ಗೂಗಲ್ ಗೋನಲ್ಲಿ ಬಂದಿದೆ ಹೊಸ ಅಪ್‌ಡೇಟ್..! ನಿಮ್ಮ ಭಾಷೆಯಲ್ಲಿಯೇ ಸುದ್ದಿ ಕೇಳಿ..!
ಬಹಳ ದೊಡ್ಡ ವೆಬ್ ಪೇಜ್ ಒಂದನ್ನು ಗಂಟೆಗಟ್ಟಲೆ ಓದಲು ಬೇಸರ. ಯಾರಾದರೂ ನಮ್ಮ ಭಾಷೆಯಲ್ಲಿಯೇ ಕೇಳುವುದಕ್ಕೆ ಇಂಪಾಗುವಂತೆ ಓದಿಕೊಡುವವರು ಇದ್ದಿದ್ದರೆ ಎಂದು ಯೋಚಿಸಿದರೆ ಅದಕ್ಕೆ ಉತ್ತರ ಗೂಗಲ್ ಗೋ. ಹೌದು ಗೂಗಲ್ ಗೋ ಈಗ ಹೊಸ ಅಪ್ ಡೇಟ್ ನೊಂದಿಗೆ ಬರುತ್ತಿದೆ. ನಿಮ್ಮ ಓದುವಿಕೆಗೆ ಇದು ನೆರವು ನೀಡುತ್ತದೆ. ಹೇಗೆ ಎಂದು ಕೇಳುತ್ತಿದ್ದೀರಾ? ಮುಂದೆ ಓದಿ.
ಗೂಗಲ್ ತನ್ನ ಗೂಗಲ್ ಗೋ ಆಪ್ ನ್ನು ಅಪ್ ಡೇಟ್ ಮಾಡಿದ್ದು,ಪ್ರೊಗ್ರಾಮಿಂಗ್ ಲಾಂಗ್ವೇಜ್ ನ್ನು ಗೂಗಲ್ ಸೃಷ್ಟಿಸಿದೆ. 28 ಭಾಷೆಗಳಲ್ಲಿ ಈಗ ಈ ಆಪ್ ಬಿಲಿಯನ್ ಗಟ್ಟಲೆ ವೆಬ್ ಪೇಜ್ ಗಳನ್ನು ಓದುವ ಸಾಮರ್ಥ್ಯ ಹೊಂದಿದೆ.

"ನಾವು ಹೊಸ ವೈಶಿಷ್ಟ್ಯತೆಯನ್ನು ಬಿಡುಗಡೆಗೊಳಿಸುತ್ತಿದ್ದೇವೆ. ವೆಬ್ ಪೇಜ್ ಗಳನ್ನು ಗಟ್ಟಿಯಾಗಿ ಓದಲು ಎಲ್ಲಿರಿಗೂ ಅನುಕೂಲವಾಗುವುದಕ್ಕೆ ಈ ಗೂಗಲ್ ಗೋ ಆಪ್ ನ ಅಪ್ ಡೇಟ್ ನೆರವಾಗುತ್ತದೆ. ಅಷ್ಟೇ ಅಲ್ಲ ಇದು ನೈಸರ್ಗಿಕ ಶಬ್ದವಾಗಿಯೇ ಕೇಳುತ್ತದೆ. ಜೊತೆಗೆ 2ಜಿ ಕನೆಕ್ಷನ್ ಇರುವವರೂ ಕೂಡ ಬಳಕೆ ಮಾಡಬಹುದಾಗಿದೆ” ಎಂದು ಗೂಗಲ್ ತನ್ನ ಬ್ಲಾಗ್ ನಲ್ಲಿ ಹೇಳಿದೆ.
ಗೂಗಲ್ ಹೇಳುವ ಪ್ರಕಾರ, ಈ ಡೆವಲಪ್ ಮೆಂಟ್ ನಿಂದಾಗಿ ಮತ್ತು ತಂತ್ರಜ್ಞಾನದಿಂದಾಗಿ ತುಂಬಾ ದೊಡ್ಡ ಟೆಕ್ಸ್ಟ್ ಗಳನ್ನು ಟಿವಿ ನೋಡಿದಂತೆ ಇಲ್ಲವೇ ರೇಡಿಯೋ ಕೇಳಿದಂತೆ ಸರಾಗವಾಗಿ ಮಾಡಬಹುದು. ಇದು ಓದುವಿಕೆಯನ್ನು ಸುಲಭಗೊಳಿಸುತ್ತದೆ.
ಕಳೆದ ವರ್ಷ ಗೂಗಲ್ ಭಾರತದಲ್ಲಿ ಮತ್ತು ಇಂಡೋನೇಷಿಯಾದಲ್ಲಿ ಈ ಆಪ್ ನ್ನು ಬಿಡುಗಡೆಗೊಳಿಸಿತ್ತು. " Google for India: Building services for every Indian, in their language" ಅನ್ನೋ ಟೈಟಲ್ ಕೂಡ ನೀಡಲಾಗಿತ್ತು. ಅಂದರೆ “ ಭಾರತಕ್ಕಾಗಿ ಗೂಗಲ್: ಪ್ರತಿ ಭಾರತೀಯನಿಗೂ ಅವರ ಭಾಷೆಯಲ್ಲಿಯೇ ಸೇವೆ ಒದಗಿಸುತ್ತದೆ” ಎಂದರ್ಥ. ಅಷ್ಟೇ ಗೂಗಲ್ ಹೇಳಿರುವಂತೆ, ಅಂತರ್ಜಾಲ ಬಳಕೆಯಲ್ಲಿ ವಿಶ್ವದ ಎರಡನೇ ಅತೀ ದೊಡ್ಡ ರಾಷ್ಟ್ರ ಭಾರತವಾಗಿದೆ ಮತ್ತು ಅದು ಬೆಳೆಯುತ್ತಲೇ ಇದೆ ಎಂದಿತ್ತು.

