'ಗೂಗಲ್ ಮ್ಯಾಪ್'ನಲ್ಲಿ ಬರುತ್ತಿರುವ ಹೊಸ ಆಯ್ಕೆ ನಿಮ್ಮನ್ನು ದಂಗಾಗಿಸುತ್ತದೆ!
ಆಧುನಿಕ ಪ್ರಪಂಚದ ದಾರಿಹೋಕನಾಗಿರುವ ಗೂಗಲ್ ಮ್ಯಾಪ್ ಮತ್ತಷ್ಟು ಅಪ್‌ಡೇಟ್ ಪಡೆದು ಕಾಲಿಡುತ್ತಿದೆ. ಇತ್ತೀಚಿಗಷ್ಟೇ ಸವಾರರು ಹೋಗುತ್ತಿರುವ ದಾರಿಯಲ್ಲಿ ಅಪಘಾತವಾಗಿದ್ದರೆ ಅದನ್ನು ವರದಿ ಮಾಡುವುದು ಮತ್ತು ವೇಗ ನಿಯಂತ್ರಣದ ಬಗ್ಗೆ ತಿಳಿಸುವುದು. ನೀವು ಈ ಮೂಲಕ ಆಪ್ ನಲ್ಲಿ ಅಪಘಾತವಾಗಿರುವ ಹಾದಿಯನ್ನು ಬಿಟ್ಟು ಬೇರೆ ಯಾವ ಹಾದಿಯಲ್ಲಿ ತೆರಳುವುದಕ್ಕೆ ಅವಕಾಶವನ್ನು ಕಲ್ಪಿಸಿದ್ದ ಗೂಗಲ್, ಇದೀಗ 'ಸ್ಲೋ ಡೌನ್' ಎಂಬ ಹೊಸ ಆಯ್ಕೆಯನ್ನು ಪರಿಚಯಿಸುತ್ತಿದೆ.

ಹೌದು, ಇತ್ತೀಚೆಗೆ ಗೂಗಲ್ ಮ್ಯಾಪ್ ಪರಿಚಯಿಸಿದ ಎರಡು ವಿಭಿನ್ನ ಆಯ್ಕೆಗಳಲ್ಲಿ ಒಂದು ಎಲ್ಲಾದರು ಸವಾರರು ಹೋಗುತ್ತಿರುವ ದಾರಿಯಲ್ಲಿ ಅಪಘಾತವಾಗಿದ್ದರೆ ಅದನ್ನು ವರದಿ ಮಾಡುವುದು ಮತ್ತು ವೇಗ ನಿಯಂತ್ರಣದ ಬಗ್ಗೆ ತಿಳಿಸುವುದಾದರೆ, ಮತ್ತೊಂದು ಮ್ಯಾಪ್‌ನಲ್ಲಿ ಅಪಘಾತವಾಗಿರುವ ಹಾದಿಯನ್ನು ಬಿಟ್ಟು ಬೇರೆ ಯಾವ ಹಾದಿಯಲ್ಲಿ ತೆರಳುವುದಕ್ಕೆ ಅವಕಾಶವಿದೆ ಎಂಬುವುದನ್ನು ತೋರಿಸುತ್ತಿತ್ತು. ಇದು ಆ ದಾರಿಯಲ್ಲಿ ಸಂಚರಿಸುವ ಎಲ್ಲರಿಗೂ ತಿಳಿದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತಿತ್ತು.
ಅಂದರೆ, ಈ ಎರಡನೆಯ ಆಯ್ಕೆಯು ವೇಗದ ಟ್ರ್ಯಾಪ್ ಬಗ್ಗೆ ಮಾಹಿತಿ ನೀಡುವುದಾಗಿತ್ತು. ಆದರೆ, ಇದೀಗ ಮೂರನೇಯದಾಗಿ ಮತ್ತೊಂದು "ಆಡ್ ಎ ರಿಪೋರ್ಟ್" ಆಯ್ಕೆಯನ್ನು ಗೂಗಲ್ ಮ್ಯಾಪ್ ಬಳಕೆದಾರರಿಗೆ ನೀಡುತ್ತಿದೆ. ಅದನ್ನು ಸ್ಲೋ ಡೌನ್ ಎಂದು ಕರೆಯಲಾಗಿದೆ. ಈ ಫೀಚರ್‌ನಿಂದಾಗಿ ನೀವು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದರೆ ಈ ಫೀಚರ್ ನಿಮಗೆ ಸಹಾಯ ಮಾಡಲಿದೆ. ಹಾಗಾದರೆ, ಏನಿದು ಸ್ಲೋ ಡೌನ್? ಇದರ ಉಪಯೋಗಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಸ್ಲೋ ಡೌನ್?
ಸ್ಲೋ ಡೌನ್ ವರದಿಯು ಪ್ರಮುಖ ಉದ್ದೇಶವೇನೆಂದರೆ ನೀವು ತೆರಳುತ್ತಿರುವ ದಾರಿಯಲ್ಲಿ ಯಾವುದೇ ಕಾರಣಕ್ಕೆ ಟ್ರಾಫಿಕ್ ಜಾಮ್ ಆಗಿದೆ ಅಥವಾ ನಿಧಾನಗತಿಯಲ್ಲಿ ಪ್ರಯಾಣಿಸಬೇಕಾಗುತ್ತದೆ ಎಂಬುದನ್ನು ತಿಳಿಸುವ ಉದ್ದೇಶವನ್ನು ಹೊಂದಿರುವ ನೂತನ ಫೀಚರ್ ಇದಾಗಿದೆ. ಅಂದರೆ, ಇತರರು ಆ ಕೂಡಲೇ ದಾರಿಯನ್ನು ಬದಲಿಸಿಕೊಳ್ಳುವುದಕ್ಕೆ ಇದು ಅನುವು ಮಾಡಿಕೊಡುತ್ತದೆ.

