ಡ್ರೈನರ್ ಬೋಟ್ ಎಂದರೆ ಏನು ಗೊತ್ತಾ? ಇದು ನಿಮ್ಮ ಮೊಬೈಲಿಗೆ ಮಾರಕ
ನಿಮ್ಮ ಆಂಡ್ರಾಯ್ಡ್ ಫೋನ್ ಮುಟ್ಟಿದ ಕೂಡಲೇ ಬಿಸಿಯಾದಂತೆ ಭಾಸವಾಗುತ್ತದೆಯೇ ಅಥವಾ ನಿಧಾನವಾಗಿ ಕಾರ್ಯನಿರ್ವಹಿಸುವುದು, ಪದೇ ಪದೇ ಚಾರ್ಜ್ ಮಾಡುವಂತಾಗುವುದು ಅಥವಾ ಅತೀ ಹೆಚ್ಚು ಡಾಟಾ ಬಳಕೆ ಮಾಡುವುದು ಇತ್ಯಾದಿ ಯಾವುದಾದರೂ ಸಮಸ್ಯೆ ಇದೆಯೇ?

ಡ್ರೈನರ್ ಬೋಟ್:
ಇದು ಡ್ರೈನರ್ ಬೋಟ್ ನ ಕಾರಣದಿಂದಾಗಿರುವ ಸಾಧ್ಯತೆ ಇದೆ. ಗೂಗಲ್ ಪ್ಲೇ ಆಪ್ಸ್ ಮೂಲಕ ಸುಮಾರು 10 ಮಿಲಿಯನ್ ಗೂ ಹೆಚ್ಚು ಡೌನ್ ಲೋಡ್ ಕಂಡಿರುವ ಇದು ಈ ವಂಚನೆ ಕಾರ್ಯಾಚರಣೆಯ ಪ್ರಮುಖ ಆರೋಪಿ ಎನ್ನಲಾಗಿದೆ.

ಹಿಡನ್ ಫೈಲ್ ಗಳನ್ನು ಹೊಂದಿರುತ್ತದೆ:
ನಾವು ಹೇಳುತ್ತಿರುವುದು ಏನು ಎಂದು ನಿಮಗೆ ಅರ್ಥವಾಗಿಲ್ಲದೇ ಇರಬಹುದು. ವಿವರವಾಗಿ ಹೇಳ್ತಿದ್ದೀವಿ ಕೇಳಿ. ನಿಮ್ಮ ಆಸಕ್ತಿಗೆ ಅನುಗುಣವಾಗಿ ನಿರ್ಮಾಣಗೊಂಡಿರುವ ಆಪ್ ಗಳಾಗಿರುವ ಮೇಕಪ್, ಬ್ಯೂಟಿ ಮತ್ತು ಮೊಬೈಲ್ ಗೇಮಿಂಗ್ ಗೆ ಸಂಬಂಧಿಸಿದ ಆಪ್ ಗಳನ್ನು ಡೌನ್ ಲೋಡ್ ಮಾಡಿದಾಗ ನಿಮ್ಮ ಫೋನಿಗೆ ಹಿಡನ್ ವೀಡಿಯೋಗಳು ಸೇರಿಕೊಳ್ಳುತ್ತದೆ.

ಪ್ರತಿ ತಿಂಗಳು 10ಜಿಬಿ ಬ್ಯಾಂಡ್ ವಿಡ್ತ್ ಬಳಕೆ:
ಇದು 10ಜಿಬಿ ಬ್ಯಾಂಡ್ ವಿಡ್ತ್ ನ್ನು ಪ್ರತಿ ತಿಂಗಳು ನುಂಗುತ್ತವೆ.ಆದರೆ ಈ ವಿಡಿಯೋಗಳನ್ನು ನೀವು ಯಾವಾಗಲೂ ನೋಡುವುದಿಲ್ಲ ಅಥವಾ ನೋಡುವುದಕ್ಕೆ ಸಾಧ್ಯವೂ ಇಲ್ಲ. ಆದರೆ ಇವು ಮೋಸದ ಜಾಹೀರಾತು ಆದಾಯವನ್ನು ಉತ್ಪತ್ತಿ ಮಾಡುತ್ತವೆ.

