Home
Apps

ಶಾಪಿಂಗ್ ಫೀಚರ್ ನ್ನು ವಾಟ್ಸ್ ಆಪ್ ಗೆ ಸೇರಿಸುತ್ತಿದೆ ಫೇಸ್ ಬುಕ್

By Gizbot Bureau

ವಾಟ್ಸ್ ಆಪ್ ಮೊಬೈಲ್ ಆಪ್ ಮೂಲಕವೇ ಇನ್ನು ಮುಂದೆ ನೀವು ಶಾಪಿಂಗ್ ಮಾಡಬಹುದು.ಎಫ್8 ವಾರ್ಷಿಕ ಡೆವಲಪರ್ಸ್ ಕಾನ್ಫರೆನ್ಸ್ ನಲ್ಲಿ ಫೇಸ್ ಬುಕ್ ವಾಟ್ಸ್ ಆಪ್ ಬ್ಯುಸಿನೆಸ್ ನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಮಾತನಾಡಿತ್ತು ಮತ್ತು ಬ್ಯುಸಿನೆಸ್ ಗೆ ಸಂಬಂಧಿಸಿದ ವ್ಯಕ್ತಿಗಳ ಜೊತೆಗೆ ಚಾಟ್ ಮಾಡುವಾಗಿನ ಅನುಭವವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವುದಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿತ್ತು.

ಪ್ರೊಡಕ್ಟ್ ಕೆಟಲಾಗ್ ಸೇರಿಸಲು ಅವಕಾಶ:

ಪ್ರೊಡಕ್ಟ್ ಕೆಟಲಾಗ್ ಸೇರಿಸಲು ಅವಕಾಶ:

ವಾಟ್ಸ್ ಆಪ್ ಚಾಟ್ ನಲ್ಲಿ ಪ್ರೊಡಕ್ಟ್ ಕೆಟಲಾಗ್ ನ್ನು ಸೇರಿಸುವುದಕ್ಕೆ ವಾಟ್ಸ್ ಆಪ್ ಬ್ಯುಸಿನೆಸ್ ಆಪ್ ನಲ್ಲಿ ಅವಕಾಶ ನೀಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಶಾಪಿಂಗ್ ಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಶಾಪಿಂಗ್ ಮಾಡುವುದಕ್ಕೆ ವಾಟ್ಸ್ ಆಪ್:

ಶಾಪಿಂಗ್ ಮಾಡುವುದಕ್ಕೆ ವಾಟ್ಸ್ ಆಪ್:

ಈ ಹೊಸ ಫೀಚರ್ ನಿಂದಾಗಿ, ವಾಟ್ಸ್ ಆಪ್ ಬಳಕೆದಾರರು ಬ್ಯುಸಿನೆಸ್ ಕೆಟಲಾಗ್ ನ್ನು ವಾಟ್ಸ್ ಆಪ್ ಚಾಟಿಂಗ್ ನ ಒಳಗಡೆಯೇ ನೋಡುವುದಕ್ಕೆ ಸಾಧ್ಯವಾಗುತ್ತದೆ. ಕೆಟಲಾಗ್ ಮೂಲಕ ಬ್ಯುಸಿನೆಸ್ ಗೆ ಸಂಬಂಧಿಸಿದ ವ್ಯಕ್ತಿಗಳು ತಮ್ಮ ವಸ್ತುಗಳನ್ನು ಸುಲಭವಾಗಿ ಹುಡುಕಬಹುದು ಮತ್ತು ಅದರ ಪ್ರಮೋಷನ್ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಫೇಸ್ ಬುಕ್ ತಿಳಿಸಿದೆ.

ಹೇಗೆ ಇಂಟಿಗ್ರೇಟ್ ಆಗಿರುತ್ತದೆಯೆಂಬ ಕುತೂಹಲ:

ಹೇಗೆ ಇಂಟಿಗ್ರೇಟ್ ಆಗಿರುತ್ತದೆಯೆಂಬ ಕುತೂಹಲ:

ಈ ವರ್ಷದ ಅಂತ್ಯದಲ್ಲಿ ಈ ಫೀಚರ್ ಲಭ್ಯವಾಗುವ ಸಾಧ್ಯತೆ ಇದ್ದು ಚಾಟಿಂಗ್ ನಲ್ಲಿ ಶಾಪಿಂಗ್ ನ್ನು ಹೇಗೆ ಸೇರಿಸಲಾಗುತ್ತದೆ ಎಂಬ ಕುತೂಹಲ ಗರಿಗೆದರಿದೆ. ಆದರೆ ಈ ನಿಟ್ಟಿನಲ್ಲಿ ಫೇಸ್ ಬುಕ್ ಉತ್ತಮ ರೀತಿಯಲ್ಲಿ ಇಂಟಿಗ್ರೇಟ್ ಮಾಡುತ್ತದೆ ಎಂದು ನಂಬಲಾಗಿದೆ.

