ವಾಟ್ಸ್‌ಆಪ್‌ ಬಂದ್ ಆಗಲ್ಲ, ದುಡ್ಡು ಕೊಡಬೇಕಿಲ್ಲ..! ಈ ಮೆಸೇಜ್‌ಗಳು ಪೂರ್ತಿ ಸುಳ್ಳಿನ ಕಂತೆ..!

By Gizbot Bureau
|

ಕಳೆದ ಕೆಲವು ದಿನಗಳ ಹಿಂದೆ ವಾಟ್ಸ್‌ಆಪ್‌ ಮತ್ತು ಫೇಸ್‌ಬುಕ್‌ ಜಾಗತಿಕವಾಗಿ ತಾಂತ್ರಿಕ ಸಮಸ್ಯೆಯನ್ನು ಅನುಭವಿಸಿದ್ದವು. ಸರ್ವರ್ ಡೌನ್‌ ಆಗಿ ಬಳಕೆದಾರರು ಫೋಟೋ ಡೌನ್‌ಲೋಡ್‌ ಮಾಡಲು, ಸ್ಟೇಟಸ್‌ ನೋಡಲು, ಮೆಸೇಜ್‌ ಕಳಿಸಲು ಪರದಾಡಿದ್ದರು. ಸದ್ಯ, ಆ ಸಮಸ್ಯೆಯನ್ನು ಕಂಪನಿ ಬಗೆಹರಿಸಿದ್ದು, ಎರಡು ಆಪ್‌ಗಳು ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತಿವೆ.

ವಾಟ್ಸ್‌ಆಪ್‌ ಬಂದ್ ಆಗಲ್ಲ, ದುಡ್ಡು ಕೊಡಬೇಕಿಲ್ಲ..!

ಆದರೆ, ಅದಾದ ತಕ್ಷಣ ಸಾಮಾಜಿಮ ಜಾಲತಾಣದಲ್ಲಿ ವಾಟ್ಸ್‌ಆಪ್‌ ತನ್ನ ಸೇವೆಯನ್ನು ನಿಲ್ಲಿಸುವ ಬಗ್ಗೆ, ತನ್ನ ಸೇವೆಗೆ ದರ ನಿಗದಿಪಡಿಸಿರುವ ಬಗ್ಗೆ ಮತ್ತು ವಾಟ್ಸ್‌ಆಪ್‌ ಕಂಪನಿಯನ್ನು ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್‌ ಖರೀದಿಸಿರುವ ಬಗ್ಗೆ ಮೆಸೇಜ್‌ಗಳು ಹರಿದಾಡಿದ್ದವು. ಇದರಿಂದ ವಾಟ್ಸ್‌ಆಪ್‌ ಬಳಕೆದಾರರಲ್ಲಿ ಒಂದು ರೀತಿಯ ಆತಂಕ ನಿರ್ಮಾಣವಾಗಿತ್ತು. ಆ ಎರಡು ಮೆಸೇಜ್‌ಗಳು ನಿಜಾನಾ..? ಸುಳ್ಳಾ..? ಎಂಬುದನ್ನು ಮುಂದೆ ನೋಡಿ.

