಅಂದರೆ ಆ ಮೂಲಕ ನೀವು ಈ ಸ್ಟೋರಿಗಳನ್ನು ಮತ್ತೆ ನೋಡಬಹುದು ಮತ್ತು ಶೇರ್ ಮಾಡಬಹುದು.
ಸೇವ್ ಸ್ಟೋರೀಸ್
ಮುಂಬರುವ ಈ ವೈಶಿಷ್ಟ್ಯವು, ಫೋಟೋ ಮತ್ತು ವೀಡಿಯೋಗಳನ್ನು ನಿಮ್ಮ ಫೇಸ್ಬುಕ್ ಅಕೌಂಟಿನ ಕ್ಲೌಡ್ ನಲ್ಲಿ ಸೇವ್ ಮಾಡಲು ಅವಕಾಶ ಮಾಡಿಕೊಡುತ್ತೆ. ಆಪ್ ಒಳಗೆ ತೆಗೆದಿರುವ ಫೋಟೋಗಳು ಮತ್ತು ವೀಡಿಯೋಗಳು ಮಾತ್ರ ಇಲ್ಲಿ ಸೇವ್ ಆಗಲಿದೆ ಅಂದರೆ ಫೇಸ್ಬುಕ್ ಕ್ಯಾಮರಾ ಬಳಸಿ ತೆಗೆದ ವೀಡಿಯೋ ಮತ್ತು ಫೋಟೋಗಳು ಮಾತ್ರ ಇಲ್ಲಿ ಸೇವ್ ಆಗಲಿದೆ. ಅದನ್ನು ನೀವು ಮುಂದಿನ ದಿನಗಳಲ್ಲಿ ಮತ್ತೆ ಬಳಕೆ ಮಾಡಬಹುದು.
ಆಡಿಯೋ ಸ್ಟೋರಿಸ್
ಫೇಸ್ಬುಕ್ ನ ಸ್ಟೋರಿಯಲ್ಲಿ ಭಿನ್ನವಾಗಿರುವ ಅನುಭವ ನೀಡುವ ವೈಶಿಷ್ಟ್ಯವೆಂದರೆ ಈ ಆಡಿಯೋ.. ಕಂಪೆನಿಯು ಸದ್ಯದಲ್ಲಿ ಹೊಸ “audio mode”ನ್ನು ಕೂಡಿಸಲಿದೆ.ಫೇಸ್ಬುಕ್ ಕ್ಯಾಮರಾ ವು ನಿಮಗೆ ಕೇವಲ ಆಡಿಯೋಗಳನ್ನು ಮಾತ್ರ ಕಳುಹಿಸಲು ಕೂಡ ಅವಕಾಶ ನೀಡಲಿದೆ. ಅದಕ್ಕೆ ಬಣ್ಣದ ಬ್ಯಾಕ್ ಗ್ರೌಂಡ್ ಕೂಡ ಇರಲಿದೆ ಅಥ್ವಾ ನೀವು ನಿಮಗೆ ಬೇಕಾದ ಫೋಟೋಗಳನ್ನು ಕೂಡ ಗ್ಯಾಲರಿಯಿಂದ ಆಯ್ಕೆ ಮಾಡಿಕೊಳ್ಳಬಹುದು.
ಒಮ್ಮೆ ನೀವು ಆಡಿಯೋ ರೆಕಾರ್ಡ್ ಮಾಡಿದ ನಂತರ,ಅದಕ್ಕೆ ಸ್ಟಿಕ್ಕರ್, ಎಮೋಜಿ, ಅಥವಾ ಫನ್ನಿ ಆಡ್ ಆನ್ ಗಳನ್ನು ಕೂಡ ಪೋಸ್ಟ್ ಮಾಡುವ ಮುನ್ನ ನಿಮ್ಮ ಪ್ರೋಫೈಲ್ ನಲ್ಲಿ ಆಯ್ಕೆ ಮಾಡಿಕೊಳ್ಳಬಹುದು., ಫೇಸ್ಬುಕ್ ಹೇಳುವ ಪ್ರಕಾರ ಇದು ನೀವು ಹೇಳಬೇಕು ಎಂದುಕೊಂಡಿರುವ ವಿಚಾರವನ್ನು ತಿಳಿಸಲು ಇರುವ ಸುಲಭದ ವಿಧಾನವಾಗಿದ್ದು, ಭಾರತದಂತ 100 ಕ್ಕೂ ಭಾಷೆಗಳನ್ನು ಮಾತನಾಡುವ ಬಹುಭಾಷಾ ದೇಶಕ್ಕೆ ಬಹಳ ಪ್ರಯೋಜನಕ್ಕೆ ಬರಲಿದೆ.
ಈ ವೈಶಿಷ್ಟ್ಯಗಳನ್ನು ಸೇರಿಸುವುದರ ಬಗ್ಗೆ ಮಾತನಾಡಿದ ಫೇಸ್ಬುಕ್ ನ ಸ್ಟೋರಿಸ್ ವಿಭಾಗದ ಡೈರೆಕ್ಟರ್ ಆಗಿರುವ ಕನೂರ್ ಹೇಸ್, ಎಲ್ಲಾ ರೀತಿಯ ಡಾಟಾ ಕನೆಕ್ಷನ್ ಗಳಲ್ಲೂ ಸ್ಟೋರಿಸ್ ನೋಡುವ ಅವಕಾಶವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಟೆಕ್ ಕ್ರಂಚ್ ನೊಡನೆ ಚರ್ಚಿಸಿದ್ದು, ಇನ್ನಷ್ಟು ಸುಧಾರಣೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಆದರೆ ಫೇಸ್ಬುಕ್ ತೆಗೆದುಕೊಂಡಿರುವ ಈ ನಿರ್ಧಾರದಿಂದ ತಿಳಿಯುವುದೇನೆಂದರೆ ಸ್ಟೋರಿಸ್ ಬಗ್ಗೆ ಫೇಸ್ಬುಕ್ ಹೆಚ್ಚು ಗಮನ ಹರಿಸುತ್ತಿದೆ ಮತ್ತು ಅದನ್ನು ಇನ್ನಷ್ಟು ಪ್ರಸಿದ್ಧಿಗೊಳಿಸಲು ಪ್ರಯತ್ನಿಸುತ್ತಿದೆ. ಇದರ ಬಗ್ಗೆ ನಿಮಗೇನು ಅನ್ನಿಸುತ್ತಿದೆ. ಕಮೆಂಟ್ ಮಾಡಿ. ಸ್ಟೋರಿ ಶೇರ್ ಮಾಡಿ.


Click it and Unblock the Notifications