ವಾಟ್ಸ್ ಆಪ್ ಪೇಮೆಂಟ್

ವಾಟ್ಸ್ ಆಪ್ ಪೇಮೆಂಟ್

ವಾಟ್ಸ್ ಆಪ್ ಪೇಮೆಂಟ್ ಕೂಡ ಸದ್ಯದಲ್ಲೇ ಬಿಡುಗಡೆಯಾಗುತ್ತಿರುವುದರಿಂದಾಗಿ ಹೆಚ್ಚಿನ ಬ್ಯುಸಿನೆಸ್ ವಾಟ್ಸ್ ಆಪ್ ನಲ್ಲಿ ಅಭಿವೃದ್ಧಿ ಹೊಂದುತ್ತದೆ ಎಂಬ ವಿಶ್ವಾಸವನ್ನು ಫೇಸ್ ಬುಕ್ ಹೊಂದಿದೆ.. ಇದೀಗ ವಾಟ್ಸ್ ಆಪ್ ಪೇಮೆಂಟ್ ನ ಟೆಸ್ಟ್ ರನ್ನಿಂಗ್ ಭಾರತದಲ್ಲಿ ಆರಂಭವಾಗಿದೆ. ಕೆಲವೇ ಸಮಯದಲ್ಲಿ ಇತರೆ ದೇಶಗಳಲ್ಲೂ ಕೂಡ ಬಿಡುಗಡೆಗೊಳಿಸುವ ವಿಶ್ವಾಸವಿದೆ.ಆದರೆ ಅದಕ್ಕಾಗಿ ಇಂತಹದ್ದೇ ಸಮಯದಲ್ಲಿ ಬಿಡುಗಡೆಗೊಳಿಸಲಾಗುತ್ತದೆ ಎಂಬ ಸಮಯವನ್ನು ಹಾಕಿಕೊಳ್ಳುವುದು ಸಾಧ್ಯವಿಲ್ಲ. ಸದ್ಯ ಆ ಬಗ್ಗೆ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ ಫೇಸ್ ಬುಕ್ ನ ಸಿಇಓ ಆಗಿರುವ ಮಾರ್ಕ್ ಜ್ಯೂಕ್ ಬರ್ಗ್.

ಗ್ರಾಹಕರು ಮತ್ತು ಬ್ಯುಸಿನೆಸ್ ಮೆನ್ ಗಳನ್ನು ಹತ್ತಿರ ತರುವ ದೃಷ್ಟಿಕೋನದಿಂದ ಫೇಸ್ ಬುಕ್ ಇದೀಗ ಈ ನಿಟ್ಟಿನಲ್ಲಿ ಭಾರೀ ಕಸರತ್ತು ನಡೆಸುತ್ತಿದೆ.ಮಸೇಜಿಂಗ್ ಆಪ್ ನಲ್ಲಿ ಹೇಗೆ ಬ್ಯುಸಿನೆಸ್ ನ್ನು ಫುಶ್ ಮಾಡಲಾಗುತ್ತದೆ ಎಂಬುದು ಸದ್ಯವಿರುವ ಕುತೂಹಲ. ಮೆಸೇಜಿಂಗ್ ಕಾನ್ವರ್ಸೇಷನ್ ನಲ್ಲಿಯೇ ಅಪಾಯ್ಟ್ ಮೆಂಟ್ ನ್ನು ನಿಗದಿಗೊಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಳಾಗಿದೆ.

ಅಪಾಯ್ಟ್ ಮೆಂಟ್ ಫಿಕ್ಸ್ ಮಾಡಲು ಅನುಕೂಲ:

ಅಪಾಯ್ಟ್ ಮೆಂಟ್ ಫಿಕ್ಸ್ ಮಾಡಲು ಅನುಕೂಲ:

ಈ ಹೊಸ ಫೀಚರ್ ಮೂಲಕ ಬ್ಯುಸಿನೆಸ್ ಮಂದಿಯ ಜೊತೆಗೆ ಬಹಳ ವೇಗವಾಗಿ ಅಪಾಯ್ಟ್ ಮೆಂಟ್ ಫಿಕ್ಸ್ ಮಾಡಬಹುದು ಉದಾಹರಣೆಗೆ ಕಾರಿನ ಡೀಲರ್ ಶಿಪ್, ಸ್ಟೈಲಿಸ್ಟ್ ಅಥಾ ಕ್ಲೀನಿಂಗ್ ಸರ್ವೀಸ್ ಇತ್ಯಾದಿ) ಇದೆಲ್ಲವನ್ನು ಮೆಸೇಂಜರ್ ಆಪ್ ನಲ್ಲಿ ಸಾಧ್ಯಗೊಳಿಸುವುದಕ್ಕೆ ವಾಟ್ಸ್ ಆಪ್ ಪ್ರಯತ್ನಿಸಿದೆ.

ಒಟ್ಟಿನಲ್ಲಿ ವಾಟ್ಸ್ ಆಪ್ ಮುಂದೊಂದು ದಿನ ಈಗಿರುವುದಕ್ಕಿಂತಲೂ ಹೆಚ್ಚು ಎಡಿಕ್ಟ್ ಆಗಬೇಕಾಗುವ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ ಎಂದು ಅನ್ನಿಸುತ್ತಿದೆ!

Best Mobiles in India

English summary
Facebook to add ‘shopping features’ to WhatsApp
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+