ಒರಾಕಲ್ ನಿಂದ ಅನ್ವೇಷಣೆ:
ಈ ರೀತಿ ಗ್ರಾಹಕರಿಗೆ ಸ್ಪಷ್ಟವಾಗಿ ಮತ್ತು ನೇರವಾಗಿ ಹಣಕಾಸು ಹಾನಿಯನ್ನು ಉಂಟುಮಾಡುವ ಪ್ರಮುಖ ಜಾಹೀರಾತು ವಂಚನೆ ಕಾರ್ಯಾಚರಣೆಯಲ್ಲಿ ಡ್ರೈನರ್ಬೋಟ್ ಕೂಡ ಒಂದಾಗಿದೆ ಎಂದು ಓರಾಕಲ್ ಡಾಟಾ ಕ್ಲೌಡ್ ನ ಜನರಲ್ ಮ್ಯಾನೇಜರ್ ಮತ್ತು ಉಪಾಧ್ಯಕ್ಷರಾಗಿರುವ ಎರಿಕ್ ರೋಝಾ ಅವರು ತಿಳಿಸಿದ್ದಾರೆ.

100ಡಾಲರ್ ಗೂ ಅಧಿಕ ಹಣ:
ಡ್ರೈನರ್ಬೋಟ್ ಡಾಟಾದಿಂದ ಸೋಂಕಿಗೆ ಒಳಗಾಗಿರುವ ಆಪ್ ಗಳು ಬಳಕೆದಾರರಿಗೆ 100 ಡಾಲರ್ ಗೂ ಹೆಚ್ಚು ಹಣವನ್ನು ಅನಗತ್ಯವಾಗಿ ಡಾಟಾ ಚಾರ್ಜಸ್ ರೂಪದಲ್ಲಿ ವ್ಯಯವಾಗುವಂತೆ ಮಾಡುತ್ತದೆ. ಡ್ರೈನರ್ ಬಾಟ್ ನಿಂದ ಕೇವಲ ಫೋನಿನ ಮಾಲೀಕರು ಮಾತ್ರ ಹಾನಿಗೊಳಗಾಗಿರುವುದಿಲ್ಲ. ವೀಕ್ಷಿಸದ ವೀಡಿಯೋ ಡೌನ್ ಲೋಡ್ ಗಳಿಗೆ ಅಪ್ಲಿಕೇಷನ್ನಿನ ಬಿಲ್ ಜಾಹೀರಾತುದಾರರು ಬಿಲ್ ಮಾಡುತ್ತಾರೆ ಆದರೆ ಈ ಡೌನ್ ಲೋಡ್ ಗಳು ನಕಲಿ ಆಗಿರುತ್ತದೆ.

