ಆಂಡ್ರಾಯ್ಡ್ ನಲ್ಲಿ ಮಾತ್ರವಿದ್ದ ಫೀಚರ್ ಇದೀಗ ಐಓಎಸ್ ನಲ್ಲೂ ಲಭ್ಯ – ಗೂಗಲ್ ಮ್ಯಾಪ್ ನ ಐಓಎಸ್ ಗೆ ಸೇರ್ಪಡೆಯಾಯ್ತು ಫಾಲೋ ಬಟನ್
ಗೂಗಲ್ ತನ್ನ ಗೂಗಲ್ ಮ್ಯಾಪ್ ಆಪ್ ನ ಐಓಎಸ್ ಆಪರೇಟಿಂಗ್ ಸಿಸ್ಟಮ್ ಗೆ “ಫಾಲೋ” ಬಟನ್ ನ್ನು ಪರಿಚಯಿಸಿದೆ. ಆಪ್ ಬಳಸಿ ತಮ್ಮ ನೆಚ್ಚಿನ ತಾಣದ ಬಗ್ಗೆ ಪ್ರತಿದಿನದ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕೆ ಐಫೋನ್ ಬಳಕೆದಾರರಿಗೆ ಇದು ನೆರವು ನೀಡುತ್ತದೆ. ನಿನ್ನೆ ಬ್ಲಾಗ್ ಪೋಸ್ಟ್ ಮೂಲಕ ಇದರ ಪ್ರಕಟಣೆಯನ್ನು ನೀಡಲಾಗಿದೆ.

ಕಳೆದ ವರ್ಷದ ಅಕ್ಟೋಬರ್ ನಲ್ಲಿ ಮೊದಲ ಬಾರಿಗೆ ಆಂಡ್ರಾಯ್ಡ್ ನಲ್ಲಿ ಈ ಫೀಚರ್ ನ್ನು ಪರಿಚಯಿಸಲಾಗಿತ್ತು.ಇದನ್ನು ಬಳಸಿ ಬಳಕೆದಾರರು ಗೂಗಲ್ ಮ್ಯಾಪ್ ನಲ್ಲಿ ಹೊಸದಾಗಿ ಆರಂಭವಾಗಿರುವ ರೆಸ್ಟೊರೆಂಟ್ ಗಳು ಮತ್ತು ತಮ್ಮ ನೆಚ್ಚಿನ ಸ್ಟೋರ್ ಗಳಲ್ಲಿ ನಡೆಯುವ ಮಾರಾಟದ ವಿವರಗಳನ್ನು ತಿಳಿದುಕೊಳ್ಳಬಹುದು.
ಗೂಗಲ್ ಬ್ಲಾಗ್ ಪೋಸ್ಟ್ ನ್ನು ಗೂಗಲ್ ಮ್ಯಾಪ್ ನ ಪ್ರೊಡಕ್ಟ್ ಮ್ಯಾನೇಜರ್ ಆಗಿರುವ ಆಂಡ್ರ್ಯೋ ಕೂಪರ್ ಅವರು ಬರೆದಿದ್ದಾರೆ. "ಈ ವಾರದಿಂದ ಐಓಎಸ್ ನಲ್ಲೂ ಕೂಡ ನೀವು ನಿಮ್ಮ ನೆಚ್ಚಿನ ತಾಣದ ಬಗ್ಗೆ ದಿನಂಪ್ರತಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು- ಅದು ನಿಮ್ಮ ಮನೆಯ ಹತ್ತಿರವೇ ಹೊಸದಾಗಿ ರೆಸ್ಟೋರೆಂಟ್ ಆಗಿರಬಹುದು ಅಥವಾ ಬೇಕರಿಯೇ ಆಗಿರಬಹುದು. ನೀವು ಟ್ಯಾಪ್ ಮಾಡಿ ಫಾಲೋ ಮಾಡಬಹುದು.
