ನಿಮ್ಮ ರೋಡ್‌ ಟ್ರಿಪ್‌ ಅತ್ಯಂತ ಸುಖಕರ, ಸ್ಮರಣೀಯವಾಗಿಸಲು ಜೊತೆಗಿರಲಿ ಈ ಆಪ್‌ಗಳು..!

By Gizbot Bureau
|

ನೀವು ಟ್ರಾವೆಲ್‌, ಅಲೆದಾಟ, ಪಯಣವನ್ನು ಇಷ್ಟಪಡುವರಾಗಿದ್ದು, ರಸ್ತೆ ಮೂಲಕ ಟ್ರಿಪ್‌ ಹೋಗುತ್ತಿರೆಂದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೆಲವೊಂದು ಆಪ್‌ಗಳು ಇರಲೇಬೇಕು. ಅವು ನಿಮ್ಮನ್ನು ಸರಿದಾರಿಯಲ್ಲಿ ಕರೆದುಕೊಂಡು ಹೋಗಿ ನೀವು ತಲುಪಬೇಕಾಗಿರುವ ಸ್ಥಳವನ್ನು ತಲುಪಿಸುತ್ತವೆ. ರೋಡ್‌ ಟ್ರಿಪ್‌ಗಾಗಿಯೇ ಪ್ಲೇಸ್ಟೋರ್‌ನಲ್ಲಿ ಅಸಂಖ್ಯಾತ ಆಪ್‌ಗಳಿವೆ. ಅದರಲ್ಲಿ ಅತ್ಯಂತ ಬೆಸ್ಟ್‌ ಎನಿಸಿರುವ 12 ರೋಡ್‌ ಟ್ರಿಪ್‌ ಆಪ್‌ಗಳನ್ನು ಇಲ್ಲಿ ನಿಮಗಾಗಿ ಪರಿಚಯಿಸುತ್ತಿದ್ದೇವೆ. ಈ ಆಪ್‌ಗಳು ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುಖಕರ, ಸರಳ ಮತ್ತು ಸ್ಮರಣೀಯವಾಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಾರ್ಗ ಹುಡುಕುವುದರಿಂದ ಹಿಡಿದು, ಸಂಗಿತದವರೆಗೂ ಈ ಆಪ್‌ಗಳು ನಿಮ್ಮ ಜೊತೆಯಾಗಿರುತ್ತವೆ. ಹಾಗಿದ್ರೆ, ಏಕೆ ತಡ, ಇದೀಗ ನಿಮ್ಮ ಆಂಡ್ರಾಯ್ಡ್‌ ಅಥವಾ iOS ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿ ಒಂದ್ಸಲ ಟ್ರೈ ಮಾಡಿ.

ರೋಡ್‌ಟ್ರಿಪ್ಪರ್ಸ್‌

ರೋಡ್‌ಟ್ರಿಪ್ಪರ್ಸ್‌

ಹೆಸರೇ ಸೂಚಿಸುವಂತೆ ಈ ಆಪ್‌ನ್ನು ಪ್ರಯಾಣಿಕರಿಗಾಗಿಯೇ ನಿರ್ಮಿಸಲಾಗಿದೆ. ರೋಡ್‌ಟ್ರಿಪ್ಪರ್ಸ್‌ ನೀವು ಹೋಗುವ ಸ್ಥಳದ ಸಂಪೂರ್ಣ ನಕ್ಷೆಯನ್ನು ಒದಗಿಸುತ್ತದೆ. ರೋಡ್‌ಟ್ರಿಪ್ಪರ್ಸ್ ಆಪ್‌ನಲ್ಲಿ ಲಕ್ಷಾಂತರ ಸ್ಥಳಗಳನ್ನು ನೀವಯ ಪಡೆಯುತ್ತೀರಿ. ಗೂಗಲ್‌ ಮ್ಯಾಪ್‌ನಲ್ಲಿ ಕಾಣದ ರಸ್ತೆಬದಿಯ ಆಕರ್ಷಣೆಗಳು ಮತ್ತು ಸ್ಥಳೀಯ ಹೋಟೆಲ್‌ಗಳನ್ನು ಈ ಆಪ್‌ನಲ್ಲಿ ಕಾಣಬಹುದು. ಅದಲ್ಲದೇ ನಿಮ್ಮ ಟ್ರಿಪ್‌ ಮುಗಿದ ಬಳಿಕ ಸಲಹೆ-ಸೂಚನೆಗಳನ್ನು ಇತರ ಪ್ರಯಾಣಿಕರೊಂದಿಗೆ ಈ ಆಪ್‌ನಲ್ಲಿ ಹಂಚಿಕೊಳ್ಳಬಹುದು.