ಸ್ಲೋ ಡೌನ್ ಕೆಲಸ ಹೇಗೆ?
ಬೆಂಗಳೂರಿನಂತಹ ನಗರಗಳಲ್ಲಿ ಸಾಮಾನ್ಯವಾಗಿ ರಸ್ತೆಗಳು ಟ್ರಾಫಿಕ್ ನಿಂದ ಬ್ಲಾಕ್ ಆಗುತ್ತದೆ ಮತ್ತು ವಾಹನಗಳ ದಟ್ಟಣೆಯಿಂದ ನಿಧಾನವಾಗಿ ಚಲಿಸುವ ಅಗತ್ಯ ಬೀಳುತ್ತದೆ. ಒಂದು ವೇಳೆ ನೀವು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದೀರಿ ಎಂದರೆ ಮತ್ತೊಬ್ಬರು ಕೂಡ ನೀವು ಸಿಲುಕಿಕೊಂಡಿರುವ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವುದನ್ನು ಇದರಲ್ಲಿ ತಪ್ಪಿಸುವುದಕ್ಕೆ ಸಾಧ್ಯವಾಗುತ್ತದೆ.

ಟ್ರಾಫಿಕ್ ಸಮಸ್ಯೆ ವಿವರ
ರಸ್ತೆಗಳು ಟ್ರಾಫಿಕ್ ನಿಂದ ಬ್ಲಾಕ್ ಆಗುತ್ತದೆ ಮತ್ತು ವಾಹನಗಳ ದಟ್ಟಣೆಯಿಂದ ನಿಧಾನವಾಗಿ ಚಲಿಸಬೇಕಾಗುತ್ತದೆ. ಗೂಗಲ್ ಮ್ಯಾಪ್ ಈ ಡಾಟಾವನ್ನು ಕಲೆಹಾಕಿ ಆಪ್ ನಲ್ಲಿ ರಿಫ್ಲೆಕ್ಟ್ ಆಗುವಂತೆ ಮಾಡುತ್ತದೆ. ಒಂದು ವೇಳೆ ನೀವು ಇಂತಹ ಟ್ರಾಫಿಕ್ ಇರುವ ಪ್ರದೇಶಕ್ಕೆ ಬಂದರೆ ಈ ಹೊಸ ರಿಪೋರ್ಟ್ ನಿಮಗೆ ಸಮಸ್ಯೆಯನ್ನು ಟ್ಯಾಕಲ್ ಮಾಡುವುದಕ್ಕೆ ಇದು ಸಹಾಯ ಮಾಡುತ್ತದೆ.

