Google: ಗೂಗಲ್‌ನಿಂದ ಮಹತ್ತರ ಘೋಷಣೆ! ನೀವು ದಿಲ್ ಖುಷ್ ಆಗೋದು ಗ್ಯಾರಂಟಿ!
ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಗೂಗಲ್ ಮ್ಯಾಪ್‌ನಲ್ಲಿ ಹೊಸ ಪ್ರಾದೇಶಿಕ ಫೀಚರ್ಸ್‌ಗಳ ಗುಂಪನ್ನು ಪರಿಚಯಿಸಿದೆ. ನವದೆಹಲಿಯಲ್ಲಿ ನಡೆದ ತನ್ನ ಬಿಲ್ಡಿಂಗ್ ಫಾರ್ ಇಂಡಿಯಾ ಈವೆಂಟ್‌ನಲ್ಲಿ ಈ ಹೊಸ ಫೀಚರ್ಸ್‌ಗಳನ್ನು ಘೋಷಣೆ ಮಾಡಿದೆ. ಇದರಿಂದ ಗೂಗಲ್ ಮ್ಯಾಪ್ಸ್‌ನಲ್ಲಿ ಸ್ಟ್ರೀಟ್ ವ್ಯೂನಲ್ಲಿ ಇನ್ನಷ್ಟು ಸುಧಾರಣೆಗಳನ್ನು ಕಾಣಬಹುದಾಗಿದೆ.
ಹೌದು, ಗೂಗಲ್ ಮ್ಯಾಪ್‌ನಲ್ಲಿ ಲೈವ್ ವ್ಯೂ ವಾಕಿಂಗ್, ಲೆನ್ಸ್ ಇನ್ ಮ್ಯಾಪ್ಸ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಇದಲ್ಲದೆ ಅಪ್ಲಿಕೇಶನ್‌ನಲ್ಲಿ ಮುಂಬೈ ಮತ್ತು ಕೋಲ್ಕತ್ತಾ ಸ್ಥಳೀಯ ರೈಲುಗಳಿಗೆ ಬೆಂಬಲವನ್ನು ಸೇರಿಸುವ ವೇರ್ ಈಸ್ ಮೈ ಟ್ರೈನ್ ಫೀಚರ್ಸ್ ಅನ್ನು ಸಹ ಪರಿಚಯಿಸಿದೆ. ಇದರಿಂದ ದೇಶದಲ್ಲಿ ರೈಲು ಪ್ರಯಾಣ ಮತ್ತು ಸಾರ್ವಜನಿಕ ಸಾರಿಗೆಗಾಗಿ ಮ್ಯಾಪ್‌ನಲ್ಲಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ. ಹಾಗಾದ್ರೆ ಗೂಗಲ್ ಮ್ಯಾಪ್‌ಗೆ ಹೊಸದಾಗಿ ಸೇರ್ಪಡೆ ಆಗಿರುವ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಭಾರತದಲ್ಲಿ ನಡೆಯುತ್ತಿರುವ ಬಿಲ್ಡಿಂಗ್ ಫಾರ್ ಇಂಡಿಯಾ ಈವೆಂಟ್‌ನಲ್ಲಿ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಪ್ರಮುಖವಾಗಿ ಲೈವ್ ವ್ಯೂ ವಾಕಿಂಗ್, ಮ್ಯಾಪ್ಸ್‌ನಲ್ಲಿ ಲೆನ್ಸ್, ಇಂಧನ ದಕ್ಷ ರೂಟಿಂಗ್, ವಿಳಾಸ ವಿವರಣೆಗಳು, ಸ್ಥಳೀಯ ರೈಲುಗಳ ಬೆಂಬಲ ಸೇರಿದೆ. ಇದರಿಂದ ನೀವು ಗೂಗಲ್ ಮ್ಯಾಪ್‌ನಲ್ಲಿ ಲೋಕಲ್ ಟ್ರೈನ್‌ಗಳ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಪ್ರಸ್ತುತ ಮುಂಬೈ ಲೋಕಲ್ ಟ್ರೈನ್ ಮಾಹಿತಿಯನ್ನು ತಿಳಿಸುವುದಕ್ಕಾಗಿ ಈ ಫೀಚರ್ಸ್ ಉಪಯುಕ್ತವಾಗಲಿದೆ.
ಈ ಫೀಚರ್ಸ್‌ಗಳ ಮೂಲಕ ಗೂಗಲ್ ಮ್ಯಾಪ್ ಅನ್ನು ಹೆಚ್ಚು ದೃಷ್ಟಿಗೋಚರ ಮತ್ತು ತಲ್ಲೀನಗೊಳಿಸುವ ಅಗತ್ಯಗಳನ್ನು ಪೂರೈಸುವ ಸಮಗ್ರ ನಕ್ಷೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಗೂಗಲ್ ಹೊಂದಿದೆ. ಗೂಗಲ್ ಪ್ರಕಾರ, ಲೈವ್ ವ್ಯೂ ವಾಕಿಂಗ್ ನ್ಯಾವಿಗೇಶನ್ ದೇಶದ 3,000 ನಗರಗಳಿಗೆ ಬರುತ್ತಿದೆ. ಮೊದಲು ಈ ಫೀಚರ್ಸ್ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಪ್ರಾರಂಭವಾಗಲಿದ್ದು, ನಂತರದ ದಿನಗಳಲ್ಲಿ ಐಒಎಸ್ ಬೆಂಬಲವನ್ನು ಸಹ ನೀಡಲಿದೆ.