ಗ್ಯಾಸ್‌ಬಡ್ಡಿ

ಗ್ಯಾಸ್‌ಬಡ್ಡಿ

ಎಲ್‌ಪಿಜಿ ಅನಿಲ ಎಷ್ಟು ದುಬಾರಿಯಾಗಿದೆ ಎಂಬುದು ನಿಮಗೆ ಗೊತ್ತೆ ಇದೆ. ಬೆಲೆ ಏರಿಕೆಯಿಂದ ದೀರ್ಘ ಪ್ರವಾಸಗಳ ಬಜೆಟ್‌ ಮೇಲೂ ಪರಿಣಾಮ ಉಂಟಾಗುತ್ತದೆ. ಈ ಆಪ್‌ ನಿಮಗೆ ಅಗ್ಗದ ಎಲ್‌ಪಿಜಿ ಗ್ಯಾಸ್‌ ಎಲ್ಲಿ ಸಿಗುತ್ತದೆ ಎಂಬುದನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ನಿಮ್ಮ ವಾಹನದ ಗ್ಯಾಸ್‌ ಖಾಲಿಯಾಗುತ್ತದೆ ಎಂದು ಎನಿಸಿದಾಗ ನಿಮ್ಮ ಹತ್ತಿರದ ಸ್ಥಳದಲ್ಲಿ ಈ ಆಪ್‌ ಮೂಲಕ ಗ್ಯಾಸ್‌ ಪಡೆಯಬಹುದಾಗಿದೆ. ನಿಮ್ಮ ಪಿನ್‌ಕೋಡ್ ಅಥವಾ ನಗರ ನಮೂದಿಸುವ ಮೂಲಕ ನೀವು ಗ್ಯಾಸ್‌ ಸಿಲಿಂಡರ್‌ ಹುಡುಕಬಹುದು. ಅದಲ್ಲದೇ ಸರ್ಚ್‌ ರಿಸಲ್ಟ್‌ನ್ನು ಬೆಲೆ ಹಾಗೂ ದೂರದ ಮೇಲೆ ವಿಂಗಡಿಸುವ ಮೂಲಕ ಉತ್ತಮ ಆಯ್ಕೆಯನ್ನು ಈ ಆಪ್‌ ಮೂಲಕ ಪಡೆಯಬಹುದು.

ಐಎಕ್ಸಿಟ್‌

ಐಎಕ್ಸಿಟ್‌

ನೀವು ಅಮೆರಿಕದಂತಹ ದೇಶಗಳಲ್ಲಿ ಪ್ರವಾಸಕ್ಕೆ ಯೋಜನೆ ಹಾಕಿಕೊಳ್ಳುತ್ತಿದ್ದರೆ, ಐಎಕ್ಸಿಟ್‌ ಆಪ್‌ ನಿಮಗೆ ಪಕ್ಕಾ ಸೂಟ್‌ ಆಗುತ್ತದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗುವ ದೂರವನ್ನು ನಿಮಗೆ ಇಲ್ಲಿ ಸುಲಭವಾಗಿ ಸಿಗುತ್ತದೆ. ಅಷ್ಟೇ ಅಲ್ಲದೇ, ದಾರಿಯುದ್ದಕ್ಕೂ ಲಭ್ಯವಿರುವ ರೆಸ್ಟೋರೆಂಟ್‌ಗಳು, ಗ್ಯಾಸ್ ಸ್ಟೇಷನ್‌ಗಳು, ಹೋಟೆಲ್‌ಗಳು, ಆಸ್ಪತ್ರೆಗಳು ಮತ್ತು ಇನ್ನೂ ಅನೇಕ ವೈಶಿಷ್ಟ್ಯಗಳನ್ನು ನಿಮಗೆ ಗೊತ್ತು ಮಾಡಿಸುತ್ತದೆ. ಐಎಕ್ಸಿಟ್ ಆಫ್‌ ಒಪಿಐಎಸ್‌ನಂತಹ ಥರ್ಡ್‌ಪಾರ್ಟಿ ಸಂಯೋಜನೆಯನ್ನು ಹೊಂದಿದ್ದು, ಗ್ಯಾಸ್‌ ಬೆಲೆಯ ರಿಯಲ್‌ ಟೈಮ್‌ ಮಾಹಿತಿಯನ್ನು ನೀಡುತ್ತದೆ.

