Home
Apps

ನಿಮ್ಮ ಇಂಗ್ಲಿಷ್ ಗ್ರಾಮರ್ ತಪ್ಪಾಗುವ ಭಯವೇ?..ಇಲ್ಲಿದೆ ಪರಿಹಾರ!

ಇಂಗ್ಲಿಷ್ ಭಾಷೆ ಬಳಕೆಯಲ್ಲಿ ಬಹುತೇಕರಿಗೆ ಕಾಣಿಸುವ ಅತಿದೊಡ್ಡ ತೊಂದರೆ ಎಂದರೆ ಇಂಗ್ಲಿಷ್ ಗ್ರಾಮರ್. ಇಂಗ್ಲಿಷ್ ಗೊತ್ತು ಆದರೆ ಗ್ರಾಮರ್ ಸಮಸ್ಯೆ. ಎಲ್ಲಿ ಯಾವ ಪದವನ್ನು ಹೇಗೆ ಬಳಸಬೇಕೆಂಬ ಗೊಂದಲ. ಆದರೆ, ಚಿಂತಿಸಬೇಡಿ. ನಿಮ್ಮ ಇಂಗ್ಲಿಷ್ ಬರಹಗಳಲ್ಲಿರುವ ತಪ್ಪಾದ ಗ್ರಾಮರ್ ಅಥವಾ ಪದಗಳನ್ನು ಪತ್ತೆ ಮಾಡಿ ಅದನ್ನು ಸರಿಪಡಿಸುವ ಸಲುವಾಗಿ ಆಯ್ಕೆಗಳಿವೆ.

ನಿಮ್ಮ ಇಂಗ್ಲಿಷ್ ಗ್ರಾಮರ್ ತಪ್ಪಾಗುವ ಭಯವೇ?..ಇಲ್ಲಿದೆ ಪರಿಹಾರ!

ನೀವು ಬಳಸುವ ಕ್ರೋಮ್, ಸಫಾರಿ ಅಥವಾ ಫೈರ್‌ಫಾಕ್ಸ್ ಬ್ರೌಸರ್‌ಗಳಿಗೆ extension ಆಗಿ https://www.grammarly.com/ ಸೇವೆಯನ್ನು ಬಳಸಿಕೊಂಡರೆ ನಿಮ್ಮ ಇಂಗ್ಲೀಷ್ ಬರಹವನ್ನು ಅದು ಸಂಪೂರ್ಣವಾಗಿ ಚೆಕ್ ಮಾಡಲಿದೆ. ನಿಮ್ಮ ಬರಹದಲ್ಲಿ ಎಷ್ಟು ತಪ್ಪುಗಳಿವೆ ಎಂಬುದನ್ನು ಪತ್ತೆ ಹಚ್ಚಿ ಸರಿಯಾದ ಪದವನ್ನು ಸೇರಿಸುವಂತೆ ಸಂಪೂರ್ಣ ಸಲಹೆ ನೀಡುತ್ತದೆ.

grammarly ಎಂದು ಸರ್ಚ್ ಮಾಡಿ, ಅಥವಾ https://www.grammarly.com/ ಬ್ರೌಸರ್ ಕ್ಲಿಕ್ ಮಾಡಿ. ನಂತರ grammarly ವೆಬ್ ಪುಟ ತೆರೆದುಕೊಂಡಾದ ಅಲ್ಲಿ Add to Chrome ಎಂದಿರುತ್ತದೆ. ಅದನ್ನು ಕ್ಲಿಕ್ ಮಾಡಿದರೆ ನಿಮ್ಮ ಬ್ರೌಸರ್ extension ಆಗಿ grammarly ಸೇರಿಕೊಳ್ಳುತ್ತದೆ. ತದನಂತರ ನಿಮ್ಮ ಗ್ರಾಮರ್ ಅನ್ನು ಸರಿಪಡಿಸಿಕೊಳ್ಳಲು ಮುಂದಾಗಿ.

ನಿಮ್ಮ ಇಂಗ್ಲಿಷ್ ಗ್ರಾಮರ್ ತಪ್ಪಾಗುವ ಭಯವೇ?..ಇಲ್ಲಿದೆ ಪರಿಹಾರ!

https://app.grammarly.com/ ಲಾಗಿನ್ ಆದ ಕೂಡಲೇ ಅಲ್ಲಿ New ಕ್ಲಿಕ್ ಮಾಡಿ. ಅಲ್ಲಿ ನೀವು ಬರೆದ ಬರಹವನ್ನು ಸುಮ್ಮನೆ ಪೇಸ್ಟ್ ಮಾಡಬಹುದು. ಇಲ್ಲವೇ ನೇರವಾಗಿ ಟೈಪ್ ಮಾಡಬಹುದು. ನೀವು ಟೈಪ್ ಮಾಡುತ್ತಿದ್ದಂತೆ ನಿಮ್ಮ ಬರಹದಲ್ಲಿ ಎಷ್ಟು ತಪ್ಪುಗಳಿವೆ ಎಂಬುದನ್ನು ಪತ್ತೆ ಹಚ್ಚಿ ಸರಿಯಾದ ಪದವನ್ನು ಸೇರಿಸುವಂತೆ grammarly ಸಲಹೆ ನೀಡುತ್ತದೆ.

ಓದಿರಿ: ಇಷ್ಟು ವರ್ಷ ಕಂಪ್ಯೂಟರ್ ಯೂಸ್ ಮಾಡಿದ್ರೂ ಕೀಬೋರ್ಡ್‌ನಲ್ಲಿನ ಈ 12 ಕೀಗಳ ಬಗ್ಗೆ ಗೊತ್ತಿಲ್ಲಾ?!

ನಿಮ್ಮ ಬರಹವನ್ನು ಕಾಪಿ ಪೇಸ್ಟ್ ಮಾಡುವ/ ಟೈಪಿಸುವ ಬದಲು ಡಾಕ್ಯುಮೆಂಟ್ ಫೈಲ್ ಅಪ್‌ಲೋಡ್ ಮಾಡುವ ಮೂಲಕ ಅದರ ಗ್ರಾಮರ್ ಚೆಕ್ ಮಾಡಿ ಸರಿ ಪಡಿಸಬಹುದು.ಗ್ರಾಮರ್ ಸರಿಪಡಿಸಿದ ನಂತರ ಬರಹವನ್ನು ಡೌನ್‌ಲೋಡ್ ಮಾಡಬಹುದು. ಅಗತ್ಯವಿದ್ದರೆ ಪ್ರಿಂಟ್ ಕೂಡಾ ತೆಗೆಯಬಹುದು. ಇದರಿಂದ ನಿಮ್ಮ ಇಂಗ್ಲೀಷ್ ಬರಹದಲ್ಲಿ ತಪ್ಪಿನ ಅರಿವು ನಿಮಗಾಗುತ್ತದೆ.

Best Mobiles in India

English summary
Grammarly launched an update that works seamlessly on chrome extensions, mobile, and desktop applications. Earlier, Grammarly was all about correcting. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+