Home
Apps

ಪ್ಲೇಸ್ಟೋರ್‌ನಿಂದ ಮತ್ತೆ 28 ನಕಲಿ ಆಪ್‌ಗಳನ್ನು ಕಿತ್ತೆಸೆದ ಗೂಗಲ್!

ಸೈಬರ್ ಸೆಕ್ಯೂರಿಟಿ ದೈತ್ಯ ಕ್ವಿಕ್ ಹೀಲ್ ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ, 48,000 ಕ್ಕೂ ಹೆಚ್ಚು ಡೌನ್‌ಲೋಡ್ ಆಗಿರುವಂತಹ ಒಟ್ಟು 28 ನಕಲಿ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಅಪ್ಲಿಕೇಶನ್ ಹೆಸರಿಗೆ ಸಂಬಂಧಿಸಿದ ಯಾವುದೇ ಕಾನೂನುಬದ್ಧ ಕಾರ್ಯಗಳನ್ನು ಹೊಂದಿಲ್ಲದ ಆಪ್‌ಗಳನ್ನು ಸಹ ಹುಡುಕಿ ಕೊಲ್ಲುತ್ತಿರುವ ಗೂಗಲ್ ಇದೀಗ ಮತ್ತೊಮ್ಮೆ ಮೋಸಗಾರರಿಗೆ ಚಾಟಿ ಬೀಸಿದೆ.

ಮಿನಿ ವಾಲೆಟ್, ಗೋಲ್ಡ್ ಸಾಲ, ಚಿಟ್ ನಿಧಿಗಳು, ವರ್ಚುವಲ್ ಡೇಟಾ ಮತ್ತು ಇನ್ನಿತರ ಸೇವೆಗಳನ್ನು ನೀಡುವುದಾಗಿ ಹೇಳಿಕೊಂಡು ಜಾಹಿರಾತುಗಳ ಮೂಲಕ ಮೊಬೈಲ್ ಬಳಕೆದಾರರನ್ನು ಸೆಳೆಯುತ್ತಿರುವ ಆಪ್‌ಗಳು ಇವಾಗಿದ್ದು, ಜಾಹೀರಾತುಗಳನ್ನು ಕ್ಲಿಕ್ ಮಾಡಿ ಆಪ್‌ಗಳನ್ನು ಡೌನ್‌ಲೋಡ್ ಮಾಡಿದವರು ಮೋಸಹೋಗಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ, ಇಂತಹ ನಕಲಿ ಆಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಕಿತ್ತೊಗೆಯಲಾಗುತ್ತಿದೆ ಎಂದು ತಿಳಿದುಬಂದಿದೆ.

ಪ್ಲೇಸ್ಟೋರ್‌ನಿಂದ ಮತ್ತೆ 28 ನಕಲಿ ಆಪ್‌ಗಳನ್ನು ಕಿತ್ತೆಸೆದ ಗೂಗಲ್!

ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಿದ ನಂತರ ಜಾಹಿರಾತುಗಳನ್ನು ಮಾತ್ರ ಪ್ರಕಟಿಸುತ್ತಿವೆ. ಜತೆಗೆ ಆಪ್‌ಗಳನ್ನು ಪ್ರಮೋಟ್ ಮಾಡಿದರೆ ಹಣ ನೀಡುವುದಾಗಿ ಪ್ರೇರೇಪಿಸಿ ಬ್ಯಾಂಕ್ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ ಇಂತಹ ಆಪ್‌ಗಳು ಯಾವುದೇ ಸೇವೆಗಳನ್ನು ಕೂಡ ನೀಡುತ್ತಿಲ್ಲ ಎಂದು ಹೇಳಲಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ನಕಲಿ ಆಪ್‌ಗಳನ್ನು ಡೌನ್‌ಲೋಡ್ ಮಾಡದಂತೆ ಪಾರಾಗುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಜಾಹಿರಾತು ನಂಬಿ ಮರುಳಾಗಬೇಡಿ!

ಜಾಹಿರಾತು ನಂಬಿ ಮರುಳಾಗಬೇಡಿ!

