Home
Apps

ಹೊಸದಾಗಿ ಫ್ಲಿಪ್‌ಕಾರ್ಟ್‌ ಮೊಬೈಲ್ ರಿಚಾರ್ಜ್: ಪ್ರತಿ ಬಾರಿ ಬೊಂಬಾಟ್ ಕ್ಯಾಷ್ ಬ್ಯಾಕ್..!

By Srinidhi

ದೇಶಿಯ ಇ ಕಾರ್ಮಸ್ ಮಾರುಕಟ್ಟೆಯಲ್ಲಿ ಹೊಸತನಗಳಿಗೆ ಸಾಕ್ಷಿಯಾಗುತ್ತಿರುವ ಫ್ಲಿಪ್‌ಕಾರ್ಟ್‌, ತನ್ನ ಆಪ್ ಬಳಕೆದಾರರಿಗೆ ಬೊಂಬಾಟ್ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಇಷ್ಟು ದಿನ ಮೊಬೈಲ್ ಗಳನ್ನು ಮಾತ್ರವೇ ಮಾರಾಟ ಮಾಡುತ್ತಿದ್ದ ಫ್ಲಿಪ್‌ಕಾರ್ಟ್ ಹೊಸದಾಗಿ ಮೊಬೈಲ್ ರಿಚಾರ್ಜ್ ಆಯ್ಕೆಯನ್ನು ನೀಡಿದೆ. ಇದರಿಂದಾಗಿ ಯಾವುದೇ ಟೆಲಿಕಾಂ ರಿಚಾರ್ಜ್ ಗಳಿಗಾಗಿ ನೀವು ಫ್ಲಿಪ್‌ಕಾರ್ಟ್‌ಗೆ ಭೇಟಿ ನೀಡಬಹುದಾಗಿದೆ.

ಹೊಸದಾಗಿ ಫ್ಲಿಪ್‌ಕಾರ್ಟ್‌ ಮೊಬೈಲ್ ರಿಚಾರ್ಜ್: ಬೊಂಬಾಟ್ ಕ್ಯಾಷ್ ಬ್ಯಾಕ್..!

ಮೊದಲಿಗೆ ರಿಚಾರ್ಜ್ ಆರಂಭಿಸಿರುವ ಫ್ಲಿಪ್‌ಕಾರ್ಟ್ ಬಳಕೆದಾರರಿಗೆ ದೊಡ್ಡ ಮಟ್ಟದ ಆಫರ್ ಅನ್ನು ನೀಡುತ್ತಿದೆ. ಇದರಿಂದಾಗಿ ನೀವು ಹೆಚ್ಚಿನ ಲಾಭವನ್ನು ಫ್ಲಿಪ್‌ಕಾರ್ಟಿನಿಂದ ಪಡೆದುಕೊಳ್ಳಬಹುದಾಗಿದೆ. ಕ್ಯಾಷ್ ಬ್ಯಾಕ್ ಸೇರಿದಂತೆ ಅನೇಕ ಮಾದರಿಯ ಆಫರ್ ಗಳನ್ನು ಕಾಣಬಹುದಾಗಿದೆ. ಇದು ಕೇವಲ ಫ್ಲಿಪ್‌ಕಾರ್ಟ್ ಆಪ್‌ ಬಳಕೆದಾರರಿಗೆ ಮಾತ್ರವೇ ದೊರೆಯಲಿದ್ದು, ಡೆಸ್ಕ್ ಟಾಪ್‌ನಲ್ಲಿ ಬಳಸುವರಿಗೆ ಇನ್ನು ಲಭ್ಯವಿಲ್ಲ.

ಫೋನ್ ಪೇ ನೊಂದಿಗೆ:

ಫೋನ್ ಪೇ ನೊಂದಿಗೆ:

ಫ್ಲಿಪ್‌ಕಾರ್ಟ್ ತನ್ನ ಆಪ್‌ ಬಳಕೆ ಮಾಡುತ್ತಿರುವವರಿಗೆ ರಿಚಾರ್ಜ್ ಸೇವೆಯನ್ನು ನೀಡುವ ಸಲುವಾಗಿ ಫೋನ್ ಪೇ ಆಪ್‌ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ನೀವು ಫ್ಲಿಪ್‌ಕಾರ್ಟಿನಲ್ಲಿ ರೀಚಾರ್ಜ್ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಅದು ಫೋನ್ ಪೇ ಆಪ್‌ನೊಂದಿಗೆ ಕಾರ್ಯನಿರ್ವಹಿಸುವುದನ್ನು ಕಾಣಬಹುದಾಗಿದೆ.

