TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ನೀವು ತಿಳಿದಿರದ ಗೂಗಲ್ ಮ್ಯಾಪ್ಸ್ ಫೀಚರ್ಸ್
ಗೂಗಲ್ ಮ್ಯಾಪ್ಸ್ ಸಾಕಷ್ಟು ಹೊಸ ಫೀಚರ್‌ಗಳನ್ನು ಇತ್ತೀಚಿನ ದಿನಗಳಲ್ಲಿ ಪ್ರಸ್ತುತಪಡಿಸಿದೆ. ಗೂಗಲ್‌ನ ಡೆವಲಪರ್‌ಗಳು ಸಾಕಷ್ಟು ಶ್ರಮ ಪಟ್ಟು ಗೂಗಲ್ ಮ್ಯಾಪ್ಸ್‌ನಲ್ಲಿ ಬದಲಾವಣೆಗಳನ್ನು ತಂದಿದ್ದಾರೆ. ಸುಂದರ್ ಪಿಚೈ ತಂಡದ ಪ್ರಮುಖ ನಾಯಕರಾಗಿ ಭಾರತದ ನಗರಗಳಿಗೆ ಹೊಂದುವಂತಹ ಪರಿಪೂರ್ಣ ಫೀಚರ್‌ಗಳನ್ನೇ ಮ್ಯಾಪ್ಸ್‌ನಲ್ಲಿ ತಂದಿದ್ದಾರೆ.
ಹಾಗಿದ್ದರೆ ಗೂಗಲ್ ಮ್ಯಾಪ್ಸ್‌ನಲ್ಲಿ ಪ್ರಸ್ತುತಪಡಿಸಿರುವ ಈ ಹೊಸ ಫೀಚರ್‌ಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಫೀಚರ್‌ಗಳ ವಿಶೇಷತೆಗಳನ್ನು ನೋಡೋಣ.
#1
ಮ್ಯಾಪ್ಸ್ ಅನ್ನು ನೀವು ಈಗ ಆಫ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಇದರಿಂದ ನೆಟ್‌ವರ್ಕ್ ಇಲ್ಲದ ಸ್ಥಳದಲ್ಲಿ ನಿಮಗೆ ಮ್ಯಾಪ್ಸ್ ಅನ್ನು ವೀಕ್ಷಿಸಬಹುದಾಗಿದೆ. ಡೌನ್‌ಲೋಡ್ ಆಪ್ಶನ್ ಅನ್ನು ತಟ್ಟುವ ಮೂಲಕ ಮ್ಯಾಪ್ಸ್ ಅನ್ನು ಡೌನ್‌ಲೋಡ್ ಮಾಡಲು ಅನುಮತಿಸುತ್ತದೆ. ನೀವು ಭೇಟಿ ನೀಡಲು ಬಯಸಿರುವ ಸ್ಥಾನದ ನಕ್ಷೆಯನ್ನು ಅಳತೆ ಮಾಡಿ ನಂತರ ಮ್ಯಾಪ್ ಅನ್ನು ಡೌನ್‌ಲೋಡ್ ಮಾಡಿ. ವಿವರವಾದುದು ಸೇರಿದಂತೆ ನಕ್ಷೆಯ ಹೆಚ್ಚು ನಕಲುಗಳನ್ನು ನಿಮಗೆ ಡೌನ್‌ಲೋಡ್ ಮಾಡಬಹುದಾಗಿದೆ.
#2
ಗೂಗಲ್‌ನ ಈ ಹೊಸ ಫೀಚರ್ ಅನ್ನು ಬಳಸಿಕೊಂಡು ರಸ್ತೆಯ ಟ್ರಾಫಿಕ್ ಸ್ಥಿತಿಗತಿಗಳನ್ನು ನಿಮಗೆ ತಿಳಿದುಕೊಳ್ಳಬಹುದಾಗಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನ್ಯಾವಿಗೇಟ್ ಮಾಡಲು ಗೂಗಲ್ ಸಹಾಯ ಮಾಡಲಿದ್ದು ಟ್ರಾಫಿಕ್ ಮಾದರಿಗಳು ಕೆಂಪು, ಹಸಿರು ಮತ್ತು ಹಳದಿ ರೇಖೆಗಳಿಂದ ತಿಳಿದುಕೊಳ್ಳಬಹುದಾಗಿದೆ. ಕೆಂಪು ಹೆಚ್ಚಿನ ಟ್ರಾಫಿಕ್ ಇರುವ ವಿವರವನ್ನು ನಿಮಗೆ ನೀಡುತ್ತದೆ.
#3
ಗೂಗಲ್ ತನ್ನ ಮ್ಯಾಪ್ಸ್‌ನಲ್ಲಿ ಹೊಸ ಫೀಚರ್ ಆದ ರೆಸ್ಟೋರೆಂಟ್‌ಗಳು, ಕೆಫೆಗಳು, ಪೆಟ್ರೋಲ್ ಪಂಪ್‌ಗಳ ಮಾಹಿತಿಯನ್ನು ನೀಡಿದೆ. ನೀವು ಹೋಗುವ ದಾರಿಯಲ್ಲಿ ಇವುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
#4
ನಿಮ್ಮ ಮೆಚ್ಚಿನ ರೆಸ್ಟೋರೆಂಟ್‌ಗಳಲ್ಲಿ ಕ್ಯೂ ನಿಲ್ಲುವುದನ್ನು ತಪ್ಪಿಸಿಕೊಳ್ಳಲು ರೆಸ್ಟೋರೆಂಟ್‌ನ ಜನಪ್ರಿಯ ಸಮಯವನ್ನು ಮ್ಯಾಪ್ಸ್ ಬಳಸಿ ತಿಳಿದುಕೊಳ್ಳಬಹುದಾಗಿದೆ. ಐಓಎಸ್ ಮತ್ತು ವಿಂಡೋಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಫೀಚರ್ ಲಭ್ಯವಿದೆ.
#5
ಮಾಲ್ ಅಥವಾ ಸ್ಟೇಶನ್‌ನಲ್ಲಿ ಬಾತ್‌ರೂಮ್ ಹುಡುಕಾಡುವುದು ಕಷ್ಟ ಎಂದೆನಿಸಿದೆಯೇ? ಹಾಗಿದ್ದರೆ ಗೂಗಲ್ ಮ್ಯಾಪ್ಸ್ ನಿಮ್ಮ ಸಹಾಯಕ್ಕೆ ಬರಲಿದೆ. ಇದನ್ನು ಬಳಸಿಕೊಂಡು ಬಾತ್‌ರೂಮ್ ಎಲ್ಲಿದೆ ಎಂಬುದನ್ನು ಕಂಡುಹುಡುಕಿಕೊಳ್ಳಬಹುದಾಗಿದೆ.
ಗಿಜ್‌ಬಾಟ್ ಲೇಖನಗಳು
ಟಾಪ್ 14 ಫೇಸ್‌ಬುಕ್ ರೂಲ್ಸ್ ನೀವು ಪಾಲಿಸುತ್ತೀರಾ?
ತಮ್ಮ ಅನ್ವೇಷಣೆಗಳಿಂದಲೇ ಮೃತರಾದ ದುರ್ದೈವಿಗಳು
1 ಡಾಲರ್ ಸಂಬಳ ಪಡೆಯುವ ಟೆಕ್ ಅಗ್ರಗಣ್ಯರು