10 ಮಿಲಿಯನ್ ಗೂ ಅಧಿಕ ಇನ್ಸ್ಟಾಲೇಷನ್:
ಓರಾಕಲ್ ತಿಳಿಸುವ ಪ್ರಕಾರ ಈ ಡ್ರೈನರ್ಬಾಟ್ ಕೋಡ್ ನಿಂದ ಸೋಂಕಿಗೆ ಒಳಗಾಗಿ ಅಂದರೆ ಆಂಡ್ರಾಯ್ಡ್ ಆಪ್ಸ್ ಮತ್ತು ಗೇಮ್ಸ್ ಗಳನ್ನು ನೂರಕ್ಕೂ ಅಧಿಕ ಪ್ರಸಿದ್ಧ ಗ್ರಾಹಕರು 10 ಮಿಲಿಯನ್ ಗೂ ಹೆಚ್ಚು ಬಾರಿ ಇನ್ಸ್ಟಾಲ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಐದು ಆಪ್ ಗಳು ಪ್ರಕಟ:
ಕಂಪೆನಿಯು ಈ ರೀತಿ ಸೊಂಕಿಗೆ ಒಳಗಾಗಿರುವ 5 ಆಪ್ ಗಳನ್ನು ಹೆಸರಿಸಿದೆ - ಫರ್ಫೆಕ್ಟ್ 365(Perfect365), ವರ್ಟೆಕ್ಸ್ ಕ್ಲಬ್(VertexClub), ಡ್ರಾ ಕ್ಲ್ಯಾಶ್ ಆಫ್ ಕ್ಲ್ಯಾನ್ಸ್ (Draw Clash of Clans), ಟಚ್ ಎ ಬೀಟ್ ಸಿನಿಮಾ (Touch ‘n' Beat Cinema), ಮತ್ತು ಸಾಲಿಟಯರ್:4 ಸೀಸನ್(Solitaire:4 Seasons).
ಸೆಕ್ಯುರಿಟಿ ರಿಸರ್ಚ್ ನ ವಕ್ತಾರೆಯೊಬ್ಬರು ತಿಳಿಸುವ ಪ್ರಕಾರ ಒರಾಕಲ್ ತಿಳಿಸಿರುವ ಎಲ್ಲಾ ಆಪ್ ಗಳು ಸೋಂಕಿಗೆ ಒಳಗಾಗಿಲ್ಲ ಎನ್ನಲಾಗುತ್ತಿದೆ.

ನೀವು ಈ ಸೋಂಕಿಗೆ ಒಳಗಾಗಿದ್ದೀರಾ?
ನಿಮ್ಮ ಡಿವೈಸ್ ಕೂಡ ಸೋಂಕಿಗೆ ಒಳಗಾಗಿದೆಯೇ ಎಂದು ತಿಳಿಯುವುದಕ್ಕೆ ಹಲವು ಮಾರ್ಗಗಳಿದೆ. ಅತ್ಯುತ್ತಮ ಮೆಥೆಡ್ ಎಂದರೆ ಅತೀ ಹೆಚ್ಚು ಡಾಟಾ ಬಳಕೆ ಮಾಡುತ್ತಿರುವ ಆಪ್ ಯಾವುದೆಂದು ಪರೀಕ್ಷಿಸಿ. ಆಂಡ್ರಾಯ್ಡ್ 9 ನಲ್ಲಿ ಇದನ್ನು ಸಾಧಿಸುವುದಕ್ಕಾಗಿ ಮೊದಲಿಗೆ ಸೆಟ್ಟಿಂಗ್ಸ್ > ನೆಟ್ ವರ್ಕ್ ಎಂಡ್ ಇಂಟರ್ನೆಟ್> ಡಾಟಾ ಯ್ಯೂಸೇಜ್ > ಆಪ್ ಡಾಟಾ ಯುಸೇಜ್ ಗೆ ತೆರಳಿ ಗಮನಿಸಿ. ಬ್ಯಾಕ್ ಗ್ರೌಂಡ್ ನಲ್ಲಿ ಅತೀ ಹೆಚ್ಚು ಡಾಟಾ ಬಳಸುತ್ತಿರುವುದು ಯಾವ ಆಪ್ ಎಂಬುದನ್ನು ಗುರುತಿಸಿ. ಡ್ರೈನರ್ಬಾಟ್ ಆಪ್ಸ್ ಗಳು ತಿಂಗಳಿಗೆ ಗಿಗಾಬೈಟ್ ನಷ್ಟು ಡಾಟಾವನ್ನು ಎಳೆದಿರುತ್ತದೆ.

