Zomato: ಖುಷಿ ಸುದ್ದಿ! ಬಂದಿದೆ ಹೊಸ ವೈಶಿಷ್ಟ್ಯ.. ಇನ್ಮುಂದೆ ಕಡಿಮೆ ಬೆಲೆಗೆ 'ಫುಡ್' ಆರ್ಡರ್ ಮಾಡಿ!
ಜೊಮ್ಯಾಟೋ (Zomato) ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಇನ್ಮುಂದೆ ಕಡಿಮೆ ಬೆಲೆಗೆ ಫುಡ್ ಆರ್ಡರ್ ಮಾಡಬಹುದು. ಹೌದು, ಆಹಾರ ಡೆಲಿವರಿ ಸಂಸ್ಥೆ ಝೊಮ್ಯಾಟೊ ಹೊಸ ಸೇವೆಯನ್ನು (ವೈಶಿಷ್ಟ್ಯ) ಪ್ರಾರಂಭಿಸಿದೆ. ಈ ಮೂಲಕ ಫುಡ್ ವ್ಯರ್ಥವಾಗುವುದಕ್ಕೆ ಕಡಿವಾಣ ಹಾಕಿದೆ. ಯಾರಾದರೂ ಆರ್ಡರ್ ರದ್ದುಗೊಳಿಸಿದರೆ, ನಿಮಗೆ ಬಂಪರ್ ಆಫರ್ ಸಿಗುತ್ತದೆ. ನೀವು, ಝೊಮ್ಯಾಟೊದ ಹೊಸ ವೈಶಿಷ್ಟ್ಯದೊಂದಿಗೆ ಕಡಿಮೆ ಬೆಲೆಗೆ ಫುಡ್ ಆರ್ಡರ್ ಮಾಡಬಹುದು. ಬನ್ನಿ, ಯಾವುದು ಹೊಸ ವೈಶಿಷ್ಟ್ಯ? ಅದರಿಂದ ಲಾಭ ಏನು? ಎನ್ನುವುದನ್ನು ತಿಳಿಯೋಣ.
ಹೌದು, ಜೊಮ್ಯಾಟೋ ಸಿಇಒ ದೀಪೇಂದ್ರ ಗೋಯಲ್ ಹೊಸ ವೈಶಿಷ್ಟ್ಯವನ್ನು ಘೋಷಿಸಿದ್ದಾರೆ. ಅದುವೇ, 'ಫುಡ್ ರೆಸ್ಕ್ಯೂ' (Food Rescue) ವೈಶಿಷ್ಟ್ಯ. ಈ ವೈಶಿಷ್ಟ್ಯವು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಕ್ಯಾನ್ಸಲ್ ಮಾಡಿದ ಆರ್ಡರ್‌ಗಳನ್ನು ಖರೀದಿಸುವ ಅವಕಾಶವನ್ನು ನೀಡುತ್ತದೆ. ಈ ಬಗ್ಗೆ ಝೊಮಾಟೊದ ಸಿಇಒ ದೀಪಿಂದರ್ ಗೋಯಲ್ ಮಾಹಿತಿಯನ್ನು ನೀಡಿದ್ದಾರೆ. ಇಂದಿನಿಂದ ನಾವು ಹೊಸ ವೈಶಿಷ್ಟ್ಯ ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಜೊತೆಗೆ, ಈ ಸೇವೆಯನ್ನು ಪ್ರಾರಂಭಿಸಲು ಸಲಹೆ ನೀಡಿದವರಿಗೆ ಉದ್ಯೋಗ ನೀಡುವ ಭರವಸೆಯನ್ನೂ ನೀಡಿದ್ದಾರೆ.

ಆಹಾರ ವ್ಯರ್ಥವಾಗುವುದನ್ನು ನಿಲ್ಲಿಸುತ್ತೇವೆ
'ಫುಡ್ ರೆಸ್ಕ್ಯೂ' ಸೇವೆಯ ಸಹಾಯದಿಂದ ಗ್ರಾಹಕರು ಕ್ಯಾನ್ಸಲ್ ಮಾಡಿದ ಫುಡ್ (ಆಹಾರ) ಆರ್ಡರ್‌ಗಳನ್ನು ಕಡಿಮೆ ಬೆಲೆಗೆ ಬುಕ್ ಮಾಡಬಹುದು. ಆರ್ಡರ್ ಕ್ಯಾನ್ಸಲ್ ಮಾಡಿದಾಗ, 3 ಕಿಮೀ ವ್ಯಾಪ್ತಿಯಲ್ಲಿರುವ ಗ್ರಾಹಕರಿಗೆ ಇದು ಅಪ್ಲಿಕೇಶನ್‌ನಲ್ಲಿ ಕಾಣಿಸುತ್ತದೆ. ನಂತರ, ಗ್ರಾಹಕರು ಕೈಗೆಟುಕುವ ಬೆಲೆಯಲ್ಲಿ ರದ್ದುಪಡಿಸಿದ ಆರ್ಡರ್‌ಗಳನ್ನು ಮತ್ತೆ ಬುಕ್ ಮಾಡಬಹುದು. ದೀಪೇಂದ್ರ ಗೋಯಲ್ ಎಕ್ಸ್‌ನಲ್ಲಿ ಫೋಸ್ಟ್ ಮಾಡುವ ಮೂಲಕ ಈ ವೈಶಿಷ್ಟ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಾವು, ಆಹಾರ ವ್ಯರ್ಥವಾಗುವುದನ್ನು ನಿಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
4 ಲಕ್ಷಕ್ಕೂ ಹೆಚ್ಚು ಆರ್ಡರ್ ಕ್ಯಾನ್ಸಲ್!
