Home
Apps

HDK ಕ್ಯಾಬ್ಸ್ ಬಗ್ಗೆ ಹೊರಬಿತ್ತು ಸಂಪೂರ್ಣ ಮಾಹಿತಿ!! ಆಪ್ ಹೇಗಿದೆ ? ಎಷ್ಟು ಖರ್ಚು? ಬಿಡುಗಡೆ ಯಾವಾಗ?

ಇದೀಗ ಆಪ್ ಅಭಿವೃದ್ದಿಯಾಗಿದ್ದು, ಹೆಸರು ಬದಲಾವಣೆಯೊಂದಿಗೆ HDK ಕ್ಯಾಬ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.!!

By Bhaskar N J

ಕ್ಯಾಬ್ ಚಾಲಕ ಮತ್ತು ಮಾಲಿಕರಿಗೆ ನೆರವಾಗುವ ದೃಷ್ಟಿಯಲ್ಲಿ ಹೆಚ್‌ಡಿ ಕುಮಾರಸ್ವಾಮಿಯವರು "HDK ಕ್ಯಾಬ್" ಆಪ್‌ ಆಧಾರಿತ ಸೇವೆ ಬಿಡುಗಡೆ ಮಾಡುತ್ತಾರೆ ಎನ್ನುವ ಸುದ್ದಿ ಕೆಲವು ದಿನಗಳ ಹಿಂದೆ ಹೊರಬಿದ್ದಿತ್ತು. ಇದೀಗ ಆಪ್ ಅಭಿವೃದ್ದಿಯಾಗಿದ್ದು, ಹೆಸರು ಬದಲಾವಣೆಯೊಂದಿಗೆ HDK ಕ್ಯಾಬ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.!!

ಕಾರು ಚಾಲಕರಿಗೆ ಕೇವಲ 10% ಕಮಿಷನ್‌ನಲ್ಲಿ ಆಪ್‌ ಸೇವೆ, ಚಾಲಕರಿಗೆ 10 ಲಕ್ಷದ ಜೀವ ವಿಮೆ, ಕಾರು ಕೊಳ್ಳಲು ಸಾಲಸೌಲಭ್ಯ ನೀಡುವುದಾಗಿ ಹೇಳಿರುವ HDK ಕ್ಯಾಬ್ ಇದೀಗ ಟ್ರೆಂಡ್ ಸೃಷ್ಟಿಸಿದ್ದು 36 ಕೋಟಿ ವೆಚ್ಚದಲ್ಲಿ "HDK ಕ್ಯಾಬ್" ಬೃಹತ್ ಯೋಜನೆ ರೂಪಿತವಾಗಿದೆ.!!

ಓದಿರಿ: ಏಪ್ರಿಲ್ 15ರ ನಂತರವೂ ಜಿಯೋ ಉಚಿತ ಸೇವೆ ಕೊನೆಯಾಗಿಲ್ಲ ಏಕೆ?

ಈಗಾಗಲೇ 5 ಕೋಟಿ ಹಣವನ್ನು ಕಚೇರಿ ಸ್ಥಾಪನೆಗಾಗಿ ಮೀಸಲಿಡಲಾಗಿದ್ದು, 3 ಕೋಟಿ ವೆಚ್ಚದಲ್ಲಿ ಹೊಸ ಆಪ್ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ. ಹಾಗಾದರೆ, ಉಬರ್ ಮತ್ತು ಓಲಾ ಸಂಸ್ಥೆಗಳಿಗೆ ಪೈಪೋಟಿ ನೀಡಲು HDK ಕ್ಯಾಬ್ ಬೇರೆ ಏನೆಲ್ಲಾ ಸೇವೆಗಳನ್ನು ನೀಡುತ್ತಿದೆ ಎಂದು ಕೆಳಗಿನ ಸ್ಲೈಡರ್‌ಗಲ್ಲಿ ತಿಳಿಯಿರಿ.

ಬದಲಾಗಲಿದೆ HDK ಕ್ಯಾಬ್ ಹೆಸರು.!!

ಬದಲಾಗಲಿದೆ HDK ಕ್ಯಾಬ್ ಹೆಸರು.!!

ಕುಮಾರಸ್ವಾಮಿಯವರ ನೇತೃತ್ವದ ಹೊಸ ಕ್ಯಾಬ್ ಸೇವೆಗೆ "ಹೆಚ್‌ಡಿಕೆ ಕ್ಯಾಬ್" ಎಂದು ಹೆಸರಿಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಕುಮಾರಸ್ವಾಮಿಯವರು ಹೆಚ್‌ಡಿಕೆ ಬದಲಾಗಿ ಬೇರೆ ಹೆಸರು ಇಡಲು ಚಿಂತನೆ ನಡೆಸಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

10 ಸಾವಿರ ಟ್ಯಾಕ್ಸಿಗಳು!!

