ನೀವು ನಂಬಲೂ ಸಾಧ್ಯವಾಗದ ಹಲವು ಹೊಸ ಅಪ್‌ಡೇಟ್ ಪಡೆದಿದೆ 'ಗೂಗಲ್ ಅರ್ಥ್'!!
ಗೂಗಲ್ ಮ್ಯಾಪ್ ಅನ್ನು ಮೀರಿಸುವಷ್ಟು ಸಾಮರ್ಥ್ಯ ಹೊಂದಿರುವ ಗೂಗಲ್ ಅರ್ಥ್ ಇದೀಗ ಮತ್ತಷ್ಟು ನಂಬಲಾಗದ ಅಪ್‌ಡೇಟ್‌ಗಳನ್ನು ಪಡೆದುಕೊಂಡಿದೆ. ವಿಶ್ವದ ಯಾವುದೇ ಎರಡು ಸ್ಥಳಗಳ ನಿಖರವಾದ ಅಪ್‌ಡೇಟ್ಸ್ ಪಡೆಯುವುದರಿಂದ ಹಿಡಿದು ನಿಮ್ಮ ಮನೆ ಪಕ್ಕದಲ್ಲಿರುವ ಪಾರ್ಕ್ ಅಳತೆಯನ್ನು ಸಹ ಲೆಕ್ಕಹಾಕಬಹುದಾದ ಫೀಚರ್ಸ್ ಗೂಗಲ್ ಅರ್ಥ್‌ಗೆ ಬಂದಿವೆ.
ಹೌದು, ಇತ್ತೀಚೆಗೆ ತಾನೇ WWDC 2018ರಲ್ಲಿ ಆಪಲ್ ಆಗ್ಮೆಂಟೆಡ್ ರಿಯಾಲಿಟಿಯ ಮೂಲಕ ಅಳತೆಯ ಮಾಪನವನ್ನು ಪರಿಚಯಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಗೂಗಲ್ ತನ್ನ ಸ್ವಂತದ ಅಳತೆ ಮಾಪನವನ್ನು ತನ್ನ ಗೂಗಲ್ ಅರ್ಥ್ ಆಪ್‌ನಲ್ಲಿ ಅಳವಡಿಸಿದೆ. ಭೂಮಿಯ ಮೇಲ್ಮೈ ಎಲ್ಲವನ್ನು ಅಳತೆ ಮಾಡಬಹುದಾದ ಈ ಫೀಚರ್ ಅನ್ನು ಗೂಗಲ್ ಅರ್ಥ್ ಮಾತ್ರ ಹೊಂದಿದೆ.

ಈ ಫೀಚರ್ಸ್‌ನಿಂದ ಈಗ ನೀವು ನಿಮ್ಮ ಮನೆ ಉತ್ತರ ಧ್ರುವದಿಂದ ಎಷ್ಟು ದೂರದಲ್ಲಿದೆ ಎಂಬುದನ್ನು ನಿಖರವಾಗಿ ಕಂಡುಹಿಡಿಯಬದಾಗಿದೆ. ಹಾಗಾದರೆ, ಭೂಮಿಯ ಮತ್ತೊಂದು ಮಜಲಿಗೆ ನಮ್ಮನ್ನು ಕರೆದೊಯ್ಯುತ್ತಿರುವ ಗೂಗಲ್ ಅರ್ಥ್ ಇತ್ತೀಚಿಗೆ ಪಡೆದುಕೊಂಡಿರುವ ವಿಶಿಷ್ಟ ಅಪ್‌ಡೇಟ್‌ಗಳು ಯಾವುವು? ಗೂಗಲ್ ಅರ್ಥ್ ಆಪ್ ಏಕೆ ಬೆಸ್ಟ್ ಎಂಬುದನ್ನು ಮುಂದೆ ತಿಳಿಯಿರಿ.

ತಾಜ್‌ಮಹಲ್ ಅಳತೆ ಮಾಡಬಹುದು!
ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್ ಅಳತೆ ಯಾರಿಗ್ ತಾನೇ ಗೊತ್ತು. ಗೊತ್ತಿದ್ರು ಕೆಲವೊಂದಿಷ್ಟು ಜನಕ್ಕೆ ಮಾತ್ರ. ಈಗ ತಾಜ್‌ಮಹಲ್ ಅಳತೆ ಎಷ್ಟಿದೆ ಅಂತ ತಲೆ ಕೆಡಿಸ್ಕೊಳ್ಳೋ ಅಗತ್ಯವೇ ಇಲ್ಲ. ತಾಜ್ ಮಹಲ್ ಸೇರಿದಂತೆ ನಿಮಗೆ ಬೇಕಾದ ಸ್ಥಳದ ಅಳತೆಯನ್ನು ನಿಮ್ಮ ಸ್ಮಾರ್ಟ್‌ಪೋನ್‌ನಲ್ಲಿಯೇ ಅಳತೆ ಮಾಡಬಹುದು.