ಎರಡನೇ ಮಾರ್ಗ:
ಇನ್ನೊಂದು ಪ್ರಮುಖ ವಿಧಾನವೆಂದರೆ ನಿಮ್ಮ ಫೋನ್ ಬಳಕೆ ಮಾಡದೇ ಇರುವ ಸಂದರ್ಬದಲ್ಲೂ ಕೂಡ ಬಿಸಿಯಾಗಿರುವುದು ಮತ್ತು ಬಹಳ ನಿಧಾನವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಕೂಡ ಈ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದೆ.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈಗಲೂ ಲಭ್ಯ:
ಒರಾಕಲ್ ತಿಳಿಸಿರುವ ಐದು ಆಪ್ ಗಳಲ್ಲಿ ಈಗಲೂ ಕೂಡ Solitaire: 4 Seasons (Full) ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಗೂಗಲ್ ಗೆ ಮಾಹಿತಿ ತಿಳಿದ ಕೂಡಲೇ ಸಾಮಾನ್ಯವಾಗಿ ಇಂತಹ ಆಪ್ ಗಳನ್ನು ಡಿಲೀಟ್ ಮಾಡುತ್ತದೆ. ಆದರೆ ಕಂಪೆನಿಯು ಇದನ್ನು ಮಾರುಕಟ್ಟೆಯಿಂದ ಹೊರದಬ್ಬಲು ಇನ್ನೂ ಸಾಧ್ಯವಾಗಿಲ್ಲ.

ನೆದರ್ ಕಂಪೆನಿಯಿಂದ ಸೃಷ್ಟಿ:
ಒರಾಕಲ್ ತಿಳಿಸುವ ಪ್ರಕಾರ ನೆದರ್ ಲ್ಯಾಂಡ್ ಮೂಲದ ಸಾಫ್ಟ ವೇರ್ ಕಂಪೆನಿಯೊಂದು ಈ ಡ್ರೈನರ್ ಡಾಟ್ ನ್ನು ಡೆವಲಪ್ ಮಾಡಿದೆ ಎಂದು ತಿಳಿದು ಬಂದಿದೆ. ಇದು ಡೆವಲಪರ್ ಗಳಿಗೆ ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದಕ್ಕೆ ನೆರವು ನೀಡುತ್ತದೆ. ಕಂಪೆನಿಯ ಹೆಸರು ಟ್ಯಾಪ್ ಕೋರ್. ಆದರೆ ಟ್ವೀಟರ್ ನಲ್ಲಿ ಪ್ರಶ್ನಿಸಿದ್ದಕ್ಕೆ ಟ್ಯಾಪ್ ಕೋರ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬ್ಲಾಗ್ ನಲ್ಲಿ ಈ ಪೋಸ್ಟ್ ಹರಿದಾಡಿದ ನಂತರ ಡ್ರೈನರ್ಬಾಟ್ ಸ್ಕೀಮ್ ನಲ್ಲಿ ಉದ್ದೇಶಪೂರಿತ ಪಾತ್ರ ವಹಿಸುವುದನ್ನು ಟ್ಯಾಪ್ ಕೋರ್ ನಿರಾಕರಿಸಿದೆ.
ಟ್ಯಾಪ್ ಕೋರ್ ನಿರಾಕರಣೆ:
ಡ್ರೈನರ್ಬಾಟ್ ವಂಚನೆಯ ಬಗ್ಗೆ ತಿಳಿದ ಕೂಡಲೇ ಟ್ಯಾಪ್ ಕೋರ್ ತಮ್ಮ ಗಮನಕ್ಕೆ ಬಾರದಂತೆ ಯಾವುದಾದರೂ ನೆಟ್ ವರ್ಕ್ ನಲ್ಲಿ ಇಂತಹ ಕೆಲಸಗಳು ತಮ್ಮ ಹೆಸರಿನಲ್ಲಿ ನಡೆದಿದೆಯೇ ಎಂಬ ಬಗ್ಗೆ ಪರೀಕ್ಷೆ ನಡೆಸಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲ ಮೊಬೈಲ್ ಜಾಹೀರಾತು ಇಂಡಸ್ಟ್ರಿಯಲ್ಲಿ ಟ್ಯಾಪ್ ಕೋರ್ ಬಗೆಗಿನ ಎಲ್ಲಾ ಡಾಟಾ ಮತ್ತು ಫಲಿತಾಂಶಗಳು ಸೇರಿದಂತೆ ಕಂಪೆನಿಯ ಎಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳುವುದಕ್ಕೆ ತಾವು ಸಿದ್ಧರಿರುವುದಾಗಿ ತಿಳಿಸಿದೆ.


Click it and Unblock the Notifications








