ಐಫೋನ್ ಲೈವ್ ಫೋಟೋ ಮಾದರಿಯಲ್ಲಿ ಗೂಗಲ್ ಮೋಷನ್ ಫೋಟೊ
ಕ್ಯಾಮೆರಾ ಸೆಟರ್ ಅನ್ನು 1.5 ಸೆಕೆಂಡ್ಸ್ ಗಳ ಕಾಲ ಹಿಡಿದಿಟ್ಟುಕೊಂಡರೆ ಅಂದೊದು ಸಣ್ಣ ಅನಿಮೇಷನ್ ವಿಡಿಯೋವಾಗುತ್ತಿತ್ತು, ಅದುವೇ ಜಿಫ್ ಮಾದರಿಯಲ್ಲಿ ಸೇವ್ ಅಗುತ್ತಿತ್ತು.
ಈ ಹಿಂದೆ ಐಫೋನ್ ಬಳಕೆದಾರಿಗೆ ಆಪಲ್ ಲೈವ್ ಫೋಟೋಸ್ ಎನ್ನುವ ಆಯ್ಕೆಯೊಂದನ್ನು ನೀಡಿತ್ತು. ಇದು ಐಫೋನ್ ನಲ್ಲಿ ಕ್ಯಾಪಚರ್ ಮಾಡಿದಂತಹ ಚಿತ್ರಗಳನ್ನು ಸೇರಿಸಿ ಕೆಲವು ನಿಮಿಷಗಳ ವಿಡಿಯೋವನ್ನು ಮಾಡುವುದಾಗಿತ್ತು. ಅಂದರೆ ಅನಿಮೇಷನ್ ಮಾದರಿಯಲ್ಲಿ ಚಿತ್ರಗಳನ್ನು ಸೆರೆಹಿಡಿಯುವುದು.

ಕ್ಯಾಮೆರಾ ಸೆಟರ್ ಅನ್ನು 1.5 ಸೆಕೆಂಡ್ಸ್ ಗಳ ಕಾಲ ಹಿಡಿದಿಟ್ಟುಕೊಂಡರೆ ಅಂದೊದು ಸಣ್ಣ ಅನಿಮೇಷನ್ ವಿಡಿಯೋವಾಗುತ್ತಿತ್ತು, ಅದುವೇ ಜಿಫ್ ಮಾದರಿಯಲ್ಲಿ ಸೇವ್ ಅಗುತ್ತಿತ್ತು. ಇದು ಸ್ಟೀಲ್ ಫೋಟೊ ಮಾದರಿಯಲ್ಲಿ ಕಂಡರು ಅದರ ಮೇಲೆ ಕ್ಲಿಕ್ ಮಾಡಿದರೆ ಮಾತ್ರ ಅದು ತೆರೆದುಕೊಳ್ಳುತ್ತಿತ್ತು.
ಇದು ಇಲ್ಲಿಯವರೆಗೆ ಐಫೋನ್ ಬಳಕೆದಾದರಿಗೆ ಮಾತ್ರವೇ ಸಿಮೀತವಾಗಿತ್ತು. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಫೇಸ್ ಬುಕ್ ಲೈಚ್ ಫೋಟ್ ಗಳಿಗೆ ಸಪೋರ್ಟ್ ಮಾಡಲು ಮುಂದಾಗಿತ್ತು. ಅದುವೇ ಐಫೋನ್ ಬಳಕೆದಾರರಿಗೆ ಮಾತ್ರ, ಆದರೆ ಸದ್ಯ ಸಿಹಿ ಸುದ್ದಿ ಲಭ್ಯವಾಗಿದೆ.
ಗೂಗಲ್ ಈ ಆಯ್ಕೆಯನ್ನು ಪಿಕ್ಸಲ್ 2 ಮತ್ತು ಪಿಕ್ಸಲ್ 2 XL ಸ್ಮಾರ್ಟ್ ಫೋನ್ ಗಳಲ್ಲೂ ನೀಡಲು ಮುಂದಾಗಿದೆ. ಸದ್ಯ ಇದು ಪ್ರಯೋಗಾತ್ಮಕ ಹಂತದಲ್ಲಿದ್ದು, ಶೀಘ್ರವೇ ಬೇರೆ ಬಳಕೆದಾರರಿಗೂ ಈ ಆಯ್ಕೆಯೂ ದೊರೆಯಲಿದೆ ಎನ್ನಲಾಗಿದೆ.
ಗೂಗಲ್ ತನ್ನ ಈ ಹೊಸ ಆಯ್ಕೆಗೆ ಗೂಗಲ್ ಮೋಷನ್ ಫೋಟೋಸ್ ಎಂದು ನಾಮಕರಣವನ್ನು ಮಾಡಿದೆ ಎನ್ನಲಾಗಿದೆ. ಈಗಗಾಲೇ ತನ್ನ ಬಳಕೆದಾರಿಗೆ ಹೊಸ ಹೊಸ ಆಯ್ಕೆಯನ್ನು ಗೂಗಲ್ ನೀಡುತ್ತಿದೆ. ಇದರೊಂದಿಗೆ ಇದು ಸೇರಿ ಹೊಸ ಅಲೆಯನ್ನು ಸೃಷ್ಟಿಸಲಿದೆ.


Click it and Unblock the Notifications








