ಗೂಗಲ್‌ನ ಹೊಸ ಆಪ್‌ನಿಂದ ಬ್ಲಾಗ್ ಬಳಕೆ ಸುಲಭ..!
ಗೂಗಲ್ ತನ್ನ ಆಪ್ ನಲ್ಲಿ ಹೊಸ ವೈಶಿಷ್ಟ್ಯತೆ ಮತ್ತು ಸೇವೆಗಳನ್ನು ಭಾರತೀಯ ಗ್ರಾಹಕರಿಗೆ ಒದಗಿಸಲು ಹಲವು ರೀತಿಯಲ್ಲಿ ಶ್ರಮಿಸುತ್ತಿದೆ. ಇದೀಗ ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಗೂಗಲ್ ಸಂಸ್ಥೆ ಭಾರತೀಯ ಬ್ಲಾಗರ್ ಗಳ ಜೀವನಶೈಲಿಯನ್ನು ಇನ್ನಷ್ಟು ಸುಲಭಗೊಳಿಸಲು ಹೊಸದಾಗಿ ಒಂದು ಆಪ್ ನ್ನು ಬಿಡುಗಡೆಗೊಳಿಸಿದೆ ಮತ್ತು ಅದನ್ನು 'ಬ್ಲಾಗ್ ಕ್ಯಾಂಪಸ್’ ಎಂದು ಕರೆಯಲಾಗಿದೆ.
ಈ ಆಪ್ ಸದ್ಯ ಬೇಟಾ ಸ್ಟೇಜ್ ನಲ್ಲಿದ್ದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈಗಾಗಲೇ ಲಭ್ಯವಿದೆ. ಇನ್ನು ಲಿಸ್ಟಿಂಗ್ ನಲ್ಲಿ ಹೇಳಿರುವ ಪ್ರಕಾರ ಈ ಆಪ್ ಕೇವಲ ಭಾರತೀಯ ಬಳಕೆದಾರರಿಗಾಗಿ ಮಾತ್ರ ಲಭ್ಯವಿದೆಯಂತೆ.

ಈ ಆಪ್ ನಲ್ಲಿ ಲಿಸ್ಟಿಂಗ್ ಇರುವ ಪ್ರಕಾರ ಬ್ಲಾಗ್ ಕ್ಯಾಂಪಸ್ ಆಪ್ ಬ್ಲಾಗರ್ ಗಳಿಗೆ ತಮ್ಮ ವೆಬ್ ಸೈಟ್ ಗಳನ್ನು ಮ್ಯಾನೇಜ್ ಮಾಡಲು ಸಹಾಯ ಮಾಡುತ್ತದೆ ಮತ್ತು ಗೂಗಲ್ ನಲ್ಲಿ ಟ್ರೆಂಡಿಂಗ್ ಆಗಿರುವ ಟಾಪಿಕ್ ಗಳನ್ನು ಹುಡುಕಲು ನೆರವಾಗುತ್ತದೆ. ಟಾಪಿಕ್ ಸಲಹೆಗಳು ಬ್ಲಾಗರ್ ಗಳ ಕುತೂಹಲವನ್ನು ಆಧರಿಸಿರುತ್ತದೆ ಮತ್ತು ಅವರ ಈ ಹಿಂದೆ ಪೋಸ್ಟ್ ಮಾಡಿರುವ ಹಿಸ್ಟರಿಯನ್ನು ಆಧರಿಸಿರುತ್ತದೆ.
ಬ್ಲಾಗರ್ ಗಳಿಗೆ ಮಾಹಿತಿ, ಸಲಹೆ ನೀಡುವ ಆಪ್:
ಇದರ ಜೊತೆಗೆ , ಈ ಆಪ್ ಎಸ್ಇಓ ನಲ್ಲಿ ಬ್ಲಾಗರ್ ಗಳಿಗೆ ಕೆಲವು ಟಿಪ್ಸ್ ಗಳನ್ನು ಕೂಡ ಇದು ನೀಡುತ್ತದೆ ಉದಾಹರಣೆಗೆ ಅವರು ಹೇಗೆ ಗೂಗಲ್ ಸರ್ಚ್ ಪೇಜ್ನಲ್ಲಿ ತಮ್ಮ ವೆಬ್ ಸೈಟ್ ನ್ನು ಹುಡುಕಬಹುದು ಮತ್ತು ವೆಬ್ ಮಾಸ್ಟರ್ ಗೈಡ್ ಲೈನ್ ಜೊತೆಗೆ ಅದನ್ನು ಪರಿಚಿತಗೊಳಿಸಬಹುದು ಎಂಬ ಬಗ್ಗೆ ಸಲಹೆಗಳನ್ನು ನೀಡಲಾಗುತ್ತದೆ.