ಜೊಮ್ಯಾಟೋದಲ್ಲಿ ಗ್ರಾಹಕರು ನಾಲ್ಕು ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳನ್ನು ಕ್ಯಾನ್ಸಲ್ ಮಾಡಿದ್ದಾರೆ ಎಂದು ಗೋಯಲ್ ಹೇಳಿದ್ದಾರೆ. ಈ ಕಾರಣದಿಂದಾಗಿ, ನಾವು 'ಇಂದಿನಿಂದ ನಾವು ಹೊಸ 'ಫುಡ್ ರೆಸ್ಕ್ಯೂ' ವೈಶಿಷ್ಟ್ಯವನ್ನು ಪ್ರಾರಂಭಿಸುತ್ತಿದ್ದೇವೆ. ಪ್ರಸ್ತುತ, ಕ್ಯಾನ್ಸಲ್ ಮಾಡಿರುವ ಆರ್ಡರ್‌ಗಳು ಹತ್ತಿರದ ಜನರಿಗೆ ಕಾಣಿಸುತ್ತವೆ. ಗ್ರಾಹಕರು ಅವುಗಳನ್ನು ಕಡಿಮೆ ಬೆಲೆಗೆ ಆರ್ಡರ್ ಮಾಡಬಹುದು. ಈ ಆರ್ಡರ್‌ಗಳು ಸಂಪೂರ್ಣವಾಗಿ ತಾಜಾ ಆಗಿರುತ್ತವೆ. ಅವುಗಳ ಪ್ಯಾಕಿಂಗ್ ಕೂಡ ಒಂದೇ ಆಗಿರುತ್ತದೆ ಮತ್ತು ಆರ್ಡರ್ ಕೆಲವೇ ನಿಮಿಷಗಳಲ್ಲಿ ಗ್ರಾಹಕರಿಗೆ ತಲುಪುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ಸಲಹೆ ನೀಡಿದವರಿಗೆ ಜಾಬ್ ಆಫರ್!
ಸಾಮಾಜಿಕ ಜಾಲತಾಣ ಬಳಕೆದಾರರು 'ಫುಡ್ ರೆಸ್ಕ್ಯೂ' ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭಾನು ಎಂಬುವವರು ಈ ವೈಶಿಷ್ಟ್ಯವನ್ನು ಸುಧಾರಿಸಲು ದೀಪೇಂದ್ರ ಗೋಯಲ್ ಅವರಿಗೆ ಕೆಲವು ಸಲಹೆಯನ್ನು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗೋಯಲ್ ಅವರು, ಭಾನು ಅವರಿಗೆ ಉದ್ಯೋಗದ ಆಫರ್ ನೀಡಿದ್ದಾರೆ.
ಬಳಕೆದಾರರು ನೀಡಿರುವ ಸಲಹೆ ಏನು?
ಕ್ಯಾಶ್ ಆನ್ ಡೆಲಿವರಿ ಮೇಲೆ ಅನ್ವಯಿಸಬಾರದು. ಡೆಲಿವರಿ ಪಾಯಿಂಟ್‌ಗೆ ಆಹಾರವು (ಆರ್ಡರ್) 500 ಮೀಟರ್ ತಲುಪಿದರೆ, ಕ್ಯಾನ್ಸಲ್ ಮಾಡುವ ಆಯ್ಕೆ ನೀಡಬಾರದು. ಇಬ್ಬರು ಬಳಕೆದಾರರು ಒಂದೇ ಸಮಯದಲ್ಲಿ ಆರ್ಡರ್, ಸ್ಥಳವನ್ನು ಹಂಚಿಕೊಂಡರೆ ಮತ್ತು ಆರ್ಡರ್ ರದ್ದುಗೊಳಿಸಿದರೆ ರಿಯಾಯಿತಿ ಪಡೆಯುವ ಅವಕಾಶ ನೀಡಬೇಕು. ಮತ್ತು ತಿಂಗಳಿಗೆ ಎರಡಕ್ಕಿಂತ ಕಡಿಮೆ ಆರ್ಡರ್ ಕ್ಯಾನ್ಸಲ್ ಮಾಡಲು ಅನುಮತಿ ನೀಡಬೇಕು.
ದೀಪೇಂದ್ರ ಗೋಯಲ್ ಹೇಳಿದ್ದೇನು?
ಭಾನು ಎಂಬುವವರ ಸಲಹೆಗಳನ್ನು ದೀಪೇಂದ್ರ ಗೋಯಲ್ ಅವರು ಮೆಚ್ಚಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ,' ಇದೆಲ್ಲವೂ ಮತ್ತು ಇನ್ನೂ ಹೆಚ್ಚಿನವು ಈಗಾಗಲೇ ಅಸ್ತಿತ್ವದಲ್ಲಿದೆ. ಇದು ಒಳ್ಳೆಯದು, ಒಳ್ಳೆಯ ಆಲೋಚನೆ. ನೀವು, ಯಾರು? ಮತ್ತು ನೀವು ಏನು ಮಾಡುತ್ತಿದ್ದೀರಿ? ನಾನು ನಿಮ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತೇನೆ. ನಾವು ಒಟ್ಟಿಗೆ ಕೆಲಸ ಮಾಡಬಹುದೇ ಎಂದು ನೋಡೋಣ. ನೀವು, ಮತ್ತಷ್ಟು ಚಾಟ್ ಮಾಡಲು ಬಯಸಿದರೆ ದಯವಿಟ್ಟು ನನ್ನನ್ನು ಡಿಎಂ ಮಾಡಿ' ಎಂದು ಹೇಳಿದ್ದಾರೆ.


Click it and Unblock the Notifications








