ಗ್ಲೀಡೆನ್ ಡೇಟಿಂಗ್ ಆಪ್ ಬಳಸುತ್ತಿದ್ದಾರೆ 8 ಲಕ್ಷ ಭಾರತೀಯರು..! ಬಳಕೆಯಲ್ಲಿ ಬೆಂಗಳೂರಿಗರೇ ಹೆಚ್ಚು..!
ಎಂಟು ಲಕ್ಷ ವಿವಾಹಿತ ಭಾರತೀಯ ಪುರುಷರು ಮತ್ತು ಮಹಿಳೆಯರು ವಿವಾಹೇತರ ಡೇಟಿಂಗ್ ಆಪ್ ಗ್ಲೀಡೆನ್‌ನಲ್ಲಿ ನೊಂದಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅದರಲ್ಲೂ ಟೆಕ್ ಹಬ್ ಬೆಂಗಳೂರಿನಿಂದಲೇ ಹೆಚ್ಚಿನ ಜನ ಈ ಡೇಟಿಂಗ್ ಆಪ್‌ಗೆ ರಿಜಿಸ್ಟರ್ ಆಗಿದ್ದಾರೆ. ಸಾವಿರಾರು ಭಾರತೀಯರ ಹೊಸ ವರ್ಷದ ರೆಸಲೂಶನ್ ದಾಂಪತ್ಯಕ್ಕೆ ದ್ರೋಹ ಎಸಗುವುದು ಅಥವಾ ಫ್ಲರ್ಟ್ ಮಾಡುವುದೇ ಆಗಿದೆ ಎಂದುಬದಕ್ಕೆ ಗ್ಲೀಡೆನ್ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತಿದೆ.

ಜನವರಿ ಮೊದಲ ವಾರದಲ್ಲಿ ದಂಪತಿಗಳು ತಮ್ಮ ಕೆಲಸವನ್ನು ಪುನರಾರಂಭಿಸಿದಾಗ ಮತ್ತು ಮಕ್ಕಳ ಚಳಿಗಾಲದ ರಜಾದಿನಗಳು ಕೊನೆಗೊಂಡ ಸಂದರ್ಭದಲ್ಲಿ ಆಪ್‌ನ ದಟ್ಟಣೆಯಲ್ಲಿ ಭಾರೀ ಪ್ರಮಾಣದ ಹೆಚ್ಚಳವಾಗಿದೆ.

2019ರ ನವೆಂಬರ್‌ನಲ್ಲಿ ಗ್ಲೀಡೆನ್‌ನಲ್ಲಿ ಹೆಚ್ಚಿನ ಸಂಖ್ಯೆಯ ಪುರುಷರು ರಿಜಿಸ್ಟರ್ ಆಗಿದ್ದು, ಬೆಂಗಳೂರು, ಮುಂಬೈ, ಕೋಲ್ಕತಾ, ದೆಹಲಿ, ಪುಣೆ, ನವದೆಹಲಿ, ಹೈದರಾಬಾದ್, ಚೆನ್ನೈ, ಗುರಗಾಂವ್, ಅಹಮದಾಬಾದ್, ಜೈಪುರ, ಚಂಡೀಗರ್, ಲಕ್ನೋ, ಕೊಚ್ಚಿ, ನೋಯ್ಡಾ, ವಿಶಾಖಪಟ್ಟಣಂ, ನಾಗ್ಪುರ, ಸೂರತ್, ಇಂದೋರ್ ಮತ್ತು ಭುವನೇಶ್ವರದಿಂದ ಹೆಚ್ಚಿನ ಸಂಖ್ಯೆಯ ಪುರುಷರು ಗ್ಲೀಡೆನ್‌ನಲ್ಲಿ ನೋಂದಾಯಿಸಿಕೊಂಡಿದ್ದರು.

