Home
Apps

ಗೂಗಲ್‌ನಿಂದ ಮತ್ತೊಂದು ಫೈಲ್‌ ಶೇರಿಂಗ್‌ ಫೀಚರ್‌..! ಎಲ್ಲಕ್ಕಿಂತಲೂ ವೇಗ..!

By Gizbot Bureau

ಗೂಗಲ್‌ ಫೈಲ್‌ ಹಂಚಿಕೆಗಾಗಿ 2019ರಿಂದ ಹೊಸ ವಿಧಾನವನ್ನು ಬಳಸುತ್ತಿದೆ ಎಂದು ಎಕ್ಸ್‌ಡಿಎ ಟಿಯರ್‌ಡೌನ್ ವರದಿ ಮಾಡಿದೆ. ಈ ಹೊಸ ಫೈಲ್ ವರ್ಗಾವಣೆ ವಿಧಾನವು ಆಂಡ್ರಾಯ್ಡ್ ಬೀಮ್‌ಗಿಂತ ಹೆಚ್ಚು ಶಕ್ತಿಯುತವಾಗಿದೆ. ಫೈಲ್‌ಗಳನ್ನು ತ್ವರಿತವಾಗಿ ವರ್ಗಾಯಿಸಲು ಎನ್‌ಎಫ್‌ಸಿ ಮತ್ತು ಬ್ಲೂಟೂತ್ ಬಳಸಿದ ಬೀಮ್ ಸೇವೆಯನ್ನು ಆಂಡ್ರಾಯ್ಡ್ 10ರಲ್ಲಿ ನಿಲ್ಲಿಸಲಾಯಿತು. ಹೊಸ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಹಂಚಿಕೆ ಸೇವೆಯನ್ನು ಅನಧಿಕೃತವಾಗಿ 'ಗೂಗಲ್ ನಿಯರ್‌ಬೈ ಶೇರಿಂಗ್‌’ ಎನ್ನಲಾಗುತ್ತಿದೆ ಎಂದು ಎಕ್ಸ್‌ಡಿಎ ಹೇಳಿದೆ.

ಫೈಲ್-ಹಂಚಿಕೆ

ಇದು ಫೈಲ್-ಹಂಚಿಕೆ ಸೇವೆಯ ಅಂತಿಮ ಹೆಸರಾಗಿರಬಹುದೇ ಎಂಬುದು ಖಾತರಿಯಾಗಿಲ್ಲ, ಹೊಸ ಫೀಚರ್‌ ಕೆಲಸ ಮಾಡಲು ಬ್ಲೂಟೂತ್ ಮತ್ತು ಸ್ಥಳದ ಅಗತ್ಯವಿದೆ. ಇದು ಆಪಲ್‌ನ ಏರ್‌ಡ್ರಾಪ್ ಸೇವೆಯನ್ನು ಹೋಲುತ್ತದೆ. ಸಾಧನಗಳನ್ನು ಜೋಡಿಸಲು ಇದು ಸ್ಥಳ ಮತ್ತು ಬ್ಲೂಟೂತ್ ಮತ್ತು ಡೇಟಾ ವರ್ಗಾವಣೆಯನ್ನು ಪೂರ್ಣಗೊಳಿಸಲು ವೈ-ಫೈ ಅನ್ನು ಬಳಸುತ್ತದೆ. ಈ ಸೇವೆ ವೇಗವಾಗಿದ್ದು, ಜನಪ್ರಿಯ ಫೈಲ್-ವರ್ಗಾವಣೆ ಸೇವೆಗಳಾದ SHAREit ಮತ್ತು Xender ಗಳಿಗೆ ಪ್ರತಿಸ್ಪರ್ಧಿಯಾಗುವುದರಲ್ಲಿ ಅನುಮಾನವಿಲ್ಲ.

ಗೂಗಲ್‌ ನಿಯರ್‌ಬೈ ಶೇರಿಂಗ್‌

ಗೂಗಲ್‌ ನಿಯರ್‌ಬೈ ಶೇರಿಂಗ್‌ ಕೆಲವು ಹೊಸ ಸೆಟ್ಟಿಂಗ್ಸ್‌ನ್ನು ಒಳಗೊಂಡಿವೆ. ಮೊದಲನೆಯದಾಗಿ, ನಿಮಗೆ ಫೈಲ್‌ಗಳನ್ನು ಹಂಚಿಕೊಳ್ಳಲು ಯಾರು ಸಮರ್ಥರಾಗಿದ್ದಾರೆ ಎಂಬುದನ್ನು ಟಾಗಲ್ ಮಾಡಬಹುದು. ಬಳಕೆದಾರರು ಅದನ್ನು ಯಾರಿಗಾದರೂ ಅಥವಾ ತಮ್ಮ ಸಂಪರ್ಕಗಳಿಗೆ ಮಾತ್ರ ಹೊಂದಿಸಬಹುದು. ನಿಮ್ಮ ಫೋನ್‌ನಲ್ಲಿ ನಿಯರ್‌ಬೈ ಶೇರಿಂಗ್‌ ಸ್ಥಾಪಿಸಿದ ನಂತರ, ತ್ವರಿತವಾಗಿ ಪ್ಯಾನೆಲ್‌ ತೆರೆಯಲು, ತ್ವರಿತ ಸೆಟ್ಟಿಂಗ್ಸ್‌ ಬಟನ್‌ ಸಹ ಇದೆ. ಫೈಲ್‌ಗಳನ್ನು ಸ್ವೀಕರಿಸಲು ಹಾಗೂ ನಿಮ್ಮ ವಿಸಿಬಿಲಿಟಿ ಟಾಗಲ್ ಮಾಡಲು ಈ ಪ್ಯಾನೆಲ್‌ ಅನುಮತಿಸುತ್ತದೆ.

