ಇಮೇಲ್‌ಗಳಿಗೆ ಇನ್ಮುಂದೆ ದೊರೆಯಲಿದೆ ಪಾಸ್‌ವರ್ಡ್ ಭದ್ರತೆ
ಯಾರಿಗೋ ಒಂದು ಇಮೇಲ್ ನ ಭದ್ರತೆಯಿಂದ ಕಳಿಸಬೇಕು ಎಂದರೆ ಪಾಸ್ ವರ್ಡ್ ಹಾಕುವ ಅವಕಾಶವಿದ್ದಿದ್ದರೆ ಎಂದು ಇಷ್ಟು ದಿನ ಯೋಚಿಸುತ್ತಿದ್ದವರಿಗೆ ಜಿಮೇಲ್ ಒಂದು ಸಿಹಿ ಸುದ್ದಿಯನ್ನು ನೀಡಿದೆ. ಹೌದು ಹೊಸ ವೈಶಿಷ್ಟ್ಯತೆಯೊಂದು ಜಿಮೇಲ್ ಗೆ ಸೇರ್ಪಡೆಯಾಗಿದೆ. ಅದುವೇ ಕಾನ್ಫಿಡೆನ್ಶಿಯಲ್ ಮೋಡ್. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ ಮುಂದೆ ಓದಿ.
ನಿಮ್ಮ ಸೂಕ್ಷ್ಮ ಡಾಟಾವನ್ನು ಸುರಕ್ಷಿತವಾಗಿ ರವಾನೆ ಮಾಡಲು ಮತ್ತಷ್ಟು ಭದ್ರತೆಯ ಅಗತ್ಯವಿದೆ ಎಂಬುದು ಗೂಗಲ್ ಗೂ ತಿಳಿದಿದೆ. ಹಾಗಾಗಿ ಕಂಪೆನಿಯು ತನ್ನ I/O ಕಾನ್ಫರೆನ್ಸ್ ನಲ್ಲಿ ಹೊಸ ಕಾನ್ಫಿಡೆನ್ಶಿಯಲ್ ಮೋಡ್ ಬಿಡುಗಡೆಯ ಬಗ್ಗೆ ಬಳಕೆದಾರರಿಗೆ ತಿಳಿಸಿದೆ. ಜಿಮೇಲ್ ಅಧಿಕೃತ ಪೇಜ್ ನ ಅನುಸಾರ ಈ ವೈಶಿಷ್ಟ್ಯವು ಮೊಬೈಲ್ ನಲ್ಲ ಜಿಮೇಲ್ ಬಳಸುವವರಿಗೂ ಲಭ್ಯವಿದೆ. ಈ ವೈಶಿಷ್ಟ್ಯವು ಬಹಳವಾಗಿ ಬಳಕೆದಾರರಿಗೆ ಅನುಕೂಲವಾಗಲಿದೆ.