ಆನ್‌ಲೈನ್ ಜಾಹಿರಾತುವಿನಲ್ಲಿ ವಿವಿಧ ರೀತಿಯಲ್ಲಿ ಸೇವೆ ನೀಡುವುದಾಗಿ ನಂಬಿಸುವ ಆಪ್‌ಗಳ ಜಾಹಿರಾತುಗಳನ್ನು ನಂಬಲೇಬೇಡಿ. ಇಂತಹ ಜಾಹಿರಾತುವನ್ನು ನೋಡಿ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಅಪಾಯಕಾರಿ. ಹಾಗಾಗಿ, ನೀವು ಪ್ಲೇ ಸ್ಟೋರ್‌ನಲ್ಲಿ ಮಾತ್ರ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಅಲ್ಲಿಯೂ ಕೂಡ ಆಪ್‌ ಅನ್ನು ಡೌನ್‌ಲೋಡ್ ಮಾಡುವ ಮುನ್ನ ಆಪ್ ರೇಟಿಂಗ್ ಮತ್ತು ಆಪ್‌ ರಿವ್ಯೂಗಳನ್ನು ಚೆಕ್ ಮಾಡುವುದನ್ನು ಮರೆಯದಿರಿ.

ಹಣ ನೀಡುವ ಪ್ರೇರೇಪಣೆಯನ್ನು ನಂಬಬೇಡಿ!

ಹಣ ನೀಡುವ ಪ್ರೇರೇಪಣೆಯನ್ನು ನಂಬಬೇಡಿ!

ನಮ್ಮ ಆಪ್‌ಗಳನ್ನು ಡೌನ್‌ಲೋಡ್ ಮಾಡಿ ಇರರಿಗೆ ಶೇರ್ ಮಾಡಿದರೆ ಹಣ ನೀಡುವುದಾಗಿ ಪ್ರಮೋಟ್ ಮಾಡುವ ಯಾವುದೇ ಆಪ್‌ಗಳನ್ನು ನಂಬುವಂತಹ ಕೆಲಸ ಮಾಡಬೇಡಿ. ಒಮ್ಮೆ ನೀವು ಅವರನ್ನು ನಂಬಿ ನಿಮ್ಮ ಬ್ಯಾಂಕ್ ಡೀಟೇಲ್ಸ್ ನೀಡಿದರೆ ನೀವೇ ವಂಚನೆಗೆ ಒಳಗಾಗಬಹುದು. ಆಪ್ ಡೌನ್ಲೋಡ್ ಮಾಡಿದ ನಂತರ ನಾವು ಅಂಕಗಳನ್ನು ನೀಡುತ್ತೇವೆ.10 ಪಾಯಿಂಟ್ಗಳ ನಂತರ ಹಣವನ್ನು ಪೇಟಿಎಂಗೆ ವರ್ಗಾಯಿಸಬಹುದು ಎಂದು ಹೇಳುವ ಆಪ್‌ಗಳು ವಾಸ್ತವದಲ್ಲಿ ಹಣವನ್ನು ಪಾವತಿಸುವುದಿಲ್ಲ.

ಆಪ್ ಸ್ಟೋರ್‌ನಲ್ಲಿ ಮಾತ್ರ ಆಪ್ ಡೌನ್‌ಲೋಡ್ ಮಾಡಿ.

ಆಪ್ ಸ್ಟೋರ್‌ನಲ್ಲಿ ಮಾತ್ರ ಆಪ್ ಡೌನ್‌ಲೋಡ್ ಮಾಡಿ.