ಫ್ಲಷ್‌ ಟಾಯ್ಲೆಟ್‌ ಫೈಂಡರ್‌

ಫ್ಲಷ್‌ ಟಾಯ್ಲೆಟ್‌ ಫೈಂಡರ್‌

ಟ್ರಾವೆಲ್‌ ಮಾಡುವಾಗ ಪ್ರತಿ ಸಲನೂ ಕಾಡುವ ಸಮಸ್ಯೆ ಏನೆಂದರೆ ಎಲ್ಲಿ ಫ್ರೆಶ್‌ಅಪ್‌ ಆಗುವುದು ಅಂತಾ. ಈ ಸಮಸ್ಯೆ ಪರಿಹಾರಕ್ಕೆ ಫ್ಲಷ್‌ ಟಾಯ್ಲೆಟ್‌ ಫೈಂಡರ್‌ ಆಪ್‌ ಒಳ್ಳೆ ಆಯ್ಕೆ. ಇದು ಜಾಗತಿಕವಾಗಿ 1,00,000ಕ್ಕೂ ಹೆಚ್ಚು ಸಾರ್ವಜನಿಕ ಶೌಚಾಲಯಗಳ ಮಾಹಿತಿಯನ್ನು ಒಳಗೊಂಡಿದೆ. ಈಗ ನೀವು ಮತ್ತು ನಿಮ್ಮ ಸ್ನೇಹಿತರು ಬಾತ್‌ರೂಮ್‌ಗಳಿಗಾಗಿ ಹುಡುಕುವ ಕಷ್ಟ ಇರಲ್ಲ. ಈ ಆಪ್‌ನ ಮತ್ತೊಂದು ಅನುಕೂಲ ಏನೆಂದರೆ, ಆಫ್‌ಲೈನ್‌ನಲ್ಲಿಯೂ ಮಾಹಿತಿಯನ್ನು ಒದಗಿಸುತ್ತದೆ. ಜೊತೆಗೆ ಸ್ನಾನಗೃಹಗಳ ಮಾಹಿತಿಯನ್ನು ಆಪ್‌ ಹಂಚಿಕೊಳ್ಳುತ್ತಿದ್ದು, ಯಾವುದಕ್ಕೆ ದುಡ್ಡು ನೀಡಬೇಕು. ಯಾವುದು ವಿಕಲಚೇತನರಿಗೆ ಸರಿಹೊಂದುತ್ತದೆ ಎಂಬ ಮಾಹಿತಿ ನೀಡುತ್ತದೆ.

ಬೆಸ್ಟ್‌ ಪಾರ್ಕಿಂಗ್‌

ಬೆಸ್ಟ್‌ ಪಾರ್ಕಿಂಗ್‌

ನಿಮ್ಮ ಪ್ರಯಾಣದ ವೇಳೆ ಅತ್ಯಂತ ಗಮನಿಸಬೇಕಾದ ಅಂಶವೆಂದರೆ ಪಾರ್ಕಿಂಗ್‌. ಅದಕ್ಕಾಗಿಯೆ ಬೆಸ್ಟ್‌ ಪಾರ್ಕಿಂಗ್‌ ಆಪ್‌ ನಿಮ್ಮ ಹತ್ತಿರದ ಪಾರ್ಕಿಂಗ್‌ ಸ್ಥಳವನ್ನು ಹುಡುಕಿ ಸ್ಥಳ ಕಾಯ್ದಿರಿಸಲು ಅನುವು ಮಾಡಿಕೊಡುತ್ತದೆ. ಈ ಆಪ್‌ ಭಾಗಶಃ ಕೆನಡಾ, ಅಮೆರಿಕ ಸೇರಿ ಎಲ್ಲ ನಗರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಆಪ್‌ನಲ್ಲಿ ಪಾರ್ಕಿಂಗ್ ಬೆಲೆಗಳ ಹೋಲಿಕೆ ಮತ್ತು ಅಗ್ಗದ ಪಾರ್ಕಿಂಗ್‌ ಸ್ಥಳವನ್ನು ಕಾಯ್ದಿರಿಸಲು ಬಳಸಬಹುದು.