ಇದರ ಜೊತೆಗೆ, ತಮ್ಮ ವೆಬ್ ಸೈಟ್ ನ ಅಂಕಿಅಂಶಗಳನ್ನು ಟ್ರ್ಯಾಕ್ ಮಾಡಲು ಅವಕಾಶವಿರುತ್ತದೆ. ಆರ್ಟಿಕಲ್ ಗಳ ಕಮೆಂಟ್ ಗಳನ್ನು ಅಪ್ರೂವ್ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ ಮತ್ತು ಬ್ಲಾಗ್ ಗಳನ್ನು ಇನ್ನಷ್ಟು ಉತ್ತಮಗೊಳಿಸುವುಕ್ಕೆ ಏನು ಮಾಡಬಹುದು ಎಂಬ ಬಗ್ಗೆ ಸಲಹೆಗಳನ್ನು ಪಡೆಯಬಹುದು.
ಈ ಆಪ್ ಯಾವುದರಲ್ಲಿ ರನ್ ಆಗುತ್ತದೆ?
ಈ ಆಪ್ ವರ್ಡ್ ಪ್ರೆಸ್ ಮತ್ತು ಬ್ಲಾಗರ್.ಕಾಮ್ (Blogger.com) ವೆಬ್ ಸೈಟ್ ಗಳ ಜೊತೆಗೆ ಕಂಪ್ಯಾಟಿಬಲ್ ಆಗಿದೆ. ಆಂಡ್ರಾಯ್ಡ್ ವರ್ಷನ್ 4.4 ಮತ್ತು ಅದಕ್ಕಿಂತ ಮೇಲಿನ ವರ್ಷನ್ ಗಳಲ್ಲಿ ಈ ಆಪ್ ಅಧ್ಬುತವಾಗಿ ಕೆಲಸ ಮಾಡುತ್ತದೆ.
ಗೂಗಲ್ ಇತ್ತೀಚೆಗೆ ಹಲವು ಇತರೆ ಆಪ್ ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಬೇರೆಬೇರೆ ವಿಭಾಗಗಳಾಗಿ ಕೆಟಗರಿ ಮಾಡಿದೆ.ಇತ್ತೀಚೆಗೆ ತೇಝ್ ಆಪ್ ನ್ನು ಗೂಗಲ್ ಆಪ್ ಆಗಿ ಬದಲಾಗಿಯಿದ್ದು ಗೂಗಲ್ ಪೇ ಎಂದು ಮರುನಾಮಕರಣ ಮಾಡಲಾಗಿದೆ.
ಇಂಡಿಯಾದ ಇತ್ತೀಚೆಗಿನ ಗೂಗಲ್ ಕಾರ್ಯಕ್ರಮದಲ್ಲಿ ಪ್ರಕಟ ಮಾಡಿದ ಗೂಗಲ್ ನ ಒಂದು ಅನೌನ್ಸ್ ಮೆಂಟ್ ಇದಾಗಿದೆ. ಗೂಗಲ್ ಸಂಸ್ಥೆಯು ಇದರ ಜೊತೆಗೆ ಆಂಡ್ರಾಯ್ಡ್ ಪೈ ಗೋ ಎಡಿಷನ್ ಬಗ್ಗೆ ಮಾತನಾಡಿದ್ದು ಉತ್ತಮ ಭದ್ರತೆ, ಸ್ಟೋರೇಜ್ ವ್ಯವಸ್ಥೆ ಹೆಚ್ಚಿಸುವಿಕೆ ಮತ್ತು ಇತ್ಯಾದಿಗಳ ಬಗ್ಗೆ ವಿವರಣೆಯನ್ನು ನೀಡಿದೆ.
ಇದರ ಜೊತೆಗೆ, ಗೂಗಲ್ ಲೋಕಲ್ ಆಪ್ ಗಳಿಗೆ ಗೂಗಲ್ ಅಸಿಸ್ಟೆಂಟ್ ಬೆಂಬಲ ನೀಡುತ್ತದೆ ಎಂಬ ವಿಚಾರವನ್ನೂ ಕೂಡ ಪ್ರಕಟ ಮಾಡಿದೆ. ಗೂಗಲ್ ಇನ್ನು ಕೆಲವೇ ದಿನಗಳಲ್ಲಿ ಮರಾಠಿ, ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲಿ ಅಂತರ್ಜಾಲ ಓದುವಿಕೆಯ ವ್ಯವಸ್ಥೆಯನ್ನು ಮಾಡಲಿದೆ. ಗೂಗಲ್ ಮಾಹಿತಿ ನೀಡಿರುವ ಪ್ರಕಾರ ಗೂಗಲ್ ಸ್ಟೇಷನ್ ಆಂಧ್ರ ಪ್ರದೇಶದ ಸ್ಟೇಟ್ ಫೈಬರ್ ನೆಟ್ ಲಿಮಿಟೆಡ್ ಜೊತೆಗೆ ಕೈಜೋಡಿಸಿದ್ದು ಸುಮಾರು 12 ಸಾವಿರ ಹಳ್ಳಿ,ಸಿಟಿ ಮತ್ತು ನಗರಗಳಲ್ಲಿ ಗೂಗಲ್ ಸ್ಟೇಷನ್ ನಿರ್ಮಾಣವಾಗಲಿದೆ ಎಂದು ತಿಳಿಸಿದೆ.


Click it and Unblock the Notifications