ಇನ್ನು ಸ್ಥಳೀಯ ಮಾಹಿತಿಗಾಗಿ ಫೋನ್ ಕ್ಯಾಮೆರಾವನ್ನು ಬಳಸಿಕೊಳ್ಳಲು ಅಪ್ಲಿಕೇಶನ್‌ನಲ್ಲಿ ಗೂಗಲ್ ಲೆನ್ಸ್ ಬೆಂಬಲವನ್ನು ಸಹ ನೀಡಲಾಗಿದೆ. ಈ ಲೆನ್ಸ್ ಇನ್ ಮ್ಯಾಪ್ಸ್ ಫೀಚರ್ಸ್ ಇದೇ ಜನವರಿ 2024 ರ ವೇಳೆಗೆ ಬರಲಿದೆ ಎಂದು ಗೂಗಲ್ ಹೇಳಿದೆ. ಇನ್ನು ಗೂಗಲ್ ಮ್ಯಾಪ್ಸ್‌ಗೆ ಹೆಚ್ಚು ಪರಿಸರ ಸ್ನೇಹಿ ಮಾರ್ಗಗಳನ್ನು ತರುವ ಇಂಧನ ದಕ್ಷ ಮಾರ್ಗವನ್ನು ಭಾರತದಲ್ಲಿ ಗೂಗಲ್ ಮ್ಯಾಪ್ಸ್‌ಗೆ ಸೇರಿಸಲು ಮುಂದಾಗಿದೆ. ಇದು ಗೂಗಲ್ ಮ್ಯಾಪ್‌ನಲ್ಲಿ ಇಂಧನ ದಕ್ಷ ಮಾರ್ಗದಲ್ಲಿ ಹಸಿರು ಎಲೆಯ ಚಿಹ್ನೆಯ ಮೂಲಕ ಕಾಣಿಸಿಕೊಳ್ಳಲಿದೆ.
ಗೂಗಲ್ ಮ್ಯಾಪ್‌ನಲ್ಲಿ ರೈಲುಗಳ ಲೈವ್ ಟ್ರ್ಯಾಕಿಂಗ್ ಅನ್ನು ಅನುಮತಿಸುವ ವೇರ್ ಈಸ್ ಮೈ ಟ್ರೈನ್ ಫೀಚರ್ಸ್ ಶೀಘ್ರದಲ್ಲೇ ಮುಂಬೈ ಲೋಕಲ್ ರೈಲುಗಳಿಗೆ ಬೆಂಬಲವನ್ನು ಸೇರಿಸುತ್ತದೆ. ಇದಲ್ಲದೆ 2024ರ ಆರಂಭದಲ್ಲಿ ವಿಳಾಸ ವಿವರಣೆಗಳನ್ನು ಸಹ ಸೇರಿಸಲು ಮುಂದಾಗಿದೆ.

ಇದಲ್ಲದೆ ಗೂಗಲ್ ಮ್ಯಾಪ್ ಇದೇ ವರ್ಷ ಅಕ್ಟೋಬರ್ ತಿಂಗಳಿನಲ್ಲಿ "ಮಾರ್ಗಗಳಿಗಾಗಿ ಇಮ್ಮರ್ಸಿವ್ ವ್ಯೂ" ಮತ್ತು ಕೆಲವು ಇತರ AI ವೈಶಿಷ್ಟ್ಯಗಳನ್ನು ಗೂಗಲ್ ಮ್ಯಾಪ್‌ನಲ್ಲಿ ಪರಿಚಯಿಸಿತ್ತು. ಜೊತೆಗೆ ಮಾರ್ಗಗಳ ವೈಶಿಷ್ಟ್ಯಕ್ಕಾಗಿ ತಲ್ಲೀನಗೊಳಿಸುವ ವೀಕ್ಷಣೆಯು ಬಳಕೆದಾರರು ಚಾಲನೆ ಮಾಡುವಾಗ, ನಡೆಯುವಾಗ ಅಥವಾ ಸೈಕ್ಲಿಂಗ್ ಮಾಡುವಾಗ ತಮ್ಮ ಮಾರ್ಗವನ್ನು ಹಂತ-ಹಂತವಾಗಿ ಪೂರ್ವವೀಕ್ಷಿಸಲು ಅನುಮತಿಸುತ್ತದೆ. ಈ ಫೀಚರ್ಸ್ ಪ್ರಸ್ತುತ ಕೆಲವು ಆಯ್ದ ನಗರಗಳಾದ ಆಮ್‌ಸ್ಟರ್‌ಡ್ಯಾಮ್, ಬಾರ್ಸಿಲೋನಾ, ಡಬ್ಲಿನ್, ಫ್ಲಾರೆನ್ಸ್, ಲಾಸ್ ವೇಗಾಸ್, ಲಂಡನ್, ಲಾಸ್ ಏಂಜಲೀಸ್, ಮಿಯಾಮಿ, ನ್ಯೂಯಾರ್ಕ್, ಪ್ಯಾರಿಸ್, ಸ್ಯಾನ್ ಫ್ರಾನ್ಸಿಸ್ಕೋ, ಸ್ಯಾನ್ ಜೋಸ್, ಸಿಯಾಟಲ್, ಟೋಕಿಯೋ ಮತ್ತು ವೆನಿಸ್‌ನಲ್ಲಿ ಲಭ್ಯವಿದೆ.


Click it and Unblock the Notifications