10 ಸಾವಿರ ಟ್ಯಾಕ್ಸಿಗಳು!!

ಹೆಸರು ಬದಲಾಗಿ ಹೊರಬರುವ ಹೆಚ್‌ಡಿಕೆ ಕ್ಯಾಬ್ ಸೇವೆ ಆರಂಭಕ್ಕೆ ಮೊದಲ ಹಂತದಲ್ಲಿ 10 ಸಾವಿರ ಟ್ಯಾಕ್ಸಿಗಳಿಂದ ಬೆಂಗಳೂರು ನಗರದಲ್ಲಿ ಸೇವೆ ಆರಂಭಗೊಳಿಸಲಾಗುತ್ತಿದೆ.

ಟ್ಯಾಕ್ಸಿಯಲ್ಲೇ ಜಾಹೀರಾತು!!

ಟ್ಯಾಕ್ಸಿಯಲ್ಲೇ ಜಾಹೀರಾತು!!

ಹೆಚ್‌ಡಿಕೆ ಕ್ಯಾಬ್ ಸೇವೆ ಆರಂಭಿಸಿದ ನಂತರ ಬೇರೆ ಮೂಲದ ಆದಾಯಕ್ಕಾಗಿ ಟ್ಯಾಕ್ಸಿಯಲ್ಲೇ ಜಾಹೀರಾತು ಪ್ರದರ್ಶಿಸುವ ಯೋಜನೆಯನ್ನು ಹೆಚ್‌ಡಿಕೆ ಕ್ಯಾಬ್ ಹೊಂದಿರಲಿದೆ. ಇದಕ್ಕಾಗಿ 12 ಕೋಟಿ ಹಣವನ್ನು ವಿನಿಯೋಗಿಸಿ ಕಾರುಗಳಲ್ಲಿ ಎಲ್‌ಸಿಡಿ ಪರದೆಯನ್ನು ಅಳವಡಿಸಲಾಗುತ್ತಿದೆ.

ಹೆಚ್‌ಡಿಕೆ ಕ್ಯಾಬ್ ದರ ನಿಗದಿ.?

ಹೆಚ್‌ಡಿಕೆ ಕ್ಯಾಬ್ ದರ ನಿಗದಿ.?

ಹೆಚ್‌ಡಿಕೆ ಕ್ಯಾಬ್ನಲ್ಲಿ ಪ್ರತಿ ಕಿಲೋಮೀಟರ್‌ಗೆ 10 ರೂ. ಮತ್ತಿ 12 ರೂ. ದರ ನಿಗದಿ ಪಡಿಸಲಾಗಿದೆ. ದರ್ಜಿಯ ಕ್ಯಾಬ್‌ಗಳ ಮೇಲೆ ದರ ನಿಗದಿಯಾಗಲಿದೆ ಎನ್ನಲಾಗಿದೆ. ಇನ್ನು ಮಿನಿಮಮ್ ಚಾರ್ಜ್‌ಗೆ ಇಷ್ಟು ದರ ಎಂಬ ಯಾವುದೇ ಕಂಡೀಷನ್ ಇರುವುದಿಲ್ಲ ಎಂದು ಹೇಳಲಾಗಿದೆ.!!

ಹೆಚ್‌ಡಿಕೆ ಕ್ಯಾಬ್ ಆಪ್ ಬಿಡುಗಡೆ ಯಾವಾಗ?

ಹೆಚ್‌ಡಿಕೆ ಕ್ಯಾಬ್ ಆಪ್ ಬಿಡುಗಡೆ ಯಾವಾಗ?

ಈಗಾಗಲೇ ಸಿದ್ಧಗೊಂಡಿರುವ ಹೊಸ ಆಪ್ ಬಿಡುಗಡೆಯ ದಿನಾಂಕವನ್ನು ಇನ್ನು ಪ್ರಕಟಿಸಿಲ್ಲ. ಆದರೆ, ಕುಮಾರಸ್ವಾಮಿಯವರು ಈ ಬಗ್ಗೆ ಸಭೆ ಏರ್ಪಡಿಸಿ ಅಧಿಕೃತ ಮಾಹಿತಿಯನ್ನು ಕೆಲವೇ ದಿವಸಗಳಲ್ಲಿ ನೀಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.!!

Best Mobiles in India

English summary
Bengaluru could see the new cab aggregator, HDK Cabs . to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+