TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಅಂತರ್ಜಾಲ ದೈತ್ಯ ಗೂಗಲ್ ತನ್ನ ಮ್ಯಾಪ್ ಆಪ್ ಗೆ ಹೊಸ ಫೀಚರ್ ನ್ನು ಬಿಡುಗಡೆಗೊಳಿಸಿದೆ. ಇದು ಸ್ನೇಹಿತರ ಜೊತೆಗೆ ಹೊರಗಡೆ ಪಾರ್ಟಿ ಮಾಡುವ ಮತ್ತು ಹೋಟೆಲ್ ಗೆ ಹೋಗಿ ಭರ್ಜರಿ ಭೋಜನ ಮಾಡುವವರಿಗೆ ಬಹಳ ಪ್ರಯೋಜನಕ್ಕೆ ಬರಲಿದೆ.
ಈ ವೈಶಿಷ್ಟ್ಯತೆಯ ಹೆಸರು ಗ್ರೂಪ್ ಪ್ಲಾನಿಂಗ್ ಫೀಚರ್ . ಇದು ತಮ್ಮ ಗೆಳೆಯ/ಗೆಳತಿಯರಿಗೆ ರೆಸ್ಟೋರೆಂಟ್ ಗಳ ಲಿಂಕ್ ಗಳನ್ನು ಹಂಚಿಕೊಳ್ಳುವುದಕ್ಕೆ ಬಳಕೆದಾರರಿಗೆ ಅವಕಾಶ ಕೊಡುತ್ತದೆ. ಹೇಗೆ ಎಂದು ಕೇಳುತ್ತಿದ್ದೀರಾ? ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಈ ಹಂತಗಳನ್ನು ಅನುಸರಿಸಿ
1. ಗೂಗಲ್ ಮ್ಯಾಪ್ ಆಪ್ ನ್ನು ತೆರೆಯಿರಿ
2. ಎಕ್ಸ್ ಫ್ಲೋರರ್ ಟ್ಯಾಬ್ ನಲ್ಲಿ ರೆಸ್ಟೋರೆಂಟ್ ನ್ನು ಟ್ಯಾಪ್ ಮಾಡಿ.
3. ಯಾವುದೇ ಸ್ಥಳವನ್ನು ಲಾಂಗ್ ಪ್ರೆಸ್ ಮಾಡಿ
4. ಸಣ್ಣ ಫ್ಲೋಟಿಂಗ್ ಬಬಲ್ ನಂತೆ ಲಿಂಕ್ ನ್ನು ಡ್ರಾಪ್ ಮಾಡಿ, ಸ್ಕ್ರೀನಿನ ಕೆಳಗಡೆ ಬಲಭಾಗದಲ್ಲಿ ಇದು ಕಾಣಿಸುತ್ತದೆ.
5. ಎಲ್ಲಾ ಪ್ಲೇಸ್ ಗಳನ್ನು ಶಾರ್ಟ್ ಲಿಸ್ಟ್ ಮಾಡಿದ ನಂತರ, ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಉದಾಹರಣೆಗೆ ವಾಟ್ಸ್ ಆಪ್, ಫೇಸ್ ಬುಕ್, ಅಥವಾ ಗೂಗಲ್ ಹ್ಯಾಂಗ್ಸ್ ಔಟ್ ನಲ್ಲಿ ಅದನ್ನು ಹಂಚಿಕೊಳ್ಳಬಹುದು.
ಈ ಶೋ ಲಿಂಕ್ ನೀವು ಆಯ್ಕೆ ಮಾಡಿದ ಎಲ್ಲಾ ರೆಸ್ಟೋರೆಂಟ್ ಗಳ ಸ್ಥಳಗಳನ್ನು ತೋರಿಸುತ್ತದೆ ಮತ್ತು ಒಮ್ಮೆ ಫ್ರೆಂಡ್ಸ್ ಎಲ್ಲರೂ ಆ ರೆಸ್ಟೋರೆಂಟ್ ನ್ನು ಶಾರ್ಟ್ ಲಿಸ್ಟ್ ಮಾಡಿಕೊಂಡ ನಂತರ ಅವರು ಯಾವುದನ್ನು ಆಯ್ಕೆ ಮಾಡಿಕೊಳ್ಳಲು ಇಚ್ಛಿಸುತ್ತಾರೋ ಅದನ್ನು ವೋಟ್ ಮಾಡಬಹುದು ಅಂದರೆ ಅವರು ಲೈಕ್ ಮತ್ತು ಡಿಸ್ ಲೈಕ್ ಮಾಡಲು ಆ ಲಿಸ್ಟ್ ನಲ್ಲಿ ಅವಕಾಶವಿರುತ್ತದೆ.