ಗೂಗಲ್‌ ನಿಯರ್‌ಬೈ ಶೇರಿಂಗ್‌: ಹೊಸತೇನಿದೆ..?

ಗೂಗಲ್‌ ನಿಯರ್‌ಬೈ ಶೇರಿಂಗ್‌: ಹೊಸತೇನಿದೆ..?

ಇದಲ್ಲದೆ, ನಿಮ್ಮ ಸಾಧನದಲ್ಲಿ ನಿಯರ್‌ಬೈ ಶೇರಿಂಗ್‌ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ನೀವು ಮೂರು ವಿಭಿನ್ನ ಹೊಸ ಸೆಟ್ಟಿಂಗ್ಸ್‌ನ್ನು ನೋಡಬಹುದು. ಅಗತ್ಯವಿದ್ದಾಗ ಸಣ್ಣ ಫೈಲ್‌ಗಳನ್ನು ವರ್ಗಾಯಿಸಲು ಮೊಬೈಲ್ ಡೇಟಾ ಬಳಸಲು ಬಳಕೆದಾರರು ‘ಡೇಟಾ' ಮೋಡ್ ಆಯ್ಕೆ ಮಾಡಬಹುದು. ನೀವು ವೈ-ಫೈನಲ್ಲಿರುವಾಗ ಫೈಲ್‌ಗಳನ್ನು ವರ್ಗಾಯಿಸಲು ‘ವೈ-ಫೈ ಮಾತ್ರ' ಮೋಡ್‌ನ್ನು ಬಳಸುತ್ತದೆ. ಕೊನೆಯದಾಗಿ ‘ಇಂಟರ್‌ನೆಟ್ ಇಲ್ಲದೆ' ಯಾವಾಗಲೂ ಫೈಲ್‌ಗಳನ್ನು ಆಫ್‌ಲೈನ್‌ನಲ್ಲಿ ವರ್ಗಾಯಿಸುತ್ತದೆ.

ಗೂಗಲ್‌ ನಿಯರ್‌ಬೈ

ಫೈಲ್‌ಗಳನ್ನು ಹಂಚಿಕೊಳ್ಳುವುದು ಸರಳವಾಗಿದೆ. ನಿಮ್ಮ ಫೈಲ್ ಮ್ಯಾನೇಜರ್‌ನಲ್ಲಿ ನೀವು ಒಂದೇ ಅಥವಾ ಒಂದು ಗುಂಪಿನ ಫೈಲ್‌ಗಳನ್ನು ಆಯ್ಕೆ ಮಾಡಿದ ನಂತರ, ನೀವು ಗೂಗಲ್‌ ನಿಯರ್‌ಬೈ ಶೇರಿಂಗ್‌ ಬಟನ್ ಕಾಣುತ್ತೀರಿ. ಈ ಗುಂಡಿಯನ್ನು ಕ್ಲಿಕ್ ಮಾಡಿದಾಗ ನೀವು ವರ್ಗಾಯಿಸಬಹುದಾದ ಹತ್ತಿರದ ಸಾಧನಗಳನ್ನು ಪ್ರದರ್ಶಿಸುತ್ತದೆ. ನೀವು ಸಾಧನವನ್ನು ಆರಿಸಿದಾಗ, ಇತರ ವ್ಯಕ್ತಿಯು ಅದನ್ನು ಒಪ್ಪಿಕೊಳ್ಳುವುದು ಅವಶ್ಯವಾಗಿರುತ್ತದೆ.

ಎರಡು ಪಿಕ್ಸೆಲ್

ಎರಡು ಪಿಕ್ಸೆಲ್ ಸಾಧನಗಳಲ್ಲಿ ಈ ಫೀಚರ್‌ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ. ಆದರೆ, ಇದು ಪಿಕ್ಸೆಲ್ 2 ಎಕ್ಸ್‌ಎಲ್ ಮತ್ತು ಒನ್‌ಪ್ಲಸ್ 7 ಟಿ ಪ್ರೊ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಈ ಫೀಚರ್‌ನ್ನು ಸಾರ್ವಜನಿಕವಾಗಿ ಘೋಷಿಸಿಲ್ಲವಾದರೂ, ಮೇ ತಿಂಗಳಲ್ಲಿ ಗೂಗಲ್‌ I/O ಸಮ್ಮೇಳನದಲ್ಲಿ ಘೋಷಿಸುವ ನಿರೀಕ್ಷೆಯಿದೆ.

Best Mobiles in India

English summary
Google Nearby Sharing Set To Compete With ShareIt, Apple AirDrop: Features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+