ಮೊದಲ ಮೆಸೇಜ್

ಮೊದಲ ಮೆಸೇಜ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಟ್ಸ್‌ಆಪ್‌ನ್ನು ಪ್ರತಿದಿನ ರಾತ್ರಿ11.30 ರಿಂದ ಬೆಳಿಗ್ಗೆ6:00ರವರೆಗೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಸಂದೇಶವನ್ನು ನಿಮ್ಮ ಕಾಂಟ್ಯಾಕ್ಟ್‌ ಲೀಸ್ಟ್‌ನಲ್ಲಿರುವ ಎಲ್ಲ ಬಳಕೆದಾರರಿಗೆ ಫಾರ್ವರ್ಡ್ ಮಾಡಲು ನಾವು ವಿನಂತಿಸುತ್ತಿದ್ದೇವೆ. ನೀವು ಈ ಸಂದೇಶವನ್ನು ಫಾರ್ವರ್ಡ್ ಮಾಡದಿದ್ದರೆ, ನಿಮ್ಮ ಅಕೌಂಟ್ ಇನ್‌ವ್ಯಾಲಿಡ್ ಆಗಲಿದ್ದು, ಮುಂದಿನ 48ಗಂಟೆಗಳಲ್ಲಿ ಡಿಲೀಟ್ ಆಗುತ್ತದೆ. ನನ್ನ ಪದಗಳನ್ನು ನಿರ್ಲಕ್ಷಿಸಬೇಡಿ. ವಾಟ್ಸಾಪ್ ಇನ್ನು ಮುಂದೆ ನಿಮ್ಮ ಅಕೌಂಟ್ ಸಕ್ರಿಯತೆಯನ್ನು ಗುರುತಿಸುವುದಿಲ್ಲ. ನೀವು ನಿಮ್ಮ ಅಕೌಂಟ್ ಡಿಲೀಟ್ ಆದ ನಂತರ ಮತ್ತೆ ಸಕ್ರಿಯಗೊಳಿಸಲು ಬಯಸಿದರೆ, ಪ್ರತಿ ತಿಂಗಳಿಗೆ ರೂ.499.00 ಶುಲ್ಕ ನೀಡಬೇಕಾಗುತ್ತದೆ. ಅದಲ್ಲದೇ ಚಿತ್ರಗಳ ಅಪ್‌ಡೇಟ್‌ ತೋರಿಸದಿರುವ ಸಮಸ್ಯೆ ಬಗ್ಗೆಯೂ ನಮಗೆ ತಿಳಿದಿದೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದು, ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುತ್ತೇವೆ. ನಿಮ್ಮ ಸಹಕಾರಕ್ಕಾಗಿ ಮೋದಿ ತಂಡದಿಂದ ಧನ್ಯವಾದಗಳು. ವಾಟ್ಸ್‌ಆಪ್ ನಿಮಗೆ ಶೀಘ್ರದಲ್ಲಿಯೇ ಶುಲ್ಕ ವಿಧಿಸಲಿದೆ. ನೀವು ವಾಟ್ಸ್‌ಆಪ್‌ನ ದೈನಂದಿನ ಬಳಕೆದಾರರಾಗಿದ್ದರೆ, ನಿಮಗೆ ವಾಟ್ಸ್‌ಆಪ್‌ ಉಚಿತವಾಗಿ ದೊರೆಯಲು ನೀವು ಕನಿಷ್ಠ 50 ಜನರೊಂದಿಗೆ ಚಾಟ್ ಮಾಡಬೇಕಾಗಿರುತ್ತದೆ. ಅದಲ್ಲದೇ ಈ ಸಂದೇಶವನ್ನು 10 ಜನರಿಗೆ ಕಳುಹಿಸಿ ಆಗ ನಿಮ್ಮ ವಾಟ್ಸಾಪ್ ಲೋಗೋ ಬಣ್ಣ ಬದಲಾಗುತ್ತದೆ.

ಹೊಸ ವಾಟ್ಸ್‌ಆಪ್‌ನ್ನು ಸಕ್ರಿಯಗೊಳಿಸಲು ಈ ಸಂದೇಶವನ್ನು 8 ಜನರಿಗೆ ಕಳುಹಿಸಿ.. ಶನಿವಾರದ ಬೆಳಗ್ಗೆಯಿಂದ ವಾಟ್ಸ್‌ಆಪ್ ಶುಲ್ಕ ವಿಧಿಸುತ್ತದೆ. ಆದ್ದರಿಂದ ಕನಿಷ್ಠ 10 ಜನರಿಗೆ ಈ ಮೆಸೇಜ್‌ನ್ನು ಕಳುಹಿಸಿ. ಈ ರೀತಿಯಾಗಿ ನೀವು ಆಸಕ್ತಿಯ ಬಳಕೆದಾರರೆಂಬುದನ್ನು ನಾವು ಗಮನಿಸುತ್ತೇವೆ ಮತ್ತು ನಿಮ್ಮ ಲೋಗೋ ನೀಲಿ ಬಣ್ಣದ್ದಾಗಿ ಉಚಿತವಾದ ಸೇವೆ ನಿಮಗೆ ಸಿಗುತ್ತದೆ. (ಇಂದು ಪತ್ರಿಕೆಯಲ್ಲಿ ಚರ್ಚಿಸಿದಂತೆ. ವಾಟ್ಸ್ಆಪ್‌ನ ಪ್ರತಿ ಸಂದೇಶಕ್ಕೆ 0.01 ಯುರೋ ವೆಚ್ಚವಾಗಲಿದೆಯಂತೆ. ಈ ಸಂದೇಶವನ್ನು 10 ಜನರಿಗೆ ಕಳುಹಿಸಿ. ಆಗ ಲೋಗೋ ನೀಲಿ ಬಣ್ಣಕ್ಕೆ ತಿರುಗುತ್ತದೆ. ಇಲ್ಲದಿದ್ದರೆ, ವಾಟ್ಸ್‌ಆಪ್ ಬಿಲ್ಲಿಂಗ್‌ನ್ನು ಸಕ್ರಿಯಗೊಳಿಸುತ್ತದೆ. ಇದು ನಿಜ..)

