Home
Apps

ಸಂಚಾರಿ ನಿಯಮ ಉಲ್ಲಂಘಿಸಿದರೆ ಗೂಗಲ್ ಮ್ಯಾಪ್ ನಿಂದ ಎಚ್ಚರಿಕೆಯ ಸಂದೇಶ!

By Gizbot Bureau

ಗೂಗಲ್ ತನ್ನ ಗೂಗಲ್ ಮ್ಯಾಪ್ ಆಪ್ ನ ಆಂಡ್ರಾಯ್ಡ ವರ್ಷನ್ ಗೆ ಹೊಸ ಫೀಚರ್ ವೊಂದನ್ನು ಬಿಡುಗಡೆಗೊಳಿಸಿದೆ. ಇದು ನೀವು ನಿಮ್ಮ ಕಾರ್ ನ್ನು ಯಾವ ಸ್ಪೀಡ್ ನಲ್ಲಿ ಓಡಿಸುತ್ತಿದ್ದೀರಿ ಎಂಬುದನ್ನು ತೋರಿಸುತ್ತದೆ. ಸ್ಪೀಡೋಮೀಟರ್ ಎಂದು ಈ ವೈಶಿಷ್ಟ್ಯತೆಯನ್ನು ಹೆಸರಿಸಲಾಗಿದೆ. ಗೂಗಲ್ ಮ್ಯಾಪ್ ಆಪ್ ನ ಸೆಟ್ಟಿಂಗ್ಸ್ ಮೆನುವಿನಲ್ಲಿ ಈ ಫೀಚರ್ ನ್ನು ಗಮನಿಸಲಾಗಿದೆ ಮತ್ತು ಮಾನ್ಯುವಲಿ ಇದನ್ನು ಆನ್ ಮಾಡಬೇಕಾಗಿರುವ ಅಗತ್ಯವಿದೆ.

ಸ್ಪೀಡ್ ಲಿಮಿಟ್ ಫೀಚರ್ ಬಿಡುಗಡೆಗೊಳಿಸಿದ ನಂತರ ಈ ಹೊಸ ಫೀಚರ್ ನ್ನು ಗೂಗಲ್ ಸಂಸ್ಥೆ ಬಿಡುಗಡೆಗೊಳಿಸಿದೆ. ಕಳೆದ ಕೆಲವು ವರ್ಷಗಳಿಂದ ಕೆಲವು ದೇಶಗಳಲ್ಲಿ ಸ್ಪೀಡ್ ಲಿಮಿಟ್ ಮತ್ತು ಸ್ಪೀಡ್ ಕ್ಯಾಮರಾ ರಿಪೋರ್ಟಿಂಗ್ ಫೀಚರ್ ನ್ನು ಟೆಸ್ಟಿಂಗ್ ಗೆ ಒಳಪಡಿಸಿದ ನಂತರ ಗೂಗಲ್ ಅಂತಿಮವಾಗಿ ಗೂಗಲ್ ಈ ವೈಶಿಷ್ಟ್ಯತೆಯನ್ನು ಭಾರತವೂ ಸೇರಿದಂತೆ ಸುಮಾರು 40 ದೇಶಗಳಲ್ಲಿ ಬಿಡುಗಡೆಗೊಳಿಸುತ್ತಿದೆ.

ದಂಡ ಪಾವತಿಯನ್ನು ತಪ್ಪಿಸುತ್ತದೆ:

ದಂಡ ಪಾವತಿಯನ್ನು ತಪ್ಪಿಸುತ್ತದೆ:

ಸ್ಪೀಡ್ ಕ್ಯಾಮಾರಾಗಳನ್ನು ಭಾರತದ ಹಲವು ಸಿಟಿಗಳಲ್ಲಿ ಅಳವಡಿಸಿರುವ ಹಿನ್ನೆಲೆಯಲ್ಲಿ ಈ ಫೀಚರ್ ಇದೀಗ ಟ್ರಾಫಿಕ್ ಪೋಲೀಸರಿಂದ ತಪ್ಪಿಸಿಕೊಳ್ಳುವುದಕ್ಕೆ ಮತ್ತು ಅವರಿಗೆ ದಂಡ ಪಾವತಿಸುವರಿಂದ ನಿಮ್ಮನ್ನ ಬಚಾವ್ ಮಾಡುವುದಕ್ಕೆ ನೆರವು ನೀಡುತ್ತದೆ. ಹೊಸ ಸ್ಪೀಡ್ ಲಿಮಿಟ್ ಫೀಚರ್ ನಿಮಗೆ ನಿರ್ಧಿಷ್ಟ ದಾರಿಯ ಸ್ಪೀಡ್ ಲಿಮಿಟ್ ಬಗ್ಗೆ ಮಾಹಿತಿ ನೀಡುತ್ತದೆ. ಸ್ಪೀಡೋಮೀಟರ್ ಫೀಚರ್ ಅದರ ಪ್ರಕಾರ ಡ್ರೈವರ್ ಗಳಿಗೆ ತಾವು ಚಲಿಸುತ್ತಿರುವ ವೇಗ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಾರ್ನಿಂಗ್ ನೀಡುತ್ತದೆ.

