Home
Apps

2017ರ 'ಗೂಗಲ್ ಪ್ಲೇಸ್ಟೋರ್' ವರದಿ ರಿಲೀಸ್!!..ಭಾರತದಲ್ಲಿ ಅತಿಹೆಚ್ಚು ಡೌನ್‌ಲೋಡ್ ಆದ ಆಪ್‌ಗಳ ಲೀಸ್ಟ್!!

ಈ ವರ್ಷ ಭಾರತ ಸೇರಿದಂತೆ ವಿಶ್ವದಲ್ಲಿಯೇ ''ಫೋಟೊ ಎಡಿಟರ್'' ಆಪ್ ಅತಿ ಹೆಚ್ಚು ಡೌನ್‌ಲೋಡ್ ಆದ ಆಪ್ ಎಂಬ ದಾಖಲೆಯನ್ನು ಸೃಷ್ಟಿಸಿದೆ.!!

By Bhaskar N J

ಈ ವರ್ಷ ಅತ್ಯಧಿಕ ಡೌನ್‌ಲೋಡ್‌ ಆದ ಆಪ್‌ಗಳು, ಸಿನಿಮಾ, ಪುಸ್ತಕ ಇತ್ಯಾದಿಗಳ ವಿವರಗಳ ವಾರ್ಷಿಕ ವರದಿಯನ್ನು ''ಗೂಗಲ್ ಪ್ಲೇಸ್ಟೋರ್'' ಬಿಡುಗಡೆ ಮಾಡಿದೆ.! ಈ ವರ್ಷ ಭಾರತ ಸೇರಿದಂತೆ ವಿಶ್ವದಲ್ಲಿಯೇ ''ಫೋಟೊ ಎಡಿಟರ್'' ಆಪ್ ಅತಿ ಹೆಚ್ಚು ಡೌನ್‌ಲೋಡ್ ಆದ ಆಪ್ ಎಂಬ ದಾಖಲೆಯನ್ನು ಸೃಷ್ಟಿಸಿದೆ.!!

ಇನ್ನು ಬಾಹುಬಲಿ ಹವಾ ಗೂಗಲ್ ಪ್ಲೇಸ್ಟೋರ್‌ನಲ್ಲಿಯೂ ಹಬ್ಬಿದ್ದು, 'ಸಾಹೋರೆ ಬಾಹುಬಲಿ' ಹಾಡು ಮತ್ತು 'ಬಾಹುಬಲಿ: ದಿ ಗೇಮ್‌' ಅನ್ನು ಹೆಚ್ಚು ಜನರು ಡೌನ್‌ಲೋಡ್ ಮಾಡಿದ್ದಾರೆ.ಕೆಲವೇ ತಿಂಗಳಿನಲ್ಲಿ ಗೂಗಲ್ ತೇಜ್ ಆಪ್‌ ಕೂಡ ಮೊದಲ ಸ್ಥಾನಕ್ಕೇರಿದ್ದು, ಹಾಗಾದರೆ, ಯಾವ ಯಾವ ಕೆಟಗೆರಿಯಲ್ಲಿ ಯಾವ ಯಾವ ಪ್ರಾಡೆಕ್ಟ್‌ಗಳು ಹೆಚ್ಚು ಪ್ರಚಲಿತವಾಗಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಹೆಚ್ಚು ಪ್ರಚಲಿತ ಅಪ್ಲಿಕೇಶನ್‌ಗಳು 2017

ಹೆಚ್ಚು ಪ್ರಚಲಿತ ಅಪ್ಲಿಕೇಶನ್‌ಗಳು 2017

ಭಾರತದಲ್ಲಿ ''ಫೋಟೊ ಎಡಿಟರ್'' ಆಪ್ ಅತಿ ಹೆಚ್ಚು ಡೌನ್‌ಲೋಡ್ ಆಗಿದ್ದರೆ, ಮೆಸೆಂಜರ್‌ ಲೈಟ್ ಆಪ್ ಅತಿ ಹೆಚ್ಚು ಡೌನ್‌ಲೋಡ್ ಆದ ಆಪ್‌ಗಳ ಸ್ಥಾನದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರೆ ವೀಡಿಯೊ-ಆನ್-ಡಿಮಂಡ್ ಅಪ್ಲಿಕೇಶನ್ ಎಲ್‌ಟಿ ಬಲಾಜಿ ಮತ್ತು ಪೇಟಿಎಂ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

ಟಾಪ್ ಮೊಬೈಲ್ ವಾಲೆಟ್‌ಗಳು 2017!!

ಟಾಪ್ ಮೊಬೈಲ್ ವಾಲೆಟ್‌ಗಳು 2017!!

ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಪಾವತಿ ಮಾಡುವ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್‌ ವ್ಯವಸ್ಥೆ ಆಪ್‌ಗಳು ಬಹುಬೇಗ ಬೆಳವಣಿಗೆ ಹೊಂದುತ್ತಿದ್ದು, ಕೆಲವೇ ತಿಂಗಳುಗಳ ಹಿಂದೆ ಬಿಡುಗಡೆಯಾಗಿದ್ದ ಗೂಗಲ್‌ನ ತೇಜ್ ಆಪ್‌ ಇದರಲ್ಲಿ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಫೋನ್‌ಪೇ ಹಾಗೂ ಭೀಮ್ ಆಪ್‌ಗಳಿದ್ದು, ಪೇಟಿಎಂ ಕೂಡ ಪೈಪೋಟಿ ನೀಡುತ್ತಿದೆ.!!

ಗೇಮಿಂಗ್ ಅಪ್ಲಿಕೇಶನ್‌ಗಳು 2017!!

ಗೇಮಿಂಗ್ ಅಪ್ಲಿಕೇಶನ್‌ಗಳು 2017!!

2017 ರಲ್ಲಿ ಭಾರತದಲ್ಲಿ ಅತ್ಯಂತ ಜನಪ್ರಿಯ ಗೇಮಿಂಗ್ ಅಪ್ಲಿಕೇಶನ್‌ ಆಗಿ ಬಾಹುಬಲಿ: ದಿ ಗೇಮ್, ಬಾಹುಬಲಿ 2 ಗುರುತಿಸಿಕೊಂಡಿದೆ. ನಂತರದ ಸ್ಥಾನಗಳನ್ನು WWE ಚಾಂಪಿಯನ್ಸ್ ಫ್ರೀ ಫಜಲ್ RPG, ಸೂಪರ್ ಮಾರಿಯೋ ರನ್, ಡಾ: ಡ್ರೈವಿಂಗ್ 2, ಮತ್ತು ಪೋಕ್ಮನ್ ಡ್ಯುಯಲ್‌ಗಳು ಪಡೆದುಕೊಂಡಿವೆ.!!

ಸಿನಿಮಾ  ಅಪ್ಲಿಕೇಶನ್‌ಗಳು 2017!!

ಸಿನಿಮಾ ಅಪ್ಲಿಕೇಶನ್‌ಗಳು 2017!!

ಈ ವರ್ಷದ ಭಾರತದಲ್ಲಿ ಅತ್ಯಂತ ಜನಪ್ರಿಯ ಚಲನಚಿತ್ರಗಳ ಪಟ್ಟಿಯಲ್ಲಿ "ಡಿಯರ್ ಜಿಂದಗಿ" ಮೊದಲ ಸ್ಥಾನದಲ್ಲಿ ಜನಿಂತಿದೆ. ನಂತರ ಮೋನಾ, ವಂಡರ್ ವುಮನ್, ದಿ ಬಾಸ್ ಬೇಬಿ, ಮತ್ತು ಡಾಕ್ಟರ್ ಸ್ಟ್ರೇಂಜ್ ಸಿನಿಮಾ ಆಪ್‌ಗಳು ಪ್ರಾಬಲ್ಯ ಸಾಧಿಸಿವೆ.!! ಅತಿ ಹೆಚ್ಚು ಡೌನ್‌ಲೋಡ್ ಆದ ಚಿತ್ರ ಎಂಬ ಖ್ಯಾತಿಗೆ "ಸಾಹೋರೆ ಬಾಹುಬಲಿ" ಸಿನಿಮಾ ಪಾತ್ರವಾಗಿದ..!!

ಟಾಪ್ ಪುಸ್ತಕಗಳು 2017

ಟಾಪ್ ಪುಸ್ತಕಗಳು 2017

2017 ನೇ ವರ್ಷದ ಟಾಪ್ ಪುಸ್ತಕಗಳ ಪಟ್ಟಿಯಲ್ಲಿ "ಅನ್‌ಸ್ಯೂಟೆಡ್ ಬಾಯ್" ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ನ್ಯೂ ಮೀಡಿಯಾ ವಿಂಗ್ಸ್ ಇಂಡಿಯಾ 2017, ರಿಷಿ ಕಪೂರ್ ಅವರ ಖುಲ್ಲಾಮ್ ಖುಲ್ಲಾ: ರಿಷಿ ಕಪೂರ್ ಅನ್ಸೆನ್ಸಾರ್ಡ್, ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರ "ಐ ಡೂ ವಾಟ್ ಐ ಡು" ಮತ್ತು ಸದ್ಗುರು ಅವರ ಸೋರ್ಸ್ ಆಫ್ ಯೋಗ ನಂತರ ಸ್ಥಾನದಲ್ಲಿವೆ.

Best Mobiles in India

English summary
What was your favourite app this year?.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+