ನಿಮ್ಮ ಸ್ಮಾರ್ಟ್‌ಫೋನ್‌ಗೆ ಯಾವುದೇ ಒಂದು ಅಪರಿಚಿತ ಆಪ್‌ ಅನ್ನು ಡೌನ್‌ಲೋಡ್ ಮಾಡುವ ಮುನ್ನ ಪ್ರಮುಖವಾಗಿ ತಿಳಿದಿರಬೇಕಾದ ವಿಷಯ ಎಂದರೆ ಆಪ್ ಸ್ಟೋರ್‌ಗಳಿಂದ ಮಾತ್ರವೇ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಬೇರೆ ಮೂಲಗಳಿಂದ ಇನ್‌ಸ್ಟಾಲ್ ಮಾಡಿಕೊಳ್ಳುವುದು ಅಪಾಯಕ್ಕೆ ದಾರಿ ಎಂಬುದನ್ನು ತಿಳಿದಿರಬೇಕು. ಎಲ್ಲ ಆಪ್‌ಗಳನ್ನು ಚೆಕ್ ಮಾಡಿ ಮೊಬೈಲ್ ಗ್ರಾಹಕರನ್ನು ಕಾಪಾಡುವ ವ್ಯವಸ್ಥೆಯನ್ನು ಗೂಗಲ್ ಮಾಡುತ್ತಿದೆ.

ಪಾಸ್‌ವರ್ಡ್‌ ಸೇವ್‌ಮಾಡಬೇಡಿ.

ಪಾಸ್‌ವರ್ಡ್‌ ಸೇವ್‌ಮಾಡಬೇಡಿ.

ಬ್ಯಾಂಕ್ ಖಾತೆಯ ಪಿನ್ ಮತ್ತು ಪಾಸ್‌ವರ್ಡ್, ಕ್ರೆಡಿಟ್ ಕಾರ್ಡ್ ಪಿನ್ ನಂಬರ್ ಸೇರಿ ಸೋಷಿಯಲ್ ಮೀಡಿಯಾದ ಪಾಸ್‌ವರ್ಡ್‌ಗಳನ್ನು ಗೌಪ್ಯವಾಗಿಡಿ. ಕೆಲವೊಂದು ಆಪ್‌ಗಳು ನಿಮ್ಮ ಫೋನ್‌ನಲ್ಲಿರುವ ಮಾಹಿತಿಗಳನ್ನು ಕದ್ದು,ಅವುಗಳನ್ನು ಸೈಬರ್ ಕ್ರಿಮಿನಲ್‌ಗಳಿಗೆ ಮಾರಿಬಿಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗೆಯೇ ಹಲವಾರು ಜನರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಕಳೆದುಕೊಂಡಿರುವ ಸಾಕಷ್ಟು ಉದಾಹರಣೆಗಳು ಇವೆ.

Unknown Sources ಡಿಸೇಬಲ್ ಮಾಡಿಬಿಡಿ

Unknown Sources ಡಿಸೇಬಲ್ ಮಾಡಿಬಿಡಿ

ಯಾವುದೇ ಸ್ಮಾರ್ಟ್‌ಫೋನ್ ಬಳಸುತ್ತಿದ್ದರೂ ಸೆಟ್ಟಿಂಗ್ಸ್‌ನ ತೆರೆದು ಸೆಕ್ಯುರಿಟಿ ವಿಭಾಗದಲ್ಲಿ ಇದೆ. Unknown Sources ಎಂಬ ಆಯ್ಕೆಯನ್ನು ಡಿಸೇಬಲ್ ಮಾಡಿಬಿಡಿ. ಯಾರಾದರೂ ಆಪ್‌ ಮೂಲಕ ನಿಮ್ಮ ಫೋನ್ ಮಾಹಿತಿ ತಿಳಿಯಲು ಅಥವಾ ವೈರಸ್ ಕಳುಹಿಸಲು ಪ್ರಯತ್ನಿಸಿದರೆ ಈ ಆಪ್ ಅವುಗಳು ಇನ್‌ಸ್ಟಾಲ್ ಆಗುವುದನ್ನು ತಡೆಯುತ್ತದೆ. ಜೊತೆಗೆ ರಿವ್ಯೂಗಳನ್ನು ಸರಿಯಾಗಿ ಓದಿದರೆ, ಇನ್‌ಸ್ಟಾಲ್ ಮಾಡಿಕೊಂಡಿ ತೊಂದರೆ ಅನುಭವಿಸಿದ್ದವರ ಮಾತುಗಳು ನಿಮಗೆ ಸಹಾಯಕವಾಗಿರಬಹುದು.

Best Mobiles in India

English summary
According to user comments on Play store, transaction shows completed status in the fake app but money does not get transferred to Paytm wallet.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+