2018 ರಲ್ಲಿ ಅತೀ ಹೆಚ್ಚು ಜನರು ಆಡಿದ ಮೊಬೈಲ್ ಗೇಮ್ ಗಳು

|

ಕಳೆದ ಕೆಲವು ವರ್ಷಗಳಲ್ಲಿ ಮೊಬೈಲ್ ಗೇಮ್ ಬಹಳ ವೇಗವಾಗಿ ಬೆಳೆಯುತ್ತಿದೆ. ಹೊಸದಾಗಿರುವ ಮತ್ತು ಶಕ್ತಿಶಾಲಿಯಾಗಿರುವ ಪ್ರೊಸೆಸರ್ ಗಳ ಸಹಾಯದಿಂದಾಗಿ ಮತ್ತು ವಿಭಿನ್ನ ಎಪಿಐ ಬೆಂಬಲದಿಂದಾಗಿ ಹೊಸ ಟ್ರಿಪಲ್-ಎ ಟೈಟಲ್ ಗಳು ಇದೀಗ ಮೊಬೈಲ್ ನಲ್ಲಿ ಆಡುವುದಕ್ಕೂ ಕೂಡ ಬಹಳ ಸರಳವಾಗಿದೆ ಮತ್ತು ಸಲೀಸಾಗಿದೆ ಅಷ್ಟೇ ಅಲ್ಲ ದಿನದಿಂದ ದಿನಕ್ಕೆ ಮತ್ತಷ್ಟು ಅಭಿವೃದ್ಧಿಗೊಳ್ಳುತ್ತಾ ಸಾಗುತ್ತಿದೆ.

2018 ರಲ್ಲಿ ಅತೀ ಹೆಚ್ಚು ಜನರು ಆಡಿದ ಮೊಬೈಲ್ ಗೇಮ್ ಗಳು

ಪಿಸಿ ಮತ್ತು ಇತರೆ ಗೇಮಿಂಗ್ ಫ್ಲ್ಯಾಟ್ ಫಾರ್ಮ್ ಗಳಿಗೆ ಹೋಲಿಸಿದರೆ ಸ್ಮಾರ್ಟ್ ಫೋನ್ ಗೇಮಿಂಗ್ ಕೂಡ ಇದೀಗ ಸರಿಸಮನಾಗಿ ಸ್ಪರ್ಧೆ ಮಾಡುತ್ತಿದೆ. ಹಾಗಾದ್ರೆ ಮೊಬೈಲ್ ಗೇಮಿಂಗ್ ನಲ್ಲಿ ಹೆಚ್ಚು ಪ್ರಸಿದ್ಧಿಯಾದ ಆಟಗಳು ಯಾವುದು ಎಂಬುದನ್ನು ತಿಳಿಯೋಣ. ಕೆಳಗಿನ 5 ಗೇಮ್ ಗಳು 2018 ರಲ್ಲಿ ಮೊಬೈಲ್ ಗೇಮಿಂಗ್ ಜಗತ್ತನ್ನು ಆಳಿದವು ಎಂದರೆ ತಪ್ಪಾಗಲಿಕ್ಕಿಲ್ಲ.

PUBG ಮೊಬೈಲ್:

PUBG ಮೊಬೈಲ್:

2018 ರಲ್ಲಿ ಅತ್ಯಂತ ಹೆಚ್ಚು ಅಂದರೆ 400 ಮಿಲಿಯನ್ ಡೌನ್ ಲೋಡ್ ಕಂಡಿರುವ ಮತ್ತು ಈ ಸ್ಪರ್ಧೆಯ ವಿಜೇತ ಗೇಮ್ ಎಂದು ಕರೆಸಿಕೊಳ್ಳುವ ಅತ್ಯಂತ ಪ್ರಸಿದ್ಧ ಗೇಮ್, ಹೆಚ್ಚು ಮಂದಿ ಆಟವಾಡುವ ಗೇಮ್ ಆಗಿ ಗುರುತಿಸಿಕೊಂಡಿದ್ದು PUBG ಮೊಬೈಲ್. ಇದು ಬ್ಯಾಟಲ್ ರಾಯಲ್ ಕಾನ್ಸೆಪ್ಟ್ ನ್ನು ಹೊಂದಿದೆ ಮತ್ತು ಒಂದು ಐಲ್ಯಾಂಡ್ ನಲ್ಲಿ 100 ಜನ ಆಟಗಾರರು ಪ್ಯಾರಾಚೂಟ್ ಮೂಲಕ ಲ್ಯಾಂಡ್ ಆಗುತ್ತಾರೆ ಮತ್ತು ಶಸ್ತ್ರಾಸ್ತ್ರಗಳು ಹಾಗೂ ಇತರೆ ವಸ್ತುಗಳನ್ನು ಬದುಕುಳಿಯುವುದಕ್ಕಾಗಿ ಸಂಪಾದಿಸಿ ಹೋರಾಡುವುದೇ ಆಟದ ಕಾನ್ಸೆಪ್ಟ್. ಯಾರು ಬದುಕುಳಿಯುತ್ತಾರೋ ಅವರೇ ವಿಜಯಶಾಲಿಗಳು.