ಸದ್ಯದಲ್ಲೇ ಬಿಡುಗಡೆ:
ಕೆಲವು ಬಳಕೆದಾರರಿಗೆ ಸದ್ಯ ಈ ಸ್ಲೋ ಡೌನ್ ಆಯ್ಕೆಯು ‘Congestion' ಎಂದು ಕಾಣಿಸುತ್ತಿದೆ ಮತ್ತು ಎಲ್ಲಾ ಬಳಕೆದಾರರಿಗೆ ಕೆಲವೇ ದಿನಗಳಲ್ಲಿ ಲಭ್ಯವಾಗುತ್ತದೆ. ಟ್ರಾಫಿಕ್ ಇರುವ ಪ್ರದೇಶ ಮತ್ತು ಸಂಚಾರ ನಿದಾನವಾಗಿರುವ ಆ ಸಮಯಕ್ಕೆ ಐಕಾನಿನ ಬಣ್ಣವು ಹಸಿರಿನಿಂದ ಕೇಸರಿ ಮತ್ತು ಕೆಂಬಣ್ಣಕ್ಕೆ ತಿರುಗುತ್ತದೆ ಅಂದರೆ ಇದು ಟ್ರಾಫಿಕ್ ಸ್ಲೋ ಡೌನ್ ಆಗಿರುವುದರ ಸಂಕೇತ.

ಸ್ಟ್ರೀಟ್ ವ್ಯೂ:
ಎಆರ್ ಆಧಾರಿತ ನೇವಿಗೇಷನ್ ಸಿಸ್ಟಮ್ ಸ್ಮಾರ್ಟ್ ಫೋನ್ ಕ್ಯಾಮರಾವನ್ನು ಬಳಸುತ್ತದೆ ಮತ್ತು ಗೂಗಲ್ ಲೆನ್ಸ್ ಮೂಲಕ ಡೈರೆಕ್ಷನ್ ನ ಮಾಹಿತಿಯನ್ನು ಒದಗಿಸುತ್ತದೆ. ಅಂದರೆ ಸ್ಟ್ರೀಟ್ ವ್ಯೂ ವನ್ನು ಗೂಗಲ್ ಮ್ಯಾಪ್ ಒದಗಿಸುತ್ತದೆ ಮತ್ತು ಸ್ಮಾರ್ಟ್ ಫೋನ್ ಕ್ಯಾಮರಾ ಸಹಾಯದಿಂದ ಉತ್ತಮ ನೇವಿಗೇಷನ್ ಅನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. .

ಭವಿಷ್ಯದ ಫೀಚರ್ ಗಳ ಟೆಸ್ಟಿಂಗ್
ಭವಿಷ್ಯದಲ್ಲಿ ಇಂತಹ ಹಲವು ಫೀಚರ್ ಗಳನ್ನು ಗೂಗಲ್ ಮ್ಯಾಪ್ ನಲ್ಲಿ ನೋಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಲಾಗದು. ಮ್ಯಾಪ್ ಜಗತ್ತಿನಲ್ಲಿ ಇನ್ನು ಯಾವೆಲ್ಲ ದೊಡ್ಡ ದೊಡ್ಡ ಫೀಚರ್ ಗಳ ಅಗತ್ಯವಿದೆ ಎಂಬುದರ ಬಗ್ಗೆ ಈಗಾಗಲೇ ಸಂಸ್ಥೆ ಟೆಸ್ಟಿಂಗ್ ಕೆಲಸಗಳನ್ನು ಆರಂಭಿಸಿದೆ. ಫೆಬ್ರವರಿಯಿಂದಲೇ ಇಂತಹ ಕೆಲವು ಫೀಚರ್ ಗಳ ಬಗ್ಗೆ ಸಂಸ್ಥೆ ಟೆಸ್ಟಿಂಗ್ ಕೆಲಸವನ್ನು ಆರಂಭಿಸಿದೆ.


Click it and Unblock the Notifications