ಸುಳ್ಳೇ ಸುಳ್ಳು..!

ಸುಳ್ಳೇ ಸುಳ್ಳು..!

ಮೇಲಿನ ಸಂದೇಶ ಓದಿದ್ರಲ್ಲಾ.. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳುಹಿಸಿದ ಸಂದೇಶ ಎನ್ನಲಾದ ಮೆಸೇಜ್‌ನ ಸುಳ್ಳಿನ ಅಂಶಗಳನ್ನು ನಾವು ಪಟ್ಟಿ ಮಾಡಿದ್ದೇವೆ ನೋಡಿ.

1) ಪ್ರತಿದಿನ ರಾತ್ರಿ 11.30ರಿಂದ ಬೆಳಿಗ್ಗೆ 6ರವರೆಗೆ ವಾಟ್ಸ್‌ಆಪ್‌ ಸ್ಥಗಿತ.

2) ಈ ಸಂದೇಶವನ್ನು ಎಲ್ಲರಿಗೂ ಫಾರ್ವರ್ಡ್‌ ಮಾಡದಿದ್ದರೆ, ನಿಮ್ಮ ವಾಟ್ಸ್‌ಆಪ್ ಖಾತೆ ಇನ್‌ವ್ಯಾಲಿಡ್ ಆಗುತ್ತದೆ ಮತ್ತು 48ಗಂಟೆಗಳಲ್ಲಿ ಡಿಲೀಟ್ ಆಗುತ್ತದೆ.

3) ವಾಟ್ಸ್‌ಆಪ್ ಖಾತೆಯನ್ನು ಪುನಃ ಆಕ್ಟಿವೇಟ್ ಮಾಡಲು ರೂ. 499 ಪಾವತಿಸಬೇಕು.

4) ಶನಿವಾರ ಬೆಳಿಗ್ಗೆಯಿಂದ ವಾಟ್ಸ್‌ಆಪ್ ಶುಲ್ಕ ವಿಧಿಸುತ್ತದೆ. ಆದರೆ, ಯಾವುದೇ ನಿರ್ದಿಷ್ಟ ದಿನಾಂಕ ಉಲ್ಲೇಖಿಸಿಲ್ಲ.

5) ನೀವು ಕೆಲವು ಬ್ಲೂ ಟಿಕ್ಸ್‌ ಪಡೆದಾಗ ಯಾವುದೋ ಲೋಗೊ ನೀಲಿ ಬಣ್ಣದ್ದಾಗುತ್ತದೆ ಎಂಬುದು ಬರೀ ಸುಳ್ಳು.

ಎರಡನೇ ಮೆಸೇಜ್

ಎರಡನೇ ಮೆಸೇಜ್

ಇನ್ನು, ವಾಟ್ಸ್‌ಆಪ್‌ನ ಬಗ್ಗೆ ಹರಿದಾಡಿದ ಎರಡನೇ ಮೆಸೇಜ್‌ನ್ನು ಗಮನಿಸಿ. ಉತ್ತಮ ಸುದ್ದಿ, ಅಂತಿಮ ಸೂಚನೆ, ದಯವಿಟ್ಟು ಇದನ್ನು ನಿರ್ಲಕ್ಷಿಸಬೇಡಿ, ಎಚ್ಚರಿಕೆಯಿಂದ ಓದಿ. ಹಲೋ, ನಾನು ವಾಟ್ಸ್‌ಆಪ್‌ನ ನಿರ್ದೇಶಕ ವರುಣ್ ಪುಲ್ಯಾನಿ, ವಾಟ್ಸ್‌ಆಪ್‌ನ್ನು ಮುಖೇಶ್ ಅಂಬಾನಿಗೆ ಮಾರಾಟ ಮಾಡಿದ್ದೇವೆ ಎಂಬುದನ್ನು ನಮ್ಮ ಎಲ್ಲ ಬಳಕೆದಾರರಿಗೆ ತಿಳಿಸುವುದಕ್ಕೆ ಈ ಸಂದೇಶವನ್ನು ಕಳುಹಿಸಿದ್ದೇವೆ. 19 ಬಿಲಿಯನ್ ಡಾಲರ್‌ಗೆ ವಾಟ್ಸ್‌ಆಪ್‌ನ್ನು ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್‌ ಖರೀದಿಸಿದೆ.