ವೇಜ್‌

ವೇಜ್‌

ಪ್ರವಾಸ ಅಂದ್ರೇ ದಾರಿತಪ್ಪುವುದು ಸರ್ವೇ ಸಾಮಾನ್ಯ. ಆದ್ದರಿಂದ ವೇಜ್‌ ಆಪ್‌ ನಿಮಗೆ ಸಹಾಯ ಮಾಡುತ್ತದೆ. ನಿಮಗೆ ಮಾರ್ಗದ ಡೈರೆಕ್ಷನ್‌ ನೀಡುವುದಲ್ಲದೆ, ನಿಮಗೆ ಶಾರ್ಟ್‌ಕಟ್‌ಗಳನ್ನು ಕೂಡ ಸೂಚಿಸುತ್ತದೆ. ಆಪ್‌ ಮೂಲಕ ಅದೇ ರಸ್ತೆಯಲ್ಲಿ ಚಾಲನೆ ಮಾಡುವ ಇತರ ಬಳಕೆದಾರರನ್ನು ನಿಮಗೆ ತೋರಿಸುತ್ತದೆ. ಲೈವ್ ಟ್ರಾಫಿಕ್ ಅಪ್‌ಡೇಟ್‌ಗಳನ್ನು ಇಲ್ಲಿ ಕಾಣಬಹುದು. ಇದರಿಂದ ಅಪಘಾತಗಳು ಮತ್ತು ಸ್ಪೀಡ್‌ ಟ್ರಾಪರ್‌ಗಳ ಬಗ್ಗೆಯೂ ನಿಮಗೆ ತಿಳಿಯುತ್ತದೆ. ನೀವು ಟ್ರಾಫಿಕ್‌ ಜಾಮ್‌ನ್ನು ತಪ್ಪಿಸಲು ನೀವು ವೇಜ್ ಆಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ದಿ ಔಟ್‌ಬೌಂಡ್‌

ದಿ ಔಟ್‌ಬೌಂಡ್‌

ಪ್ರತಿಯೊಂದು ಸ್ಥಳಕ್ಕೂ ಅದರದ್ದೇ ಆದ ವಿಶೇಷತೆ ಇದೆ. ನಿಮಗೆ ಕೆಲವೊಂದು ಸ್ಥಳಗಳ ಬಗ್ಗೆ ತಿಳಿದಿದ್ದರೂ, ಅನೇಕ ಸ್ಥಳಗಳ ಬಗ್ಗೆ ಮಾಹಿತಿಯೇ ಗೊತ್ತಿರಲ್ಲ. ನೀವು ಪ್ರಯಾಣಿಸುತ್ತಿರುವ ಸ್ಥಳದ ವಿಶೇಷತೆಯನ್ನು ತಿಳಿದುಕೊಳ್ಳಲು ಈ ದಿ ಔಟ್‌ಬೌಂಡ್‌ ಆಪ್‌ ನಿಮಗೆ ಸಹಾಯ ಮಾಡುತ್ತದೆ. ಸ್ಥಳೀಯ ಸಾಹಸಗಳು, ಸೈಟ್‌ ಸೀಯಿಂಗ್‌ಗೆ ಯೋಗ್ಯ ಸ್ಥಳಗಳು, ಅತ್ಯುತ್ತಮ ರೆಸ್ಟೋರೆಂಟ್‌ಗಳನ್ನು ಇಲ್ಲಿ ಟ್ರ್ಯಾಕ್ ಮಾಡಬಹುದು. ಈ ಆಪ್‌ನಲ್ಲಿ ಪ್ರವಾಸ ಮತ್ತು ಸಾಹಸಗಳ ವಿವರವಾದ ವಿವರಣೆಯನ್ನು ನಿಮಗೆ ನೀಡುತ್ತದೆ. ಮೈಲೇಜ್ ಜೊತೆಗೆ, ಪ್ಯಾಕಿಂಗ್ ಲಿಸ್ಟ್‌, ಕೌಶಲ್ಯ ಮಟ್ಟ ಸೇರಿ ಸಾಹಸ ಚಟುವಟಿಕೆಗೆ ಬೇಕಾದ ಮಾಹಿತಿಯನ್ನು ಈ ಆಪ್‌ ನೀಡುತ್ತದೆ. ಅದಲ್ಲದೇ ಇಲ್ಲಿ ಕಾಣುವ ವಿವರಣೆಯನ್ನು ನಿಮ್ಮಂತೆ ಬೇರೆ ಪ್ರವಾಸಿಗರು ಬರೆದಿರುವುದು ವಿಶೇಷ.