ಟೆಕ್ಸ್ಟ್ ಗಳನ್ನು ಓದುವುದನ್ನು ಭಾರತೀಯರಿಗೂ ಅನುಕೂಲವಾಗುವಂತೆ ಚಿಂತಿಸಿದ ಗೂಗಲ್, ಸುಮಾರು 28 ಭಾರತೀಯ ಭಾಷೆಗಳನ್ನು ಕೂಡ ಬೆಂಬಲಿಸುತ್ತಿದೆ. ಅದರಲ್ಲಿ ಹಿಂದಿ, ಬೆಂಗಾಳಿ, ಮಳೆಯಾಳಂ, ಮರಾಠಿ ಮತ್ತು ತಮಿಳು ಭಾಷೆಗಳು ಸೇರಿವೆ. ನೈಸರ್ಗಿಕ ಧ್ವನಿಯಲ್ಲಿ ಈ ಆಪ್ ಓದುತ್ತದೆ. ಅಷ್ಟೇ ಅಲ್ಲ 2ಜಿ ಕನೆಕ್ಷನ್ ನಲ್ಲೂ ಕೂಡ ಈ ಆಪ್ ನ ಬಳಕೆ ಸಾಧ್ಯವಿದೆ ಎಂದು ಗೂಗಲ್ ತಿಳಿಸಿದೆ.
ಅನೇಕ ರೀತಿಯ ಮಂದಿ ಗೂಗಲ್ ಗೋ ಆಪ್ ನ್ನು ಬಳಕೆ ಮಾಡುತ್ತಾರೆ. ಕೆಲವರು ಹೆಚ್ಚುವರಿ ಟೂಲ್ಸ್ ಗಳನ್ನು ಕೂಡ ಬಳಕೆ ಮಾಡುತ್ತಾರೆ. ಅದು ಓದುವಿಕೆಗೆ ಮತ್ತು ಹೊಸ ಶಬ್ದಗಳ ಪ್ರನೌನ್ಸ್ ಗಳ ಬಗ್ಗೆಗಾಗಿಯೂ ಇರಬಹುದು. ಬ್ಲಾಗ್ ನಲ್ಲಿರುವ ಮಾಹಿತಿಯ ಪ್ರಕಾರ ಈ ಹೊಸ ವೈಶಿಷ್ಟ್ಯತೆಯು “ಯಾವ ವ್ಯಕ್ತಿಗೆ ವೀಡಿಯೋ ಅಥವಾ ಓದುವಿಕೆಯ ದೈಹಿಕ ಸಮಸ್ಯೆ ಇರುತ್ತದೆಯೋ ಅವರಿಗೆ ಮತ್ತು ವಿದೇಶಿ ಭಾಷೆಗಳನ್ನು ಓದಲು ಕಲಿಯಲು ಇಚ್ಛಿಸುವವರಿಗೆ ಮತ್ತು ತುಂಬಾ ಉದ್ದನೆಯ ಟೆಕ್ಸ್ಟ್ ಗಳನ್ನು ಓದುತ್ತಲೇ ಕುಳಿತುಕೊಳ್ಳಲು ಇಚ್ಛಿಸದೇ, ಕೇಳಿಸಿಕೊಳ್ಳಲು ಸಾಧ್ಯವಿದ್ದರೆ ಎಂದು ಭಾವಿಸುವವರಿಗೆ ಅನುಕೂಲವಾಗುತ್ತದೆ.
ಈ ಹೊಸ ಅಪ್ ಡೇಟ್ ಮುಖಾಂತರ ಕಂಪೆನಿಯು ವೆಬ್ ನ್ನು ಪ್ರತಿಯೊಬ್ಬರು ಆಕ್ಸಿಸ್ ಮಾಡುವಂತಾಗಬೇಕು ಎಂದು ಇಚ್ಛಿಸುತ್ತಾರೆ.


Click it and Unblock the Notifications