ಒಂದು ವೇಳೆ ನೀವು ನಿಮ್ಮ ಕೆವೈಸಿ ಡೀಟೇಲ್ಸ್ ನ್ನು ಯಾರೊಂದಿಗೋ ಹಂಚಿಕೊಳ್ಳಬೇಕಾಗಿರುವ ಸಂದರ್ಬದಲ್ಲಿ, ನಿಮ್ಮ ಗೂಗಲ್ ಕಾನ್ಫಿಡೆನ್ಶಿಯಲ್ ಮೋಡ್ ಆಕ್ಟಿವೇಟ್ ಆಗಿದ್ದರೆ ಆ ಇಮೇಲ್ ಗೆ ನೀವು ಎಕ್ಸ್ ಪೈರಿ ಡೇಟ್ ಕೂಡ ಸೆಟ್ ಮಾಡಬಹುದು. ಎಕ್ಸ್ ಪೈರಿ ಡೇಟ್ ಆದ ಕೂಡಲೇ ಮೇಲ್ ರಿಸೀವ್ ಮಾಡಿದವರ ಇನ್ ಬಾಕ್ಸ್ ನಿಂದ ಅದು ಡಿಲೀಟ್ ಆಗುತ್ತದೆ. ಇದು ನೀವು ಮೆಸೇಜ್ ಕಳಿಸಿದವರು ಆ ಮೆಸೇಜನ್ನು ಫಾರ್ವರ್ಡ್ ಮಾಡಲು, ಡೌನ್ ಲೋಡ್ ಮಾಡಲು ಅಥವಾ ಕಾಪಿ ಮಾಡಲು ಅವಕಾಶ ನೀಡುವುದಿಲ್ಲ. ಈ ರೀತಿ ನೀವು ಸೆನ್ಸಿಟೀವ್ ಮಾಹಿತಿಗಳನ್ನು ಪ್ರೊಟೆಕ್ಟ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಕಾನ್ಫಿಡೆನ್ಶಿಯಲ್ ಮೋಡ್ ನಿಂದಾಗಿ ನೀವು ನಿಮ್ಮ ಮೇಲ್ ನ್ನು ಪಾಸ್ ವರ್ಡ್ ಪ್ರೊಟೆಕ್ಟ್ ಕೂಡ ಮಾಡಬಹುದು.ಇದು ನಿಮ್ಮ ಇಮೇಲ್ ಗೆ ಹೆಚ್ಚವರಿ ಭದ್ರತೆಯನ್ನು ನೀಡುತ್ತದೆ. ನೀವು ಕಳಿಸುವ ಇಮೇಲ್ ಗೆ ಪಾಸ್ ವರ್ಡ್ ಹಾಕಿದರೆ ಅದನ್ನು ಪಾಸ್ ವರ್ಡ್ ಇರುವ ವ್ಯಕ್ತಿ ಮಾತ್ರ ತೆರೆಯಲು ಸಾಧ್ಯವಾಗುತ್ತದೆ.
ಸೈಬರ್ ಕ್ರೈಮ್ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಈ ಸೌಲಭ್ಯವು ಬಹಳ ಪ್ರಸ್ತುತವಾಗಿದೆ. ಹಾಗಂತ ಈ ಮೋಡ್ ನಿಂದ ಸಂಪೂರ್ಣ ಭದ್ರತೆ ಸಿಗುತ್ತದೆ ಎಂದಲ್ಲ. ಆದರೆ ಒಂದು ಮಟ್ಟದವರೆಗಿನ ಭದ್ರತೆಗೆ ಕೊರತೆ ಇಲ್ಲ ಎಂದಷ್ಟೇ ಹೇಳಬಹುದು. ಈ ಮೋಡ್ ಶೇರ್ ಮಾಡುವುದು, ಕಾಪಿ ಮಾಡುವುದನ್ನು ತಪ್ಪಿಸುತ್ತದೆ ಆದರೆ ಸ್ಕ್ರೀನ್ ತೆಗೆಯುವುದಕ್ಕೆ ಯಾವುದೇ ಸೆಕ್ಯುರಿಟಿ ಇರುವುದಿಲ್ಲ. ಅಥವಾ ಪೋಟೋ ಕ್ಲಿಕ್ಕಿಸಿಕೊಳ್ಳುವುದಕ್ಕೂ ಯಾವುದೇ ಸಮಸ್ಯೆ ಇಲ್ಲ.

ಈ ಕಾನ್ಫಿಡೆನ್ಶಿಯಲ್ ಮೋಡ್ ಹೊಸ ಜಿಮೇಲ್ ನಲ್ಲಿ ಲಭ್ಯವಿದೆ. ಆದರೆ ಕ್ಲಾಸಿಕ್ ಜಿಮೇಲ್ ನಲ್ಲಿ ಅಲ್ಲ. ಜಿಮೇಲ್ ನ ಕಾನ್ಫಿಡೆನ್ಶಿಯಲ್ ಮೋಡ್ ನ್ನು ಅನೇಬಲ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ :
-- ಜಿಮೇಲ್ ಗೆ ತೆರಳಿ
-- ಕಂಪೋಸ್ ನ್ನು ಕ್ಲಿಕ್ಕಿಸಿ.