ಸೂಚನೆ ನೀಡಲಾಗುತ್ತದೆ:

ಸೂಚನೆ ನೀಡಲಾಗುತ್ತದೆ:

ಯಾವಾಗ ಸ್ಪೀಡೋ ಮೀಟರ್ ಫೀಚರ್ ಆನ್ ಆಗಿರುತ್ತದೆಯೋ ಆಗ ಗೂಗಲ್ ಮ್ಯಾಪ್ ಸ್ಕ್ರೀನಿನ ಕೆಳಬದಿಯ ಎಡಭಾಗದಲ್ಲಿ ಡ್ರೈವಿಂಗ್ ಸ್ಪೀಡ್ ನ್ನು ಕೂಡ ತೋರಿಸಲಾಗುತ್ತದೆ.ಗೂಗಲ್ ಮ್ಯಾಪ್ ನಲ್ಲಿರುವ ಈ ಸ್ಪೀಡ್ ಲಿಮಿಟ್ ಫೀಚರ್ ನ ಸಹಾಯದಿಂದಾಗಿ ನೀವು ಎಷ್ಟು ವೇಗವಾಗಿ ಅಥವಾ ನಿಗದಿತ ವೇಗಕ್ಕಿಂತ ಅಧಿಕ ವೇಗದಲ್ಲಿದ್ದರೆ ಆಪ್ ನ ಸ್ಪೀಡೋ ಮೀಟರ್ ಫೀಚರ್ ಸಹಾಯದಿಂದ ಸೂಚನೆ ನೀಡುತ್ತದೆ.

ಬಣ್ಣದಲ್ಲಿ ಬದಲಾವಣೆ:

ಬಣ್ಣದಲ್ಲಿ ಬದಲಾವಣೆ:

ನೀವು ವೇಗದ ಲಿಮಿಟ್ ಕ್ಕಿಂತ ಅಧಿಕ ವೇಗದಲ್ಲಿದ್ದರೆ ಸ್ಪೀಡ್ ಇಂಡಿಕೇಟರ್ ನ ಬಣ್ಣದಲ್ಲಿ ಬದಲಾವಣೆಯಾಗುತ್ತದೆ. ಅಂದರೆ ನೀವು ಟ್ರಾಫಿಕ್ ನಿಮಯವನ್ನು ಉಲ್ಲಂಘಿಸುತ್ತಿದ್ದೀರಾ ಎಂಬ ಬಗ್ಗೆ ನಿಮಗೆ ಕೂಡಲೇ ಸೂಚನೆ ರವಾನೆಯಾದಂತೆದಾಗುತ್ತದೆ.

ಇಂಟರ್ನೆಟ್ ಸ್ಪೀಡ್ ಕೂಡ ಮುಖ್ಯ:

ಇಂಟರ್ನೆಟ್ ಸ್ಪೀಡ್ ಕೂಡ ಮುಖ್ಯ:

ಆದರೆ ನಿಮ್ಮ ಮೊಬೈಲ್ ಇಂಟರ್ನೆಟ್ ಸ್ಪೀಡ್ ನ ಆಧಾರದಲ್ಲಿ ಫಲಿತಾಂಶ ನಿಧಾನವಾಗುವ ಸಾಧ್ಯತೆ ಇರುತ್ತದೆ. ಸರಿಯಾದ ವೇಗದ ಮಾಹಿತಿಗಾಗಿ ಯಾವಾಗಲೂ ಕೂಡ ಕಾರಿನ ಸ್ಪೀಡೋಮೀಟರ್ ನ್ನು ರೆಫರ್ ಮಾಡುತ್ತಲೇ ಇರಿ.

ಗೂಗಲ್ ಮ್ಯಾಪ್ ನಲ್ಲಿ ಸ್ಪೀಡೋಮೀಟರ್ ಫೀಚರ್ ನ್ನು ಆನ್ ಮಾಡುವುದು ಹೇಗೆ?

