Home
Apps

ಆಪ್ ಚಂದಾದಾರಿಕೆಯ ವಿರಾಮಕ್ಕೆ ಅವಕಾಶ ನೀಡಲಿದೆ ಗೂಗಲ್ ಪ್ಲೇ..!

ಆಂಡ್ರಾಯ್ಡ್ ಬಳಕೆದಾರರು ಪಾವತಿ ಮಾಡುವ ಆಪ್ ಗಳಿಗೆ ಹೆಚ್ಚೆಚ್ಚು ಚಂದಾದಾರರಾಗುತ್ತಿದ್ದಾರೆ. ಆದರೆ ಈ ಚಂದಾದಾರಿಕೆಯನ್ನು ನಿಲ್ಲಿಸಬೇಕು ಎಂದು ಬಳಕೆದಾರರು ಇಚ್ಚಿಸಿದಾಗ ಅದನ್ನು ಮಾಡುವುದು ಕಠಿಣವಾಗಿದೆ. ಹಾಗಾಗಿ ಗೂಗಲ್ ಆಪ್ ಸಬ್ಸ್ಕ್ರಿಪ್ಷನ್ ನ್ನು ವಿರಾಮಗೊಳಿಸುವುದನ್ನು ಇನ್ನಷ್ಟು ಸುಲಭಗೊಳಿಸುವ ಮಾರ್ಗವನ್ನು ಕಂಡುಹಿಡಿಯುತ್ತಿದೆ. ನೀವು ಯಾವುದೇ ಆಪ್ ನ ಸಬ್ ಸ್ಕ್ರಿಪ್ಶನ್ ನ್ನು ಕ್ಯಾನ್ಸಲ್ ಮಾಡಬೇಕು ಎಂದು ಅನ್ನಿಸಿದಾಗ ಈ ವೈಶಿಷ್ಟ್ಯತೆಯು ಈ ಕೆಲಸವನ್ನು ಸರಳಗೊಳಿಸುತ್ತದೆ ಅಂದರೆ ಸರಳವಾಗಿ ನೀವು ಪಾವತಿಸಿದ ಸಬ್ ಸ್ಕ್ರಿಪ್ಶನ್ ಪಿರೇಡ್ ನ್ನು ವಿರಾಮಗೊಳಿಸಿಕೊಳ್ಳಬಹುದು.

ಆಪ್ ಚಂದಾದಾರಿಕೆಯ ವಿರಾಮಕ್ಕೆ ಅವಕಾಶ ನೀಡಲಿದೆ ಗೂಗಲ್ ಪ್ಲೇ..!

ಈ ಬಗ್ಗೆ ಇದುವರೆಗೂ ಗೂಗಲ್ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.ಆಂಡ್ರಾಯ್ಡ್ ಪೋಲೀಸರು ಇತ್ತೀಚೆಗೆ ಹೇಳಿರುವ ಪ್ರಕಾರ ಇತ್ತೀಚೆಗೆ ಗೂಗಲ್ ಪ್ಲೇ ಕೋಡ್ ಅಪ್ ಡೇಟ್ ನ್ನು ರಿವೀಲ್ ಮಾಡಿದ್ದು ಹೊಸ ಅಭಿವೃದ್ಧಿಯನ್ನು ಅದರಲ್ಲಿ ಮಾಡಲಾಗಿದೆ. ಯಾವ ರೀತಿಯ ಆಪ್ ಗಳ ಸಬ್ಸ್ಕ್ರಿಪ್ಷನ್ ನ್ನು ಪಾಝ್ ಮಾಡಲು ಗೂಗಲ್ ಅವಕಾಶ ನೀಡುತ್ತದೆ ಮತ್ತು ಎಷ್ಟು ಸಮಯದವರೆಗೆ ಆಪ್ ನ್ನು ವಿರಾಮಗೊಳಿಸಲು ಅನುವು ಮಾಡುತ್ತದೆ ಎಂಬುದು ಇದುವರೆಗೂ ತಿಳಿದಿಲ್ಲ.

ಈ ವೈಶಿಷ್ಟ್ಯತೆಯಿಂದಾಗಿ ಆಪ್ ಬಳಕೆಯಲ್ಲಿ ಇಲ್ಲದೇ ಇದ್ದಾಗ ನಿಮ್ಮ ಸಬ್ ಸ್ಕ್ರಿಪ್ಶನ್ ಅವಧಿಯು ವ್ಯರ್ಥವಾಗುವುದಿಲ್ಲ.ಉದಾಹರಣೆಗೆ ನೀವು ಯಾವುದೇ ಆಪ್ ನ ಸಬ್ ಸ್ಕ್ರಿಪ್ಶನ್ ಪಡೆದುಕೊಂಡಿರಿ ಮತ್ತು ನಂತರದ ಕೆಲವು ದಿನಗಳಲ್ಲಿ ವಿದೇಶಿ ಪ್ರವಾಶ ಕೈಗೊಳ್ಳುತ್ತಿದ್ದೀರಿ ಮತ್ತು ಅಲ್ಲಿ ನಿಮ್ಮ ನಿರ್ಧಿಷ್ಟ ಆಪ್ ಕೆಲಸ ಮಾಡುವುದಿಲ್ಲವಾದರೆ ಆಗ ನೀವು ಆ ಆಪ್ ನ್ನು ವಿರಾಮಗೊಳಿಸಿಕೊಳ್ಳಬಹುದು. ರಜಾ ದಿನಗಳಲ್ಲಿ ನಿಮ್ಮ ಸಬ್ ಸ್ಕ್ರಿಪ್ಶನ್ ವ್ಯರ್ಥವಾಗುವುದನ್ನು ಇದರಿಂದ ತಪ್ಪಿಸಿಕೊಳ್ಳಬಹುದು.