ಈ ಸಂದೇಶವನ್ನು ಕನಿಷ್ಟ 10 ಜನಕ್ಕೆ ಕಳುಹಿಸಿದರೆ ನಿಮ್ಮ ವಾಟ್ಸ್‌ಆಪ್‌ ಲೋಗೋ 24 ಗಂಟೆಗಳಲ್ಲಿ ಫೇಸ್‌ಬುಕ್‌ನ ಎಫ್‌ ಚಿಹ್ನೆಯನ್ನು ಹೊಂದಲಿದೆ. ನಿಮ್ಮ ಹೊಸ ವಾಟ್ಸ್‌ಆಪ್‌ನ್ನು ಫೇಸ್‌ಬುಕ್ ಸೇವೆಗಳೊಂದಿಗೆ ಸಕ್ರಿಯಗೊಳಿಸಲು ಈ ಸಂದೇಶವನ್ನು 10ಕ್ಕೂ ಹೆಚ್ಚು ಜನರಿಗೆ ಫಾರ್ವರ್ಡ್ ಮಾಡಿ, ಇಲ್ಲದಿದ್ದರೆ ನಿಮ್ಮ ಅಕೌಂಟ್‌ ಹೊಸ ಸರ್ವರ್‌ಗಳಿಂದ ಅಳಿಸಲಾಗುತ್ತದೆ.

ಇದು ಅಂತಿಮ ಸೂಚನೆ..! ಎಲ್ಲರಿಗೂ ನಮಸ್ಕಾರ, ಈ ಎಲ್ಲಾ ಎಚ್ಚರಿಕೆಗಳು ನಿಜವೆಂದು ತೋರುತ್ತದೆ, ನವೆಂಬರ್ 2017ರಿಂದ ವಾಟ್ಸ್‌ಆಪ್ ಶುಲ್ಕವನ್ನು ವಿಧಿಸುತ್ತಿದೆ. ಈ ಸ್ಟ್ರಿಂಗ್‌ನ್ನು ನಿಮ್ಮ ಸಂಪರ್ಕ ಪಟ್ಟಿಯಲ್ಲಿನ 18 ವಿಭಿನ್ನ ಜನಕ್ಕೆ ಕಳುಹಿಸಿದರೆ ನಿಮ್ಮ ಐಕಾನ್ ನೀಲಿ ಬಣ್ಣದ್ದಾಗಿರುತ್ತದೆ ಮತ್ತು ನಿಮಗೆ ವಾಟ್ಸ್‌ಆಪ್ ಉಚಿತವಾಗಿರುತ್ತದೆ. ನೀವು ನನ್ನ ನಂಬದಿದ್ದರೆ ನಾಳೆ ಸಂಜೆ 6 ಗಂಟೆಗೆ ವಾಟ್ಸ್‌ಆಪ್ ಸ್ಥಗಿತಗೊಳ್ಳುತ್ತದೆ. ಮತ್ತು ಆಪ್‌ ಒಪನ್ ಮಾಡಲು ಪಾವತಿಸಬೇಕಾಗುತ್ತದೆ, ಕಾನೂನಿನ ಪ್ರಕಾರ ಈ ಮಾಹಿತಿಯನ್ನು ನಮ್ಮ ಎಲ್ಲ ಬಳಕೆದಾರರಿಗೆ ತಿಳಿಸುವುದು, ಇತ್ತೀಚೆಗೆ ನಮ್ಮ ಸರ್ವರ್‌ಗಳು ತುಂಬಾ ಸ್ಲೋ ಆಗಿದ್ದವು. ಆದ್ದರಿಂದ, ನಾವು ನಿಮಗೆ ಸಹಾಯ ಮಾಡಲು ಕೇಳುತ್ತಿದ್ದೇವೆ. ಈ ಸಮಸ್ಯೆಯನ್ನು ಶೀಘ್ರದಲ್ಲಿಯೇ ಪರಿಹರಿಸುತ್ತೇವೆ. ನಮ್ಮ ಪ್ರತಿಯೊಬ್ಬ ಸಕ್ರಿಯ ಬಳಕೆದಾರರಿಗೆ ಈ ಸಂದೇಶ ತಲುಪಿಸಲು ನಾವು ಬಯಸುತ್ತೇವೆ, ನಿಮ್ಮ ಎಲ್ಲಾ ಕಾಂಟ್ಯಾಕ್ಟ್‌ಗಳಿಗೆ ನೀವು ಈ ಸಂದೇಶ ಕಳುಹಿಸದಿದ್ದರೆ ವಾಟ್ಸ್‌ಆಪ್ ನಿಮಗೆ ಶುಲ್ಕ ವಿಧಿಸುತ್ತದೆ.