ಶೇ.25% ಕ್ಯಾಷ್ ಬ್ಯಾಕ್:

ಶೇ.25% ಕ್ಯಾಷ್ ಬ್ಯಾಕ್:

ಫ್ಲಿಪ್‌ಕಾರ್ಟ್ ಮೂಲಕ ನೀವು ರೀಚಾರ್ಜ್ ಮಾಡಿಸಿಕೊಂಡ ಸಂದರ್ಭದಲ್ಲಿ ನೀವು ಫ್ಲಾಷ್ 25% ಕ್ಯಾಷ್ ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದು ರೂ.75ವರೆಗೂ ದೊರೆಯಲಿದೆ. ಅದು ಹೊಸ ಬಳಕೆದಾರರಿಗೆ, ಹಳೇಯ ಬಳಕೆದಾರರಿಗೆ ರೂ.20 ಕ್ಯಾಷ್ ಬ್ಯಾಕ್ ಖಂಡಿತವಾಗಿಯೂ ದೊರೆಯಲಿದೆ.

ಎಲ್ಲಾ ಟೆಲಿಕಾಂ:

ಎಲ್ಲಾ ಟೆಲಿಕಾಂ:

ಫ್ಲಿಪ್‌ಕಾರ್ಟ್‌ ನಲ್ಲಿ ರಿಚಾರ್ಜ್ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ನೀವು ಎಲ್ಲಾ ಟೆಲಿಕಾಂ ಕಂಪನಿಗಳನ್ನು ಕಾಣಬಹುದಾಗಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಂಡಿರುವ ಆಫರ್ ಗಳ ಬಗ್ಗೆಯೂ ಮಾಹಿತಿಯನ್ನು ನೀಡಿದೆ. ಜಿಯೋದಲ್ಲಿ ಯಾವುದು ಬೆಸ್ಟ್, ಏರ್‌ಟೆಲ್‌ನಲ್ಲಿ ಯಾವುದೇ ಎಂಬ ಎಲ್ಲಾ ಮಾಹಿತಿಯೂ ಇಲ್ಲಿ ಲಭ್ಯವಿದೆ.

ಪ್ಲಸ್ ಕಾಯಿನ್:

ಪ್ಲಸ್ ಕಾಯಿನ್:

ಇದಲ್ಲದೇ ಫ್ಲಿಪ್‌ಕಾರ್ಟ್ ಹೊಸದಾಗಿ ಶುರು ಮಾಡಿರುವ ಪ್ಲಸ್ ಸೇವೆಯನ್ನು ಪಡೆದುಕೊಳ್ಳುವ ಸಲುವಾಗಿ ನೀವು ಪ್ಲಸ್ ಕಾಯಿನ್‌ಗಳನ್ನು ಸೇರಿಸಬೇಕಾಗಿದೆ. ಒಂದು ಕಾಯಿನ್‌ಗೆ ರೂ.250ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡಬೇಕಾಗಿದೆ. ನೀವು ರಿಚಾರ್ಜ್ ಮಾಡಿಸಿದ ಸಂದರ್ಭದಲ್ಲಿಯೂ ನೀವು ಕಾಯಿನ್‌ಗಳನ್ನು ಪಡೆಯಬಹುದಾಗಿದೆ.

ಹೆಚ್ಚಿನ ಲಾಭ:

ಹೆಚ್ಚಿನ ಲಾಭ:

ಫ್ಲಿಪ್‌ಕಾರ್ಟಿನಲ್ಲಿ ನೀವು ಪಡೆದುಕೊಳ್ಳುವ ಪ್ರತಿ ರಿಚಾರ್ಜ್‌ನಲ್ಲಿಯೂ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿ ರಿಚಾರ್ಜಿಗೂ ಖಚಿತ ಕ್ಯಾಷ್ ಬ್ಯಾಕ್ ದೊರೆಯಲಿದೆ. ಇದರಿಂದಾಗಿ ಬೇರೆ ಆಪ್‌ಗಳಲ್ಲಿ ರಿಚಾರ್ಜ್ ಮಾಡಿಸಿಕೊಳ್ಳುವುದಕ್ಕಿಂತ ಇದು ಬೆಸ್ಟ್ ಎನ್ನಬಹುದಾಗಿದೆ.

Best Mobiles in India

English summary
Flipkart Introduces Prepaid Recharges on App. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+