Subscribe to Gizbot

ವಾಟ್ಸ್‌ಆಪ್ ಬಳಕೆದಾರರೇ ಎಚ್ಚರ ಮಾರುಕಟ್ಟೆಗೆ ಬಂದಿದೆ ನಕಲಿ ಆಪ್‌..!

Written By:

ಮಾರುಕಟ್ಟೆಯಲ್ಲಿ ನಕಲಿ ಆಪ್‌ಗಳ ಹಾವಳಿ ಹೆಚ್ಚಾಗಿದ್ದು, ಫೇಸ್‌ಬುಕ್ ಒಡೆತನದ, ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್ ಸಹ ಇದಕ್ಕೆ ಹೊರತಾಗಿಲ್ಲ. ಪ್ಲೇ ಸ್ಟೋರಿನಲ್ಲಿ ವಾಟ್ಸ್‌ಆಪ್ ಹೋಲುವ ಅನೇಕ ಆಪ್‌ಗಳು ಲಭ್ಯವಿದ್ದು, ಬಳಕೆದಾರರು ತಿಳಿಯದೆ ಈ ಆಪ್‌ಗಳನ್ನು ಬಳಕೆ ಮಾಡಿಕೊಂಡರೆ ತೊಂದರೆಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಾದರೆ ಎಚ್ಚರ ವಹಿಸಬೇಕಾಗಿರುವುದು ಅಗತ್ಯ.

ವಾಟ್ಸ್‌ಆಪ್ ಬಳಕೆದಾರರೇ ಎಚ್ಚರ ಮಾರುಕಟ್ಟೆಗೆ ಬಂದಿದೆ ನಕಲಿ ಆಪ್‌..!

ಪ್ಲೇ ಸೋರಿನಲ್ಲಿ ವಾಟ್ಸ್‌ಆಪ್ ಮತ್ತು ವಾಟ್ಸ್‌ಆಪ್ ಬಿಸ್ನೆಸ್ ಆಪ್‌ಗಳ ಮಾದರಿಯಲ್ಲಿ ಹಲವು ಆಪ್‌ಗಳು ಕಾಣಿಸಿಕೊಂಡಿದ್ದು, ಎಲ್ಲಾವೂ ಹಸಿರು ಬಣ್ಣದಲ್ಲಿ ವಾಟ್ಸ್‌ಆಪ್ ಲೋಗೊವನ್ನು ಕಾಪಿ ಮಾಡಿದ ಮಾದರಿಯಲ್ಲಿ ಕಾಣಿಸಿಕೊಂಡಿವೆ, ಇದಲ್ಲದೇ ಹೊಸದಾಗಿ ವಾಟ್ಸ್‌ಆಪ್ ಗೋಲ್ಡ್‌ ಸಹ ಇದ್ದು, ಇದು ಬಳಕೆದಾರರ ಮಾಹಿತಿಗೆ ಕನ್ನ ಹಾಕುವ ಆಪ್ ಆಗಿದೆ. ಈ ಹಿನ್ನಲೆಯಲ್ಲಿ ಅಧಿಕೃತ ಆಪ್‌ ಮಾತ್ರವೇ ಬಳಕೆದಾರರು ಡೌನ್‌ಲೋಡ್ ಮಾಡಿಕೊಳ್ಳುವುದು ಸೂಕ್ತವಾಗಿದೆ.

ಇದಲ್ಲದೇ ವಾಟ್ಸ್‌ಆಪ್ ಪ್ಲಸ್ ಎಂಬ ಹೆಸರಿನ ಆಪ್ ವೊಂದು ಕಾಣಿಸಿಕೊಂಡಿದ್ದು, ಇದು ಮಾಲ್ವೇರ್'ಗಳನ್ನು ಒಳಗೊಂಡಿದ್ದು, ನಿಮ್ಮ ಖಾಸಗಿ ಮಾಹಿತಿಯನ್ನೂ ಕೂಡ ಕದಿಯುತ್ತದೆ. ಇದು ಸಹ ನೋಡಲು ಬಂಗಾರದ ಬಣ್ಣದಲ್ಲಿದ್ದು, ಒಂದು ಬಾರಿ ಇದನ್ನು ನೀವು ಡೌನ್'ಲೋಡ್ ಮಾಡಿಕೊಂಡಲ್ಲಿ ಸಂಪೂರ್ಣ ಖಾಸಗಿ ಮಾಹಿತಿಯೂ ಕೂಡ ಸೋರಿಕೆಯಾಗುವ ಸಂಭವವಿದೆ.

ವಾಟ್ಸ್‌ಆಪ್ ಬಳಕೆದಾರರೇ ಎಚ್ಚರ ಮಾರುಕಟ್ಟೆಗೆ ಬಂದಿದೆ ನಕಲಿ ಆಪ್‌..!

ಹ್ಯಾಕರ್‌ ಗಳು ಬಳಕೆದಾರರ ಮಾಹಿತಿಯನ್ನು ಕದಿಯುವ ಸಲುವಾಗಿ ನಕಲಿ ಆಪ್‌ಗಳನ್ನು ಸೃಷ್ಟಿ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಇವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹಾನಿಕಾರಕವಾಗಿದ್ದು, ನಿವೇ ಹಾಕರ್ಸ್‌ಗಳಿಗೆ ಆಹ್ವಾನ ನೀಡಿದಂತೆ. ವಾಟ್ಸ್‌ಆಪ್ ಮತ್ತು ವಾಟ್ಸ್‌ಆಪ್ ಬಿಸ್ನೆಸ್ ಆಪ್ ಗಳು ಮಾತ್ರವೇ ಅಧಿಕೃತವಾಗಿ ಲಭ್ಯವಿದೆ.

ಇದು ವಾಟ್ಸ್‌ಆಪ್ ಮಾತ್ರವಲ್ಲ, ಪ್ಲೇ ಸ್ಟೋರಿನಲ್ಲಿ ಅತೀ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿರುವ ಆಪ್‌ಗಳಿಗೆ ಈ ಮಾದರಿಯ ನಕಲಿ ಆಪ್‌ಗಳು ಹುಟ್ಟಿಕೊಂಡಿದ್ದು, ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ಮಾಲ್ವವೇರ್ ಮತ್ತು ಆಡ್‌ವೇರ್‌ಗಳ ದಾಳಿಯಾಗುವುದ ಖಂಡಿತ ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

English summary
fake whatsapp app in playstore. to know more visit kannnada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot