Home
Apps

PUBG ಗೇಮರ್‌ಗಳಿಗೆ ಬಂಪರ್ ಲಕ್: ಈ ಟಾಸ್ಕ್ ಗೆದ್ದವರಿಗೆ 50 ಲಕ್ಷ...!

By Srinidhi

ಜಾಗತಿಕ ಮೊಬೈಲ್ ಗೇಮಿಂಗ್ ವಿಭಾಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ PUBG ಗೇಮ್ ಇಂದು ಭಾರತದಲ್ಲಿಯೂ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದೆ. ವಯಸ್ಸಿನ ಇತಿ-ಮಿತಿ ಇಲ್ಲದೇ ಎಲ್ಲರೂ ಈ ಗೇಮ್ ಆಡುವುದನ್ನು ಕಾಣಬಹುದಾಗಿದೆ. ಅಲ್ಲದೇ ಕಾಲೇಜು ವಿದ್ಯಾರ್ಥಿಗಳು ತಮ್ಮದೆ ಸ್ನೇಹಿತರ ಗುಂಪು ಕಟ್ಟಿಕೊಂಡು ಗೇಮ್ ಆಡುವುದನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ PUBG ಗೇಮ್ ಇನ್ನಷ್ಟು ಖ್ಯಾತಿಯನ್ನು ಪಡೆದುಕೊಳ್ಳುವ ಸಲುವಾಗಿ ಹೊಸದೊಂದು ಕಾಟೆಸ್ಟ್ ಅನ್ನು ನಡೆಸಲು ಮುಂದಾಗಿದೆ.

PUBG ಗೇಮರ್‌ಗಳಿಗೆ ಬಂಪರ್ ಲಕ್: ಈ ಟಾಸ್ಕ್ ಗೆದ್ದವರಿಗೆ 50 ಲಕ್ಷ...!

PUBG ಗೇಮ್ ನಿರ್ಮಾಣ ಮಾಡಿರುವ 'ಟೆನ್ಸೆಟ್ ಗೇಮ್ಸ್' ವಿಶ್ವದ ಅತೀ ದೊಡ್ಡ ಗೇಮಿಂಗ್ ಕಂಪನಿ ಎನ್ನಿಸಿಕೊಂಡಿದ್ದು, ಇದು ಭಾರತದಲ್ಲಿಯೇ ಅತೀ ದೊಡ್ಡ ಇ ಸ್ಟೋಡ್ಸ್ ಚಾಂಪಿಯನ್‌ಶಿಪ್ ಅನ್ನು ಆಯೋಜನೆ ಮಾಡಿದೆ. 'PUBG ಮೊಬೈಲ್ ಕಾಂಪನ್ ಚಾಂಪಿಯನ್ಸ್ ಶಿಪ್ 2018 ಆಯೋಜನೆ ಮಾಡಿದ್ದು, ವಿದ್ಯಾರ್ಥಿಗಳಿಗೆ ರೂ.5000000 ಗೆಲ್ಲುವ ಅವಕಾಶವನ್ನು ಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ನೀವು ಹೇಗೆ PUBG ಗೇಮ್ ನಲ್ಲಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಗೆಲ್ಲುವುದು ಎನ್ನುವುದನ್ನು ತಿಳಿಸಿಕೊಡುವ ಪ್ರಯತ್ನವು ಇದಾಗಿದೆ.

ಒಪ್ಪೋ ನೊಂದಿಗೆ:

ಒಪ್ಪೋ ನೊಂದಿಗೆ:

ಟೆನ್ಸೆಟ್ ಗೇಮ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ ವಿಭಾಗದಲ್ಲಿ ಸದ್ದು ಮಾಡುತ್ತಿರುವ ಒಪ್ಪೋದೊಂದಿಗೆ ಕೈ ಜೋಡಿಸಿದ್ದು, ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 21ರ ವರೆಗೂ PUBG ಮೊಬೈಲ್ ಕಾಂಪಸ್ ಚಾಂಪಿಯನ್ಸ್ ಶಿಪ್ 2018 ಆಯೋಜನೆ ಮಾಡಿದೆ. ಇದರಲ್ಲಿ ಕೇವಲ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರವೇ ಆಡುವ ಅವಕಾಶವನ್ನು ಮಾಡಿಕೊಡಲಾಗಿದೆ.

1000 ಕಾಲೇಜ್‌ಗಳು:

1000 ಕಾಲೇಜ್‌ಗಳು:

ದೇಶದಲ್ಲಿರುವ 30ಕ್ಕೂ ಹೆಚ್ಚು ನಗರಗಳಲ್ಲಿನ 1000ಕ್ಕೂ ಅಧಿಕ ಕಾಲೇಜ್‌ಗಳಲ್ಲಿ PUBG ಮೊಬೈಲ್ ಕಾಂಪಸ್ ಚಾಂಪಿಯನ್ಸ್ ಶಿಪ್ 2018 ನಡೆಯಲಿದ್ದು, ಇದರಲ್ಲಿ ಗೆದ್ದವರಿಗೆ ರೂ.5000000 ಬಹುಮಾನ ದೊರೆಯಲಿದೆ. ಈ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ ಎನ್ನಲಾಗಿದೆ.