ಫಾರ್ ಯು ಟ್ಯಾಬ್ ನಲ್ಲಿ ನಂತರ ನೀವು ಪ್ರಮುಖ ಅಪ್ ಡೇಟ್ ಗಳನ್ನು ಈ ತಾಣದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ನೀವು ಆಯ್ಕೆ ಮಾಡಿದ ತಾಣದಲ್ಲಿ ನಡೆಯುವ ಮುಂಬರುವ ಪ್ರಮುಖ ಇವೆಂಟ್ ಗಳ ಬಗ್ಗೆ ಕೂಡ ತಿಳಿದುಕೊಳ್ಳಬಹುದು. ಐಓಎಸ್ ನಲ್ಲಿ ಫಾಲೋ ಬಟನ್ ಈಗಾಗಲೇ ಆರಂಭಿಸಲಾಗಿದೆ” ಎಂದು ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಜಾಗ ಮತ್ತು ಬ್ಯುಸಿನೆಸ್ ನ್ನು ವಿಶ್ವದಾದ್ಯಂತ ನೋಡಲು ಸಾಧ್ಯವಿದ್ದು ಗೂಗಲ್ ಮೈ ಬ್ಯುಸಿನೆಸ್ ಆಪ್ ಮೂಲಕ ತನ್ನೆಲ್ಲಾ ಫಾಲೋವರ್ಸ್ ಗಳನ್ನು ಫಾಲೋ ಮಾಡಲು ಸಾಧ್ಯವಾಗುತ್ತದೆ ಎಂದು ಕೂಡ ಗೂಗಲ್ ಪ್ರಕಟಿಸಿದೆ. ಇದನ್ನು ಬಳಸಿ ತಮ್ಮ ಫಾಲೋವರ್ಸ್ ಗೆ ಆಕ್ಟಿವಿಟಿಯನ್ನು ಪೋಸ್ಟ್ ಮಾಡಿ ತಮ್ಮ ಫ್ಲಾಟ್ ಫಾರ್ಮ್ ಬಗೆಗಿನ ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಗೂಗಲ್ ಮ್ಯಾಪ್ಸ್ ಗಾಗಿ ಎಆರ್ ನೇವಿಗೇಷನ್ ನ್ನು ಟೆಸ್ಟ್ ಮಾಡುತ್ತಿರುವ ಗೂಗಲ್
ಇದಕ್ಕೆ ಸಂಬಂಧಿಸಿದ ಇನ್ನೊಂದು ಸುದ್ದಿಯೆಂದರೆ ಗೂಗಲ್ ಮ್ಯಾಪ್ಸ್ ಗಾಗಿ ಎಆರ್ ತಂತ್ರಗಾರಿಕೆಯನ್ನು ಗೂಗಲ್ ಬಳಸಲಿದೆ ಎಂಬುದಾಗಿತ್ತು. ಕಳೆದ ತಿಂಗಳು ವರದಿಯಾಗಿದ್ದ ಈ ಸುದ್ದಿಯು ನಿಜವಾಗಿದ್ದು ಗೂಗಲ್ ಸಣ್ಣ ಮಟ್ಟದಲ್ಲಿ ಕೆಲವು ಸ್ಥಳೀಯ ಗೈಡ್ ಗಳ ತಂಡದೊಂದಿಗೆ ಇದರ ಟೆಸ್ಟಿಂಗ್ ಕೆಲಸವನ್ನು ನಿರ್ವಹಿಸುತ್ತಿದೆ. ಎಆರ್ ಆಧಾರಿತ ನೇವಿಗೇಷನ್ ಸಿಸ್ಟಮ್ ಸ್ಮಾರ್ಟ್ ಫೋನ್ ಕ್ಯಾಮರಾವನ್ನು ಬಳಸುತ್ತದೆ. ಗೂಗಲ್ ಲೆನ್ಸ್ ಮೂಲಕ ಡೈರೆಕ್ಷನ್ ನ್ನು ತಿಳಿಸುತ್ತದೆ.
ಸ್ಮಾರ್ಟ್ ಫೋನ್ ಕ್ಯಾಮರಾ ಮೂಲಕ ಸ್ಟ್ರೀಟ್ ವ್ಯೂ ಮತ್ತು ಡಾಟಾವನ್ನು ಗೂಗಲ್ ಮ್ಯಾಪ್ ಜೋಡಿಸುತ್ತದೆ ಮತ್ತು ಸುಲಭದ ನೇವಿಗೇಷನ್ ಗೆ ಅನುಕೂಲ ಮಾಡಿಕೊಡುತ್ತದೆ. ನಿರ್ಧಿಷ್ಟವಾಗಿರುವ ಮತ್ತು ಹತ್ತಿರದ ಸ್ಥಳದ ಉತ್ತಮ ನೇವಿಗೇಷನ್ ನ್ನು ನೀಡುವುದಕ್ಕೆ ಇದು ನೆರವಾಗುತ್ತದೆ.


Click it and Unblock the Notifications