-- ಪರದೆಯ ಕೆಳ ಬಲಭಾಗದಲ್ಲಿ ಕಾನ್ಫಿಡೆನ್ಶಿಯಲ್ ಮೋಡ್ ಟರ್ನ್ ಆನ್ ಎಂದಿರುತ್ತದೆ ಅದನ್ನು ಕ್ಲಿಕ್ಕಿಸಿ, ಒಂದು ವೇಳೆ ನೀವು ಈಗಾಗಲೇ ಆನ್ ಮಾಡಿದ್ದಲ್ಲಿ, ಇಮೇಲ್ ನ ಕೆಳಭಾಗಕ್ಕೆ ತೆರಳಿ ಮತ್ತು ಎಡಿಟ್ ಕ್ಲಿಕ್ಕಿಸಿ.
-- ಪಾಸ್ ಕೋಡ್ ಮತ್ತು ಎಕ್ಸ್ ಪೈರಿ ದಿನಾಂಕವನ್ನು ಸೆಟ್ ಮಾಡಿ. ಈ ಸೆಟ್ಟಿಂಗ್ ನಿಮ್ಮ ಮೆಸೇಜಿನ ಟೆಕ್ಸ್ಟ್ ಮತ್ತು ಅಟ್ಯಾಚ್ ಮೆಂಟ್ ಎರಡರ ಮೇಲೂ ಪರಿಣಾಮ ಬೀರುತ್ತದೆ.
-- ಒಂದು ವೇಳೆ ನೀವು "No SMS passcode," ಎಂದು ಆಯ್ಕೆ ಮಾಡಿದ್ದಲ್ಲಿ ಮೆಸೇಜ್ ರಿಸೀವ್ ಮಾಡಿದವರು ಕೂಡಲೇ ಮೇಲ್ ನ್ನು ತೆರೆಯಲು ಸಾಧ್ಯವಾಗುತ್ತದೆ.
-- ಒಂದು ವೇಳೆ ನೀವು "SMS passcode," ಆಯ್ಕೆ ಮಾಡಿದ್ದರೆ ಮೇಸೇಜ್ ರಿಸೀವ್ ಮಾಡಿದವರಿಗೆ ಅವರ ಮೊಬೈಲಿಗೆ ಒಂದು ಟೆಕ್ಸ್ಟ್ ಮೆಸೇಜ್ ರವಾನೆಯಾಗುತ್ತದೆ. ಅದಕ್ಕಾಗಿ ನೀವು ಯಾರಿಗೆ ಮೆಸೇಜ್ ಕಳುಹಿಸುತ್ತಿದ್ದೀರೋ ಅವರ ಫೋನ್ ನಂಬರ್ ನ್ನು ಅಲ್ಲಿ ಬರೆಯಬೇಕಾಗುತ್ತದೆ.
-- ಸೇವ್ ನ್ನು ಕ್ಲಿಕ್ಕಿಸಿ.
ಜಿಮೇಲ್ ಎಕ್ಸ್ ಪೈರಿ ಡೇಟ್ ಗೂ ಮುನ್ನ ಇಮೇಲ್ ತೆರೆಯುವುದನ್ನು ಕೂಡ ತಡೆಯಲು ಅವಕಾಶ ನೀಡುತ್ತದೆ. ಅದಕ್ಕಾಗಿ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.
-- ಜಿಮೇಲ್ ಗೆ ತೆರಳಿ.
-- ಎಡಭಾಗದಲ್ಲಿರುವ ಸೆಂಟ್ ನ್ನು ಕ್ಲಿಕ್ಕಿಸಿ
-- ಕಾನ್ಫಿಡೆನ್ಶಿಯಲ್ ಇಮೇಲ್ ನ್ನು ತೆರೆಯಿರಿ.
-- ಕ್ಲಿಕ್ ರಿಮೂಲ್ ಆಕ್ಸಿಸ್.


Click it and Unblock the Notifications