ಫೋರ್ಟ್ ನೈಟ್:

ಫೋರ್ಟ್ ನೈಟ್:

ಸ್ಮಾರ್ಟ್ ಫೋನ್ ನಲ್ಲಿ ಎರಡನೇ ಅತ್ಯಂತ ಹೆಚ್ಚು ಪ್ರಸಿದ್ಧ ರಾಯಲ್ ಬ್ಯಾಟಲ್ ಗೇಮ್ ಅಂದರೆ ಅದು ಫೋರ್ಟ್ ನೈಟ್. ಹೋರಾಟ, ಫೈಟಿಂಗ್ ಇತ್ಯಾದಿಗಳನ್ನು ಹೊರತುಪಡಿಸಿ ಈ ಗೇಮ್ ನಲ್ಲಿ ಮೆಟ್ಟಿಲುಗಳು ಮತ್ತು ಗೋಡೆಗಳನ್ನು ನಿರ್ಮಿಸುವುದು ಸೇರಿದಂತೆ ಇತ್ಯಾದಿಗಳಿಗೆ ಆಟವು ಅವಕಾಶ ನೀಡುತ್ತದೆ.

Asphalt 9: ಲೆಜೆಂಡ್ಸ್

Asphalt 9: ಲೆಜೆಂಡ್ಸ್

Asphalt ಮೊಬೈಲ್ ಡಿವೈಸ್ ಗಳಲ್ಲಿ ಆಡುವ ಒಂದು ಅತ್ಯಂತ ಹಳೆಯ ರೇಸಿಂಗ್ ಗೇಮ್ ಆಗಿದೆ. ಸ್ಮಾರ್ಟ್ ಫೋನ್ ಗಳ ಯುಗ ಆರಂಭವಾಗುವುದಕ್ಕೂ ಮುನ್ನ ಹಳೆಯ ನೋಕಿಯಾ,ಸೋನಿ ಮತ್ತು ಮೊಟೋರೊಲಾ ಫೋನ್ ಗಳಲ್ಲಿ ಈ ಗೇಮ್ ಲಭ್ಯವಿರುತ್ತಿತ್ತು. Asphalt 9 ಈ ಸರಣಿಗೆ ಸೇರಿಕೊಂಡ ಮತ್ತೊಂದು ನೂತನ ವರ್ಷನ್ ಆಗಿದೆ.

FIFA ಮೊಬೈಲ್:

FIFA ಮೊಬೈಲ್:

ಇದು ಫುಟ್ಬಾಲ್ ಗೇಮ್ ನ ಮೊಬೈಲ್ ಅವತರಣಿಕೆ. ಮೊಬೈಲ್ ಗೇಮ್ ಉಚಿತವಾಗಿ ಆಟಬಹುದು ಮತ್ತು ಮೊಬೈಲ್ ಡಿವೈಸ್ ಗಳಲ್ಲಿ ರಿಲಯಿಸ್ಟಿಕ್ ಆಗಿರುವ ಆಟದ ಅನುಭವವನ್ನು ಇದು ಬಳಕೆದಾರರಿಗೆ ನೀಡುತ್ತದೆ.

ಪೋಕ್ಮನ್ ಗೋ :

ಪೋಕ್ಮನ್ ಗೋ :

ಪೋಕ್ಮನ್ ಗೋ 2018 ರ ಅತ್ಯಂತ ಪ್ರಸಿದ್ಧ ಮತ್ತು ಕ್ರಿಯಾತ್ಮಕವಾಗಿರುವ ಗೇಮ್ ಆಗಿದೆ. ನಿಯಾನ್ ಟಿಕ್ ನಿಂದ ನಿರ್ಮಾಣಗೊಂಡಿರುವ ಗೇಮ್ ಇದಾಗಿದೆ.ಇದು ರಿಯಲ್ ಮತ್ತು ಡಿಜಿಟಲ್ ಜಗತ್ತಿನ ನಡುವೆ ಒಂದು ಉತ್ತಮ ಬ್ಯಾಲೆನ್ಸ್ ನ್ನು ಸ್ಥಾಪಿಸುವುದಕ್ಕೆ ಇದು ನೆರವಾಗಿದೆ. ಇದೊಂದು ಸರಳವಾಗಿರುವ ಗೇಮ್ ಆಗಿದ್ದು ರಿಯಲ್ ವರ್ಡ್ ನಲ್ಲಿ ವರ್ಚುವಲಿ ಹಿಡನ್ ಆಗಿರುವ ಕೆಲವು ಕ್ಯಾರೆಕ್ಟರ್ ಗಳನ್ನು ಹುಡುಕಾಟ ನಡೆಸುವುದೇ ಇಲ್ಲಿ ಆಟಗಾರನ ಆಟವಾಗಿರುತ್ತದೆ ಮತ್ತು ನಂತರ ಅವುಗಳಿಗೆ ಫೈಟ್ ಮಾಡುವುದನ್ನು ಹೇಳಿಕೊಡಬೇಕಾಗುತ್ತದೆ.

Best Mobiles in India

Read more about:
English summary
Five best mobile games of 2018

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X