ಗೂಗಲ್ ಫೋಟೋಸ್‌ಗೂ ಬಂತು ಹೊಸ ಸಮಸ್ಯೆ..!
ಈಗಾಗಲೇ ಸ್ಮಾರ್ಟ್ ಫೋನ್ ಮಾರುಟಕ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಗೂಗಲ್ ಫೋಟೋಸ್, ತನ್ನ ಬಳಕೆದಾರರಿಗೆ ಹೆಚ್ಚಿನ ಪ್ರಮಾದ ಆಯ್ಕೆಗಳನ್ನು ನೀಡುವ ಮೂಲಕವೇ ಸದ್ದು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಇತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆ ಮಾಡಿಕೊಳ್ಳುವವರು ಗೂಗಲ್ ಫೋಟೋಸ್ ಆಯ್ಕೆಯನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ದಿನದಿಂದ ದಿನಕ್ಕೆ ಹೊಸ ಹೊಸ ಆಯ್ಕೆಗಳನ್ನು ಗೂಗಲ್ ಫೋಟೋಸ್ ಗೆ ಸೇರಿಸುತ್ತಿರುವ ಗೂಗಲ್, ತನ್ನ ಬಳಕೆದಾರರಿಗೆ ಹೊಸ ಮಾದರಿಯ ಲಿಮಿಟ್ ಒಂದನ್ನು ನಿರ್ಧಾರ ಮಾಡಿದೆ. ಈ ಮೂಲಕ ಬಳಕೆದಾರರಿಗೆ ಹೆಚ್ಚಿನ ಫೋಟೋವನ್ನು ಸೇರಿಸಲು ನಿಗಧಿಯೊಂದನ್ನು ನೀಡಿದೆ. ಇದು ಕೇಲವ ಗೂಗಲ್ ಫೋಟೋಸ್ ಆಲ್ಬಮ್ ಬಳಕೆ ಮಾಡಿಕೊಳ್ಳುವವರಿಗೆ ಮಾತ್ರವೇ ಎನ್ನಲಾಗಿದೆ.

ಗೂಗಲ್ ಫೋಟೋಸ್ ನಲ್ಲಿ ಇರುವ ಲೈವ್ ಆಲ್ಬಮ್ ಆಯ್ಕೆಯನ್ನು ಬಳಕೆಮಾಡಿಕೊಳ್ಳುವ ಸ್ಮಾರ್ಟ್ ಫೋನಿನಲ್ಲಿ ಹೆಚ್ಚಿನ ಪ್ರಮಾಣದ ಫೋಟೋಗಳನ್ನು ಸ್ಟೋರ್ ಮಾಡಿಕೊಳ್ಳಲು ಗೂಗಲ್ ಅವಕಾಶ ನೀಡದೆ ಕೇವಲ 10000 ಪೋಟೋಗಳನ್ನು ಮಾತ್ರವೇ ಸೇವ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಕ್ಕೂ ಮೊದಲು ಎಷ್ಟು ಪೋಟೋಗಳನ್ನು ಬೇಕಾದರು ಸೇವ್ ಮಾಡಿಕೊಳ್ಳಬಹುದಾಗಿತ್ತು.
ಲೈವ್ ಪೋಟೋಸ್ ಆಲ್ಬಮ್ ನಲ್ಲಿ ನೀವು ಫೋಟೋಗಳನ್ನು ಸ್ಟೋರ್ ಮಾಡಿಕೊಳ್ಳಬಹುದಾಗಿತ್ತು, ಇದರಲ್ಲಿ ವೈಯಕ್ತಿಕ ಮತ್ತು ಸಾಕು ಪ್ರಾಣೀಗಳ ಫೋಟೋವನ್ನು ಸ್ಟೋರ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಇದರಿಂದಾಗಿ ಸಾಕಷ್ಟು ಮಂದಿ ತಮ್ಮ ಫೋಟೋಗಳನ್ನು ಆಟೋ ಮೆಟಿಕ್ ಆಗಿ ಆಲ್ಬಮ್ ನಲ್ಲಿ ಸೇರಿಸಿಕೊಳ್ಳುವಂತೆ ಮಾಡಿದ್ದರು ಆದರೆ ಈಗ ಹೊಸ ಆಯ್ಕೆಯಿಂದಾಗಿ ಹೊಸ ಸಮಸ್ಯೆ ಎದುರಾಗಿದೆ.

ಆದರೆ ಇದಕ್ಕೊಂದು ಪರಿಹಾರವನ್ನು ಸಹ ಕಂಡುಕೊಳ್ಳಲಾಗಿದೆ. ಈ ಮೂಲಕ ನೀವು 10000 ಪೋಟೋಗಳನ್ನು ಆಡ್ ಮಾಡಿದ ನಂತರದಲ್ಲಿಯೂ ಹೆಚ್ಚು ಫೋಟೋಗಳನ್ನು ಆಡ್ ಮಾಡಿಕೊಳ್ಳಬಹುದಾಗಿದೆ. ಇದನ್ನು ಮಾಡುವುದು ಹೇಗೆ ಅಂದರೆ
1. ಮೊದಲು ಗೂಗಲ್ ಫೋಟೋಸ್ ಗೆ ಹೋಗಿ
2. ಹೊಸದೊಂದು ಆಲ್ಬಮ್ ಅನ್ನು ಒಪನ್ ಮಾಡಿ
3. ಮಾಡಿದ ನಂತರದಲ್ಲಿ ಆಟೋ ಸಿಂಕ್ ನೀಡಿ
4. ವ್ಯಕ್ತಿಗಳು-ಪ್ರಾಣೀಗಳನ್ನು ಆಯ್ಕೆ ಮಾಡಿಕೊಳ್ಳಿ
5. ನಂತರ ಟ್ರನ್ ಆನ್ ಮಾಡಿ.
ಹೀಗೆ ಮಾಡುವುದರಿಂದಾಗಿ ನೀವು ಸುಲಭವಾಗಿ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಮತ್ತಷ್ಟು ಫೋಟೋಗಳನ್ನು ಸೇವ್ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