ವಾಟ್ಸ್‌ಆಪ್‌ನ ಸಿಇಒ ಜಿಮ್ ಬಾಲ್ಸಾಮಿಕ್ ಹೇಳುವಂತೆ ವಾಟ್ಸ್‌ಆಪ್‌ ಮೆಸೇಂಜರ್‌ನಲ್ಲಿ ಹೆಚ್ಚು ಬಳಕೆದಾರರಿದ್ದಾರೆ. ಈ ಸಂದೇಶವನ್ನು ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವ ಎಲ್ಲಾ ಬಳಕೆದಾರರಿಗೆ ರವಾನಿಸಲು ನಾವು ವಿನಂತಿಸುತ್ತಿದ್ದೇವೆ. ಈ ಸಂದೇಶವನ್ನು ನೀವು ಫಾರ್ವರ್ಡ್ ಮಾಡದಿದ್ದರೆ, ನಿಮ್ಮ ಖಾತೆ ಇನ್‌ವ್ಯಾಲಿಡ್ ಆಗುತ್ತದೆ ಮತ್ತು ಮುಂದಿನ 48 ಗಂಟೆಗಳಲ್ಲಿ ಅದನ್ನು ಡಿಲೀಟ್ ಮಾಡಲಾಗುತ್ತದೆ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಬೇಡಿ ಅಥವಾ ನಿಮ್ಮ ಆಕ್ಟಿವಿಟಿಯನ್ನು ವಾಟ್ಸ್‌ಆಪ್‌ ಇನ್ನು ಮುಂದೆ ಗುರುತಿಸುವುದಿಲ್ಲ. ನಿಮ್ಮ ಅಕೌಂಟ್ ಡಿಲೀಟ್‌ ನಂತರ ಪುನಃ ಸಕ್ರಿಯಗೊಳಿಸಲು ಬಯಸಿದರೆ, ಮಾಸಿಕ ನಿಮಗೆ 25.00 ಶುಲ್ಕ ವಿಧಿಸಲಾಗುತ್ತದೆ.

ಅದಲ್ಲದೇ ಚಿತ್ರಗಳ ಅಪ್‌ಡೇಟ್‌ ತೋರಿಸದಿರುವ ಸಮಸ್ಯೆ ಬಗ್ಗೆಯೂ ನಮಗೆ ತಿಳಿದಿದೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದು, ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುತ್ತೇವೆ. ನಿಮ್ಮ ಸಹಕಾರಕ್ಕಾಗಿ ವಾಟ್ಸ್‌ಆಪ್ ತಂಡದಿಂದ ಧನ್ಯವಾದಗಳು.. ವಾಟ್ಸ್‌ಆಪ್ ಶೀಘ್ರದಲ್ಲಿಯೇ ನಿಮಗೆ ಶುಲ್ಕ ವಿಧಿಸಲಿದೆ. ನೀವು ವಾಟ್ಸ್‌ಆಪ್‌ನ ದೈನಂದಿನ ಬಳಕೆದಾರರಾಗಿದ್ದರೆ, ನಿಮಗೆ ವಾಟ್ಸ್‌ಆಪ್‌ ಉಚಿತವಾಗಿ ದೊರೆಯಲು ನೀವು ಸಂದೇಶವನ್ನು 10 ಜನರಿಗೆ ಕಳುಹಿಸಿ. ನಿಮ್ಮ ವಾಟ್ಸ್‌ಆಪ್ ಲೋಗೊ ನೀಲಿ ಬಣ್ಣಕ್ಕೆ ತಿರುಗಲು ಫೇಸ್‌ಬುಕ್‌ ಲಾಗಿನ್ ಆಗಬೇಕು. ಲಾಗಿನ್ ಆಗಲು ಇಲ್ಲಿ http://updateyourself.wapka.mobi. ಕ್ಲಿಕ್ ಮಾಡಿ.

