ಈ ದೀಪಾವಳಿಗೆ ಗೂಗಲ್ ಪೇ ಸ್ಟಾಂಪ್ಸ್ ಸಂಗ್ರಹಿಸಿ ಭಾರೀ ಬಹುಮಾನ ಗೆಲ್ಲಿ..!
ಸರ್ಚ್ ಇಂಜಿನ್ ದೈತ್ಯ ಗೂಗಲ್‌ನ ಡಿಜಿಟಲ್ ವ್ಯಾಲೆಟ್ ಗೂಗಲ್ ಪೇ ತನ್ನ ಬಳಕೆದಾರರಿಗೆ ದೀಪಾವಳಿ ಉಡುಗೊರೆಯನ್ನು ನೀಡಲು ಮುಂದಾಗಿದೆ. ಹೌದು, ಗೂಗಲ್ ಪೇ ದೀಪಾವಳಿ ಆಫರ್‌ನಲ್ಲಿ 5 ವಿಶೇಷ ಸ್ಟಾಂಪ್‌ಗಳನ್ನು ಸಂಗ್ರಹಿಸುವ ಮೂಲಕ ಭರ್ಜರಿ ಬಹುಮಾನ ಗೆಲ್ಲಬಹುದಾಗಿದೆ. ನಿಮ್ಮ ಸ್ನೇಹಿತರಿಗೆ ಉಡುಗೊರೆಗಳನ್ನು ಕಳುಹಿಸುವ ಮೂಲಕ ಅಥವಾ ನಿಮ್ಮ ಸ್ನೇಹಿತರಿಂದ ಉಡುಗೊರೆಗಳನ್ನು ಪಡೆಯುವ ಮೂಲಕ ಸ್ಟಾಂಪ್‌ಗಳನ್ನು ಸಂಗ್ರಹಿಸಬಹುದು. ಆಗಿದ್ರೆ, ಗೂಗಲ್ ಪೇನ ದೀಪಾವಳಿ ಆಫರ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

5 ಸ್ಟಾಂಪ್ ಸಂಗ್ರಹಿಸಿ
ಗೂಗಲ್ ಪೇ ಬಳಕೆದಾರರು ದೀಪಾವಳಿ ಆಫರ್‌ನಲ್ಲಿ ಬಹುಮಾನ ಗೆಲ್ಲಲು 5 ವಿಶೇಷ ಸ್ಟಾಂಪ್‌ಗಳನ್ನು ಸಂಗ್ರಹಿಸಬೇಕು. ಆ ಸ್ಟಾಂಪ್‌ಗಳೆಂದರೆ ಝೂಮ್ಕಾ, ಫ್ಲವರ್, ದಿಯಾ, ಲ್ಯಾಂಟರ್ನ್, ರಂಗೋಲಿಯಾಗಿದ್ದು, ಸ್ನೇಹಿತರ ಸಹಾಯದ ಮೂಲಕ ಈ ಸ್ಟಾಂಪ್‌ಗಳನ್ನು ಗಳಿಸಬಹುದು.

ಏನದು ಆಫರ್..?
ಈ ದೀಪಾವಳಿ ಸಮಯದಲ್ಲಿ 5 ವಿಶೇಷ ಸ್ಟಾಂಪ್‌ಗಳನ್ನು ಸಂಗ್ರಹಿಸುವ ಮೂಲಕ ನೀವು ನೇರವಾಗಿ 251 ರೂ. ಗೆಲ್ಲಬಹುದಾಗಿದೆ. ಇದಲ್ಲದೇ, ಬೋನಸ್ ಟಿಕೇಟ್ ಮೂಲಕ ನೀವು ಅದೃಷ್ಟಶಾಲಿಯಾಗಿದ್ದರೆ 1 ಲಕ್ಷ ರೂಪಾಯಿಯನ್ನು ಗೆಲ್ಲಬಹುದು.

ಮೂರು ವಿಧ
ಸ್ಟಾಂಪ್‌ಗಳನ್ನು ಸಂಗ್ರಹಿಸಲು ಮೂರು ವಿಧಗಳಿದ್ದು. ಪ್ರತಿ ವಿಧಾನದ ಮೂಲಕ ಗರಿಷ್ಠ 5 ಸ್ಟಾಂಪ್‌ಗಳನ್ನು ಗಳಿಸಬಹುದಾಗಿದೆ. 35 ರೂ.ಗೂ ಹೆಚ್ಚಿನ ವಹಿವಾಟು ನಡೆಸುವ ಮೂಲಕ, ದೀವಾಳಿ ಸ್ಕ್ಯಾನರ್ ಬಳಸುವ ಮುಖೇನ ಮತ್ತು ಸ್ನೇಹಿತರಿಗೆ ಉಡುಗೊರೆ ನೀಡುವ ಮೂಲಕ ಸ್ಟಾಂಪ್‌ಗಳನ್ನು ಸಂಗ್ರಹಿಸಬಹುದು.

ಕೊನೆ ದಿನ..?
5 ವಿವಿಧ ಸ್ಟಾಂಪ್‌ಗಳನ್ನು ಸಂಗ್ರಹಿಸಲು ಅಕ್ಟೋಬರ್ 31, 2019 ಮಧ್ಯರಾತ್ರಿ 11:59ರವರೆಗೂ ಅವಕಾಶವಿದ್ದು, ಮೂರು ವಿಧಗಳ ಮೂಲಕ ದಿನಕ್ಕೆ 15 ಸ್ಟಾಂಪ್‌ಗಳನ್ನು ಸಂಗ್ರಹಿಸಬಹುದು. ಆ ಸ್ಟಾಂಪ್‌ಗಳು ಕೂಡ ನಿಯಮಿತವಾಗಿರದೆ ವೈವಿಧ್ಯಮಯವಾಗಿ ನಿಮ್ಮ ವ್ಯಾಲೆಟ್‌ಗೆ ಬಂದು ಸೇರುತ್ತವೆ.

ಹೇಗೆ ಅಂತೀರಾ..?
ಮೊದಲು ನಿಮ್ಮ ಗೂಗಲ್ ಪೇ ಆಪ್‌ನ್ನು ಅಪ್‌ಡೇಟ್ ಮಾಡಿಕೊಳ್ಳಿ. ನಂತರ, ದೀಪಾವಳಿ ಬಾಕ್ಸ್ ಒಪನ್ ಮಾಡಿ, ನಿಮ್ಮ ಸ್ನೇಹಿತರಿಗೆ ಉಡುಗೊರೆಗಳನ್ನು ಕಳುಹಿಸುವ ಮೂಲಕ ಸ್ಟಾಂಪ್‌ಗಳನ್ನು ಸಂಗ್ರಹಿಸಬಹುದಾಗಿದೆ. ಗೂಗಲ್ ಪೇನ ಆಫರ್‌ಗೆ ಷರತ್ತುಗಳು ಅನ್ವಯಿಸುತ್ತವೆ.


Click it and Unblock the Notifications








