Home
Apps

ನಿಮ್ಮ ಮೊಬೈಲ್ ಡೇಟಾ ಉಳಿತಾಯಕ್ಕೆ ಬಂದಿದೆ ಹೊಸದೊಂದು ಆಪ್

By Lekhaka

ಮೊಬೈಲ್ ಡೇಟಾವನ್ನು ನಿರ್ವಹಣೆ ಮಾಡುವಂತಹ ಯಾವುದೇ ಖ್ಯಾತ ಆಪ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ ಈ ಹಿನ್ನಲೆಯಲ್ಲಿ ಸರ್ಚ್ ಇಂಜಿನ್ ದೈತ್ಯ ಹೊಸದೊಂದು ಆಪ್ ವೊಂದನ್ನು ಲಾಂಚ್ ಮಾಡಿದ್ದು, ಇದು ನಿಮ್ಮ ಮೊಬೈಲ್ ಡೇಟಾವನ್ನು ನಿಯಂತ್ರಿಸಲಿದೆ. ಆಂಡ್ರಾಯ್ಡ್ ಬಳಕೆದಾರರ ಡೇಟಾವನ್ನು ಉಳಿತಾಯ ಮಾಡುವ ಸಲುವಾಗಿಯೇ ಗೂಗಲ್ ಡೇಟಾಲೀ ಆಪ್ ಅನ್ನು ಲಾಂಚ್ ಮಾಡಿದೆ ಎನ್ನಲಾಗಿದೆ,

ನಿಮ್ಮ ಮೊಬೈಲ್ ಡೇಟಾ ಉಳಿತಾಯಕ್ಕೆ ಬಂದಿದೆ ಹೊಸದೊಂದು ಆಪ್

ಈ ಆಪ್ ನಿಮ್ಮ ಮೊಬೈಲ್ ಡೇಟಾ ಬಳಕೆಯ ಮೇಲೆ ನಿಗಾ ಇಡಲಿದೆ. ಅದುವೇ ರಿಯಲ್ ಟೈಮಿನಲ್ಲಿ. ಇದಲ್ಲದೇ ನಿಮ್ಮ ಮೊಬೈಲ್ ಡೇಟಾವನ್ನು ಉಳಿಸುವುದಲ್ಲದೇ ಹತ್ತಿರದಲ್ಲಿ ಯಾವುದಾರರು ಸಾರ್ವಜನಿಕ ಉಚಿತ ವೈ-ಫೈ ಲಭ್ಯವಿದ್ದರೇ ಅದರ ಬಗ್ಗೆ ಮಾಹಿತಿಯನ್ನು ನೀಡುವ ಕಾರ್ಯವನ್ನು ಮಾಡಲಿದೆ.

ಈ ಆಪ್ ಕೆಲವು ದಿನಗಳ ಹಿಂದೆ ಫಿಲಿಪೈನ್ ನಲ್ಲಿ ಕಾಣಿಸಿಕೊಂಡಿದ್ದು, ಸರಿ ಸುಮಾರು ಶೇ.30 ರಷ್ಟು ಡೇಟಾವನ್ನು ಉಳಿತಾಯ ಮಾಡಲಿದೆ ಎನ್ನುವುದು ಈ ಆಪ್ ಬಳಕೆದಾರರ ಅಭಿಪ್ರಾಯವಾಗಿದೆ ಎನ್ನಲಾಗಿದೆ. ಇದು ನಿಮ್ಮ ಡೇಟಾ ಸೋರಿಕೆಗೆ ತಡೆಯನ್ನು ಹಾಕಲಿದೆ ಎನ್ನಲಾಗಿದೆ.

ಈಗಾಗಲೇ ಮೊಬೈಲ್ ಡೇಟಾ ಬಳಕೆದಾರರ ಸಂಖ್ಯೆಯೂ ದಿನೇ ದಿನೇ ಏರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಮೊಬೈಲ್ ಡೇಟಾ ನಿರ್ವಹಣೆ ಮಾಡುವ ಆಪ್ ವೊಂದರ ಅಗತ್ಯತೆಯನ್ನು ಪೂರೈಕೆ ಮಾಡುವ ಸಲುವಾಗಿ ಗೂಗಲ್ ಈ ಹೊಸ ಆಪ್ ಅನ್ನು ಬಿಡುಗಡೆ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಆಪ್ ಡೇಟಾವನ್ನು ಗಂಟೆ, ದಿನ, ವಾರ ಮತ್ತು ತಿಂಗಳಗಾಗಿ ಭಾಗ ಮಾಡಿಕೊಂಡು ನಿಯಂತ್ರಿಸುವ ಅವಕಾಶವನ್ನು ಮಾಡಿಕೊಡಲಿದೆ. ಇದಲ್ಲದೇ ಹಿಂಭಾಗದಲ್ಲಿ ನಡೆಯುವ ಡೇಟಾ ಸೋರಿಕೆಯನ್ನು ಇದು ನಿಯಂತ್ರಿಸಲಿದೆ. ಅಲ್ಲದೇ ಎಲ್ಲಾ ಪ್ ಗಳ ಮೇಲೆಯೂ ನಿಗಾವನ್ನು ಇಡಲಿದೆ. ಇದರಿಂದ ನಿಮ್ಮ ಮೊಬೈಲ್ ಡೇಟಾ ಉಳಿತಾಯವಾಗಲಿದೆ.

Best Mobiles in India

English summary
Google has just launched a new app and it is specifically designed to help Android phone users understand, control and save on their expensive mobile data.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+