ಈ ಸಂದೇಶವನ್ನು 25ಕ್ಕೂ ಹೆಚ್ಚು ವಾಟ್ಸ್‌ಆಪ್ ಸಂಪರ್ಕಗಳಿಗೆ ಫಾರ್ವರ್ಡ್‌ ಮಾಡಿ. ಕಂಪನಿ ವೆಬ್‌ಸೈಟ್ ಪ್ರಚಾರ ಮಾಡುತ್ತಿದ್ದು, 497.54 ಟಾಕ್‌ಟೈಮ್ ಪಡೆಯಬಹುದು, ಇದು ನಿಜ, ಹೆಚ್ಚಿನ ಮಾಹಿತಿಗಾಗಿ ಇಂದಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ 7ನೇ ಪುಟವನ್ನು ನೋಡಿ. ಮತ್ತು 10 ನಿಮಿಷದ ನಂತರ ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡಿ.

ಎರಡನೇ ಮೆಸೇಜ್ ಕೂಡ ಸುಳ್ಳು

ಎರಡನೇ ಮೆಸೇಜ್ ಕೂಡ ಸುಳ್ಳು

ಎರಡನೇ ಮೆಸೇಜ್ ವ್ಯಾಪಕವಾಗಿ ಶೇರ್ ಆಗಿದ್ದು, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಮತ್ತು ವಾಟ್ಸ್‌ಆಪ್ ನಿರ್ದೇಶಕ ವರುಣ್ ಪುಲ್ಯಾನಿ ಹೆಸರನ್ನು ಬಳಸಲಾಗಿದೆ. ಈ ಸಂದೇಶ ಮೊದಲ ಸಂದೇಶದಲ್ಲಿನ ಸುಳ್ಳುಗಳನ್ನು ಹೊರತುಪಡಿಸಿ ಈ ಕೆಳಗಿನ ಸುಳ್ಳುಗಳನ್ನು ನಿಮ್ಮ ಮುಂದಿಡುತ್ತದೆ.

1) ವಾಟ್ಸ್‌ಆಪ್ ನಿರ್ದೇಶಕರಾಗಿರುವ ವರುಣ್ ಪುಲ್ಯಾನಿ ಕೇವಲ ಕಾಲ್ಪನಿಕ.

2) ಆ ವಾಟ್ಸ್‌ಆಪ್‌ನ್ನು ಮುಖೇಶ್ ಅಂಬಾನಿಗೆ ಮಾರಾಟ ಮಾಡಲಾಗಿದೆ ಎಂಬುದು ಕೂಡ ಸತ್ಯಕ್ಕೆ ದೂರವಾದ ಸಂಗತಿ.

3) ವಾಟ್ಸ್‌ಆಪ್ ಸಿಇಒ ಜಿಮ್ ಬಾಲ್ಸಾಮಿಕ್ ಕೂಡ ಇರೋದು ಸುಳ್ಳು.

4) ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಈ ವರದಿ ಮಾಡಿದೆ ಎಂಬುದು ಕೂಡ ಸುಳ್ಳು.

ಎರಡು ಮೆಸೇಜ್ ಸುಳ್ಳು

ಎರಡು ಮೆಸೇಜ್ ಸುಳ್ಳು

ಮೇಲಿನ ಎರಡು ಮೆಸೇಜ್‌ಗಳು ಸುಳ್ಳು ಎಂಬುದು ಸ್ಪಷ್ಟವಾಗುತ್ತದೆ. ಇನ್ನು ಎರಡನೇ ಸಂದೇಶದ ಬಗ್ಗೆ ಡಿಸೆಂಬರ್ 19, 2016ರಲ್ಲಿಯೇ ಡೆಕ್ಕನ್ ಹೆರಾಲ್ಡ್ ಸುಳ್ಳು ಮಾಹಿತಿಯ ಕುರಿತಂತೆ ವರದಿ ಪ್ರಕಟಿಸಿತ್ತು. ಜುಲೈ 2013ರಲ್ಲಿ ಅಮೆರಿಕದ ವೆಬ್‌ಸೈಟ್ ಸಿಎನ್‌ಇಟಿ ಕೂಡ ಈ ಬಗ್ಗೆ ಸುದ್ದಿ ಮಾಡಿತ್ತು.

Best Mobiles in India

English summary
Fake News On WhatsApp, Here Are Things That Everyone Should Know

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X