ಗೂಗಲ್‌ನಿಂದ ಉಚಿತ 'ಬೊಲೊ' ಆಪ್ ಬಿಡುಗಡೆ!..ಇದು ನಿಮ್ಮ ಫೋನಿನಲ್ಲಿರಲಿ!!
ಪ್ರಾಥಮಿಕ ಗ್ರೇಡ್ ಮಕ್ಕಳು ಹಿಂದಿ ಮತ್ತು ಇಂಗ್ಲಿಷ್ ಓದುವ ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡಬಹುದಾದಂತಹ ಉಚಿತ ಆಪ್ ಒಂದನ್ನು ಗೂಗಲ್ ಬಿಡುಗಡೆ ಮಾಡಿದೆ. ಮಗುವನ್ನು ಓದಲು ಪ್ರೋತ್ಸಾಹಿಸುವ, ಸಹಾಯ ಮಾಡುವ, ವಿವರಿಸುತ್ತದೆ ಹಾಗೂ ಅವರನ್ನು ಸರಿಪಡಿಸುವಂತಹ ನೂತನ ಆಪ್ ಇದಾಗಿದ್ದು, ಪೋಷಕರಿಗೆ ಭಾರೀ ಸಿಹಿಸುದ್ದಿ ಇದಾಗಿದೆ.
ಹೌದು, ನೆನ್ನೆಯಷ್ಟೇ ಗೂಗಲ್ 'ಬೊಲೊ' ಎಂಬ ಉಚಿತಾ ಕಲಿಕಾ ಆಪ್ ಅನ್ನು ಬಿಡುಗಡೆ ಮಾಡಿದ್ದು, ಈ ಆಪ್‌ನಲ್ಲಿನ 'ದಿಯಾ' ಪ್ರಾಥಮಿಕ ಗ್ರೇಡ್ ಮಕ್ಕಳಿಗೆ ಕಲಿಸಿಕೊಡುವ ಮಾಡಲಿದೆ. ವಿಶೇಷವೆಂದರೆ, ಈ ಆಪ್ ಮಕ್ಕಳ ಮೂಲಕ ಯಾವುದೇ ಡೇಟಾವನ್ನು ಸಂಗ್ರಹಿಸುವುದಿಲ್ಲ ಮತ್ತು ಅದು ಯಾವುದೇ ಜಾಹೀರಾತಿನನ್ನೂ ಸಹ ನೀಡುವುದಿಲ್ಲ ಎಂದು ಗೂಗಲ್ ತಿಳಿಸಿದೆ.

ಬಿಡುಗಡೆ ಮಾಡಿರುವ ಈ 'ಬೊಲೊ' ಅಪ್ಲಿಕೇಶನ್ ಮೂಲಕ ಗೂಗಲ್‌ಗೆ ಏನೂ ಕಳುಹಿಸಲಾಗುವುದಿಲ್ಲ. ಕೊನೆಯ ಪಕ್ಷ ಧ್ವನಿಯ ಮಾದರಿಗಳು ಸಹ ಇಲ್ಲ ಎಂದು ಗೂಗಲ್ ಇಂಡಿಯಾದ ಪ್ರೊಡಕ್ಟ್ ಮ್ಯಾನೇಜರ್ ನಿತಿನ್ ಕಶ್ಯಪ್ ಅವರು ತಿಳಿಸಿದ್ದಾರೆ. ಜೊತಗೆ ಈ ಅಪ್ಲಿಕೇಶನ್ ಕೇವಲ 10-15 ನಿಮಿಷಗಳ ದೈನಂದಿನ ಬಳಕೆಯಲ್ಲಿದೆ ಎಂದು ಸಹ ಅವರು ಮಾಹಿತಿ ನೀಡಿದ್ದಾರೆ.
'ಬೊಲೊ ಮೂಲಕ ಮಕ್ಕಲಳು ಓದುವುದರಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇದರಿಂದ ಓದುವುದರ ಮೇಲೆ ಅವರ ಪ್ರೀತಿ ಹೆಚ್ಚಾಗುತ್ತದೆ ಮತ್ತು ಅದು ಅವರ ದೈನಂದಿನ ಅಭ್ಯಾಸವಾಗಿ ಪರಿಣಮಿಸುತ್ತದೆ. ತಂತ್ರಜ್ಞಾನವು ಶಕ್ತಿಯುತ ಎಂದು ನಾವು ನಂಬುತ್ತೇವೆ. ಇದರ ಉಪಯೋಗವನ್ನು ಎಲ್ಲರೂ ಪಡೆಯಬೇಕು ಎಂದು ಕಶ್ಯಪ್ ಹೇಳಿದರು.

ಇನ್ನು ಈ ಆಪ್ ಆಫ್‌ಲೈನಿನಲ್ಲಿ ಕೆಲಸ ಮಾಡಲಿದೆ. ಮಕ್ಕಳು ಆನ್ಲೈನ್ ಮೂಲಕ ವಬೇರೆ ಏನಾದರೂ ಪ್ರಾರಂಭಿಸಿ ವಿಚಲಿತರಾಗುವ ಅವಕಾಶ ಈ ಆಪ್‌ನಲ್ಲಿ ಕಡಿಮೆ ಇದೆ. ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿಗೆ ಮಾಡಬೇಕಾದ ವೈಯಕ್ತಿಕ ನಿರ್ಧಾರವಾಗಿದ್ದು, ತಮ್ಮ ಮಕ್ಕಳು ಸ್ಮಾರ್ಟ್‌ಫೋನಿನಲ್ಲಿ ಏನನ್ನು ಪ್ರವೇಶಿಸುತ್ತಾರೆ ಎಂಬುದನ್ನು ಅವರೇ ತಿಳಿಯಬೇಕಾಗುತ್ತದೆ.


Click it and Unblock the Notifications








