ಆಂಡ್ರಾಯ್ಡ್ ಸುರಕ್ಷತೆಗೆ ಗೂಗಲ್‌ನಿಂದ ಹೊಸ ಆಪ್..! ಈ ಆಪ್ ನಿಮಗೆ ಬೇಕೆ ಬೇಕು!!
ಗೂಗಲ್ ಇದೀಗ ನೂತನ ಆಪ್ ಮೂಲಕ ಉತ್ತಮ ಮತ್ತು ಕುತಂತ್ರ ಆಪ್‌ಗಳು ಯಾವುವು ಎಂಬುದನ್ನು ವಿಂಗಡನೆ ಮಾಡಲು ಮುಂದಾಗಿದೆ.
ಉತ್ತಮ ಆಪ್‌ಗಳನ್ನು ಕಂಡುಹಿಡಿಯಲು ಗೂಗಲ್ ಪೀಪಲ್ಸ್ ರೇಟಿಂಗ್ ಅನ್ನು ನೀಡಿದರೂ ಸಹ, ಕುತಂತ್ರ ಆಪ್‌ಗಳು ಆಗಲೇ ಹಲವರ ಸ್ಮಾರ್ಟ್‌ಫೋನ್‌ಗಳಲ್ಲಿ ಸೇರಿಕೊಂಡಿವೆ. ಜನರಿಗೆ ಚಿರಪರಿಚಿತವಾಗ ಕೆಲವು ಆಪ್‌ಗಳನ್ನು ಬಿಟ್ಟರೆ ಹಲವು ಆಪ್‌ಗಳ ಬಗ್ಗೆ ಬಹುತೇಕ ಜನರಿಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ.!!
ಹಾಗಾಗಿ, ಗೂಗಲ್ ಇದೀಗ ನೂತನ ಆಪ್ ಮೂಲಕ ಉತ್ತಮ ಮತ್ತು ಕುತಂತ್ರ ಆಪ್‌ಗಳು ಯಾವುವು ಎಂಬುದನ್ನು ವಿಂಗಡನೆ ಮಾಡಲು ಮುಂದಾಗಿದೆ. ಹಾಗಾದರೆ, ಆಪ್ ಯಾವುದು? ಕುತಂತ್ರ ಆಪ್‌ಗಳಿಂದ ಆಗಬಹುದಾದ ತೊಂದರೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಪ್ಲೇ ಪ್ರೆಟೆಕ್ಟ್ ಆಪ್!!
ಗೂಗಲ್ ಪ್ಲೇಸ್ಟೋರ್‌ನಲ್ಲಿರುವ ಕುತಂತ್ರಶಾಂಶ ಆಪ್‌ಗಳನ್ನು ಕಂಡುಹಿಡಿಯಲು ಗೂಗಲ್ 'ಪ್ಲೇ ಪ್ರೆಟೆಕ್ಟ್' ಎಂಬ ಆಪ್ ಅನ್ನು ಬಿಡುಗಡೆ ಮಾಡಿದೆ. ಈ ಆಪ್ ಮೂಲಕ ಆಂಡ್ರಾಯ್ಡ್ ಬಳಕೆದಾರರು ಆಪ್‌ಬಗ್ಗೆ ಮಾಹಿತಿ ಮತ್ತು ಎಚ್ಚರಿಕೆಯನ್ನು ಪಡೆಯಬಹುದಾಗಿದೆ.!!

ಹೇಗೆ ಕಾರ್ಯನಿರ್ವಹಿಸುತ್ತೆ ಪ್ಲೇ ಪ್ರೆಟೆಕ್ಟ್ ಆಪ್?
ಗೂಗಲ್ ಅಬಿವೃದ್ಧಿಪಡಿಸಿರುವ ನೂತನ ಪ್ಲೇ ಪ್ರೆಟೆಕ್ಟ್ ಆಪ್, ಪ್ಲೇಸ್ಟೋರ್‌ನಲ್ಲಿರುವ ಎಲ್ಲಾ ಆಪ್‌ಗಳನ್ನು ಸ್ಕ್ಯಾನ್ ಮಾಡುತ್ತದೆ. ಬಳಕೆದಾರರ ಮಾಹಿತಿಯನ್ನು ಕೇಳುವ ಆಪ್‌ಗಳ ಬಗ್ಗೆ ಆಂಡ್ರಾಯ್ಡ್ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡುತ್ತದೆ,!!

ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲೇ ಇನ್‌ಸ್ಟಾಲ್!!
ಗ್ರಾಹಕರ ಸುರಕ್ಷತೆಗಾಗಿ ಮುಂಬುರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳ್ಲಿ ಈ ಆಪ್ ಮೊದಲೇ ಇನ್‌ಸ್ಟಾಲ್ ಆಗಿರುತ್ತದೆ ಎಂದು ಗೂಗಲ್ ಹೇಳಿದೆ. ಮುಂಬರುವ 'ಆಂಡ್ರಾಯ್ಡ್ O' ಆಂಡ್ರಾಯ್ಡ್ ಸಿಸ್ಟಮ್‌ನಲ್ಲಿ ಈ ಆಪ್ ಇನ್‌ಬಿಲ್ಟ್ ಕಾರ್ಯಚರಣೆ ನೀಡುತ್ತದೆ.!

ಈ ಆಪ್ ಡೌನ್‌ಲೋಡ್ ಹೇಗೆ?
ಗೂಗಲ್ ಪ್ಲೇಸ್ಟೋರ್ ತೆರೆದು ಪ್ರೆಟೆಕ್ಟ್ ಆಪ್ ಎಂದು ಸರ್ಚ್ ಮಾಡಿದರೆ ಗೂಗಲ್ ಅಬಿವೃದ್ಧಿಪಡಿಸಿರುವ ಈ ಆಪ್ ತೆರೆಯುತ್ತದೆ. ನಂತರ ಆ ಆಪ್‌ಅನ್ನು ಡೌನ್‌ಲೋಡ್ ಮಾಡಿ ನಿಮ್ಮ ಸ್ದರ್ಟ್‌ಫೋನ್ ಡೌನ್‌ಲೋಡ್ ಮಾಡಿ.!!


Click it and Unblock the Notifications