ಸ್ಪೂಟಿಫೈ

ಸ್ಪೂಟಿಫೈ

ಸ್ನೇಹಿತರು ಅಥವಾ ಕುಟುಂಬದೊಂದಿಗೆ ನೀವು ಪ್ರಯಾಣಿಸುತ್ತಿದ್ದರೆ ನೀವು ಹೊಂದಿರಲೇಬೇಕಾದ ಆಪ್‌ ಎಂದರೆ ಸ್ಪೂಟಿಫೈ. ಈ ಪಾಡ್‌ಕ್ಯಾಸ್ಟ್ ಆಪ್‌ನಲ್ಲಿ ವಿಭಿನ್ನ ಪ್ರಕಾರದ ಲಕ್ಷಾಂತರ ಹಾಡುಗಳು ಮತ್ತು ಪಾಡ್‌ಕ್ಯಾಸ್ಟ್ ಎಪಿಸೋಡ್‌ಗಳನ್ನು ಹೊಂದಿದೆ. ನಿಮ್ಮ ಇಷ್ಟದ ಹಾಡುಗಳ ಆಧಾರದಲ್ಲಿ ಹೊಸ ಹಾಡುಗಳನ್ನು ಈ ಆಪ್‌ ನೀಡುತ್ತದೆ. ಪ್ರೀಮಿಯಂ ಸ್ಪೂಟಿಫೈ ಖಾತೆಯೂ ಲಭ್ಯವಿದೆ. ಜಾಹೀರಾತುಗಳನ್ನು ತಡೆಯಲು, ಹಾಡುಗಳನ್ನು ಆಫ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ನೀವು ಚಂದಾದಾರರಾಗಬಹುದು.

ಹೋಟೆಲ್‌ ಟೂನೈಟ್‌

ಹೋಟೆಲ್‌ ಟೂನೈಟ್‌

ನೀವು ದೊಡ್ಡ ನಗರಕ್ಕೆ ಹೋಗುವಾಗ ವಿಶ್ರಾಂತಿ ಅವಶ್ಯ. ಅದಕ್ಕಾಗಿ ಹೋಟೆಲ್ ಟುನೈಟ್ ಆಪ್‌ ನಿಮಗೆ ಸಹಾಯ ಮಾಡುತ್ತದೆ. ಒಂದಿಷ್ಟು ಸಮಯ ವಿಶ್ರಾಂತಿ ಪಡೆಯಲು ನೀವು ಸೂಕ್ತ ಹೋಟೆಲ್‌ಗಳನ್ನು ಇಲ್ಲಿ ಹುಡುಕುಬಹುದು. ಈ ಆಪ್‌ ನಿಮಗೆ ಹತ್ತಿರದ ಅತ್ಯುತ್ತಮ ಹೋಟೆಲ್‌ಗಳ ಆಫರ್‌ಗಳನ್ನು ನೀಡುತ್ತದೆ. ಈ ಆಪ್‌ ಮೂಲಕ ಶೇ.70 ರಷ್ಟು ಹಣವನ್ನು ನೀವು ಉಳಿಸಬಹುದು. ಈಗ ನೀವು ಹೆದ್ದಾರಿಯ ಬದಿಯಲ್ಲಿನ ಯಾವುದೇ ಹೋಟೆಲ್‌ ಅನ್ನೇ ನೆಚ್ಚಿಕೊಳ್ಳಬೇಕಿಲ್ಲ.