ವೆಬ್ ನಲ್ಲೂ ಲಭ್ಯ
ಗುಂಪಿನ ಪ್ರತಿ ಸದಸ್ಯರಿಗೂ ಕೂಡ ಮತ್ತಷ್ಟು ಸ್ಥಳಗಳನ್ನು ಅವರ ಇಚ್ಛೆಯಂತೆ ಸೇರಿಸುವುದಕ್ಕೆ ಮತ್ತು ಡಿಲೀಟ್ ಮಾಡುವುದಕ್ಕೆ ಅವಕಾಶವಿರುತ್ತದೆ.ಶೇರ್ ಆಗಿರುವ ಲಿಂಕ್ ಗೂಗಲ್ ಆಪ್ ನಲ್ಲಿ ಗುಂಪಿನ ಎಲ್ಲಾ ಸದಸ್ಯರಿಗೂ ರೀಡೈರೆಕ್ಟ್ ಮಾಡುತ್ತದೆ. ಆದರೆ ಒಂದು ವೇಳೆ ಗುಂಪಿನ ಸದಸ್ಯರ ಬಳಿ ಆಪ್ ಇಲ್ಲದೇ ಇದ್ದಲ್ಲಿ ಅವರು ವೆಬ್ ವರ್ಷನ್ ಮೂಲಕ ನೋಡುವುದಕ್ಕೆ ಅವಕಾಶವಿರುತ್ತದೆ.
ಯಾವಾಗ ಲಭ್ಯ?
"ಈ ವಾರದಲ್ಲಿ ಗ್ರೂಪ್ ಪ್ಲಾನಿಂಗ್ ವೈಶಿಷ್ಟ್ಯತೆಯು ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಕೂಡ ಬಿಡುಗಡೆಗೊಳ್ಳಲಿದೆ. ಪ್ಲೇಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಕ ಗೂಗಲ್ ಮ್ಯಾಪ್ ನ್ನು ಇನ್ಸ್ಟಾಲ್ ಮಾಡಿಕೊಳ್ಳಿ ಅಥವಾ ಅದನ್ನು ಅಪ್ ಡೇಟ್ ಮಾಡಿಕೊಳ್ಳುವ ಮೂಲಕ ಈ ವೈಶಿಷ್ಟ್ಯತೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ" ಎಂದು ಕಂಪೆನಿಯು ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ.
ಬ್ಯಾಟರಿ ಟ್ರ್ಯಾಕ್ ಗೆ ಅವಕಾಶ ನೀಡಿದ್ದ ಗೂಗಲ್
ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿಯನ್ನ ಟ್ರ್ಯಾಕ್ ಮಾಡುವುದಕ್ಕೆ ಕೂಡ ಗೂಗಲ್ ಮ್ಯಾಪ್ ಅವಕಾಶ ನೀಡುತ್ತದೆ. ಇತ್ತೀಚೆಗೆ ಗೂಗಲ್ ಸಂಸ್ಥೆಯು ಲೊಕೇಷನ್ ಹಂಚಿಕೊಂಡಾಗ ತಮ್ಮ ಸ್ಮಾರ್ಟ್ ಫೋನಿನ ಬ್ಯಾಟರಿ ಲೆವೆಲ್ ನ್ನು ಕೂಡ ಹಂಚಿಕೊಳ್ಳುವುದಕ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಅವಕಾಶ ನೀಡುವ ಹೊಸ ವೈಶಿಷ್ಟ್ಯತೆಯೊಂದನ್ನು ಬಿಡುಗಡೆಗೊಳಿಸಿತ್ತು. ಆಂಡ್ರಾಯ್ಡ್ ಪೋಲೀಸರು ಮಾಹಿತಿ ನೀಡುವಂತೆ, ಈ ಬ್ಯಾಟರಿ ಶೇರಿಂಗ್ ವೈಶಿಷ್ಟ್ಯತೆಯು ಬಹಳ ದಿನಗಳಿಂದ ಲಭ್ಯವಿತ್ತು ಆದರೆ ಎಲ್ಲರಿಗೂ ವಿಸಿಬಲ್ ಆಗಿರಲಿಲ್ಲ ಅಷ್ಟೇ. ಅದಕ್ಕಿಂತ ಮುಖ್ಯವಾಗಿ ಇದುವರೆಗೂ ಈ ವೈಶಿಷ್ಟ್ಯತೆಯು ಸರಿಯಾದ ಬ್ಯಾಟರಿ ಪರ್ಸಂಟೇಜ್ ನ್ನು ಹಂಚಿಕೊಳ್ಳುತ್ತಿಲ್ಲ ಎಂಬ ದೂರು ಕೂಡ ಕೇಳಿಬಂದಿದೆ.
ಒಟ್ಟಿನಲ್ಲಿ ಗೂಗಲ್ ಮ್ಯಾಪ್ ತನ್ನ ಬಳಕೆದಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹೊಸ ಹೊಸ ವೈಶಿಷ್ಟ್ಯತೆಗಳನ್ನು ಬಿಡುಗಡೆಗೊಳಿಸುತ್ತಿದೆ ಮತ್ತು ಜನರನ್ನು ಹತ್ತಿರ ತರುವುದಕ್ಕೆ ಸಾಕಷ್ಟು ಪ್ರಯತ್ನ ಮಾಡುತ್ತಿದೆ ಅಂದರೆ ಜನರ ಓಡಾಟವನ್ನು ಸರಳಗೊಳಿಸಲು ನೆರವು ನೀಡುತ್ತಿದೆ. ಏನಂತೀರಿ?