ಗೂಗಲ್ ಮ್ಯಾಪ್ಸ್ ಗೋನಲ್ಲಿ ಬಿಗ್ ಬದಲಾವಣೆ: ಹಿಂದಿ, ಇಂಗ್ಲಿಷ್‌ನಲ್ಲಿ ಸೇವೆ..!
ಟೆಕ್ ದೈತ್ಯ ಗೂಗಲ್ 'ಗೂಗಲ್ ಫಾರ್ ಇಂಡಿಯಾ’ ಯೋಜನೆ ಅಡಿಯಲ್ಲಿ ಭಾರತಕ್ಕಾಗಿಯೇ ಹಲವಾರು ಸೇವೆಗಳನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸ ಆಪ್ ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿದೆ. ಇದೇ ಮಾದರಿಯಲ್ಲಿ ಗೂಗಲ್ ಮ್ಯಾಪ್ ಗೋ ಆಪ್ ಅನ್ನು ಲಾಂಚ್ ಮಾಡಿದೆ. ಇದು ಲೈಟ್ ಆಪ್ ಆಗಿದ್ದು, ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕಡಿಮೆ ಗಾತ್ರದಲ್ಲಿ ಸೇವೆಯನ್ನ ನೀಡಲಿದೆ. ಕಡಿಮೆ RAM ಹೊಂದಿರುವ ಸ್ಮಾರ್ಟ್ ಫೋನಿನಲ್ಲಿಯೂ ಬಳಕೆ ಮಾಡಿಕೊಳ್ಳುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ.

ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಗೂಗಲ್ ಮ್ಯಾಪ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಬಳಕೆದಾರರಿಗೆ ಉತ್ತಮ ಸೇವೆಯನ್ನು ನೀಡಬೇಕು ಎನ್ನುವ ಕಾರಣಕ್ಕಾಗಿಯೇ ಹೊಸ ಮಾದರಿಯ ಆಯ್ಕೆಗಳನ್ನು ನೀಡಲಾಗುತ್ತಿದೆ. ಇದಲ್ಲದೇ ಗೂಗಲ್ ಇಂಡಿಯಾ ಮನೆಗಳಿಗೆ ಪ್ಲಸ್ ಕೋಡ್ ಸೇವೆಯನ್ನು ನೀಡುತ್ತಿದೆ. ಇದು ಮನೆಗಳ ವರ್ಚುವಲ್ ವಿಳಾಸವಾಗಲಿದೆ. ಮೊದಲಿಗೆ ಕೊಲ್ಕತ್ತಾದಲ್ಲಿ ಶುರುವಾಗಿದ್ದು, ದೇಶದಲ್ಲಿ ಎಲ್ಲಾ ಕಡೆಯಲ್ಲಿಯೂ ಲಭ್ಯವಾಗಲಿದೆ.
ಇದಲ್ಲದೇ ಗೂಗಲ್ ಇಂಡಿಯಾ ರೆಡ್ ಬಸ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಇದರಿಂದಾಗಿ ಇಂಟರ್ ಸಿಟಿ ಬಸ್ ಗಳ ವೇಳಾ ಪಟ್ಟಿಯನ್ನು ಬಳಕೆದಾರರಿಗೆ ನೀಡುವ ಕಾರ್ಯವನ್ನು ಮಾಡುತ್ತಿದೆ. ಇದರಿಂದಾಗಿ ಇನ್ನು ಮುಂದೆ ಗೂಗಲ್ ಮ್ಯಾಪ್ ಸಹಾಯದಿಂದಲೇ ಇಂಟರ್ ಸಿಟಿ ಬಸ್ ಗಳ ಟೈಮಿಂಗ್ ಅನ್ನ ನೀವು ತಿಳಿದುಕೊಳ್ಳಬಹುದಾಗಿದೆ. ಅಲ್ಲದೇ ಗೂಗಲ್ ಮ್ಯಾಪ್ ಮೂಲವೇ ರೆಡ್ ಬಸ್ ನಿಂದ ಬಸ್ ಟಿಕೇಟ್ ಬುಕ್ ಮಾಡಬಹುದಾಗಿದೆ.

ಇದರಿಂದಾಗಿ ಸುಮಾರು 20000 ರೂಟ್ ಗಳ ಮಾಹಿತಿಯೂ ಗೂಗಲ್ ಮ್ಯಾಪಿನಲ್ಲಿ ದೊರೆಯಲಿದ್ದು, ಬಸ್ ಎಲ್ಲಿ ನಿಲ್ಲಿದೆ, ಎಷ್ಟು ಸಮಯ ಪ್ರಯಾಣ ಸೇರಿದಂತೆ ಎಲ್ಲಾ ಮಾಹಿತಿಯೂ ಗೂಗಲ್ ಮ್ಯಾಪಿ ನಲ್ಲಿ ಬಳಕೆದಾರರಿಗೆ ದೊರೆಯಲಿದೆ ಎನ್ನಲಾಗಿದೆ. ಇದರೊಂದಿಗೆ ವಾಯ್ಸ್ ನ್ಯಾವಿಗೇಷನ್ ನಲ್ಲಿಯೂ ಸಾಕಷ್ಟು ದೊಡ್ಡ ಪ್ರಮಾಣ ಬದಲಾವಣೆಯನ್ನು ಕಾಣಬಹುದಾಗಿದೆ.
ಈ ಹಿಂದೆ ಇಂಗ್ಲೀಷ್ ನಲ್ಲಿ ಮಾತ್ರವೇ ಇದ್ದ ಸೇವೆಯನ್ನು ಹಿಂದಿ ಮತ್ತು ಇಂಗ್ಲೀಷ್ ಎರಡರಲ್ಲಿಯೂ ಕೇಳುವಂತೆ ಮಾಡಿದೆ. ಈ ಆಯ್ಕೆಯೂ ಗೂಗಲ್ ಮ್ಯಾಪ್ ಗೋ ಬಳಕೆದಾರರಿಗೂ ದೊರೆಯಲಿದೆ ಎನ್ನಲಾಗಿದೆ. ಇದಲ್ಲದೇ ಇದರಲ್ಲಿಯೂ ಬಸ್ ಗಳ ಸ್ಟಾಪ್ ಬಗ್ಗೆಯೂ ಮಾಹಿತಿ ಲಭ್ಯವಾಗಲಿದೆ.
ಬಳಕೆದಾರರಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ದೇಶದಲ್ಲಿ ಎರಡು ಭಾಷೆಯಲ್ಲಿ ಸೇವೆಯನ್ನು ನೀಡಲಾಗುತ್ತಿದೆ. ಇದರಿಂದಾಗಿ ಗೂಗಲ್ ಮ್ಯಾಪ್ ಗೋ ವರ್ಷನ್ ಸಾಕಷ್ಟು ಸದ್ದು ಮಾಡಲಿದೆ.


Click it and Unblock the Notifications