ಹ್ಯಾಪಿ ಕೌ

ಹ್ಯಾಪಿ ಕೌ

ನೀವು ಸಸ್ಯಾಹಾರಿ ಆಗಿದ್ದರೆ, ಪ್ರಯಾಣ ಮಾಡುವಾಗ ವೆಜ್‌ ರೆಸ್ಟೋರೆಂಟ್‌ಗಳನ್ನು ಹುಡುಕಲು ಹ್ಯಾಪಿ ಕೌ ಅತ್ಯುತ್ತಮ ಆಪ್‌ ಆಗಿದೆ. ಹ್ಯಾಪಿ ಕೌ ಮೂಲಕ ನೀವು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡದೇ ಅಲ್ಲಿನ ಬೆಲೆಗಳು, ವಿಮರ್ಶೆಗಳು, ಫೋಟೋಗಳು ಸಹ ಮೆನು ಆಯ್ಕೆಗಳನ್ನು ಪರಿಶೀಲಿಸಬಹುದು. ಆದ್ದರಿಂದ ನಿಮ್ಮ ಸ್ಥಳದಿಂದ ಒಂದು ಹೆಜ್ಜೆ ಹಾಕದೇ ನೀವು ತಿನ್ನಲು ಬಯಸುವ ಪದಾರ್ಥವನ್ನು ನೀವು ಇಲ್ಲಿ ಕಾಣಬಹುದು.

ವೈಫೈ ಮ್ಯಾಪ್‌

ವೈಫೈ ಮ್ಯಾಪ್‌

ಒಂದಿಷ್ಟು ಸ್ಥಳಗಳಲ್ಲಿ ಯಾವುದೇ ಮೊಬೈಲ್‌ ಸೇವೆ ನಿಮಗೆ ಸಿಗುವುದಿಲ್ಲ. ಆದರೆ, ನೀವು ಸಂಪರ್ಕ ಹೊಂದಲೇಬೇಕಾದ ಅನಿವಾರ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ. ವೈಫೈ ಮ್ಯಾಪ್‌ನೊಂದಿಗೆ ನಿಮ್ಮ ಹತ್ತಿರದ ನೆಟ್‌ವರ್ಕ್ ಸ್ಥಳವನ್ನು ಪರಿಶೀಲಿಸಲು ಈ ಆಪ್‌ ನಿಮಗೆ ಸಹಾಯ ಮಾಡುತ್ತದೆ. ಅದಲ್ಲದೇ ಪ್ರೋ ಆವೃತ್ತಿ ಕೂಡ ಲಭ್ಯವಿದ್ದು, ಮ್ಯಾಪ್‌ಗಳನ್ನು ಆಪ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ನಿಮಗೆ ಅನುಮತಿಸುತ್ತದೆ. ಸಾರ್ವಜನಿಕ ನೆಟ್‌ವರ್ಕ್‌ಗಳಲ್ಲಿ ಸುರಕ್ಷತೆ ಮತ್ತು ಗೌಪ್ಯತೆಗಾಗಿ ವಿಪಿಎನ್ ಸೇವೆಯೂ ಇದೆ.

ಡ್ರೈವ್‌ವೇಥರ್‌

ಡ್ರೈವ್‌ವೇಥರ್‌

ಪ್ರಯಾಣ ಮಾಡುವಾಗ ಪ್ರಮುಖವಾಗಿ ಹವಾಮಾನ ಪ್ರಮುಖವಾಗುತ್ತದೆ. ಆದ್ದರಿಂದ ಇಂತಹ ಸಮಯದಲ್ಲಿ ಡ್ರೈವ್‌ವೇಥರ್‌ ಆಪ್‌ ನಿಮಗೆ ಸಹಾಯ ಮಾಡುತ್ತದೆ. ಇದನ್ನು ರಸ್ತೆ ಪ್ರಯಾಣಿಕರಿಗೆ ಮಾತ್ರ ವಿನ್ಯಾಸಗೊಳಿಸಲಾಗಿದೆ. ಹಾನಿಕಾರಕ ಹವಾಮಾನ ಪರಿಸ್ಥಿತಿಗಳನ್ನು ತಪ್ಪಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಮಳೆ, ಮಂಜು, ಸೂರ್ಯನ ರೀತಿಯ ಐಕಾನ್‌ಗಳಲ್ಲಿ ಈ ಆಪ್‌ ನಿಮಗೆ ಮಾಹಿತಿಯನ್ನು ಒದಗಿಸುತ್ತದೆ.

Best Mobiles in India

Read more about:
English summary
Going On A Road Trip? Here Are Some Best Road Trip Apps For iPhone, Android

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X