ಆಪ್ ಚಂದಾದಾರಿಕೆಯ ವಿರಾಮಕ್ಕೆ ಅವಕಾಶ ನೀಡಲಿದೆ ಗೂಗಲ್ ಪ್ಲೇ..!

ಗೂಗಲ್ ಪ್ಲೇ ನಲ್ಲಿ ಶೇರ್ ಇಟ್ ನಂತಹ ಪೀರ್-ಟು-ಪೀರ್ ಫೈಲ್ ಹಂಚಿಕೆ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಹೊಸ ವೈಶಿಷ್ಟ್ಯತೆಯನ್ನು ಗೂಗಲ್ ಹೊರತರಲಿದೆ. ಬಳಕೆದಾರರು ಕಡಿಮೆ ಅಂತರ್ಜಾಲ ಸೌಲಭ್ಯದಲ್ಲಿ ಶೇರ್ ಇಟ್ ಮೂಲಕ ಅಥವಾ ಇತರೆ ಆಪ್ ಹಂಚಿಕೆ ಫ್ಲಾಟ್ ಫಾರ್ಮ್ ಗಳಲ್ಲಿ ಆಪ್ ಗಳನ್ನು ಹಂಚಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳುವ ಸಂದರ್ಬದಲ್ಲಿ ಫೇಕ್ ಆಪ್ ಗಳನ್ನು( ಅದರಲ್ಲೂ ಗೇಮ್ ಗಳನ್ನು) ಇನ್ಸ್ಟಾಲ್ ಮಾಡಿಕೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ಇಂತಹ ಸಂದರ್ಬದಲ್ಲಿ ಪರೀಕ್ಷೆ ಮಾಡುವ ಯಾವುದೇ ಸಾಧ್ಯತೆಯೂ ಇಲ್ಲ. ಗೂಗಲ್ ನ ಹೊಸ ವೈಶಿಷ್ಟ್ಯತೆಯು ಈ ಅಧಿಕೃತತೆಯನ್ನು ಪರೀಕ್ಷೆ ಮಾಡುತ್ತದೆ ಮತ್ತು ಅಧಿಕೃತವಾಗಿ ಗೂಗಲ್ ಪ್ಲೇ ಸ್ಟೋರ್ ನಿಂದಲೇ ಲಭ್ಯವಾಗಿರುವ ಆಪ್ ಹೌದಾ ಅಥವಾ ಅಲ್ಲವಾ ಎಂಬ ಬಗ್ಗೆ ಪರೀಕ್ಷೆ ಮಾಡುತ್ತದೆ.

ಕುತೂಹಲಕಾರಿ ವಿಚಾರವೆಂದರೆ, ಗೂಗಲ್ ತನ್ನ ಆಫ್ ಲೈನ್ ಇನ್ಸ್ಟಾಲೇಷನ್ ವೈಶಿಷ್ಟ್ಯತೆಯನ್ನು ಮುಂದುವರಿಸಿದೆ. ಇದರರ್ಥ ಇಷ್ಟೇ, ನೀವು ಯಾವುದೇ ಆಪ್ ನ್ನು ಶೇರ್ ಇಟ್ ಮೂಲಕ ಹಂಚಿಕೊಂಡು ನಿಮ್ಮ ಡಿವೈಸ್ ನಲ್ಲಿ ಆಫ್ ಲೈನ್ ಮೂಲಕ ಇನ್ಸ್ಟಾಲ್ ಮಾಡಿಕೊಂಡಾಗಲೂ ಕೂಡ ಆಪ್ ಸೋರ್ಸ್ ಗಳು ಇದನ್ನು ವೆರಿಫೈ ಮಾಡುತ್ತದೆ. ಆ ಮೂಲಕ ಯಾವುದೇ ಬಳಕೆದಾರರ ಡಿವೈಸ್ ನಲ್ಲಿ ಫೇಕ್ ಆಪ್ ಗಳು ಇನ್ಸ್ಟಾಲ್ ಆಗುವುದನ್ನು ತಪ್ಪಿಸುವ ಕೆಲಸವನ್ನು ಗೂಗಲ್ ಮಾಡಲು ಪ್ರಯತ್ನಿಸುತ್ತಿದೆ.

Best Mobiles in India

English summary
Google Play may soon allow you to pause app subscriptions. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+