ಭೂಮಿಯ 3D ವೀವ್( ನೋಟ)
ಗೂಗಲ್ ಮ್ಯಾಪ್ ಮೂಲಕ ಭೂಮಿ ಮೇಲಿನ ರಸ್ತೆಗಳನ್ನು ಮಾತ್ರ ನೋಡಬಹುದಾದರೆ ಈಗ ಗೂಗಲ್ ಅರ್ಥ್ ಮೂಲಕ ಮೊಬೈಲ್‌ನಲ್ಲಿಯೇ ಭೂಮಿಯನ್ನು 3D ವೀವ್‌ನಲ್ಲಿ ನೋಡಬಹುದು. ಈಗ ನಿಮ್ಮ ಮನೆ ಕೂಡ ಗೂಗಲ್ ಅರ್ಥ್ 3D ವೀವ್( ನೋಟ)ದಲ್ಲಿ ಕಾಣಿಸುತ್ತದೆ ಎಂದರೆ ಇದು ಸೂಪರ್ ಫೀಚರ್ ಅಲ್ವ?

ಹಾರಾಡೊ ವಿಮಾನದ ಫೋಟೊ ತೆಗಿಬೋದು.
ಹೌದು, ಗೂಗಲ್ ಅರ್ಥ್ ಇಂತಹ ಒಂದು ವಿಶೇಷ ಕಾರ್ಯವನ್ನು ನಿರ್ವಹಿಸಲಿದೆ. ಗೂಗಲ್ ಸೆಟಲೈಟ್ ಮೂಲಕ ನೀವು ಪ್ರಯಾಣಿಸುತ್ತಿರುವ ವಿಮಾನದ ಫೋಟೊ ತೆಗೆದುಕೊಳ್ಳಬಹುದು. ನೀವು ಪ್ರಯಾಣಿಸುತ್ತಿರುವ ವಿಮಾನದ ಫೋಟೊ ಎಲ್ಲಿ ತೆಗೆದದ್ದು ಎಂಬ ಲೊಕೇಶನ್ ಅನ್ನು ಜೊತೆಗೆ ಪಡೆಯಬಹುದು!!

ಪ್ರಪಂಚ ಪರ್ಯಟನೆಗೆ ಮಾಹಿತಿ!
ಗೂಗಲ್ ಅರ್ಥ್ ನಿರ್ವಹಿಸುವ ಅತ್ಯುತ್ತಮ ಕಾರ್ಯವೆಂದರೆ. ಪ್ರಪಂಚ ಪರ್ಯಟನೆಗೆ ಸಂಪೂರ್ಣ ಮಾರ್ಗದರ್ಶಿಯಾಗಿ ಗೂಗಲ್ ಅರ್ಥ್ ನಮ್ಮ ಜೊತೆ ಇರುತ್ತದೆ. ಆಡಿಯೋ ಗೈಡ್, ವಿಮಾನಗಳ ಮಾಹಿತಿಯನ್ನು ಸಹ ಈ ಆಪ್ ಒದಗಿಸುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಜಗತ್ತಿನ 7 ಅದ್ಬುತಗಳನ್ನು ಕುಳಿತಲ್ಲಿಯೇ ಫೀಲ್ ಮಾಡಬಹುದು.

ಭೂಮಿಯ ಆಚೆಗೂ ಇದೆ ಮಾಹಿತಿ.
ಭೂಮಿಯ ಮೇಲಿನ 3D ವೀವ್ ನೋಡುವುದರ ಜೊತೆಗೆ ಭೂಮಿಯ ಆಚೆಗೂ ಇರುವ ಬಾಹ್ಯಾಕಾಶ ಮಾಹಿತಿಯನ್ನು ಗೂಗಲ್ ಅರ್ಥ್ ಆಪ್ ಹೊಂದಿದೆ.! ಮಂಗಳ ಗ್ರಹ, ಸೂರ್ಯನ ವಿಷಯಗಳನ್ನು ಗೂಗಲ್ ಅರ್ಥ್ ಹೊಂದಿದೆ. ಬಾಹ್ಯಾಕಾಶ ಮಾಹಿತಿಗಳನ್ನು ಸಹ ಇಲ್ಲಿ ಸುಲಭವಾಗಿ ಪಡೆಯಬಹುದು.

ವಿಮಾನದ ಅಂತರ ಮತ್ತು ಎತ್ತರ ತಿಳಿದುಕೊಳ್ಳಿ.!
ನೀವು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ ಒಳಗೊಳಗೆ ಏನೊ ಒಂದು ಕುತೋಹಲವಿರುತ್ತದೆ. ಎಷ್ಟು ಅಡಿ ಎತ್ತರದಲ್ಲಿ ನಾವು ಹಾರುತ್ತಿದ್ದೇವೆ ಎನ್ನುವ ಯೋಚನೆ ನಿಮ್ಮ ತಲೆಯಲ್ಲಿ ಮೂಡುತ್ತಿರುತ್ತದೆ. ಅದಕ್ಕಾಗಿ ಗೂಗಲ್ ಅರ್ಥ್ ನಿಮಗೆ ಸಹಾಯ ಮಾಡುತ್ತದೆ. ಹೇಗಿದೆ ಗೂಗಲ್ ಅರ್ಥ್ ಆಪ್ ಈಗಲೇ ಶೇರ್ ಮಾಡಿ..


Click it and Unblock the Notifications