ಗೂಗಲ್ ಮ್ಯಾಪ್ ನಲ್ಲಿ ಸ್ಪೀಡೋಮೀಟರ್ ಫೀಚರ್ ನ್ನು ಆನ್ ಮಾಡುವುದು ಹೇಗೆ?

• ಆಂಡ್ರಾಯ್ಡ್ ಡಿವೈಸ್ ನಲ್ಲಿ ಗೂಗಲ್ ಮ್ಯಾಪ್ ಆಪ್ ನ್ನು ತೆರೆಯಿರಿ.

• ಮೆನು ಸೆಟ್ಟಿಂಗ್ಸ್ ನ ನೇವಿಗೇಷನ್ ಸೆಟ್ಟಿಂಗ್ಸ್ ನ್ನು ಟ್ಯಾಪ್ ಮಾಡಿ.

• ಡ್ರೈವಿಂಗ್ ಆಯ್ಕೆಯ ಅಡಿಯಲ್ಲಿ " ಸ್ಪೀಡೋಮೀರ್ ನ್ನು ಆನ್ ಅಥವಾ ಆಫ್ ಮಾಡಿ.

ಹೆಚ್ಚುವರಿಯಾಗಿ ಬಳಕೆದಾರರು ಆಪ್ ನ ಒಳಗೆ ಸ್ಪೀಡ್ ಕ್ಯಾಮರಾ ಅಥವಾ ಮೊಬೈಲ್ ಸ್ಪೀಡ್ ಕ್ಯಾಮರಾ ವರದಿಯನ್ನು ಮಾಡುವುದಕ್ಕೆ ಅವಕಾಶವಿರುತ್ತದೆ. ಇತರೆ ಬಳಕೆದಾರರು ನೇವಿಗೇಷನ್ ಆನ್ ಇದ್ದಾಗ ಸ್ಪೀಡ್ ಕ್ಯಾಮರಾ ಐಕಾನ್ ನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ. ಈ ಫೀಚರ್ ಕೂಡ ಸ್ಪೀಡ್ ಬಗ್ಗೆ ನೋಟಿಫಿಕೇಷನ್ ನ್ನು ನೀಡುತ್ತದೆ.

ವೇಗ ಮಾತ್ರವಲ್ಲ ಅಪಘಾತದ ವರದಿಗೂ ಅವಕಾಶ:

ನೇವಿಗೇಷನ್ ಪೇಜಿನ ಬಲಭಾಗದಲ್ಲಿರುವ "+" ಐಕಾನ್ ನ್ನು ಟ್ಯಾಪ್ ಮಾಡುವ ಮೂಲಕ ಸ್ಪೀಡ್ ಕ್ಯಾಮರಾ ವರದಿಯನ್ನು ಬಳಕೆದಾರರು ಮಾಡಬಹುದು.ಮೊಬೈಲ್ ಸ್ಪೀಡ್ ಕ್ಯಾಮರಾ ಹೊರತು ಪಡಿಸಿ ಕ್ರ್ಯಾಷ್ ಅಥವಾ ಟ್ರಾಫಿಕ್ ದಟ್ಟಣೆಯ ವರದಿಯನ್ನು ಕೂಡ ಮಾಡುವುದಕ್ಕೆ ಅವಕಾಶವಿರುತ್ತದೆ.

ಕೆಲವೇ ದಿನಗಳಲ್ಲಿ ಎಲ್ಲರಿಗೂ ಲಭ್ಯ:

ಹಂತಹಂತವಾಗಿ ಫೀಚರ್ ಬಿಡುಗಡೆಗೊಳ್ಳುತ್ತಿರುವುದರಿಂದಾಗಿ ಭಾರತದಲ್ಲಿ ಕೆಲವೇ ಬಳಕೆದಾರರು ಇದುವರೆಗೂ ಈ ಫೀಚರ್ ನ್ನು ಬಳಕೆ ಮಾಡುತ್ತಿದ್ದು ವರದಿ ಸಲ್ಲಿಸಿದ್ದಾರೆ. ಎಲ್ಲಾ ಬಳಕೆದಾರರಿಗೆ ಈ ವೈಶಿಷ್ಟ್ಯತೆ ಕೆಲವೇ ದಿನಗಳಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ.

Best Mobiles in India

English summary
ಸಂಚಾರಿ ನಿಮಯ ಉಲ್ಲಂಘಿಸಿದರೆ ಗೂಗಲ್ ಮ್ಯಾಪ್ ನಿಂದ ಎಚ್ಚರಿಕೆಯ ಸಂದೇಶ!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+