ಹೇಗೆ ನಡೆಯಲಿದೆ:

ಹೇಗೆ ನಡೆಯಲಿದೆ:

ನಾಲ್ಕು ಜನರ ತಂಡವೊಂದನ್ನು ಒಂದನ್ನು ರಚಿಸಿಕೊಳ್ಳಬೇಕಾಗಿದೆ. ನಾಲ್ಕು ಹಂತದ ನಾಕೌಟ್ ಹಂತಗಳು ಇರಲಿದ್ದು, ಸೆಮಿಫೈನಲ್ಸ್ ಸಹ ನಡೆಯಲಿದೆ. ಫೈನಲ್‌ ನಲ್ಲಿ ಒಟ್ಟು 20 ಟೀಮ್‌ಗಳು ಕಾಣಿಸಿಕೊಳ್ಳಲಿದೆ. ಕೊನೆಯದಾಗಿ 20 ಟೀಮ್‌ಗಳು ಫೈನಲ್ ಪಂದ್ಯದಲ್ಲಿ ಕಾಣಿಸಿಕೊಳ್ಳಲಿವೆ.

ರಿಜಿಸ್ಟ್ರೇಷನ್ ಹೇಗೆ..?

ರಿಜಿಸ್ಟ್ರೇಷನ್ ಹೇಗೆ..?

PUBG ಮೊಬೈಲ್ ಕಾಂಪಸ್ ಚಾಂಪಿಯನ್ಸ್ ಶಿಪ್ 2018ನಲ್ಲಿ ಭಾಗವಹಿಸಲು ಬಯಸುವವರು www.pubgmobile.in ನಲ್ಲಿ ರಿಜಿಸ್ಟರ್ ಆಗಬೇಕಾಗಿದೆ. ಸೆಪ್ಟೆಂಬರ್ 7 ರಿಂದ 23ನೇ ತಾರೀಕಿನ ವರೆಗೆ ರಿಜಿಸ್ಟರ್ ಆಗಲು ಅವಕಾಶವನ್ನು ಮಾಡಿಕೊಡಲಾಗಿದೆ.

 PUBG ಗೇಮ್

PUBG ಗೇಮ್

ಇದಲ್ಲದೇ PUBG ಗೇಮ್ ಆಡುವುದು ಹೇಗೆ, ಇದರ ಟಿಪ್ಸ್ ಗಳನ್ನು ಕುರಿತಾದ ವಿಡಿಯೋಗಳು ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಸಾಕಷ್ಟು ವೈರಲ್ ಆಗುತ್ತಿರುವುದು ಈ ಗೇಮ್ ಜನಪ್ರಿಯತೆಗೆ ಉದಾಹರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಒಮ್ಮೆ ಈ ಗೇಮ್ ಅನ್ನು ಆಡಿದರೆ ಖಂಡಿತವಾಗಿಯೂ ಇದು ಇಷ್ಟವಾಗಲಿದೆ. ಇದು ಬಳಕೆದಾರರಿಗೆ ಹೊಸ ಅನುಭವನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

100 ಮಿಲಿಯನ್

100 ಮಿಲಿಯನ್

PUBG ಗೇಮ್ ಡೌನ್‌ಲೋಡ್ ಮಾಡಿರುವವರ ಸಂಖ್ಯೆಯೂ 100 ಮಿಲಿಯನ್ ದಾಟಿದೆ. ಈಗಾಗಲೇ ಬಳಕೆದಾರರಿಗೆ ಸಾಕಷ್ಟು ಹೊಸ ಅನುಭವನ್ನು ನೀಡುತ್ತಿರುವ ಕಾರಣದಿಂದಾಗಿ ಇನ್ನು ಡೌನ್‌ಲೋಡ್ ಮಾಡುವವರ ಸಂಖ್ಯೆಯೂ ಅಧಿಕವಾಗುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನೀವು ಒಮ್ಮೆ ಬಳಸಿ ನೋಡಿ.

ಆಂಡ್ರಾಯ್ಡ್ ಮತ್ತು iOS

ಆಂಡ್ರಾಯ್ಡ್ ಮತ್ತು iOS

ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ PUBG ಗೇಮ್ ಬಳಕೆಗೆ ಮುಕ್ತವಾಗಿಗಿದೆ. ವಿಶ್ವದಲ್ಲಿ ಬಳಕೆಯಾಗುತ್ತಿರುವ ಎಲ್ಲಾ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ PUBG ಗೇಮ್ ಅನ್ನು ಅಡಬಹುದಾಗಿದೆ.

ಯುದ್ದದ ತಂತ್ರ

ಯುದ್ದದ ತಂತ್ರ

ಚೀನಾದಲ್ಲಿ ಮತ್ತು ಭಾರತದಲ್ಲಿಯೇ ಹೆಚ್ಚಿನ ಮಂದಿ PUBG ಗೇಮ್ ಬಳಕೆದಾರರನ್ನು ನೋಡಬಹುದಾಗಿದೆ. ಒಂದು ಮಾದರಿಯಲ್ಲಿ ಯುದ್ದದ ತಂತ್ರಗಳನ್ನು ಹೊಂದಿರುವ ಗೇಮ್ ಗ್ರಾಫಿಕ್ಸ್ ನಿಂದಲೂ ಸದ್ದು ಮಾಡುತ್ತಿದೆ.

Best Mobiles in India

English summary
Gamers alert! PUBG MOBILE Campus Championship 2018 announced with Rs 50,00,000 prize pool. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+