ಇನ್ನು, ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ನವದೆಹಲಿ, ಪುಣೆ, ಹೈದರಾಬಾದ್, ಚೆನ್ನೈ, ಗುರಗಾಂವ್, ಚಂಡೀಗರ್, ಅಹಮದಾಬಾದ್, ಜೈಪುರ, ಕೊಚ್ಚಿ, ನೋಯ್ಡಾ, ಲಕ್ನೋ, ಇಂದೋರ್, ಸೂರತ್, ಗುವಾಹಟಿ, ನಾಗ್ಪುರ, ಮತ್ತು ಭೋಪಾಲ್‌ನಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಿಜಿಸ್ಟರ್ ಆಗಿದ್ರು.

ಶೇ.567ಕ್ಕಿಂತ ಹೆಚ್ಚಿನ ಬೆಳವಣಿಗೆ ದರ ವಿವಾಹ ಸಂಬಂಧದಿಂದ ಹೊರತಾಗಿ ಮ್ಯಾಚಿಂಗ್ ಹುಡುಕುತ್ತಿರುವ ವ್ಯಕ್ತಿಗಳಲ್ಲಿ ವಿವಾಹೇತರ ಡೇಟಿಂಗ್ ಅಪ್ಲಿಕೇಶನ್‌ನ ಹೆಚ್ಚುತ್ತಿರುವ ಜನಪ್ರಿಯತೆಯನ್ನು ತೋರಿಸುತ್ತದೆ ಎಂದು ಫ್ರೆಂಚ್ ಆನ್‌ಲೈನ್ ಡೇಟಿಂಗ್ ಸಮುದಾಯ ವೇದಿಕೆ ತಿಳಿಸಿದೆ. ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಬಳಕೆದಾರರ ಈ ಹಠಾತ್ ಬೆಳವಣಿಗೆ ಹೊಸ ವರ್ಷದ ವಿಪರೀತ ಫಲಿತಾಂಶವಾಗಿದೆ, ಹೊಸ ವರ್ಷದ ನಂತರವೇ ಈ ಚಂದಾದಾರಿಕೆಗಳಲ್ಲಿ ಭಾರಿ ಏರಿಕೆಯನ್ನು ಕಂಡಿದೆ.

ಗ್ಲೀಡೆನ್‌ರ ದೈನಂದಿನ ಚಂದಾದಾರಿಕೆಗಳು
ಹಿಂದಿನ ಎರಡು ವಾರಗಳಿಗೆ ಹೋಲಿಸಿದರೆ 2020 ರ ಜನವರಿ ಮೊದಲ ವಾರದಲ್ಲಿ, ಗ್ಲೀಡೆನ್‌ರ ದೈನಂದಿನ ಚಂದಾದಾರಿಕೆಗಳು ಶೇ.300ಕ್ಕಿಂತ ಹೆಚ್ಚಾಗಿದೆ. ಇದಲ್ಲದೆ, ಜನವರಿ 2020ರ ಮೊದಲ ವಾರದಲ್ಲಿ ಹೊಸ ಚಂದಾದಾರಿಕೆಗಳ ಸಂಖ್ಯೆ ಇಡೀ ತಿಂಗಳ ಶೇ.250ಕ್ಕಿಂತ ಹೆಚ್ಚಾಗಿದೆ. ಇದೇ ಪ್ರವೃತ್ತಿಯನ್ನು 2019ರ ಜನವರಿಯಲ್ಲಿ ಅನುಸರಿಸಲಾಗಿದ್ದು, ಮೊದಲ ವಾರದಲ್ಲಿ ಗ್ಲೀಡೆನ್ ದೈನಂದಿನ ಚಂದಾದಾರಿಕೆಗಳು ಹಿಂದಿನ ಎರಡು ವಾರಗಳಿಗೆ ಹೋಲಿಸಿದರೆ ಶೇ.295ರಷ್ಟು ಹೆಚ್ಚಾಗಿತ್ತು. 2019ರ ಜನವರಿ ಮೊದಲ ವಾರದಲ್ಲಿ ಹೊಸ ಚಂದಾದಾರಿಕೆಗಳ ಸಂಖ್ಯೆ ಇಡೀ ತಿಂಗಳ ಶೇ.245ರಷ್ಟಿತ್ತು.


Click it and Unblock the Notifications